ಆರೋಗ್ಯಕರ ಆಹಾರದ (Healthy Food) ಬಗ್ಗೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಪ್ರತಿದಿನವೂ ಏನಾದರೂ ಹೊಸದು ಬರುತ್ತದೆ. ಅದರಲ್ಲೂ ತೂಕ ಇಳಿಸುವ (weight Loss) ವಿಚಾರಕ್ಕೆ ಬಂದಾಗ ಪ್ರತಿದಿನ ಒಂದೆಲ್ಲ ಒಂದು ಹೊಸ ವಿಚಾರಗಳು ಹೊರಗೆ ಬರುತ್ತದೆ. ಹಾಗೆಯೇ ಈ ಬಾರಿ ಹೆಚ್ಚು ಸುದ್ದಿಯಲ್ಲಿರುವುದು ಬ್ರೊಕೊಲಿ ಕಾಫಿ. ಈ ಬ್ರೊಕೊಲಿ ಕಾಫಿಯ (broccoli Coffee) ಪರಿಕಲ್ಪನೆಯನ್ನು ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಆಸ್ಟ್ರೇಲಿಯಾದಲ್ಲಿ ಹಾರ್ಟ್ ಅಭಿವೃದ್ಧಿಪಡಿಸಿದೆ. ಒಂದು ಸಂಶೋಧನೆಯ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಸರಾಸರಿ ವ್ಯಕ್ತಿಯೊಬ್ಬರು ಪ್ರತಿದಿನ ಸಾಕಷ್ಟು ತರಕಾರಿಗಳನ್ನು ತಿನ್ನುವುದಿಲ್ಲ ಎಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಬರುತ್ತದೆ. ಆದರೆ ಅದಕ್ಕೆ ಬ್ರೊಕೊಲಿ ಪೌಡರ್ ಈ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲು ಉತ್ತಮ ಉಪಾಯವೆಂದು ಹೇಳಲಾಗುತ್ತದೆ. ಜೊತೆಗೆ ತೂಕ ಇಳಿಸಲು ಸಹ ಇದು ಸಹಕಾರಿ.
ಬೊಕೊಲಿ ಕಾಫಿ ಮಾಡುವುದು ಹೇಗೆ?
ಬ್ರೊಕೊಲಿ ಕಾಫಿ ಮಾಡುವುದು ಸರಳ ವಿಧಾನ. ಬ್ರೊಕೊಲಿಯನ್ನು ಚನ್ನಾಗಿ ಒಣಗಿಸಿ, ನಂತರ ಅದನ್ನು ಚನ್ನಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬ್ರೊಕೋಲಿಯ ಎಲ್ಲಾ ಆರೋಗ್ಯ ಪ್ರಯೋಜನಗಳನ್ನ ನೀವು ಪಡೆಯಬೇಕು ಎಂದರೆ ಪುಡಿಯನ್ನು ನಿಮ್ಮ ಕಾಫಿಗೆ ಸೇರಿಸಬಹುದು. ಒಂದು ತರಕಾರಿಯ ಸೇವೆಯು ಎರಡು ಟೇಬಲ್ಸ್ಪೂನ್ ಬ್ರೊಕೊಲಿ ಪುಡಿಗೆ ಸಮಾನವಾಗಿರುತ್ತದೆ. ನಾವು ತಿನ್ನಲು ಇಷ್ಟಪಡದ ಹಸಿರು ತರಕಾರಿಗಳ ಪೋಷಕಾಂಶವನ್ನು ಸೇರಿಸಲು ಇದು ಉತ್ತಮ ಮಾರ್ಗವಾಗಿದೆ.
ಬ್ರೊಕೊಲಿ ಕಾಫಿ ಪ್ರಯೋಜನಗಳು
ಬ್ರೊಕೊಲಿ ನಿಮ್ಮನ್ನು ಹೃದ್ರೋಗ, ಕ್ಯಾನ್ಸರ್ ನಿಂದ ರಕ್ಷಿಸುತ್ತದೆ ಮತ್ತು ತೂಕ ಇಳಿಸಲು ಹೆಚ್ಚು ಸಹಕಾರಿ ಎನ್ನಲಾಗುತ್ತದೆ. ಅಲ್ಲದೆ, ಕಾಫಿಯನ್ನ ಜನರು ದಿನನಿತ್ಯ ಸೇವಿಸುತ್ತಾರೆ, ಹಾಗಾಗಿ ಈ ಬ್ರೊಕೊಲಿ ಪುಡಿಯನ್ನು ಬಳಸಿ ಕಾಫಿ ತಯಾರಿಸುವುದು ಉತ್ತಮ. ಇದು ನಿಮ್ಮ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆದರೆ ನೀವು ಈ ಪುಡಿಯನ್ನು ನಿಮ್ಮ ಕಾಫಿಗೆ ಸೇರಿಸಲು ಸಾಧ್ಯವಾಗದಿದ್ದರೆ, ನೀವು ಇದನ್ನು ನಿಮ್ಮ ಸ್ಮೂಥಿಗಳು, ಹಣ್ಣುಗಳು, ಓಟ್ಸ್ ಅಥವಾ ಸಲಾಡ್ಗಳಿಗೆ ಸೇರಿಸಿ ಸೇವನೆ ಮಾಡಬಹುದು.
ಇದನ್ನೂ ಓದಿ: ತೂಕ ಇಳಿಸೋಕೆ ಏನೇನೋ ತಿನ್ನಬೇಡಿ ಇವುಗಳನ್ನು ತಿನ್ನಿ ಸಾಕು
ಬ್ರೊಕೊಲಿ ಕಾಫಿ ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ?
ಕಡಿಮೆ ಕ್ಯಾಲೋರಿಗಳು ಮಾತ್ರವಲ್ಲ, ಬ್ರೊಕೊಲಿಯು ಅಗತ್ಯವಾದ ಪೋಷಕಾಂಶಗಳು ಮತ್ತು ಫೈಬರ್ನಿಂದ ಕೂಡಿದೆ, ಇದು ನಿಮಗೆ ಹಸಿವಾಗದಂತೆ ತಡೆಯುತ್ತದೆ. ಇದರಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಕೊಬ್ಬನ್ನು ಒಡೆಯುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಈ ಹಸಿರು ತರಕಾರಿ ಒಂದು ಕಪ್ ನಿಮಗೆ ಪ್ರತಿದಿನ 100 ಪ್ರತಿಶತ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅನ್ನು ಒದಗಿಸುತ್ತದೆ.
2017 ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಕಡಿಮೆ ಮಟ್ಟದ ವಿಟಮಿನ್ ಸಿ ಹೊಂದಿರುವ ಜನರಲ್ಲಿ ಹೆಚ್ಚು ಕೊಬ್ಬು ಸುಡುವ ಶಕ್ತಿ ಇರುವುದಿಲ್ಲ ಮತ್ತು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಸೇವಿಸುವ ಜನರು ಸಾಮಾನ್ಯವಾಗಿ ಸೇವಿಸದವರಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇದು ಫೋಲೇಟ್, ವಿಟಮಿನ್ ಎ, ವಿಟಮಿನ್ ಬಿ-6 ಮತ್ತು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ. ಕ
ಡಿಮೆ ಶಕ್ತಿಯ ಸಾಂದ್ರತೆಯ ಆಹಾರಗಳು ತೂಕ ಇಳಿಸುವ ನಿಮ್ಮ ಪ್ರಯತ್ನದ ದ ಪ್ರಮುಖ ಭಾಗವಾಗಿದೆ ಮತ್ತು ಬ್ರೊಕೊಲಿ ಅವುಗಳಲ್ಲಿ ಒಂದಾಗಿದೆ. ಈ ಆಹಾರಗಳು ಪ್ರತಿ ಗ್ರಾಂ ಆಹಾರಕ್ಕೆ ಕೆಲವು ಕ್ಯಾಲೊರಿಗಳನ್ನು ಹೊಂದಿರುತ್ತವೆ ಮತ್ತು ಹೀಗಾಗಿ, ನೀವು ಅವುಗಳನ್ನು ಹೆಚ್ಚು ಸೇವನೆ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ.
ಹಾಗೆಯೇ ಇದರಿಂದ ನೀವು ಹೆಚ್ಚಿನ ಕ್ಯಾಲೊರಿಗಳನ್ನು ಸೇವನೆ ಮಾಡದಂತೆ ತಡೆಯುತ್ತದೆ. ಇದರಲ್ಲಿ ನೀರು ಮತ್ತು ನಾರಿನಂಶ ತುಂಬಿದ್ದು, ಶೇ 90ರಷ್ಟು ನೀರು ಇದೆ. ಇದು ಫೈಬರ್ ನೀರನ್ನು ಹೀರಿಕೊಳ್ಳುತ್ತದೆ ಮತ್ತು ವಿಸ್ತರಿಸುತ್ತದೆ ಮತ್ತು ಹೀಗೆ, ನಿಮ್ಮನ್ನು ಹೆಚ್ಚು ಕಾಲ ಹಸಿವಾಗದಂತೆ ಇರಿಸುತ್ತದೆ ಮತ್ತು ಅನಗತ್ಯವಾಗಿ ಜಂಕ್ಫುಡ್ಗಳನ್ನು ತಿನ್ನದಂತೆ ತಡೆಯುತ್ತದೆ.
ಇದನ್ನೂ ಓದಿ: ಬೆಳಗ್ಗೆ ಈ ತಿಂಡಿಗಳನ್ನು ತಿಂದ್ರೆ ತೂಕ ಬೇಗ ಕಡಿಮೆ ಮಾಡ್ಬಹುದಂತೆ
ಈ ಬ್ರೊಕೊಲಿ ಫೈಟೊಕೆಮಿಕಲ್ಸ್, ಸಲ್ಫೊರಾಫೇನ್ ಮತ್ತು ಇಂಡೋಲ್-3-ಕಾರ್ಬಿನಾಲ್ಗಳ ಉತ್ತಮ ಮೂಲವಾಗಿದೆ, ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ವಿಟಮಿನ್ ಸಿ, ಕ್ರೋಮಿಯಂ ಮತ್ತು ಕ್ಯಾಲ್ಸಿಯಂನಂತಹ ತೂಕ ಇಳಿಸಲು ಸಹಾಯ ಮಾಡುವ ಪೋಷಕಾಂಶಗಳು ಬ್ರೊಕೊಲಿಯಲ್ಲಿವೆ ಎಂದು ಸಾಬೀತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ