Child Care: ಬೇಬಿ ವೈಪ್ಸ್ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

Baby Wipes : ಬೇಬಿ ವೈಫ್ಸ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಶೈಲಿ ಮತ್ತು ಬ್ರಾಂಡ್’ಗಳಲ್ಲಿ ಸಿಗುತ್ತದೆ. ಆದರೆ ಇದು ಪೋಷಕರನ್ನು ಗೊಂದಲದಲ್ಲಿ ಮುಳುಗಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಮಗುವಿನ ಲಾಲನೆ ಪಾಲನೆ ವಿಚಾರದಲ್ಲಿ ಹಲವಾರು ಬದಲಾವಣೆಯಾಗಿದೆ. ಹಾಗೆಯೇ ಮಗುವಿನ ಆರೈಕೆಯಲ್ಲಿ ಬಳಸುವ ವಸ್ತುಗಳಲ್ಲಿ ಸಹ ವಿವಿಧ ಬಗೆಗಳು ಬಂದಿವೆ. ಮಗು ಹಾಸಿಗೆಯಲ್ಲಿ ಮಲ ವಿಸರ್ಜನೆ ಮಾಡಿದಾಗ, ಮೂತ್ರ ಮಾಡಿಕೊಂಡಾಗ ಅದನ್ನು ಸ್ವಚ್ಛಗೊಳಿಸಲು ತಾಯಂದಿರು ಬೇಬಿ ವೈಪ್ ಬಳಕೆ ಮಾಡುತ್ತಿದ್ದಾರೆ. ಮಗುವಿಗೆ ಹಾಕಿರುವ ಡೈಪರ್ ಗಂಟೆಗಳಿಗೊಮ್ಮೆ ಒದ್ದೆಯಾದಾಗ ತಕ್ಷಣವೇ ಬೇಬಿ ವೈಪ್ಸ್ ಉಪಯೋಗಿಸುವುದು ಸಾಮಾನ್ಯವಾಗಿದೆ.ಆದರೆ ಮಗುವಿನ ಆರೋಗ್ಯದ ಬಗ್ಗೆ ಗಮನವಿಟ್ಟುಕೊಂಡು ಬೇಬಿ ವೈಪರ್ ಆಯ್ಕೆ ಮಾಡಿಕೊಳ್ಳಬೇಕು. ಹಾಗಾದರೇ ಬೇಬಿ ವೈಪ್ಸ್ ಆರಿಸುವಾಗ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಇಲ್ಲಿದೆ ಮಾಹಿತಿ.

ಬೇಬಿ ವೈಫ್ಸ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಶೈಲಿ ಮತ್ತು ಬ್ರಾಂಡ್’ಗಳಲ್ಲಿ ಸಿಗುತ್ತದೆ. ಆದರೆ ಇದು ಪೋಷಕರನ್ನು ಗೊಂದಲದಲ್ಲಿ ಮುಳುಗಿಸುತ್ತದೆ. ನೀವು ಬೇಬಿ ವೈಪ್ಸ್ ಖರೀದಿಸಲು ಹೋದಾಗ ಹೆಚ್ಚಾಗಿ ಪರಿಮಳ ಇದೆಯಾ? ಇಲ್ಲವಾ ? ಎಂಬುದನ್ನ ಮತ್ತು ಅದರ ದಪ್ಪದ ಬಗ್ಗೆ ಗಮನಕೊಡುತ್ತೀರ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಮಗುವಿನ ಚರ್ಮದ ಬಗ್ಗೆ. ಮಗುವಿನ ಚರ್ಮ ಹೆಚ್ಚು ಸೂಕ್ಷ್ಮವಾಗಿರುತ್ತದೆ. ನೀವು ಪರಿಮಳವಿಲ್ಲದ ವೈಪ್ಸ್ ಆಯ್ಕೆ ಮಾಡುವುದು ಉತ್ತಮ. ಏಕೆಂದರೆ ಪರಿಮಳ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತದೆ. ವೈಪ್ಸ್ ಆಯ್ಕೆ ಮಾಡುವಾಗ ಅದರಲ್ಲಿ ಯಾವ ಪದಾರ್ಥಗಳನ್ನು ಬಳಸಲಾಗಿದೆ ಎಂಬುದನ್ನ ನೋಡಿ. ಅದರಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಸಿರುವ ವೈಪ್ಸ್ ಖರೀದಿಸಿ.

ಹಾಗೆಯೇ ಎಷ್ಟು ಬಾರಿ ಡೈಪರ್ ಬಳಸಬೇಕು ಎಂಬುದು ಸಹ ಮುಖ್ಯವಾಗುತ್ತದೆ. ಹೆಚ್ಚು ಬಾರಿ ಬಳಕೆ ಮಾಡುವುದು ಮಗುವಿನ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಪ್ರತಿ ಬಾರಿ ಡೈಪರ್ ಬದಲಾವಣೆ ಮಾಡಿದಾಗ ವೈಪ್ಸ್ ಬಳಸಬಹುದು, ಆದರೆ ಹೆಚ್ಚು ರಾಸಾಯನಿಕಗಳಿಂದ ಕೂಡಿರುವುದನ್ನ ಉಪಯೋಗಿಸುವುದು ಮಗುವಿನ ಚರ್ಮಕ್ಕೆ ಹಾನಿಕಾರಕವಾಗಿರುತ್ತದೆ. ಮಗುವಿಗೆ ಪ್ರತಿದಿನ ಕನಿಷ್ಠ 8-10 ಡೈಪರ್ ಬದಲಾಯಿಸಬೇಕಾಗುತ್ತದೆ. ಪ್ರತಿ ಡೈಪರ್ ಬದಲಾವಣೆಯ ಸಮಯದಲ್ಲಿ ಕೇವಲ 1-2 ವೈಪ್ಸ್ ಬಳಸಿ. ಮೃದುವಾದ ಹತ್ತಿ ವೈಪ್ಸ್ ಮಗುವಿನ ಚರ್ಮಕ್ಕೆ ಸೂಕ್ತವಾಗಿರುತ್ತದೆ.

ಇದನ್ನೂ ಓದಿ: ಮಗು ಮಾಡಿಕೊಳ್ಳುವ ಮುಂಚೆ ನೀವು ಆರೋಗ್ಯವಾಗಿರುವುದು ಎಷ್ಟು ಮುಖ್ಯ?

ಇನ್ನು ವೈಪ್ಸ್​ಗಳನ್ನು ಖರೀದಿ ಮಾಡುವಾಗ, ಪ್ಯಾರಾಬೆನ್’ಗಳಂತಹ ಹಾನಿಕಾರಕ ಅಂಶಗಳು ಇರುವುದನ್ನ ಗಮನಿಸಬೇಕು. ಈ ಅಂಶಗಳು ಇದ್ದಲ್ಲಿ ಇಂಥಹ ವೈಪ್ಸ್​ಗಳನ್ನು ಬಳಕೆ ಮಾಡುವುದು ಒಳ್ಳೆಯದಲ್ಲ. ಇದೊಂದೆ ಅಲ್ಲದೇ, ಈಥೈಲ್ ಪರಾಬೆನ್, ಮೀಥೈಲ್ ಪರಾಬೆನ್ ಅಥವಾ ಪ್ರೊಪೈಲ್ಪರಾಬೆನ್ ಅಂಶಗಳಿದ್ದರೂ ಸಹ ಉಪಯೋಗಿಸಬೇಡಿ. ಇನ್ನು ವೈಪ್ಸ್​ಗಳಲ್ಲಿ  ಸೋಡಿಯಂ ಬೆಂಜೊಯೇಟ್, ಪಾಲಿಸೋರ್ಬೇಟ್ 20, ಸಲ್ಫೇಟ್, ಥಾಲೇಟ್ಗಳಿದ್ದರೆ ಅದು ಮಗುವಿನ ಚರ್ಮಕ್ಕೆ ಅಲರ್ಜಿಯಾಗುವಂತೆ ಮಾಡುತ್ತದೆ.

ಇನ್ನು ವೈಪ್ಸ್​ನಲ್ಲಿ ಮೊದಲೇ ಹೇಳಿದಂತೆ ನೈಸರ್ಗಿಕ ಅಂಶಗಳಿರುವುದು ಪ್ರಮುಖವಾಗುತ್ತದೆ. ವಾಟರ್ ವೈಪ್ಸ್ 99.9% ನೀರು ಮತ್ತು ಒಂದು ಹನಿ ಹಣ್ಣಿನ ಸಾರವನ್ನು ಹೊಂದಿರುವುದರಿಂದ ಅದು  ಉತ್ತಮವಾದ ಆಯ್ಕೆ. ಇನ್ನು ಪರಿಮಳಯುಕ್ತ ವೈಪ್ಸ್ ಬಳಕೆ ಮಾಡಬೇಡಿ. ಜೊತೆಗೆ ಮೃದುವಾದ ಹತ್ತಿಯ ವೈಪ್ಸ್ ಬಳಕೆ ಮಾಡಿ.

ಇನ್ನು ಹಲವು ಪೋಷಕರಲ್ಲಿ ಈ ವೈಪ್ಸ್ ಅನ್ನು ಮುಖಕ್ಕೆ ಬಳಕೆ ಮಾಡಬಹುದಾ ಎಂಬ ಅನುಮಾನ ಕಾಡುತ್ತಿದೆ. ವೈದ್ಯರ ಪ್ರಕಾರ ಬಳಕೆ ಮಾಡಬಹುದು. ಮಗುವಿನ ಎಂಜಲು ಮತ್ತು ಆಹಾರ ತಿನ್ನುವಾಗ ಅದನ್ನು ಒರೆಸಲು ಉಪಯೋಗಿಸಬಹುದು ಎಂದು ತಜ್ಞರು ಸಹ ಸಲಹೆ ನೀಡುತ್ತಾರೆ. ಇದರಲ್ಲಿ ಮುಖ್ಯವಾಗಿ ಆಲ್ಕೋಹಾಲ್ ಮತ್ತು ಇತರ ಹಾನಿಕಾರಕ ಪದಾರ್ಥಗಳನ್ನು ಹೊಂದಿರದ ವೈಪ್ಸ್’ನಿಂದ ಮುಖ ಒರೆಸಬೇಕು. ಇನ್ನು  ಮಗುವಿನ ಡೈಪರ್ ಬದಲಾಯಿಸಿದ ನಂತರ ವೈಪ್ಸ್ ಹೇಗೆ ಬಳಸುವುದು ಎಂದು ಅನೇಕ ತಾಯಂದಿರಿಗೆ ತಿಳಿದಿರುವುದಿಲ್ಲ. ಹೆಣ್ಣು ಮಗುವಾದರೆ ಡೈಪರ್ ಅನ್ನು ತೆಗೆದ ನಂತರ ಸ್ವಚ್ಛವಾದ ವೈಪ್ಸ್ ತೆಗೆದು ಮುಂಭಾಗದಿಂದ ಹಿಂದಕ್ಕೆ ಒರೆಸಿ. ಹಿಂದಿನಿಂದ ಮುಂದೆ ಒರೆಸಬೇಡಿ. ಯಾಕೆಂದರೆ ಬ್ಯಾಕ್ಟೀರಿಯಾವು ಮೂತ್ರನಾಳವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ
Published by:Sandhya M
First published: