Pregnancy Tips: ನಾರ್ಮಲ್ ಡೆಲಿವರಿ ಆಗ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡ್ಬೇಕಂತೆ - ಡಾಕ್ಟರ್ ಹೇಳ್ತಾರೆ ಕೇಳಿ

Normal delivery: ಹಾಗೆಯೇ ಈ ಮೇಲಿನ ಎಲ್ಲಾ ಅಂಶಗಳನ್ನು ಪಾಲಿಸುವುದರಿಂದ ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇವುಗಳನ್ನು ಪಾಲಿಸಿದರೆ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಮಗುವಿಗೆ ಜನ್ಮ (Child Birth) ನೀಡುವುದು ಮಹಿಳೆಯ (Women) ಜೀವನದ ಅತ್ಯಂತ ಸುಂದರ ಅನುಭವಗಳಲ್ಲಿ ಒಂದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆಗಳು (C section Delivery) ಹೆಚ್ಚಾಗಿದ್ದು, ನಾರ್ಮಲ್ ಹೆರಿಗೆ ಅಪರೂಪ ಎನ್ನುವಂತಾಗಿದೆ. ಆದರೆ ಸಾಮಾನ್ಯ ಹೆರಿಗೆಯನ್ನು(Normal delivery)  ಸಾಮಾನ್ಯವಾಗಿ ಅಪಾಯಕಾರಿ ಮತ್ತು ಅಸಹನೀಯ ನೋವಿನ ಅನುಭವ ಎಂದು ಹೇಳಲಾಗುತ್ತದೆ. ಸಾಮಾನ್ಯ ಹೆರಿಗೆಯ ಬಗ್ಗೆ ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಅಂಕಿ ಅಂಶಗಳ ಪ್ರಕಾರ ಇಂದು ಮೂವರಲ್ಲೊಬ್ಬರಿಗೆ ಅಂದರೆ ಶೇ ಮೂವತ್ತಕ್ಕೂ ಹೆಚ್ಚಿನ ಗರ್ಭವತಿಯರು (Pregnant) ಹೆರಿಗೆಯ ನೋವು ಮತ್ತು ಆತಂಕದಿಂದ ಪಾರಾಗಲು ಸಿ ಸೆಕ್ಷನ್ ಹೆರಿಗೆಗೆ ಒಳಗಾಗುತ್ತಿದ್ದಾರೆ. ಹೆರಿಗೆಯ ಬಳಿಕವೂ ಕೆಲವಾರು ತೊಂದರೆಗಳು ಎದುರಾಗುತ್ತವೆ. ಸಿಸರೇನಿಯನ್ ಹೆರಿಗೆಯಿಂದ ಚೇತರಿಸಿಕೊಳ್ಳಲು ಸಹಜ ಹೆರಿಗೆಗಿಂತಲೂ ಬಹಳವೇ ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬುದು ಮತ್ತೊಂದು ವಿಚಾರ. ಆದರೂ ಕೂಡ ಹೆಚ್ಚಿನ ಜನರಿಗೆ ನಾರ್ಮಲ್ ಹೆರಿಗೆಯಾಗಬೇಕು ಎಂಬ ಆಸೆ ಇರುತ್ತದೆ. ಹಾಗಾದ್ರೆ ನಾರ್ಮಲ್ ಹೆರಿಗೆಯಾಗಲು ಏನು ಮಾಡಬೇಕು ಎಂಬುದರ ಬಗಗ್ಎ ಡಾ.ವಿದ್ಯಾ.ಭಟ್​ ಮಾಹಿತಿ ನೀಡಿದ್ದಾರೆ.  

ನಾರ್ಮಲ್ ಡೆಲಿವರಿ ಎಂದರೆ ಏನು?'

ಸಾಮಾನ್ಯ ಹೆರಿಗೆ' ಎಂಬ ಪದವನ್ನು ಸಾಮಾನ್ಯವಾಗಿ 'ಯೋನಿ ಪ್ರಸವ' ದೊಂದಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಈ ಎರಡೂ ಪದಗಳು ಮಗುವನ್ನು ಜನ್ಮ ಕಾಲುವೆಯಿಂದ ಹೊರಹಾಕುವ ಪ್ರಕ್ರಿಯೆಯನ್ನು ಸೂಚಿಸುತ್ತವೆ. ನೈಸರ್ಗಿಕ ಹೆರಿಗೆ’ ಎನ್ನುವುದು ಯಾವುದೇ ರೀತಿಯ ಔಷಧಿಗಳ ಬಳಕೆಯಿಲ್ಲದೆ ನಡೆಯುವ ಸಾಮಾನ್ಯ ಹೆರಿಗೆಯಾಗಿದೆ. ಮಹಿಳೆಯರು ಸಾಮಾನ್ಯ ಹೆರಿಗೆಯನ್ನು ಏಕೆ ಆರಿಸಿಕೊಳ್ಳಬೇಕು?ಹೆರಿಗೆಯು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸಾಮಾನ್ಯ ಹೆರಿಗೆಯು ತಾಯಿ ಮತ್ತು ಮಗುವಿಗೆ ಅನೇಕ ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ತಾಯಿಯು ಶೀಘ್ರವಾಗಿ ಗುಣಮುಖವಾಗಲು ಸಹಾಯ ಮಾಡುತ್ತದೆ. ಮಗು ಜನ್ಮ ಕಾಲುವೆಯನ್ನು ಹಾದುಹೋದಾಗ, ಅದು ಹಲವಾರು ರೋಗಗಳಿಂದ ರಕ್ಷಿಸುವ ಸಹಾಯಕ ಬ್ಯಾಕ್ಟೀರಿಯಾವನ್ನು ಎತ್ತಿಕೊಳ್ಳುತ್ತದೆ.

ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚಿಸುವುದು ಹೇಗೆ?

ನೀವು ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಅದಲ್ಲೆ ಕೆಲ ನಿಯಮಗಳನ್ನು ಫಾಲೋ ಮಾಡಬೇಕು.  ಗರ್ಭಾವಸ್ಥೆಯ ಸಮಯದಲ್ಲಿ  ಸಕ್ರಿಯವಾಗಿರುವುದು ಮತ್ತು ಸುಲಭವಾಗಿ ಹೆರಿಗೆಯಾಗಲು ಸಹಾಯ ಮಾಡುತ್ತದೆ. ಹಾಗಾಗಿ ವ್ಯಾಯಾಮ, ವಾಕಿಂಗ್ ಮಾಡಬಹುದು.  ಹೆರಿಗೆಯ ಪ್ರಕ್ರಿಯೆ ಮತ್ತು ಆಸ್ಪತ್ರೆಗೆ ಯಾವಾಗ ಹೋಗಬೇಕು ಎಂಬುದರ ಕುರಿತು ತಿಳಿದಿರುವುದು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಗರ್ಭಿಣಿಯರು ತಪ್ಪದೇ ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ, ಏನಾದ್ರೂ ಸಮಸ್ಯೆ ಇದ್ರೆ ಮೊದ್ಲೇ ಗೊತ್ತಾಗುತ್ತೆ

ನಿಮಗೆ ಬೇರಾವುದೋ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದಾರೆ ಸಾಮಾನ್ಯ ಹೆರಿಗೆಯಾಗುತ್ತದೆ.  ಗರ್ಭಾವಸ್ಥೆಯಲ್ಲಿ ಮಾನಸಿಕ ಒತ್ತಡ ಸಾಮಾನ್ಯವಾಗಿದೆ. ಒತ್ತಡ, ಆತಂಕ್ಕೆ ಒಳಗಾಗದೇ ಶಾಂತತೆಯಿಂದ ಇರುವ ಅಭ್ಯಾಸ ಮಾಡಿಕೊಳ್ಳಿ. ಪುಸ್ತಕಗಳನ್ನು ಓದಿ, ಸಂಗೀತವನ್ನು ಕೇಳಿ, ಧ್ಯಾನ ಮಾಡಿ.  ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಮಟ್ಟ, ಹೀಮೋಗ್ಲೋಬಿನ್ ಮಟ್ಟ ಎಲ್ಲವೂ ನಿಯಂತ್ರಣದಲ್ಲಿದ್ದರೆ ಸಾಮಾನ್ಯ ಹೆರಿಗೆಯ ಸಾಧ್ಯತೆ ಹೆಚ್ಚಿರುತ್ತದೆ.

ನಿಮಗೆ ಏಳನೇ ತಿಂಗಳು ಪ್ರಾರಂಭವಾದ ಬಳಿಕ ಪೆರಿನಿಯಂಗೆ ಮಸಾಜ್ ಮಾಡಿ, ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಗರ್ಭಾವಸ್ಥೆಯಲ್ಲಿ ಹೆಚ್ಚಿನ ತೂಕ ಇರುವುದು ಉತ್ತಮವಲ್ಲ. ಹಾಗಾಗಿ ತೂಕ ನಿಯಂತ್ರಣ ಮಾಡಿ. ಇಬ್ಬರ ಆಹಾರವನ್ನು ತಿನ್ನಬೇಕು ಎಂಬ ಮಾತು ನಿಜಕ್ಕೂ ಅವೈಜ್ಞಾನಿಕ. ಪ್ರತಿದಿನ ವ್ಯಾಯಾಮ ಮಾಡಲು ಮರೆಯಬೇಡಿ.

ನೀವು ಜಡ ಜೀವನಶೈಲಿಯನ್ನು ಮುನ್ನಡೆಸಿದರೆ, 10-15 ನಿಮಿಷಗಳ ವಾಕಿಂಗ್​ನೊಂದಿಗೆ ಪ್ರಾರಂಭಿಸಿ ಮತ್ತು ಕ್ರಮೇಣ ಅದನ್ನು ಪ್ರತಿದಿನ 40 ನಿಮಿಷಗಳಿಗೆ ಹೆಚ್ಚಿಸಿ. ಅಗತ್ಯವಿರುವ ಶಕ್ತಿಯನ್ನು ನಿರ್ಮಿಸಲು ವ್ಯಾಯಾಮವು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Thyroid ಸಮಸ್ಯೆ ಇದ್ದವರಿಗೆ ಮಕ್ಕಳಾಗೋದು ಕಷ್ಟವಾ? ಇದಕ್ಕೆ ಏನು ಮಾಡ್ಬಹುದು ಅಂತ ವೈದ್ಯರು ವಿವರಿಸಿದ್ದಾರೆ

ಸಾಮಾನ್ಯ ಹೆರಿಗೆ ಪ್ರಕ್ರಿಯೆಯು ಆರೋಗ್ಯಕರ ಮಗುವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಬಾಣಂತಿ ಶೀಘ್ರವಾಗಿ ಚೇತರಿಸಿಕೊಳ್ಳಬಹುದು. ಹಾಗೆಯೇ ಈ ಮೇಲಿನ ಎಲ್ಲಾ ಅಂಶಗಳನ್ನು ಪಾಲಿಸುವುದರಿಂದ ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇವುಗಳನ್ನು ಪಾಲಿಸಿದರೆ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.
Published by:Sandhya M
First published: