Weight Loss Tips: ತೂಕ ಕಡಿಮೆ ಆಗ್ಬೇಕು ಅಂದ್ರೆ ಈ ಬೇಳೆಗಳನ್ನು ತಿನ್ನಿ

Lentils for Weight Loss: ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಲು ಅಗ್ಗದ, ಸುಲಭ ಮತ್ತು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾದ ಮಸೂರವು ಕಡಿಮೆ ಕ್ಯಾಲೋರಿ ಹೊಂದಿದ್ದು, ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್‌ನಿಂದ ತುಂಬಿರುತ್ತದೆ.ಈ ಬೇಳೆಗಳನ್ನು ಕಿಚಡಿ, ಪಕೋಡ, ದಾಲ್, ರಸಂ ಮಾಡಿ ಸೇವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ(Weight Loss)  ಫಿಟ್ ನೆಸ್ (Fitness) ಪ್ರಿಯರ ಹೊಸ ಮಂತ್ರವಾಗಿದೆ.. ತೂಕ ಹೆಚ್ಚಿರುವವರು ತೂಕವನ್ನು ಕಳೆದುಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ. ಜಿಮ್ (Gym), ವ್ಯಾಯಾಮದ (exercise) ಜೊತೆ ಆಹಾರ ಕ್ರಮ (Food Style)ಸಣ್ಣ ಆಗಲು ಬಯಸುವವರ ಮುಖ್ಯ ಸೂತ್ರವಾಗಬೇಕು. ಹಾಗಾದರೆ ತೂಕ ಇಳಿಕೆಯಲ್ಲಿ ಮತ್ತು ಆರೋಗ್ಯಕರ ಜೀವನ ನಡೆಸಲು ನಾಬು ಬಳಸುವ ಬೇಳೆಗಳು ಹೇಗೆ ಸಹಕಾರಿಯಾಗುತ್ತವೆ ನೋಡೋಣ.

ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಲು ಅಗ್ಗದ, ಸುಲಭ ಮತ್ತು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾದ ಮಸೂರವು ಕಡಿಮೆ ಕ್ಯಾಲೋರಿ ಹೊಂದಿದ್ದು, ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್‌ನಿಂದ ತುಂಬಿರುತ್ತದೆ.ಈ ಬೇಳೆಗಳನ್ನು ಕಿಚಡಿ, ಪಕೋಡ, ದಾಲ್, ರಸಂ ಮಾಡಿ ಸೇವಿಸಬಹುದು.

ಈ 5 ಹೈ-ಪ್ರೋಟೀನ್ ಮಸೂರಗಳು ತೂಕ ನಷ್ಟಕ್ಕೆ ಉತ್ತಮವಾಗಿವೆ.

1) ಉದ್ದಿನ ಬೇಳೆ
ಉದ್ದಿನ ಬೇಳೆ ಅಥವಾ ಕಪ್ಪು ಮಸೂರವು ಅತ್ಯಂತ ಪೌಷ್ಟಿಕಾಂಶ ಕಾಳುಗಳಲ್ಲಿ ಒಂದಾಗಿದೆ. ಕೊಬ್ಬು ಮತ್ತು ಕ್ಯಾಲೋರಿಗಳ ಪ್ರಮಾಣ ಕಡಿಮೆಯಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದು ಪ್ರೋಟೀನ್ ಮತ್ತು ವಿಟಮಿನ್ B3 ಯ ಸಮೃದ್ಧ ಮೂಲವಾಗಿರುವುದರಿಂದ, ಇದು ನಮ್ಮ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಶಕ್ತಿಯ ಮಟ್ಟವನ್ನು, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ನರಮಂಡಲವನ್ನು ಬಲಪಡಿಸುತ್ತದೆ. ಇದು ಅಧಿಕ-ಪ್ರೋಟೀನ್ ಬೇಳೆಯಾಗಿದ್ದು ಆಗಿದ್ದು, ಸುಮಾರು ಅರ್ಧ ಕಪ್ ಉದ್ದಿನ ಬೇಳೆಯು 12 ಗ್ರಾಂ ಪ್ರೊಟೀನ್ ಅನ್ನು ಹೊಂದಿರುವುದರಿಂದ ನಿಮ್ಮ ದೇಹದ ಕೊಬ್ಬನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಇದನ್ನೂ ಓದಿ: ಸರಿಯಾಗಿ ನಿದ್ರೆ ಬರ್ತಿಲ್ವ -ಇಲ್ಲಿದೆ ನೋಡಿ ಸೂಪರ್ ಟಿಪ್ಸ್

2) ಕಡ್ಲೆ ಬೇಳೆ
ಪ್ರೋಟೀನ್ ಮತ್ತು ಫೈಬರ್‌ನಿಂದ ತುಂಬಿರುವ, ಸ್ಪ್ಲಿಟ್ ಬೆಂಗಾಲ್ ಗ್ರಾಂ ನಿಮ್ಮ ದೈನಂದಿನ ಪಾಕವಿಧಾನಗಳಲ್ಲಿ ಸೇರಿಸ ಬೇಕಿರುವ ಪ್ರಮುಖ ಆಹಾರವಾಗಿದೆ. ಇದು ಆರೋಗ್ಯಕರ ಮತ್ತು ರುಚಿಕರವೂ ಆಗಿದೆ. ಒಂದು ಕಪ್ ಚನಾ ದಾಲ್ ಅಥವಾ ಕಡ್ಲೆ ಬೇಳೆ ನಿಮಗೆ ಸಾಕಷ್ಟು ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಒದಗಿಸುತ್ತದೆ. ಚನಾ ದಾಲ್ ಹೃದಯ ಮತ್ತು ಮಧುಮೇಹ ಸ್ನೇಹಿ ಲೆಂಟಿಲ್ ಆಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ ಇದರಿಂದಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯಕವಾಗಿದೆ.

3) ತೊಗರಿ ಬೇಳೆ

ತೊಗರಿ ಬೇಳೆ ಕೂಡ ಮತ್ತೊಂದು ಪ್ರಧಾನ ಆಹಾರವಾಗಿದ್ದು, ಇದು ಸಸ್ಯ ಪ್ರೋಟೀನ್‌ನ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ. ಫೈಬರ್, ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಇದು ಉತ್ತಮ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ತೊಗರಿ ಬೇಳೆ ಅಕಾಲಿಕ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವವರಿಗೆ ಮತ್ತು ಸಣ್ಣ ಆಗಲು ಬಯಸುವವರಿಗೆ ತೊಗರಿ ಬೇಳೆ ಒಂದು ಸೂಪರ್‌ಫುಡ್ ಆಗಿದೆ.

4)ಹೆಸರು ಬೇಳೆ
ಹೆಸರು ಬೇಳೆ ಅತ್ಯಂತ ಜನಪ್ರಿಯ ಸಸ್ಯಾಹಾರಿ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ. ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಹೆಸರು ಬೇಳೆಯನ್ನು ಸೇವಿಸುವುದು ಉತ್ತಮ. ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ, ಇದು ಹೆಚ್ಚಿನ ಪ್ರೋಟೀನ್ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿರುವ ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸ್ನಾಯು ಸೆಳೆತದಿಂದ ರಕ್ಷಿಸುತ್ತದೆ.

ಇದನ್ನೂ ಓದಿ: ಅಪ್ಪಿ ತಪ್ಪಿ ಈ ವಸ್ತುಗಳನ್ನು ಹಾಲಿನ ಜೊತೆ ಸೇರಿಸಬೇಡಿ

5) ಕೆಂಪು ದಾಲ್ ಅಥವಾ ಮಸೂರ್ ದಾಲ್
ಉತ್ತರ-ಭಾರತೀಯ ಮನೆಗಳಲ್ಲಿ ಪ್ರಧಾನವಾಗಿರುವ ಬೇಳೆಯಾಗಿದೆ. ಮಸೂರ್ ದಾಲ್ ಕೊಬ್ಬು ಕಡಿಮೆ  ಮಾಡಲು ಪರಿಹಾರವಾಗಿ ಕಾರ್ಯನಿರ್ವಹಿಸಲು ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ. ಮಸೂರ್ ದಾಲ್‌ನ ಒಂದು ಬಟ್ಟಲು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ ಮತ್ತು ಸಂಪೂರ್ಣ ಊಟದ ಆಹಾರದ ಅವಶ್ಯಕತೆಗಳನ್ನು ಪೂರೈಸುತ್ತದೆ.
Published by:Sandhya M
First published: