Benefits of Amla :ಒಂದು ನೆಲ್ಲಿಕಾಯಿಯಲ್ಲಿದೆ ಹಲವಾರು ಪ್ರಯೋಜನಗಳು, ಪುರುಷರ ಆರೋಗ್ಯಕ್ಕೂ ಉತ್ತಮ ಈ ನೆಲ್ಲಿ

Amla Health Benefits: ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ(Vitamin C) ಇರುವುದರ ಜೊತೆಗೆ, ಕ್ಯಾಲ್ಸಿಯಂ(Calcium)ನಂತಹ ಅಂಶಗಳು ಕೂಡ ಕಂಡು ಬರುತ್ತವೆ. ಇದು ದೇಹವನ್ನು ರೋಗಗಳಿಂದ ದೂರವಿಡುವುದರ ಜೊತೆಗೆ, ಮೂಳೆ(Bone)ಗಳನ್ನು ಬಲಪಡಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರಕೃತಿಯಲ್ಲಿ ಪ್ರತಿಯೊಂದ ಪದಾರ್ಥಗಳಿಗೆ ಅದರದ್ದೇ ಮಹತ್ವಹೊಂದಿದೆ. ಒದೊಂದು ಹಣ್ಣುಗಳು(Fruits), ಕಾಯಿಗಳು ತಿಂದರೆ ಆರೋಗ್ಯ(Health)ಕ್ಕೆ ಉತ್ತಮ ಎಂದು ಎಲ್ಲರಿಗೂ ತಿಳಿದಿದೆ. ನೆಲ್ಲಿಕಾಯಿ(Amla)ಯ ವಿಶೇಷತೆ, ಪ್ರಯೋಜನಗಳ ಬಗ್ಗೆ ನಿಮಗೆ ಎಷ್ಟು ಗೊತ್ತು? ಹೌದು, ಈ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿ ನೋಡಲು ಸಣ್ಣಗಿದ್ದರೂ, ಇದರ ಉಪಯೋಗಗಳು ತುಂಬಾ ಇದೆ. ಮೊದಲೆಲ್ಲ ಗುಡ್ಡಬೆಟ್ಟಗಳಲ್ಲಿ ನೆಲ್ಲಿಕಾಯಿ ಸಿಗುತ್ತಿತ್ತು. ಆದರೆ ಇಂದು ನೆಲ್ಲಿಕಾಯಿ ಮರಗಳನ್ನ ಹೈಬ್ರಿಡ್(High breed) ಆಗಿ ಬೆಳೆಯಲಾಗುತ್ತಿದೆ. ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ(Vitamin C) ಇರುವುದರ ಜೊತೆಗೆ, ಕ್ಯಾಲ್ಸಿಯಂ(Calcium)ನಂತಹ ಅಂಶಗಳು ಕೂಡ ಕಂಡು ಬರುತ್ತವೆ. ಇದು ದೇಹವನ್ನು ರೋಗಗಳಿಂದ ದೂರವಿಡುವುದರ ಜೊತೆಗೆ, ಮೂಳೆ(Bone)ಗಳನ್ನು ಬಲಪಡಿಸುತ್ತದೆ. ಹಾಗಿದ್ರೆ ನೆಲ್ಲಿಕಾಯಿ ಸೇವನೆಯಿಂದ ಆಗುವ ಮತ್ತಷ್ಟು ಉಪಯೋಗಗಳೇನು? ಇಲ್ಲಿದೆ ಸಂಪೂರ್ಣ ವಿವರ

    ನೆಲ್ಲಿಕಾಯಿಯಿಂದ ದೇಹಕ್ಕೆ ಆಗುವ ಪ್ರಯೋಜನಗಳು
    1. ಮಧುಮೇಹ ನಿಯಂತ್ರಿದುವಲ್ಲಿ ಸಹಾಯಕ
    ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಎಂಬ ಅಂಶಗಳು ಇರುತ್ತವೆ. ಇದು ಇನ್ಸುಲಿನ್ ಹಾರ್ಮೋನುಗಳನ್ನು ಬಲಪಡಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೀಗಾಗಿ ಮಧುಮೇಹದ ಸಮಸ್ಯೆ ಇರುವವರು ನೆಲ್ಲಿಕಾಯಿ ಜ್ಯೂಸ್ ಸೇವಿಸಿ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಬಹುದು.

    ಇದನ್ನೂ ಓದಿ: ನೀವು ಕಾಫಿ ಪ್ರಿಯರ ಹಾಗಾದ್ರೆ ಇದನ್ನು ಓದಲೇ ಬೇಕು..!

    2. ಚರ್ಮದ ಕಾಂತಿ ಹೆಚ್ಚಿಸುತ್ತೆ
    ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿಯನ್ನ ತಿಂದರೆ ಕೊಲಾಜೆನ್​ನ ಕ್ಷೀಣತೆಯನ್ನು ನಿಧಾನಗೊಳಿಸುವ ಗುಣಗಳಿವೆ. ಈ ಸಾರದಲ್ಲಿ ವಿಟಮಿನ್ ಎ ಬಹಳ ಹೆಚ್ಚಿರುತ್ತೆ. ಇದು ಕಾಲಜನ್​ ಉತ್ಪಾದನೆಯಲ್ಲಿ  ಅತ್ಯಗತ್ಯ.  ಚರ್ಮವನ್ನು ಯುವ ಮತ್ತು ಮೃದವಾಗಿರಿಸುವ ಸಂಯುಕ್ತವಾಗಿದೆ.

    3. ಹೃದ್ರೋಗ ಸಮಸ್ಯೆಗೆ ಪರಿಹಾರ
    ನೆಲ್ಲಿಕಾಯಿಯಲ್ಲಿ ಫೈಬರ್​ ಹಾಗೂ ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್​ನ ಆಕ್ಸಿಡೀಕರಣವನ್ನು ಕಂಟ್ರೋಲ್​​ ಮಾಡುತ್ತೆ. ಇನ್ನೂ ಆರ್ತ್ರೋಸ್ಕ್ಲೆರೋಸಿಸಿ ಅನ್ನು ತಡೆಯುತ್ತದೆ. ಅಲ್ಲದೆ, ಕೊಲೆಸ್ಟ್ರಾಲ್​​ ಕಡಿಮೆ ಮಾಡಲು ಆಮ್ಲಾ ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ.

    4. ಅಸಿಡಿಟಿಗೂ ಪರಿಹಾರ
    ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಹೊಟ್ಟೆ ಮತ್ತು ಎದೆ ಉರಿ ಸಮಸ್ಯೆ ಇರುವವರು ಖಂಡಿತವಾಗಿಯೂ ನೆಲ್ಲಿಕಾಯಿ ರಸವನ್ನು ಸೇವಿಸಬೇಕು. ಹಾಗೆಯೇ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವರು ಕೂಡ ನೆಲ್ಲಿಕಾಯಿ ಜ್ಯೂಸ್ ಕುಡಿಯುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ದಿನಕ್ಕೆ ಎರಡು ಬಾರಿ ನೆಲ್ಲಿಕಾಯಿ ಜ್ಯೂಸ್ ಸೇವಿಸುವುದು ಹೊಟ್ಟೆಗೂ ಮತ್ತು ಆರೋಗ್ಯಕ್ಕೂ ಒಳ್ಳೆದು.

    5. ಮೂಳೆಗಳನ್ನು ಬಲಪಡಿಸುತ್ತದೆ
    ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಈ ಕಾಯಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದರ ರಸವನ್ನು ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಕೀಲು ನೋವಿನಿಂದಲೂ ಪರಿಹಾರ ಕಾಣಬಹುದಾಗಿದೆ.

    ಪುರುಷರಿಗೆ ಹೇಗೆ ನೆಲ್ಲಿಕಾಯಿ ಪ್ರಯೋಜನಕಾರಿಯಾಗಿದೆ?

    ಇದನ್ನೂ ಓದಿ: ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಬೇಕಾದರೆ ಈ ಆಹಾರಗಳನ್ನ ತಿನ್ನಬೇಡಿ

    ನೆಲ್ಲಿಕಾಯಿ ನೈಸರ್ಗಿಖ ಕಾಮೋತ್ತೇಜಕವಾಗಿ ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ ಸಿ ಕಡಿಮೆ ವೀರ್ಯಾಣು ಸಂಖ್ಯೆಯಿಂದ ಬಳಲುತ್ತಿರುವ ಜನರಿಗೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತದೆ, ನೆಲ್ಲಿಕಾಯಿ ಕಬ್ಬಿಣ ಮತ್ತು ಸತುವಿನ ಉತ್ತಮ ಮೂಲವಾಗಿದೆ, ಈ ಕಾರಣದಿಂದ ಇದು ವೀರ್ಯದ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ನೆಲ್ಲಿಕಾಯಿ ಗಾತ್ರದಲ್ಲಿ ಚಿಕ್ಕದಿದ್ದರೂ, ಅದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ.

    ವರದಿ - ವಾಸುದೇವ್​​.ಎಂ
    Published by:Sandhya M
    First published: