Green Chilli: ಖಾರ ಅಂತ ಅಳ್ಬೇಡಿ, ಹಸಿಮೆಣಸಿನಕಾಯಿ ತಿಂದ್ರೆ ಬೇಗ ಸಣ್ಣಗಾಗ್ತಾರಂತೆ!

Green Chilli Health Benefits:  ಪ್ಯಾಕ್ ಮಾಡಿದ ಕೆಂಪು ಮೆಣಸಿನ ಪುಡಿಗೆ ಆರೋಗ್ಯಕರ ಪರ್ಯಾಯ ಎಂದರೆ, ಹಸಿರು ಮೆಣಸಿನಕಾಯಿಗಳು. ಇದರಲ್ಲಿ  ಕ್ಯಾಪ್ಸೈಸಿನ್, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಎಂಬ  ಆ್ಯಂಟಿ ಆಕ್ಸಿಡೆಂಟ್​ಗಳ ಸಮೃದ್ಧ ಮೂಲವಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಆಹಾರದ(Indian Foods) ಪ್ರಮುಖ ಅಂಶವೆಂದರೆ ಮಸಾಲೆ ಮತ್ತು ಸುವಾಸನೆ.   ಆಹಾರಗಳು ತರಕಾರಿಗಳು, ಮಾಂಸ ಅಥವಾ ಮೊಟ್ಟೆಗಳಂತಹ ಪದಾರ್ಥಗಳ ನೈಸರ್ಗಿಕ ರುಚಿಯಿಂದ ಸಮೃದ್ಧವಾಗಿರುತ್ತದೆ.  ಹಾಗೆಯೇ ಭಾರತೀಯ ಅಡುಗೆಗಳಲ್ಲಿ ಹಸಿ ಮೆಣಸಿನಕಾಯಿ(Green Chillies) ಕೂಡ ಬಹಳ ಮುಖ್ಯವಾಗುತ್ತದೆ. ಕೆಲವರಿಗಂತೂ ಹಸಿ ಮೆಣಸಿನಕಾಯಿ ಇಲ್ಲದೇ ಅಡುಗೆ ಮಾಡುವುದೇ ಇಲ್ಲ. ಇನ್ನು ಕೆಲವರಿಗೆ ಹಸಿ ಮೆಣಸಿನಕಾಯಿ ಇದ್ದರೇ ಮಾತ್ರ ರುಚಿ. ಬಹುತೇಕ ಭಾರತೀಯ ಅಡುಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಹಸಿ ಮೆಣಸಿನಕಾಯಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೇ ತೂಕ ಇಳಿಸಲು(Weight Loss)  ಸಹಾಯ ಮಾಡುತ್ತದೆ ಎಂಬುದು ಹಲವಾರಿಗೆ ತಿಳಿದಿಲ್ಲ.  

ಪ್ಯಾಕ್ ಮಾಡಿದ ಕೆಂಪು ಮೆಣಸಿನ ಪುಡಿಗೆ ಆರೋಗ್ಯಕರ ಪರ್ಯಾಯ ಎಂದರೆ, ಹಸಿರು ಮೆಣಸಿನಕಾಯಿಗಳು. ಇದರಲ್ಲಿ  ಕ್ಯಾಪ್ಸೈಸಿನ್, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಎಂಬ  ಆ್ಯಂಟಿ ಆಕ್ಸಿಡೆಂಟ್​ಗಳ ಸಮೃದ್ಧ ಮೂಲವಾಗಿದೆ.

ಹಸಿ ಮೆಣಸಿನಕಾಯಿ ತೂಕ ಇಳಿಸಲು ಸಹಾಯ ಮಾಡುತ್ತದೆಯಾ?

ತಜ್ಞರ ಪ್ರಕಾರ ಹಸಿ ಮೆಣಸಿನಕಾಯಿ ಚಯಾಪಚಯ ಕ್ರಿಯೆಯನ್ನು 50%ಹೆಚ್ಚಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಹಸಿರು ಮೆಣಸಿನಕಾಯಿ  ಸೇವನೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಸರಾಗಗೊಳಿಸಿ,  ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.  ಮಸಾಲೆಯುಕ್ತ ಆಹಾರವು ನಿಮ್ಮ ಹಸಿವನ್ನು ನಿಗ್ರಹಿಸುತ್ತದೆ ಮತ್ತು ನಿಮಗೆ ದೀರ್ಘಕಾಲದವರೆಗೆ ಹಸಿವು ಆಗದಂತೆ  ಮಾಡುತ್ತದೆ ಇದರಿಂದಾಗಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

ಇದನ್ನೂ ಓದಿ: ಕಣ್ಣಿನ ಆರೋಗ್ಯದಿಂದ ಜೀರ್ಣಶಕ್ತಿ ವೃದ್ಧಿಯವರೆಗೆ ಬಟಾಣಿ ಕಾಳಿನ ಆರೋಗ್ಯ ಪ್ರಯೋಜನಗಳು ..

ಈ ಹಸಿ ಮೆಣಸಿನಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಇದ್ದು ಇದು ತೂಕ ಇಳಿಸಲು ಬೋನಸ್ ಅಂಶವಾಗುತ್ತದೆ.  ಬೀಜಗಳನ್ನು ಹಿಡಿದಿರುವ ಮೆಣಸಿನಕಾಯಿಯ ಬಿಳಿ ಪೊರೆ ಕ್ಯಾಪ್ಸೈಸಿನ್‌ನ ಶ್ರೀಮಂತ ಮೂಲವಾಗಿದೆ ಮತ್ತು ತೂಕ  ಇಳಿಸಲು ಸಹಾಯ ಮಾಡುತ್ತದೆ.  ಒಂದು ದಿನದಲ್ಲಿ ಕೇವಲ 12-15 ಗ್ರಾಂ ಮೆಣಸಿನಕಾಯಿಯನ್ನು ಮಾತ್ರ ಸೇವನೆ ಮಾಡಬೇಕು ಎಂದು  ತಜ್ಞರು ಸಲಹೆ ನೀಡಿದ್ದಾರೆ.  ಹೆಚ್ಚು ಹಸಿ ಮೆಣಸಿನಕಾಯಿ ಸೇವನೆ. ಆಮ್ಲೀಯತೆ ಮತ್ತು ಕರುಳಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ತೂಕ ಇಳಿಸಿಕೊಳ್ಳಲು, ತಜ್ಞರು  ಹಸಿ ಮೆಣಸಿನಕಾಯಿಯನ್ನು  ವೆಜ್​ ಕರಿಗಳಲ್ಲಿ  ಬಳಸಲು ಅಥವಾ  ಕೆಂಪು ಮೆಣಸಿನ ಪುಡಿಗೆ ಬದಲಿಯಾಗಿ ಬಳಸಲು ಸೂಚಿಸಿದ್ದಾರೆ.  ಯಾಕೆಂದರೆ ಕೆಂಪು ಮೆಣಸಿನಪುಡಿಯಲ್ಲಿ ಬಣ್ಣಗಳನ್ನು ಸೇರಿಸಿರಬಹುದು. ಅದಲ್ಲದೆ, ಈ ಮೆಣಸಿನಕಾಯಿಗಳನ್ನು ನಿಮ್ಮ ಉಪ್ಪಿನಕಾಯಿ, ಸಲಾಡ್‌ಗಳಲ್ಲಿ ಅಥವಾ ದಾಲ್,  ಸಾಂಬಾರ್ ಹೀಗೆ ಎಲ್ಲ ಅಡುಗೆಗಳಲ್ಲಿ ಬಳಕೆ ಮಾಡಬಹುದು.

ಹಸಿರು ಮೆಣಸಿನಕಾಯಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹಕ್ಕೆ ಕಾರಣವಾದ ಒಂದು ಪ್ರಮುಖ ಅಂಶವೆಂದರೆ-ಟೈಪ್ -1, ಟೈಪ್ -2 ಅಥವಾ ಗರ್ಭಾವಸ್ಥೆ-ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದು. ಆದರೆ ಹಸಿ ಮೆಣಸಿನಕಾಯಿಯ ಚಯಾಪಚಯ ವರ್ಧಕ ಗುಣಗಳು ಮತ್ತು ತೂಕ  ಇಳಿಸಲು ಸಹಾಯ ಮಾಡುವ ಅಂಶಗಳು ಪರೋಕ್ಷವಾಗಿ ಮಧುಮೇಹವನ್ನು ಕಡಿಮೆ  ಮಾಡುತ್ತದೆ. ಇದರ ಸೇವನೆ ಮಾಡುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಒಣಗಿದ ಹಿಮ್ಮಡಿ ಮುಜುಗರ ಉಂಟುಮಾಡುತ್ತಿದೆಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..

ಇದಲ್ಲದೆ, ಹಸಿರು ಮೆಣಸಿನಕಾಯಿಗಳು ದೇಹದಲ್ಲಿ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.  ಹಸಿರು ಮೆಣಸಿನಕಾಯಿಗಳು ಹಲವಾರು ಆರೋಗ್ಯ ಪ್ರಯೋಜನಗಳಿದ್ದರೂ ಸಹ ಯಾವಾಗ  ಅದರ ಸೇವನೆ ಮಾಡಬಾರದು ಎಂದು ತಿಳಿಯುವುದು ಮುಖ್ಯ. ತರಕಾರಿ, ರೈತ,  ಸಾಂಬಾರ್ ಮತ್ತು ಕೆಲ ಆಹಾರ ಪದಾರ್ಥಗಳ  ಮೂಲಕ ಕೇವಲ 12 ಗ್ರಾಂ ಹಸಿರು ಮೆಣಸಿನಕಾಯಿಗಳನ್ನು ಸೇವನೆ ಮಾಡುವುದು  ಸುರಕ್ಷಿತ ಮತ್ತು ಪ್ರಯೋಜನಕಾರಿ. ಅದನ್ನು ಮೀರಿ ಸೇವನೆ ಮಾಡುವುದು   ಹೊಟ್ಟೆ ನೋವು, ಸೆಳೆತ, ಅತಿಸಾರಕ್ಕೆ ಕಾರಣವಾಗಬಹುದು ಮತ್ತು ಚರ್ಮದ ಅಲರ್ಜಿಗೂ ಕಾರಣವಾಗಬಹುದು.
Published by:Sandhya M
First published: