Calorie Calculator: ಸರಳ ಲೆಕ್ಕಾಚಾರ ಅಳವಡಿಸಿಕೊಂಡು ಹೀಗೆ ದೇಹದ ತೂಕ ಇಳಿಸಿ

Calorie Count: ಮೆಯೋ ಕ್ಲಿನಿಕ್ ಹೇಳುವಂತೆ ನೀವು ಶೀಘ್ರವಾಗಿ ತೂಕ ಕಳೆದುಕೊಂಡರೆ ನೀವು ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಕರಗಿಸಿಕೊಳ್ಳದೇ ಇರಬಹುದು. ಈ ಸಮಯದಲ್ಲಿ ತೆಳುವಾದ ಅಂಗಾಂಶಗಳನ್ನು ಕಳೆದುಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ದೇಹದಲ್ಲಿರುವ ಕೊಬ್ಬು ಹಾಗೆಯೇ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೂಕ ಇಳಿಸುವುದು(Weight Loss) ಎಂದರೆ ಅದು ಅಷ್ಟೊಂದು ಸುಲಭದ ಕಾರ್ಯವಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಸರಿಯಾದ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುವುದು, ನಿಯಮಿತ ವ್ಯಾಯಾಮ, ಸಿಹಿ ಖಾದ್ಯಗಳ ಉಪೇಕ್ಷೆ ಹೀಗೆ ತೂಕ ಇಳಿಸುವುದು ಒಂದು ದೀರ್ಘವಾದ ಪ್ರಕ್ರಿಯೆಯಾಗಿದೆ. ಕಠಿಣ ಪರಿಶ್ರಮ ಹಾಗೂ ಶಿಸ್ತು ಇದ್ದರೆ ಮಾತ್ರವೇ ತೂಕ ಇಳಿಸುವ ಗುರಿಯಲ್ಲಿ ಸಫಲತೆ ಪಡೆಯಲು ಸಾಧ್ಯ. ಎಷ್ಟು ಪ್ರಮಾಣದಲ್ಲಿ ನೀವು ಆಹಾರ(Food) ಸೇವಿಸಬೇಕು..? ಎಷ್ಟು ಗಂಟೆಯ ವ್ಯಾಯಾಮ ನಡೆಸಬೇಕು..? ಮೊದಲಾದ ಪ್ರಶ್ನೆಗಳನ್ನು ಪ್ರತಿಯೊಬ್ಬರೂ ಹೊಂದಿರುತ್ತಾರೆ. ಅದಕ್ಕಾಗಿಯೇ ತೂಕ ಇಳಿಸುವ ಕ್ಯಾಲ್ಕುಲೇಟರ್ ಸಲಹೆಗಳನ್ನು ಇಲ್ಲಿ ಪಡೆದುಕೊಳ್ಳಬಹುದು.

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನೀವು ಮುಖ್ಯವಾಗಿ ಗಮನ ಹರಿಸಬೇಕಾಗಿರುವುದು ಹಂತ ಹಂತವಾಗಿ ಇಳಿಸುವ ಪ್ರಕ್ರಿಯೆಯತ್ತ. ಏಕೆಂದರೆ ತೂಕ ಇಳಿಸುವುದನ್ನು ನೀವು ಕೆಲವೇ ತಿಂಗಳಲ್ಲಿ ಸಾಧಿಸುವುದು ತುಂಬಾ ಕಷ್ಟಕರವಾಗಿರುತ್ತದೆ ಹಾಗೂ ನೀವು ಈ ಪ್ರಕ್ರಿಯೆಯಲ್ಲಿ ನಿಯಮಿತವಾಗಿಲ್ಲದಿದ್ದರೆ ಪುನಃ ಕೊಬ್ಬು ನಿಮ್ಮ ದೇಹವನ್ನು ಕರಗಿಸಿದಷ್ಟೇ ವೇಗದಲ್ಲಿ ಸೇರಿಕೊಳ್ಳುತ್ತದೆ.

ಅದೇ ರೀತಿ ದೇಹದಂಡಿಸುವಂತಹ ಕ್ರಿಯೆಯಲ್ಲಿ ತೂಕ ಕರಗಿಸುವುದೂ ಕೂಡ ನಂತರದ ದಿನಗಳಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಅದಕ್ಕಾಗಿ ನೀವು ಕೆಲವೊಂದು ಲೆಕ್ಕಾಚಾರಗಳನ್ನು ಅಳವಡಿಸಿಕೊಂಡರೆ ಸುಲಭವಾಗಿ ತೂಕ ಕರಗಿಸಿಕೊಳ್ಳಬಹುದು ಹಾಗೂ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು.

ಪ್ರತಿ ವಾರದಲ್ಲಿ ತೂಕ ಇಳಿಸುವ ಆರೋಗ್ಯಕರ ದರ:

ಇಂಗ್ಲೆಂಡ್‌ನ NHS ಪ್ರಕಾರ ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಒಂದು ವಾರದಲ್ಲಿ ನೀವು ಇಳಿಸಿಕೊಳ್ಳಬಹುದಾದ ತೂಕ 0.5 ಕೆಜಿ ಹಾಗೂ 1 ಕೆಜಿಯ ನಡುವೆ ಇರಬೇಕು ಎಂದಾಗಿದೆ. ನೀವು ಇದಕ್ಕಿಂತ ಹೆಚ್ಚು ವೇಗದಲ್ಲಿ ತೂಕ ಇಳಿಸಿದಲ್ಲಿ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಅಂದರೆ ಅಪೌಷ್ಟಿಕತೆ, ಪಿತ್ತಕಲ್ಲುಗಳು, ದಣಿವು, ಅಸ್ವಸ್ಥತೆ ಮೊದಲಾದವನ್ನು ಎದುರಿಸುವ ಅಪಾಯವಿರುತ್ತದೆ ಎಂದು ತಿಳಿಸಿದೆ. ನೀವು ಎಷ್ಟು ತೂಕ ಇಳಿಸಿಕೊಳ್ಳಬೇಕೆಂದಿರುವಿರೋ ಅದರ ಮೇಲೆ ಕಾರ್ಯನಿರ್ವಹಿಸಿ ಹಾಗೂ ಆರೋಗ್ಯಕರ ತೂಕ ಕ್ಯಾಲ್ಕುಲೇಟರ್ ಬಳಸಿಕೊಂಡು ವೈಯಕ್ತಿಕ ಕ್ಯಾಲೋರಿ ಶ್ರೇಣಿ ಪಡೆದುಕೊಳ್ಳಿ.

ಇದನ್ನೂ ಓದಿ: ಮುಲ್ತಾನಿ ಮಿಟ್ಟಿ ಇದ್ರೆ ಸಾಕು ತ್ವಚೆಯ ಸಮಸ್ಯೆ ಮಾಯವಾಗುತ್ತೆ

ಮೆಯೋ ಕ್ಲಿನಿಕ್‌ನ ಸದಸ್ಯರಾಗಿರುವ ಡೊನಾಲ್ಡ್ ಡಿ ಹೆನ್‌ಸ್ರಡ್ ಹೇಳುವಂತೆ ವೇಗವಾಗಿ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಪರಿಶ್ರಮವನ್ನು ಹಾಕಬೇಕಾಗುತ್ತದೆ. ಅಂದರೆ ಆಹಾರ ಪದ್ಧತಿ ಹಾಗೂ ವ್ಯಾಯಾಮದಲ್ಲೂ ಸಾಕಷ್ಟು ಮಾರ್ಪಾಡುಗಳನ್ನು ಅನುಸರಿಸಬೇಕಾಗುತ್ತದೆ. ವೈದ್ಯರು ಹೇಳುವಂತೆ ವೇಗವಾದ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಅನುಸರಿಸುವ ಆಹಾರ ಪದ್ಧತಿ ಹಾಗೂ ವ್ಯಾಯಾಮಗಳು ಅನಾರೋಗ್ಯಕರವಾಗಿರುತ್ತವೆ ಹಾಗೂ ಜೀವನ ಪರ್ಯಂತ ಈ ವಿಧಾನಗಳನ್ನು ಅನುಸರಿಸುವುದು ಕಷ್ಟಕರವಾಗಿರುತ್ತದೆ ಎಂದಾಗಿದೆ.

ಹೆನ್‌ಸ್ರಡ್ ಹೇಳುವಂತೆ ವಾರದಲ್ಲಿ ಒಂದು ಅಥವಾ ಎರಡು ಪೌಂಡ್‌ಗಳಷ್ಟು ತೂಕ ಇಳಿಸುವುದು ಸುರಕ್ಷಿತ ಹಾಗೂ ಉತ್ತಮ ವಿಧಾನವಾಗಿದೆ. ಇದು ನಿಧಾನಗತಿಯ ತೂಕ ಇಳಿಸುವ ವಿಧಾನವಾಗಿದ್ದರೂ ದೀರ್ಘ ಅವಧಿಯವರೆಗೆ ನಿಮ್ಮ ತೂಕ ಇಳಿಸುವುದನ್ನು ನಿರ್ವಹಿಸಲು ಸಹಕಾರಿಯಾಗಿರುತ್ತದೆ ಎಂದಾಗಿದೆ.

ಮೆಯೋ ಕ್ಲಿನಿಕ್‌ನ ಸರಳವಾದ ತೂಕ ಇಳಿಸುವ ಲೆಕ್ಕಾಚಾರ:

ನಿಮ್ಮ ದೇಹದಿಂದ ಹೆಚ್ಚುವರಿ ಹಾಗೂ ಅನಾರೋಗ್ಯಕರ ಕೊಬ್ಬನ್ನು ನೀವು ಬರ್ನ್ ಮಾಡುವುದು ತೂಕ ಇಳಿಕೆಯಲ್ಲಿ ನಿಮ್ಮ ಗುರಿಯಾಗಿರಲಿ
ಒಂದು ಪೌಂಡ್ ಕೊಬ್ಬು 3,500 ಕ್ಯಾಲೋರಿಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ
ವಾರದಲ್ಲಿ ಒಂದು ಪೌಂಡ್ ಕೊಬ್ಬು ಕರಗಿಸಲು, ನೀವು ಪ್ರತಿ ದಿನ ಸೇವಿಸುವ ಆಹಾರದಲ್ಲಿ 500ಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬೇಕಾಗುತ್ತದೆ
500 ಕ್ಯಾಲೋರಿಗಳನ್ನು 7 ದಿನಗಳೊಂದಿಗೆ ಗುಣಿಸಿದಾಗ ಅಂದರೆ 500x7=3500 ಕ್ಯಾಲೋರಿಯನ್ನು ವಾರದಲ್ಲಿ ಬರ್ನ್ ಮಾಡಬೇಕು

ಕೊಬ್ಬು ಕರಗಿಸುವ ಸಮಯದಲ್ಲಿ ಅಂಗಾಂಶಗಳನ್ನು ಕಳೆದುಕೊಳ್ಳದಿರಿ:

ಮೆಯೋ ಕ್ಲಿನಿಕ್ ಹೇಳುವಂತೆ ನೀವು ಶೀಘ್ರವಾಗಿ ತೂಕ ಕಳೆದುಕೊಂಡರೆ ನೀವು ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಕರಗಿಸಿಕೊಳ್ಳದೇ ಇರಬಹುದು. ಈ ಸಮಯದಲ್ಲಿ ತೆಳುವಾದ ಅಂಗಾಂಶಗಳನ್ನು ಕಳೆದುಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ದೇಹದಲ್ಲಿರುವ ಕೊಬ್ಬು ಹಾಗೆಯೇ ಇರುತ್ತದೆ.

ನಿಮ್ಮ ಸಾಮಾನ್ಯ ಆಹಾರ ಪದ್ಧತಿಗೆ ಹೋಲಿಸಿದಾಗ ಕ್ಯಾಲೋರಿ ಸೇವನೆಯನ್ನು 500ಕ್ಕೆ ಇಳಿಸಿ, ವ್ಯಾಯಾಮ/ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಿ ಹಾಗೂ ಆರೋಗ್ಯಕರ ರೀತಿಯಲ್ಲಿ ಆಹಾರ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಿ

ತೂಕ ಇಳಿಸುವಾಗ ಅಳವಡಿಸಿಕೊಳ್ಳಬಹುದಾದ ವಿನಾಯಿತಿಗಳೇನು:

ಕೆಲವೊಂದು ಸಂದರ್ಭಗಳಲ್ಲಿ ಕಡಿಮೆ ಕ್ಯಾಲೋರಿ ಇರುವ ಆಹಾರದ ಮೂಲಕ ವೇಗವಾಗಿ ತೂಕ ಕಳೆದುಕೊಳ್ಳಬೇಕಾಗುತ್ತದೆ. ವ್ಯಕ್ತಿಯು ಸ್ಥೂಲಕಾಯದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರು ಈ ದಿಸೆಯಲ್ಲಿ ಶೀಘ್ರ ತೂಕ ಇಳಿಕೆಗೆ ಸಲಹೆ ನೀಡುತ್ತಾರೆ.

ಮೆಯೋ ಕ್ಲಿನಿಕ್ ಸೂಚಿಸುವ ತೂಕ ಇಳಿಸುವ ವಿಧಾನಗಳೇನು:

ಮೇಯೋ ಕ್ಲಿನಿಕ್ ತ್ವರಿತ ಪ್ರಾರಂಭ ವಿಧಾನ (ಕ್ವಿಕ್-ಸ್ಟಾರ್ಟ್ ಫೇಸ್) ನಲ್ಲಿ ತೂಕ ಇಳಿಸುವ ಸೂಚನೆ ನೀಡುತ್ತದೆ
ಈ ತೂಕ ಇಳಿಸುವ ವಿಧಾನದಲ್ಲಿ ಮೊದಲ 2 ವಾರಗಳಲ್ಲಿ ವ್ಯಕ್ತಿಯು 6-10 ಪೌಂಡ್‌ಗಳಷ್ಟು ತೂಕ ಇಳಿಸಿಕೊಳ್ಳಬಹುದು
ಮೆಯೋ ಕ್ಲಿನಿಕ್ ಹೇಳುವಂತೆ ಈ ಕ್ಷಿಪ್ರ ತೂಕ ಇಳಿಕೆಯ ವಿಧಾನದಲ್ಲಿ ಸಂಸ್ಥೆಯು ಆರೋಗ್ಯಕರ ಹಾಗೂ ಸುರಕ್ಷಿತ ಹಂತಗಳನ್ನು ಅಳವಡಿಸಿಕೊಂಡಿದೆ ಎಂದಾಗಿದೆ.
ಮೊದಲ ಎರಡು ವಾರದ ನಂತರ ವಾರದಲ್ಲಿ ಒಂದು ಅಥವಾ ಎರಡು ಪೌಂಡ್‌ಗಳಷ್ಟು ತೂಕ ನಷ್ಟಕ್ಕೆ ಒಳಪಡಿಸಲಾಗುತ್ತದೆ.
ಹೀಗೆ ನಿಧಾನವಾಗಿ ಜೀವನಶೈಲಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಅಂದರೆ ಆರೋಗ್ಯಕರ ಆಹಾರ ಸೇವನೆ, ದೈಹಿಕ ಚಟುವಟಿಕೆ ಹೆಚ್ಚಿಸುವುದು ಹೀಗೆ ದೀರ್ಘ ಅವಧಿಯ ತೂಕ ಇಳಿಕೆಗೆ ಅಗತ್ಯವಾಗಿರುವ ಮಾರ್ಪಾಡುಗಳನ್ನು ಅಳವಡಿಸುವುದು.

ಆರೋಗ್ಯಕರವಾಗಿ ತೂಕ ಇಳಿಸುವ ವಿಧಾನ:

ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ರೆ ಪ್ರತಿದಿನ ಹೀಗೆ ಮಾಡಿ ಸಾಕು

ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರದ ಪ್ರಕಾರ ನಿಮ್ಮ ದೇಹದ ಒಟ್ಟು 5 ರಿಂದ 10% ದಷ್ಟು ತೂಕ ನಷ್ಟವು ದೇಹದಲ್ಲಿ ಅನೇಕ ಆರೋಗ್ಯಕರ ಮಾರ್ಪಾಡುಗಳನ್ನು ಉಂಟುಮಾಡುತ್ತದೆ ಎಂದಾಗಿದೆ. ರಕ್ತದೊತ್ತಡದಲ್ಲಿ ಸುಧಾರಣೆಗಳು, ರಕ್ತದ ಕೊಲೆಸ್ಟ್ರಾಲ್ ನಿಯಂತ್ರಣ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ನಿಯಂತ್ರಣ ಹೀಗೆ ಆರೋಗ್ಯಕರ ಧನಾತ್ಮಕ ಅಂಶಗಳಿಗೂ ಕಾರಣವಾಗುತ್ತವೆ ಎಂದಾಗಿದೆ.
First published: