ನಾವು ಈ ದೇಸಿ ಶೈಲಿಯಲ್ಲಿ(Desi Style) ಮಾಡುವಂತಹ ಫ್ಲಫಿ ಆಮ್ಲೆಟ್(Fluffy Omelette) ಅನ್ನು ತಿನ್ನುವುದಕ್ಕಾಗಿ ರಸ್ತೆಯ ಬದಿಗಳಲ್ಲಿರುವ ಹೊಟೇಲ್ (hotel)ಗಳಿಗೆ ಹೋಗುತ್ತೇವೆ. ಮೊಟ್ಟೆಯನ್ನು ಅನೇಕ ರೀತಿಯಲ್ಲಿ ಮಾಡಿಕೊಂಡು ಸೇವಿಸಬಹುದು. ನೀವು ಈ ಮೊಟ್ಟೆಯಿಂದ(Egg) ಯಾವ ರೀತಿಯಾದ ಭಕ್ಷ್ಯವನ್ನು ತಯಾರಿಸಿಕೊಳ್ಳಲು ಬಯಸುವಿರಿ ಅನ್ನುವುದರ ಮೇಲೆ ಇದು ಅವಲಂಬಿತವಾಗಿರುತ್ತದೆ.
ತ್ವರಿತ ಮತ್ತು ಪೌಷ್ಟಿಕ ಉಪಾಹಾರಕ್ಕಾಗಿ ನಾವು ಮಾಡುವ ಪಾಕ ವಿಧಾನಗಳಲ್ಲಿ ರುಚಿಕರ ಆಮ್ಲೆಟ್ ಸಹ ಒಂದಾಗಿದೆ. ನಾವು ನಮ್ಮ ಅಭಿರುಚಿಗೆ ಅನುಗುಣವಾಗಿ ಮೊಟ್ಟೆಗಳಿಂದ ಆಮ್ಲೆಟ್ ಅನ್ನು ಮಾಡಿಕೊಳ್ಳಬಹುದು.
ಮೃದುವಾದ ಆಮ್ಲೆಟ್ ಅನ್ನು ಮನೆಯಲ್ಲಿ ಎಲ್ಲಾರೂ ಸುಲಭವಾಗಿ ತಯಾರಿಸಿಕೊಳ್ಳಬಹುದು ಎಂದುಕೊಳ್ಳುತ್ತಾರೆ. ಆದರೆ ಈ ದೇಸಿ ಶೈಲಿಯ ಫ್ಲಫಿ ಆಮ್ಲೆಟ್ ಅನ್ನು ಮನೆಯಲ್ಲಿ ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಅದನ್ನು ಸಂಪೂರ್ಣವಾಗಿ ಕರಗತ ಮಾಡಿಕೊಳ್ಳಲು ಖಂಡಿತವಾಗಿಯೂ ಅಭ್ಯಾಸದ ಅಗತ್ಯವಿದೆ. ಇದಲ್ಲದೆ, ಅದನ್ನು ಬೇಯಿಸಲು ವಿಭಿನ್ನ ತಂತ್ರಗಳಿವೆ.
ಈ ಫ್ಲಫಿ ಆಮ್ಲೆಟ್ ತಯಾರಿಸಲು ಈ 3 ಸಲಹೆಗಳಗಳನ್ನು ಕರಗತ ಮಾಡಿಕೊಳ್ಳಿರಿ
ಇದನ್ನೂ ಓದಿ: ಇಡ್ಲಿ ಜೊತೆಗೆ ತಿಂಡಿಗೆ ದರ್ಶಿನಿ ಸ್ಟೈಲ್ ಚಟ್ನಿ ಮಾಡಿ - ಮಾಡೋದು ಹೇಗೆ ? ಇಲ್ಲಿದೆ ರೆಸಿಪಿ
1. ಮೊಟ್ಟೆಯ ಹಳದಿ ಲೋಳೆಯನ್ನು ಕಲಿಸಿಕೊಳ್ಳಿರಿ
ಮೊಟ್ಟೆಯ ಹಳದಿ ಲೋಳೆಯನ್ನು ಮೊದಲಿಗೆ ಬೇರ್ಪಡಿಸಿಕೊಳ್ಳಬೇಕು ಮತ್ತು ಅದನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಿರಿ. ಪ್ರತ್ಯೇಕ ಬಟ್ಟಲುಗಳಲ್ಲಿ, ಮೊಟ್ಟೆಯ ಎಲ್ಲಾ ಭಾಗವನ್ನು ದಪ್ಪವಾಗುವವರೆಗೆ ಮತ್ತು ಮೃದುವಾಗುವವರೆಗೂ ಕಲಿಸಿಕೊಳ್ಳಿರಿ. ಇದಕ್ಕೆ ಉಪ್ಪು ಮತ್ತು ಮೆಣಸು ಸೇರಿಸಿ ಮತ್ತು ಹಳದಿ ಲೋಳೆಯಲ್ಲಿ ಮಡಚಿ. ಹಿಟ್ಟನ್ನು ನಾನ್-ಸ್ಟಿಕ್ ಪ್ಯಾನ್ ಅಥವಾ ಸ್ಕಿಲೆಟ್ ಮೇಲೆ ಸುರಿಯಿರಿ ಮತ್ತು ಬೇಯಿಸಿರಿ.
2. ಸರಿಯಾಗಿ ಬೇಯಿಸಿ
ಬಿಸಿ ಮಾಡಿದ ಬಾಣಲೆಗೆ ಎಣ್ಣೆ ಅಥವಾ ಬೆಣ್ಣೆಯನ್ನು ಸೇರಿಸಿ. ಶಾಖವನ್ನು ಕಡಿಮೆ ಮಾಡಿ ಮತ್ತು ಮೊಟ್ಟೆಯ ಮಿಶ್ರಣವನ್ನು ಬಾಣಲೆಗೆ ಸೇರಿಸಿ. ಮುಚ್ಚಳದೊಂದಿಗೆ ಕಡಿಮೆ ಶಾಖದಲ್ಲಿ ಬೇಯಿಸಿ. ಇದು ಆಮ್ಲೆಟ್ ಫ್ಲಫ್ ಅಪ್ ಗೆ ಸಹಾಯ ಮಾಡುತ್ತದೆ.
3. ಸೋಡಾ ನೀರು ಸೇರಿಸಿ
ಸೋಡಾ ನೀರನ್ನು ನಿಮ್ಮ ಕಲಿಸಿಕೊಂಡ ಮೊಟ್ಟೆಗಳಿಗೆ ಸೇರಿಸಿಕೊಳ್ಳಿ, ಇದು ನಿಮ್ಮ ಆಮ್ಲೆಟ್ ಅನ್ನು ಫ್ಲಫ್ ಮಾಡಲು ಮತ್ತೊಂದು ತಂತ್ರವಾಗಿದೆ. ಮಿಶ್ರಣವನ್ನು ಬೇಯಿಸಿದಾಗ, ಕಾರ್ಬನೇಶನ್ ಅದನ್ನು ಉಬ್ಬಿಸಲು ಸಹಾಯ ಮಾಡುತ್ತದೆ.
ನೀವು ಮೃದುವಾದ ಆಮ್ಲೆಟ್ ತಯಾರಿಸಲು ಪ್ರಾರಂಭಿಸಿದಾಗ, ಸರಿಯಾದ ಸ್ಥಿರತೆಯನ್ನು ಸಾಧಿಸಲು ಸಹಾಯ ಮಾಡಲು ಈ ಸಲಹೆಗಳನ್ನು ಪಾಲಿಸಿರಿ. ಇವುಗಳೊಂದಿಗೆ, ನೀವು ಮನೆಯಲ್ಲಿಯೇ ರುಚಿಕರವಾದ ದೇಸಿ ಶೈಲಿಯ ಮೃದುವಾದ ಆಮ್ಲೆಟ್ ಅನ್ನು ತ್ವರಿತವಾಗಿ ಮಾಡಿಕೊಳ್ಳಬಹುದು.
ದೇಸಿ ಶೈಲಿಯ ಫ್ಲಫಿ ಆಮ್ಲೆಟ್ ಮಾಡುವ ರೆಸಿಪಿ ಇಲ್ಲಿದೆ
ಮೊದಲು, ಮೊಟ್ಟೆಗಳನ್ನು ಒಂದು ಬೌಲ್ ನಲ್ಲಿ ಹಾಕಿ ಕಲಿಸಿಕೊಳ್ಳಿರಿ ಮತ್ತು ಅದಕ್ಕೆ ಕೆಂಪು ಮೆಣಸಿನ ಪುಡಿ, ಮೆಣಸು, ಉಪ್ಪು, ಕತ್ತರಿಸಿದ ಈರುಳ್ಳಿ, ಶುಂಠಿ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ ಸೇರಿಸಿಕೊಳ್ಳಿರಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸೋಡಾವನ್ನು ನೀರಿಗೆ ಬೆರೆಸಿ ಮತ್ತೆ ಮಿಶ್ರಣ ಮಾಡಿ.
ಇದನ್ನೂ ಓದಿ: ಬಿಸಿಬಿಸಿ ಕಾಫಿ ಜೊತೆ ಸ್ಪೆಷಲ್ ಚುರುಮುರಿ ಸವಿಯಿರಿ -ಇಲ್ಲಿದೆ ರೆಸಿಪಿ
ನಂತರ, ಬದಿಯಲ್ಲಿ ಒಂದು ಪ್ಯಾನ್ ಅನ್ನು ಬಿಸಿ ಮಾಡಲು ಪ್ರಾರಂಭಿಸಿ ಮತ್ತು ಬೆಣ್ಣೆಯನ್ನು ಅಥವಾ ಎಣ್ಣೆಯನ್ನು ಪ್ಯಾನ್ ಗೆ ಹಾಕಿಕೊಳ್ಳಿರಿ. ತಯಾರಿಸಿದ ಮೊಟ್ಟೆಯ ಮಿಶ್ರಣವನ್ನು ಸುರಿಯಿರಿ ಮತ್ತು ಬೇಯಿಸಿ. ಒಮ್ಮೆ ಅದು ಫ್ಲಫ್ ಅಪ್ ಮಾಡಲು ಪ್ರಾರಂಭಿಸಿದ ನಂತರ, ಫ್ಲಿಪ್ ಮಾಡಿ ಮತ್ತು ಬೇಯಿಸಿ. ನಂತರ ಅದನ್ನು ಹೊರ ತೆಗೆಯಿರಿ ಮತ್ತು ಸೇವಿಸಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ