Parenting Tips: ಮಕ್ಕಳಲ್ಲಿ ಸೆಲ್ಫ್​ ಕೇರ್​ ಬೆಳೆಸುವುದು ಹೇಗೆ? ಇದರಲ್ಲಿ ಪೋಷಕರ ಪಾತ್ರವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒತ್ತಡದಿಂದ ಮುಕ್ತರಾಗಲು, ಸ್ವತಂತ್ರ ಭಾವನೆ ಹೊಂದಲು ಮಕ್ಕಳಲ್ಲಿ ಸೆಲ್ಫ್​ ಕೇರ್​ , ಪ್ರೀತಿ ಬಹಳ ಮುಖ್ಯವಾಗುತ್ತದೆ. ಮಕ್ಕಳು ಶಾಲೆಯಲ್ಲಿ ವಿಭಿನ್ನರಾಗಿರುವುದಲ್ಲದೇ ಆತ್ಮವಿಶ್ವಾಸವೂ ಬೆಳೆಯುತ್ತದೆ. ದೊಡ್ಡವರಾದ ಮೇಲೆ ಈ ಗುಣದಿಂದ ಅವರು ಸದಾ ತಮಗೆ ಒಳ್ಳೆಯದನ್ನು ಕೊಟ್ಟು ಕೊಳ್ಳುತ್ತಾರೆ.

ಮುಂದೆ ಓದಿ ...
  • Share this:

ಮುದ್ದು ಮುದ್ದು ಮಕ್ಕಳು(Childrens), ತೊದಲು ನುಡಿಗಳು, ಥರಾಹೇವರಿ ಪ್ರಶ್ನೆಗಳು, ತುಂಟತನದ ನಗು (Naughty Smile) ಇದೆಲ್ಲವು ಅವರೊಟ್ಟಿಗೆ ಹೆಚ್ಚಿನ ಸಮಯ ಕಳೆಯಲು ಪ್ರೇರೇಪಿಸುತ್ತವೆ. ಅದರೊಟ್ಟಿಗೆ ಮಕ್ಕಳಲ್ಲಿ ಸ್ವಲ್ಪ ಪ್ರಬುದ್ಧತೆ ಇದ್ದರಂತೂ ಆ ಮಗುವಿನ ಬಗ್ಗೆ ವಿಶೇಷ ಒಲವು ಮೂಡುತ್ತದೆ. ಕೆಲವು ಮಕ್ಕಳು ತಾವು ಹೇಗಿದ್ದರೂ ಚೆನ್ನ ಅಂದುಕೊಂಡರೆ, ಇನ್ನೂ ಕೆಲವು ಮಕ್ಕಳು ತಾವು ಹೀಗೆಯೇ ಇರಬೇಕು ಎನ್ನುವ ಸ್ವಯಂ ಕಾಳಜಿ (Self Care) ಬೆಳೆಸಿಕೊಳ್ಳುತ್ತಾರೆ. ಇದು ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಗತ್ಯ ಗುಣವಾಗಿದ್ದು, ಮಕ್ಕಳಲ್ಲಿ ಇದನ್ನು ಪೋಷಕರು (Parents) ಬೆಳೆಸಬೇಕು.


ಮಕ್ಕಳಲ್ಲಿ ಸ್ವಯಂ ಕಾಳಜಿಯ ಅರಿವು ಏಕೆ ಮುಖ್ಯ?


ಒತ್ತಡದಿಂದ ಮುಕ್ತರಾಗಲು, ಸ್ವತಂತ್ರ ಭಾವನೆ ಹೊಂದಲು ಮಕ್ಕಳಲ್ಲಿ ಸೆಲ್ಫ್​ ಕೇರ್​ , ಪ್ರೀತಿ ಬಹಳ ಮುಖ್ಯವಾಗುತ್ತದೆ. ಮಕ್ಕಳು ಶಾಲೆಯಲ್ಲಿ ವಿಭಿನ್ನರಾಗಿರುವುದಲ್ಲದೇ ಆತ್ಮವಿಶ್ವಾಸವೂ ಬೆಳೆಯುತ್ತದೆ. ದೊಡ್ಡವರಾದ ಮೇಲೆ ಈ ಗುಣದಿಂದ ಅವರು ಸದಾ ತಮಗೆ ಒಳ್ಳೆಯದನ್ನು ಕೊಟ್ಟು ಕೊಳ್ಳುತ್ತಾರೆ.


ಸಾಂದರ್ಭಿಕ ಚಿತ್ರ


ಹಾಗಾದ್ರೆ ಮಕ್ಕಳಲ್ಲಿ ಸೆಲ್ಫ್​ ಕೇರ್​ ಬೆಳೆಸುವುದು ಹೇಗೆ?


1 ನಿಮ್ಮನ್ನು ನೋಡಿ ಕಲಿಯುತ್ತಾರೆ


ಮಕ್ಕಳ ಮೊದಲ ಇನ್​​ಫ್ಲೂಯೆನ್ಸರ್ಸ್​​ ಅಪ್ಪ ಮತ್ತು ಅಮ್ಮನೇ ಆಗಿರುತ್ತಾರೆ. ಆದ್ದರಿಂದ ನೀವು ಪ್ರತಿ ನಿತ್ಯ ಶಿಸ್ತನ್ನು ಮರೆಯದಿರಿ. ಸ್ನಾನ, ಶುಭ್ರ ವಸ್ತ್ರ ಧಾರಣೆ ಇರಲಿ. ಮಕ್ಕಳು ನಿಮ್ಮೊಟ್ಟಿಗೆ ಈ ಕೆಲಸದಲ್ಲಿ ಜೊತೆಯಾಗುವಂತೆ ನೋಡಿಕೊಳ್ಳಿ. ಮನೆಯಿಂದಲೇ ಕೆಲಸ ಮಾಡಿದರೂ, ಮನೆ ಕೆಲಸವೇ ಆದರೂ ನಿಮ್ಮ ಉಡುಗೆ ತೊಡುಗೆ ಬಗ್ಗೆ ಗಮನವಿರಲಿ. ಕೆಲಸದ ನಡುವೆ ಬ್ರೇಕ್ ತೆಗೆದುಕೊಳ್ಳಿ, ಹೊರಗಿನ ಪ್ರಪಂಚವನ್ನು ನೋಡಿ. ನಿಮ್ಮ ಅಗತ್ಯತೆಯನ್ನು ಪೂರೈಸಿಕೊಳ್ಳಿ. ಇದೆಲ್ಲವೂ ಮಕ್ಕಳಲ್ಲಿ ತಮ್ಮ ಬಗ್ಗೆ ಕಾಳಜಿ ಹುಟ್ಟುತ್ತದೆ. ಮೊದಲು ನಮ್ಮನ್ನು ನಾವು ಪ್ರೀತಿಸಬೇಕು ಮತ್ತು ಗೌರವಿಸಬೇಕು.


2. ವ್ಯವಸ್ಥಿತವಾದ ದಿನಚರಿ ಅನುಸರಿಸಿ


ಶಕ್ತಿ ಮತ್ತು ಸಮಯದ ಸದುಪಯೋಗಪಡಿಸಿಕೊಳ್ಳಲು ಕಟ್ಟುನಿಟ್ಟಾದ ದಿನಚರಿ ಅನುಸರಿಸಿ. ಬೇಗ ಎದ್ದು ನಿತ್ಯಕರ್ಮ ಮುಗಿಸಿ, ಧ್ಯಾನ, ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು. ಇದೆಲ್ಲವನ್ನು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅಭ್ಯಾಸ ಮಾಡಬೇಕು. ತಮ್ಮ ರೂಂ ಸ್ವಚ್ಚವಾಗಿಟ್ಟುಕೊಳ್ಳುವುದು ಅನುಸರಿಬೇಕು. ಯಾರ ಮೇಲ್ವಿಚಾರಣೆ ಇಲ್ಲದೇ ಮಕ್ಕಳು ಇದನ್ನು ಪಾಲಿಸಬೇಕು.


3. ಗ್ಯಾಜೆಟ್​ ಲೋಕದಿಂದ ಹೊರ ತನ್ನಿ


ಮಕ್ಕಳ ಪ್ರೀತಿ ಗ್ಯಾಜೆಟ್​ಗಳಿಗೆ ಸೀಮಿತವಲ್ಲ. ಪಾರ್ಕ್​,ಪಾರ್ಟಿ, ಬೆಟ್ಟ ಗುಡ್ಡ, ಸಮುದ್ರ ತೀರದಂತಹ ಸ್ಥಳಗಳಿಗೆ ಜನರೊಟ್ಟಿಗೆ ಕರೆದುಕೊಂಡು ಹೋಗಿ. ಬದುಕಿನ ವಿವಿಧ ಆಯಾಮಗಳು ಅಭ್ಯಾಸವಾಗಲಿ. ನಿಮ್ಮ ಸಂಬಂಧಿಕರ ಮನೆಗೆ ತಪ್ಪದೇ ಭೇಟಿ ನೀಡಿ. ಅಲ್ಲಿ ಜನರೊಟಿಗೆ ಬೆರೆಯುವುದು ಅವರ ಪ್ರಪಂಚ ವಿಸ್ತರಿಸುವುದು. ಆ ಮೂಲಕ ಒತ್ತಡರಹಿತ ಜೀವನ ಹೊಂದಲು ಇದೇ ಅವರಿಗೆ ಬುನಾದಿ.


4. ಎಲ್ಲದಕ್ಕೂ ಮಿತಿ ಇರಲಿ


ಮಕ್ಕಳು ಎಲ್ಲರೊಟ್ಟಿಗೆ ಬೆರೆತಾಗ ಪ್ರಭಾವಕ್ಕೆ ಒಳಗಾಗಬಹುದು. ಅವರಿಗೆ ತರ್ಕಬದ್ಧವಾಗಿ ಆಲೋಚಿಸಲು ಕಲಿಸಬೇಕು. ಭಾವನೆಗಳ ಮೇಲೆ ಹಿಡಿತ ಇಡಬೇಕು. ಕೆಟ್ಟ ಮಾತುಗಳನ್ನು ಆಡುವವರಿಂದ ಅಂತರ ಕಾಯ್ದುಕೊಳ್ಳಬೇಕು. ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸುವುದನ್ನು ಕಲಿಸಬೇಕು. ದೊಡ್ಡವರ ಜೊತೆಗೆ ವಾದವಿದ್ದರೂ ಅದು ತನ್ನ ಮಿತಿ ಮೀರಬಾದರು. ತೀರಾ ತಮ್ಮನ್ನು ಕಡೆಗಣಿಸುವ ವಾತಾವರಣವನ್ನೂ ಪೋಷಿಸಬಾರದು. ಇತಿ ಮಿತಿಯ ಅರಿವಿರಬೇಕು.


ಇದನ್ನೂ ಓದಿ: Parents And Childrens: ಮನೆಯಲ್ಲಿ ಮಕ್ಕಳು ಇದ್ದಾರಾ? ಹಾಗಿದ್ರೆ ಅವರ ಮುಂದೆ ಪೋಷಕರು ಹೀಗೆಲ್ಲಾ ಮಾಡಲೇಬಾರದು!




ಎಲ್ಲಾ ಮಕ್ಕಳು ಒಂದೇ ಥರನಾಗಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಅವರ ದೈಹಿಕ ಮತ್ತು ಮಾನಸಿಕ ಕಾರ್ಯಕ್ಷಮತೆ ಗುರುತಿಸಿ ಅದನ್ನು ಬೆಳೆಸಬೇಕು. ಅವರ ಬಗ್ಗೆ ಎಂತಹ ಸಂದರ್ಭದಲ್ಲೂ ದ್ವೇಷ ಹುಟ್ಟಬಾರದು, ಶೇಮ್ ಅನಿಸಬಾರದು. ಈ ರೀತಿಯಲ್ಲಿ ಮಕ್ಕಳಿಗೆ ತಮ್ಮ ಬಗ್ಗೆ ಪ್ರೀತಿ ಬೆಳೆಯುವಂತಹ ವಿಷಯಗಳನ್ನೇ ಕಲಿಸಬೇಕು. ಈ ನಿಟ್ಟಿನಲ್ಲಿ ಅವರು ಇನ್ನೊಬ್ಬರನ್ನು ನೋಯಿಸದೇ ತಾವು ನೊಂದುಕೊಳ್ಳದೇ ಬದುಕುವುದನ್ನು ಕಲಿಯಬೇಕು.

First published: