Beauty Tips: ಮೊಡವೆಗಳಿಗೆ ರಾಮಬಾಣ ಈ ಪಾಪಾಸುಕಳ್ಳಿ- ಇದರ ಪ್ರಯೋಜನಗಳು ಎಷ್ಟು ನೋಡಿ

Cactus Skin Benefits: ಅನೇಕ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಎಲೆಕ್ಟ್ರೋಲೈಟ್‌ಗಳಿಂದ ತುಂಬಿರುವುದರಿಂದ  ಚರ್ಮವನ್ನು(Skin) ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ ಮತ್ತು ವಯಸ್ಸಾದ ಮತ್ತು ಕಾಲ್ಯಜನ್ ನಷ್ಟದ ವಿರುದ್ಧ ಹೋರಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾಪಾಸುಕಳ್ಳಿ(Cactus ) ಕ್ಯಾಕ್ಟೇಸಿ ಸಸ್ಯ ಕುಟುಂಬದ  ಸಸ್ಯವಾಗಿದ್ದು(Cactaceae Plant Family,), ಚರ್ಮದ ಆರೈಕೆ ವಿಚಾರಕ್ಕೆ ಬಂದಾಗ ಈ ಸಸ್ಯವು ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ಹಲವಾರು ಜನರಿಗೆ ತಿಳಿದಿಲ್ಲ. ಈ ಸಸ್ಯ ನೀರನ್ನು ಸಂಗ್ರಹಿಸುವ ವಿಚಾರ ಎಲ್ಲರಿಗೂ  ತಿಳಿದಿದೆ. ನಿಮಗೆ ಗೊತ್ತಾ ಇದು ಅನೇಕ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಎಲೆಕ್ಟ್ರೋಲೈಟ್‌ಗಳಿಂದ ತುಂಬಿರುವುದರಿಂದ  ಚರ್ಮವನ್ನು(Skin) ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ ಮತ್ತು ವಯಸ್ಸಾದ ಮತ್ತು ಕಾಲ್ಯಜನ್ ನಷ್ಟದ ವಿರುದ್ಧ ಹೋರಾಡುತ್ತದೆ. ನೀವು ಯಾವಾಗಲೂ  ನಿಮ್ಮ ಇಷ್ಟದ ಚರ್ಮವನ್ನು ಪಡೆಯಲು ಈ ಸಸ್ಯವನ್ನು ಬಳಸಬಹುದು.

 ಹಾಗಾದ್ರೆ ಚರ್ಮದ ಮೇಲೆ ಪಾಪಸುಕಳ್ಳಿಯ ಪ್ರಯೋಜನಗಳು ಏನು ಎಂಬುದು ಇಲ್ಲಿದೆ.

 ಮೊಡವೆಗಳ ವಿರುದ್ಧ ಹೋರಾಡುತ್ತದೆ 

ಕಳ್ಳಿ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಇದು ಮೊಡವೆ ಪೀಡಿತ ಚರ್ಮವನ್ನು ಗುಣಪಡಿಸುತ್ತದೆ ಮತ್ತು ನಿಮ್ಮ ಮೊಡವೆಗಳಿಂದ ಶಾಶ್ವತವಾಗಿ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಎಣ್ಣೆಯು ಸುಲಭವಾಗಿ  ಲಭ್ಯವಿರುತ್ತದೆ.  ನೀವು ಮಾಡಬೇಕಾಗಿರುವುದು ಇಷ್ಟೇ,  ಮೊಡವೆ ಪೀಡಿತ ಚರ್ಮದ ಮೇಲೆ ಕೆಲವು ಹನಿ ಎಣ್ಣೆಯನ್ನು ನಿಯಮಿತವಾಗಿ ಹಚ್ಚಿ. ಕೆಲವು ದಿನಗಳ ನಂತರ ಮೊಡವೆಗಳು ಮಾಯವಾಗುತ್ತದೆ.

ಒಣ ಚರ್ಮಕ್ಕೆ ಪ್ರಯೋಜನಕಾರಿ

ನೀವು ಒಣ ಚರ್ಮದಿಂದ ಬಳಲುತ್ತಿದ್ದರೆ, ಕಳ್ಳಿಯನ್ನು ಕತ್ತರಿಸಿ ಅದರ ಜೆಲ್ ಅನ್ನು ತೆಗೆದು ಬಳಕೆ ಮಾಡಿ. ಈ ಜೆಲ್ ಹೇರಳವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ತೇವಾಂಶದ ನಷ್ಟದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು ಇದನ್ನು ನಿಮ್ಮ ಚರ್ಮದ ಮೇಲೆ ಹಚ್ಚುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ರೆ ಪ್ರತಿದಿನ ಹೀಗೆ ಮಾಡಿ ಸಾಕು

ಇದು ಒಣ ಕೂದಲಿಗೆ ಸಹ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಇದು ತೇವಾಂಶದಲ್ಲಿ ಸಮೃದ್ಧವಾಗಿರುವುದರಿಂದ, ಇದು ಒಣ ಕೂದಲಿಗೆ ಹೈಡ್ರೇಶನ್‌ನ ಉತ್ತಮ ಮೂಲವಾಗಿದೆ. ಹೊಳೆಯುವ ಮತ್ತು ನಯವಾದ ಕೂದಲಿಗೆ ವಾರಕ್ಕೆ ಎರಡು ಬಾರಿ ನಿಮ್ಮ ಕೂದಲಿಗೆ ಕಳ್ಳಿ ಜೆಲ್ ಹಚ್ಚಿ.

ಡಲ್ ಸ್ಕಿನ್ ಗೆ ಉತ್ತಮ

ನಿಮ್ಮ ಚರ್ಮ ಡಲ್​ ಆಗಿದ್ದು ನಿಮಗೆ ಸಮಸ್ಯೆ ಆಗುತ್ತಿದ್ದರೆ ಕಳ್ಳಿಯ ಮಾಸ್ಕ್  ನಿಮಗೆ ಅದ್ಭುತವಾದ ಪ್ರಯೋಜನವನ್ನು ನೀಡುತ್ತದೆ. ನಿಮಗೆ ಬೇಕಾಗಿರುವುದು ಒಂದು ಚಮಚ ಕಳ್ಳಿ ಜೆಲ್, ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಅಲೋವೆರಾ. ಈ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಮಾಡಿ ಮಿಶ್ರಣ ಮಾಡಿಕೊಳ್ಳಿ. ಅದನ್ನು ನಿಮ್ಮ ಚರ್ಮಕ್ಕೆ ಹಚ್ಚಿ. ಉತ್ತಮ ಪ್ರಯೋಜನ ಪಡೆಯಲು ನಿಯಮಿತವಾಗಿ ಬಳಕೆ ಮಾಡಿ.

 ಟ್ಯಾನ್ ನಿಂದ ಮುಕ್ತಿ ನೀಡುತ್ತದೆ

ಸಾಮಾನ್ಯ ಟ್ಯಾನ್ ನಿಂದ ಬೇಸತ್ತಿದ್ದೀರಾ? ಚರ್ಮವನ್ನು ಹೈಡ್ರೇಟ್ ಮಾಡುವ ಎಲೆಕ್ಟ್ರೋಲೈಟ್‌ಗಳು ಮತ್ತು ಯುವಿ ಹಾನಿಯನ್ನು ತಡೆಯಲು ಸಹಾಯ ಮಾಡುವ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ಕಳ್ಳಿ ಜೆಲ್ ಅಥವಾ ಜ್ಯೂಸ್ ಅನ್ನು ಬಳಕೆ ಮಾಡಿ. ಯಾಕೆಂದರೆ ಕಳ್ಳಿ ಜೆಲ್ ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ ಹಾಗೂ ಟ್ಯಾನ್​ ನಿಂದ ಮುಕ್ತಿ ನೀಡುತ್ತದೆ ಎಂಬುದು ಸಾಬೀತಾಗಿದೆ.

ಚರ್ಮದ ವಯಸ್ಸಾಗುವಿಕೆಯನ್ನು ನಿಲ್ಲಿಸುತ್ತದೆ

ಇದನ್ನೂ ಓದಿ: ದೋಸೆ ಬರೀ ರುಚಿಕರ ಮಾತ್ರವಲ್ಲ ಆರೋಗ್ಯಕರ ಕೂಡ

ನಿಮ್ಮ ಚರ್ಮವು ವಯಸ್ಸಾಗುವುದನ್ನು ತಡೆಯಲು  ಇಲ್ಲಿದೆ ಸುಲಭ ಉಪಾಯ. ವಯಸ್ಸಾದ ವಿರೋಧಿ ಗುಣಲಕ್ಷಣಗಳಿಗೆ ಜನಪ್ರಿಯವಾಗಿರುವ ಕೆಲವು ಕಳ್ಳಿ ಬೀಜದ ಎಣ್ಣೆಯನ್ನು ಬಳಸಿ ಪರಿಹಾರ ಪಡೆಯಿರಿ. ಈ ಎಣ್ಣೆಯ ಸ್ವಲ್ಪ ಭಾಗವನ್ನು ನಿಮ್ಮ ಮುಖದ ಮೇಲೆ ಹತ್ತಿ ಪ್ಯಾಡ್‌ನಿಂದ ಹಚ್ಚಿ ಮತ್ತು ನಿಮ್ಮ ಚರ್ಮದ ಹಲವಾರು ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ಸುಕ್ಕು ಸುಕ್ಕಾದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
Published by:Sandhya M
First published: