Breastfeeding: ಎದೆಹಾಲು ನೀಡಿದ್ರೆ ಮಗುವಿಗೆ ಕ್ಯಾನ್ಸರ್​ನಿಂದ ರಕ್ಷಣೆ ಸಿಗುತ್ತೆ, ಹಾಲೂಡಿಸುವ ಸರಿಯಾದ ವಿಧಾನ ಏನು? ವೈದ್ಯರು ತಿಳಿಸಿದ್ದಾರೆ...

ನಿಮ್ಮ ಬೆನ್ನು ನೇರವಾಗಿ ಮಾಡಿಕೊಂಡು ಕುಳಿತುಕೊಳ್ಳುವುದು ಹಾಗೂ ದಿಂಬಿನ ನೆರವಿನಿಂದ ಬೆನ್ನು ಹಾಗೂ ತೋಳಿಗೆ ಆಧಾರ ನೀಡುವುದು ಹೆಚ್ಚಾಗಿ ಸ್ತನ್ಯಪಾನ ಮಾಡಿಸುವಾಗ ತಪ್ಪು ಭಂಗಿಯಿಂದಾಗಿ ಭವಿಷ್ಯದಲ್ಲಿ ನಿಮಗೆ ಬೆನ್ನು ನೋವು ಕಾಡುವುದನ್ನು ತಡೆಗಟ್ಟುವ ಸೂತ್ರ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಿಮ್ಮ ಮಗುವಿಗೆ ಅಂಗಡಿಯಲ್ಲಿ ಸಿಗುವ ಪರ್ಯಾಯ ಹಾಲಿನ ಪುಡಿಯಿಂದ ತಯಾರಿಸಿದ ಸಿದ್ಧ ಫಾರ್ಮುಲಾ ಹಾಲನ್ನೇ ಕುಡಿಸುವುದು ಬಹಳ ಸುಲಭ ಎನಿಸಿಬಹುದು. ಆದಾಗ್ಯೂ ಶಿಶುವಿಗೆ ಸ್ತನ್ಯಪಾನ ಮಾಡಿಸುವುದು ಮುಖ್ಯ ಎಂಬುದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ ಸ್ತನ್ಯಪಾನ ಶುರು ಮಾಡಿಸುವ ಕಾರ್ಯ ಕೆಲವೇ ತಾಯಂದಿರಿಗೆ ಮಾತ್ರ ಇತರರಿಗಿಂತ ಸುಲಭ ಎನ್ನಬಹುದು. ಏಕೆಂದರೆ ಮಗುವಿನ ಬಾಯಿಗೆ ಮೊಲೆತೊಟ್ಟನ್ನು ಸರಿಯಾಗಿ ಹಿಡಿಯುವುದು, ಮೊಲೆ ಬಾವು, ಬಿರುಕು ಬಿಟ್ಟ ಮೊಲೆತೊಟ್ಟು, ಸರಿಯಾಗಿ ಎದೆ ಹಾಲು ಉತ್ಪಾದನೆಯಾಗುತ್ತಿಲ್ಲ ಎಂಬುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಹೊಟ್ಟೆ ತುಂಬದ ಮಗು ಹಸಿವಿನಿಂದ ಅಳುವುದಕ್ಕೆ ಕಾರಣವಾಗುತ್ತವೆ. ಮಗುವಿನ ಈ ನಿರಂತರ ಅಳು ಈ ಅಮೂಲ್ಯವಾದಂತಹ ಎದೆ ಹಾಲೂಡಿಸುವುದು ಅಂದರೆ ಹುಟ್ಟಿದ ಮೊದಲ ಆರು ತಿಂಗಳು ನಿಮ್ಮ ಮಗುವಿಗೆ ಎದೆ ಹಾಲಿನ ಮೂಲಕ ಉತ್ಕೃಷ್ಟ ಆಹಾರ ನೀಡುವುದಕ್ಕೆ  ಬಹಳಷ್ಟು ತಾಯಂದಿರು ಹಿಂದೇಟು ಹಾಕುವಂತೆ ಮಾಡುತ್ತದೆ. ಎದೆಹಾಳಿನ ಬಗ್ಗೆ ತಾಯಂದಿರು ತಿಳಿದಿರಲೇಬೇಕಾದ ವಿಚಾರಗಳನ್ನು ಸರಳವಾಗಿ ವಿವರಿಸಿದ್ದಾರೆ ಬೆಂಗಳೂರಿನ ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ ಗೀತಾ ಮೊನ್ನಪ್ಪ.

  1. ಎದೆ ಹಾಲು ಶಿಶುವಿಗೆ ಬೇಧಿ, ಕಿವಿ ಸೋಂಕು, ಶ್ವಾಸಕೋಶದ ಸೋಂಕು, ಮೂತ್ರಾಂಗ ವ್ಯೂಹದ ಸೋಂಕು ಮೊದಲಾದವುಗಳಿಂದ ರಕ್ಷಣೆ ನೀಡುತ್ತದೆ.

  2. ಎದೆ ಹಾಲು ಕುಡಿದು ಬೆಳೆದಂತಹ ಮಕ್ಕಳು ಇಸಬು, ಆಸ್ತಮಾ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಬಾಲ್ಯದಲ್ಲಿ ಬರುವಂತಹ ಲ್ಯುಕೇಮಿಯಾ ಹಾಗೂ ಮುಂದೆ ಲಿಂಫೋಮದಂತಹ ಕ್ಯಾನ್ಸರ್‌ನಿಂದ ಬಳಲುವ ಸಾಧ್ಯತೆ ಕಡಿಮೆ.

  3. ಸ್ತನ್ಯಪಾನ ಮಾಡಿಸಿದ ತಾಯಂದಿರು ಗರ್ಭಿಣಿಯಾಗಿದ್ದಾಗ ಹೆಚ್ಚಾದ ತೂಕವನ್ನು ಬಹಳ ವೇಗವಾಗಿ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

  4. ಎದೆ ಹಾಲೂಡಿಸುವುದರಿಂದ ತಾಯಂದಿರಿಗೆ ಅಂಡಾಶಯ ಮತ್ತು ಸ್ತನ ಕ್ಯಾನ್ಸರ್‌ ಬರುವ ಅಪಾಯ ಕಡಿಮೆ.


ಇದನ್ನೂ ಓದಿ: Weight Loss: ತೂಕ ಇಳಿಸೋಕೆ ಮೊದಲು ಮೆದುಳನ್ನು ರೆಡಿ ಮಾಡಿ, ವಿಜ್ಞಾನಿಗಳು ಹೇಳಿದ್ದಾರೆ ಹೊಸಾ ಟ್ರಿಕ್!

ಮಗು ಜನಿಸಿದ ನಂತರ ಮೊದಲ ಕೆಲವು ವಾರಗಳ ಕಾಲ ಇಂತಹ ಬಹುತೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಛಲ, ಸಹನೆ ಹಾಗೂ ಸಮಯಕ್ಕೆ ಸರಿಯಾಗಿ ಎದೆಹಾಲು ಕುರಿತ ಕನ್ಸಲ್ಟೆಂಟ್‌ ಸಹಾಯ ಯಶಸ್ಸಿನ ಮಂತ್ರ ಎನ್ನಬಹುದು.

  1. ತಾಯಿಯ ಪಕ್ಕವೇ ಮಗುವನ್ನು ಇರಿಸುವುದು


ಶಿಶು ಜನಿಸಿದ ತಕ್ಷಣ ಮಗುವನ್ನು ತಾಯಿಯ ಸಮೀಪವೇ ಇರಿಸುವುದರಿಂದ ಎದೆ ಹಾಲೂಡಿಸುವುದನ್ನು ಶುರು ಮಾಡಲು ಸಹಾಯಕ ಹಾಗೂ ದಿನ ಕಳೆದಂತೆ ಮಗುವಿನ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವುದು.

  1. ನಿಮ್ಮ ಭಂಗಿ


ನಿಮ್ಮ ಬೆನ್ನು ನೇರವಾಗಿ ಮಾಡಿಕೊಂಡು ಕುಳಿತುಕೊಳ್ಳುವುದು ಹಾಗೂ ದಿಂಬಿನ ನೆರವಿನಿಂದ ಬೆನ್ನು ಹಾಗೂ ತೋಳಿಗೆ ಆಧಾರ ನೀಡುವುದು ಹೆಚ್ಚಾಗಿ ಸ್ತನ್ಯಪಾನ ಮಾಡಿಸುವಾಗ ತಪ್ಪು ಭಂಗಿಯಿಂದಾಗಿ ಭವಿಷ್ಯದಲ್ಲಿ ನಿಮಗೆ ಬೆನ್ನು ನೋವು ಕಾಡುವುದನ್ನು ತಡೆಗಟ್ಟುವ ಸೂತ್ರ.

ಮಲಗಿಕೊಂಡು ಮಗುವಿಗೆ ಎದೆ ಹಾಲೂಡಿಸುವುದು, ವಿಶೇಷವಾಗಿ ರಾತ್ರಿ ಎದೆ ಹಾಲು ಕುಡಿಸುವಾಗ ಆರಾಮದಾಯಕ ಭಂಗಿ ಎನ್ನಬಹುದು.

  1. ಮಗುವಿನ ಭಂಗಿ


ಯಾವುದೇ ಭಂಗಿ ನಿಮಗೆ ಬಹಳ ಚೆನ್ನಾಗಿ ಹೊಂದಿಕೊಂಡರೂ ಕೂಡ ಕಡ್ಡಾಯವಾಗಿ ಮಾಡಲೇಬೇಕಾದಂತಹ ವಿಷಯಗಳನ್ನು ನೆನಪಿನಲ್ಲಿಡಿ:

ಎ. ಹೊಟ್ಟೆಯಿಂದ ಅಮ್ಮನವರೆಗೆ: ಮಗುವನ್ನು ನಿಮಗೆ ಅತ್ಯಂತ ಸಮೀಪವಾಗಿ ಹಿಡಿದುಕೊಳ್ಳಿ. ಅಂದರೆ ನಿಮ್ಮ ಶಿಶುವಿನ ತಲೆ, ಭುಜ ಹಾಗೂ ದೇಹ ನೇರವಾದ ಗೆರೆಯಲ್ಲಿರುವಂತೆ ಹಿಡಿದುಕೊಳ್ಳಿ.

ಇದನ್ನೂ ಓದಿ: Health Tips: ಮುಟ್ಟಿನ ಸಂದರ್ಭದ ಹೊಟ್ಟೆ ನೋವು ನಿವಾರಿಸೋಕೆ ಸರಳ ಉಪಾಯಗಳು ಇಲ್ಲಿವೆ

ಬಿ. ಮೂಗಿನಿಂದ ಮೊಲೆ ತೊಟ್ಟಿನವರೆಗೆ: ಮಗುವಿನ ಮೂಗು ಹಾಗೂ ಮೇಲ್ದುಟಿ ನಿಮ್ಮ ಎದೆ ತೊಟ್ಟಿಗೆ ವಿರುದ್ಧ ದಿಕ್ಕಿನಲ್ಲಿರಬೇಕು.

ಸಿ. ಸ್ತನಕ್ಕೆ ಮಗುವನ್ನು ಹಿಡಿಯಬೇಕೇ ಹೊರತು ಮಗುವಿಗೆ ಸ್ತನವನ್ನಲ್ಲ!!

  1. ಮಗುವಿನ ಬಾಯಿಯನ್ನು ಸ್ತನಕ್ಕೆ ಸೇರಿಸುವುದು/ ಲಗತ್ತಿಸುವುದು:


ಎ. ನಿಮ್ಮ ಮಗು ಬಾಯಿಯನ್ನು ಅಗಲವಾಗಿ ತೆರೆಯುವಂತೆ ನೋಡಿಕೊಳ್ಳಿ ಹಾಗೂ ತಕ್ಷಣ ಅವನ/ ಅವಳ ಬಾಯಿಯೊಳಗೆ ಸ್ತನ ಸೇರಿಸಿ.

ಬಿ. ನಿಮ್ಮ ಮಗು ಎದೆ ತೊಟ್ಟಿನ ಜೊತೆ ತೊಟ್ಟಿನ ಸುತ್ತ ಇರುವ ಹೆಚ್ಚು ದಟ್ಟ ವರ್ಣದ ತ್ವಚೆ ಭಾಗ (ಏರಿಯೋಲ)ವನ್ನು ಬಾಯಿಯೊಳಗೆ ಎಳೆದುಕೊಳ್ಳಬೇಕು.

ಸಿ. ಒಮ್ಮೆ ನಿಮ್ಮ ಮಗು ಬಾಯಿಯಿಂದ ಎದೆ ತೊಟ್ಟಿನ ಸುತ್ತ ಹಿಡಿದುಕೊಂಡ ನಂತರ ಎದೆ ಹಾಲೂಡಿಸುವಾಗ ನಿಮಗೆ ನೋವಿನ ಅನುಭವ ಆಗುತ್ತಿದ್ದರೆ ಈ ಲಗತ್ತಾಗುವಿಕೆ ಸೂಕ್ತವಾಗಿ ಆಗಿಲ್ಲ ಎಂದೇ ಅರ್ಥ. ಹೀಗಾದಾಗ ಹಾಲು ಹೀರುತ್ತಿರುವ ಮಗುವಿನ ಬಾಯಿಯನ್ನು ಎದೆ ತೊಟ್ಟಿನಿಂದ ನಿಧಾನವಾಗಿ ಬಿಡಿಸಬೇಕು. ಸ್ತನವನ್ನು ಸ್ವಲ್ಪ ಒತ್ತಿ ಮಗುವಿನ ಬಾಯಿಯ ಕೊನೆಯಿಂದ ಹೊರಗೆಳೆಯಿರಿ ಅಥವಾ ಸ್ವಚ್ಛವಾದ ಕೈ ಬೆರಳನ್ನು ಮಗುವಿನ ದವಡೆಯ ಮಧ್ಯೆ ತೂರಿಸಿ ಬಿಡಿಸಿಕೊಳ್ಳಿ. ಪುನಃ ಮಗುವಿನ ಬಾಯಿಯನ್ನು ತೊಟ್ಟಿನೊಳಗೆ ಸರಿಯಾಗಿ ಸೇರಿಸಲು ಯತ್ನಿಸಿ.

ಇದನ್ನೂ ಓದಿ: ಈ ಊರಿಗೆ ನೆಂಟರು ಬಂದ್ರೆ ಮಧ್ಯರಾತ್ರಿಗೇ ಜಾಗ ಖಾಲಿ ಮಾಡ್ತಾರೆ, ದನಗಳಿಗೂ ಇಲ್ಲಿ ಫ್ಯಾನ್ ಬೇಕೇ ಬೇಕು...ಏನಿದು ವಿಚಿತ್ರ?

ಛಲ ಬಿಡದೆ ಯತ್ನಿಸುವುದೇ ಇಲ್ಲಿ ಮುಖ್ಯ ಸೂತ್ರವಾಗಬೇಕು. ಸಹನೆಯಿಂದಿರಿ, ಹಾಲೂಡಿಸುವಾಗ ನೀವು ಹಾಗೂ ನಿಮ್ಮ ಮಗು ಇಬ್ಬರೂ ಪರಸ್ಪರ ಆರಾಮವಾಗಿರುವುದನ್ನು ಕಲಿಯುವಿರಿ.

  1. ಶಿಶುವಿಗೆ ಆರು ತಿಂಗಳು ತುಂಬುವವರೆಗೂ ನೀರು, ಹಸುವಿನ ಹಾಲು ಅಥವಾ ಸಿದ್ಧ ಫಾರ್ಮುಲಾ ಹಾಲನ್ನು ನೀಡಬೇಡಿ.


ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಬಗೆಯ ಪೌಷ್ಟಿಕಾಂಶಗಳನ್ನು ಎದೆ ಹಾಲು ಹೊಂದಿರುತ್ತದೆ. ಬೇರೆ ರೀತಿಯ ಆಹಾರವನ್ನು ನೀಡಿದರೆ ನಿಮ್ಮ ಮಗು ಎದೆ ಹಾಲು ಕುಡಿಯುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತದೆ. ಇದರಿಂದ ಮಗುವಿಗೆ ಹಾಲೂಡಿಸುವುದರಲ್ಲಿ ತೊಂದರೆಯಾಗುವುದಲ್ಲದೇ ಎದೆ ಹಾಲು ನೀಡುವ ರಕ್ಷಣೆಯಿಂದ ಮಗು ವಂಚಿತವಾಗುತ್ತದೆ.

ಸ್ತನ್ಯಪಾನವನ್ನು ಮಗುವಿಗೆ ಎರಡು ವರ್ಷ ತುಂಬುವವರೆಗೆ ಮಾಡಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಸ್ತನ್ಯಪಾನವು ನಿಮ್ಮ ಹಾಗೂ ನಿಮ್ಮ ಮಗುವಿನ ನಡುವಿನ ಬಾಂಧವ್ಯಕ್ಕೆ ನಾಂದಿ ಹಾಡುತ್ತದೆ, ಇದು ಜೀವನ ಪೂರ್ತಿ ಇರುವಂತಹದ್ದು. ಇದು ಬಹಳಷ್ಟು ಕಾಯಿಲೆಗಳ ವಿರುದ್ಧ ರೋಗ ನಿರೋಧ ಶಕ್ತಿ ಬೆಳೆಸುತ್ತದೆ ಮತ್ತು ನಿಮ್ಮ ಮಗುವನ್ನು ಬಲಿಷ್ಠವಾಗಿ ಮಾಡುತ್ತದೆ. ಹಾಗೆಯೇ ಭವಿಷ್ಯದಲ್ಲಿ ಕಾಯಿಲೆಗಳು ಹೆಚ್ಚು ಕಾಡಲಾರವು.

ಬಹುಶಃ ಇದು ನಿಮ್ಮ ಮಗುವಿನ ಬದುಕಿಗಾಗಿ ನೀವು ಕೊಡುವಂತಹ ಅತ್ಯುತ್ತಮ ರಕ್ಷಣಾ ಕವಚ, ಹೀಗಾಗಿ ಸಹನೆಯಿಂದ ಇರುವುದು ಹಾಗೂ ಸರಿಯಾಗಿ ಹಾಲೂಡಿಸುವುದು ಉಪಯುಕ್ತವಾದದ್ದು.
Published by:Soumya KN
First published: