Onam Sadhya Near Me: ಈ ಬಾರಿ ಓಣಂ ವಿಶೇಷ ಊಟಕ್ಕೆ ಬೆಂಗ್ಳೂರಿನ ಈ ರೆಸ್ಟೊರೆಂಟ್​ಗಳು ರೆಡಿಯಾಗಿವೆ, ನೀವು ಬುಕ್ ಮಾಡಿದ್ರಾ?

Best Places To have Onam Sadhya: ನೀವು ಓಣಂ ಸದ್ಯವನ್ನು ಹುಡುಕುತ್ತಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ.  ಬೆಂಗಳೂರಿನಲ್ಲಿ (Bengaluru) ಓಣಂ ಸದ್ಯವನ್ನು ಸವಿಯಲು 8 ಅತ್ಯುತ್ತಮ ಜಾಗಗಳ ಪಟ್ಟಿಯನ್ನು ನಾವು ನಿಮಗಾಗಿ ಇಲ್ಲಿ ಕೊಡುತ್ತೇವೆ.

ಓಣಂ ಸದ್ಯ

ಓಣಂ ಸದ್ಯ

  • Share this:
ಕೇರಳದ (Kerala) ಸುಗ್ಗಿಯ ಹಬ್ಬ ಓಣಂ (Onam) ಹತ್ತಿರ ಬಂದಿದೆ. ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ ಓಣಂ ಸದ್ಯ (Onam Sadhya) ಸವಿಯುವುದು ನಿಜಕ್ಕೂ ಅದೃಷ್ಟ ಮಾಡಿದಂತೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಕೆಲವರ ಮನೆಯಲ್ಲಿ ಹಬ್ಬವಿದ್ದರೂ ಸಹ ಮನೆಯಿಂದ ದೂರವಿರುವ ಕಾರಣ ಸದ್ಯ ಸವಿಯಲು ಆಗುವುದಿಲ್ಲ. ಇನ್ನೂ ಕೆಲವರ ಮನೆಯಲ್ಲಿ ಇದನ್ನು ಮಾಡುವುದಿಲ್ಲ. ಆದರೆ ಬೆಂಗಳೂರಿನಲ್ಲಿದ್ದು, ನೀವು ಓಣಂ ಸದ್ಯವನ್ನು ಹುಡುಕುತ್ತಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ.  ಬೆಂಗಳೂರಿನಲ್ಲಿ (Bengaluru) ಓಣಂ ಸದ್ಯವನ್ನು ಸವಿಯಲು 8 ಅತ್ಯುತ್ತಮ ಜಾಗಗಳ ಪಟ್ಟಿಯನ್ನು ನಾವು ನಿಮಗಾಗಿ ಇಲ್ಲಿ ಕೊಡುತ್ತೇವೆ.

ಎಂಟೆ ಕೇರಳಂ, ಹಲಸೂರು

ಎಂಟೆ ಕೇರಳಂನಲ್ಲಿ ನೀವು ಅಕ್ಷರಶಃ ಅದ್ಬುತ ಓಣಂ ಸದ್ಯವನ್ನು ಸವಿಯಬಹುದು. 25ಕ್ಕೂ ಹೆಚ್ಚು ಆಹಾರ ಪದಾರ್ಥಗಳ ಅದ್ದೂರಿ ಓಣಂ ಸದ್ಯವನ್ನು ಇಲ್ಲಿ ನೀವು ಪಡೆಯುತ್ತೀರಿ. ಇದು ಸಾಂಪ್ರದಾಯಿಕ ಆಹಾರಗಳಾದ ತೋರನ್, ರುಚಿಕರವಾದ ಅವಿಯಲ್, ಕಾಲನ್ ಮತ್ತು ಇನ್ನೂ ಅನೇಕ ವಿವಿಧ ಪದಾರ್ಥಗಳನ್ನು ಇದು ಒಳಗೊಂಡಿದೆ. ನಿಮ್ಮ ಸ್ನೇಹಿತರ ಜೊತೆ ನೀವು ಓಣಂ ಸದ್ಯ ತಿನ್ನಲು ಪ್ಲ್ಯಾನ್​ ಮಾಡಿ.

ವಿಳಾಸ: 12/1, ಹಲಸೂರು ರಸ್ತೆ, ಶಿವನಚೆಟ್ಟಿ ಗಾರ್ಡನ್ಸ್, ಹಲಸೂರು, ಬೆಂಗಳೂರು

ಮೊಬೈಲ್ ನಂಬರ್: 080411 33707

ಸಮಯ: ಬೆಳಗ್ಗೆ 10 ರಿಂದ ರಾತ್ರಿ 10.30

ಸಮೋವರ್, ಕಮ್ಮನಹಳ್ಳಿ

ಕೇರಳದ ರೆಸ್ಟೊರೆಂಟ್ ಸಮೋವರ್ ಬೆಳಗ್ಗೆ 11:30 ರಿಂದ ಸಂಜೆ 4:30 ರವರೆಗೆ ಓಣಂ ಸದ್ಯ ಊಟವನ್ನು ನೀಡುತ್ತದೆ. 27 ಕ್ಕೂ ಹೆಚ್ಚು ಖಾದ್ಯಗಳ ರುಚಿಕರವಾದ ತಿನಿಸುಗಳನ್ನು ಬಡಿಸುತ್ತಿರುವ ಇದು ಬೆಂಗಳೂರಿನಲ್ಲಿ ಉತ್ತಮವಾದ ಓಣಂ ಸದ್ಯ ಸಿಗುವ ಸ್ಥಳಗಳಲ್ಲಿ ಒಂದಾಗಿದೆ. ಈಗಲೇ ಬುಕ್ ಮಾಡುವುದು ಉತ್ತಮ.



ವಿಳಾಸ: 29, 3 ನೇ ಎಂ ಮೇನ್, 1 ನೇ ಕ್ರಾಸ್, ರಾಮಯ್ಯ ಲೇಔಟ್, ಕಮ್ಮನಹಳ್ಳಿ, ಬೆಂಗಳೂರು

ಮೊಬೈಲ್ ನಂಬರ್: 8921438276

ಸಮಯ: ಬೆಳಗ್ಗೆ 11:30 ರಿಂದ ಸಂಜೆ 4:30 ರವರೆಗೆ

ಪುಲಿಮುಂಚಿ, ವಿವಿಧ ಶಾಖೆಗಳಿದೆ

ಬೆಂಗಳೂರಿನಲ್ಲಿರುವ ಅದ್ಭುತ ಕರಾವಳಿ ರೆಸ್ಟೋರೆಂಟ್‌ಗಳ ವಿಷಯಕ್ಕೆ ಬಂದಾಗ, ಪುಲಿಮುಂಚಿ ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು. ಇಲ್ಲಿನ ಓಣಂ ಸದ್ಯವು ಖಂಡಿತವಾಗಿ ನಿಮಗೆ ಇಷ್ಟವಾಗುತ್ತದೆ. ಮಧ್ಯಾಹ್ನ 12 ರಿಂದ 25 ಕ್ಕೂ ಹೆಚ್ಚು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ನೀಡುತ್ತದೆ.



ವಿಳಾಸ: 188/1, 1 ನೇ ಮಹಡಿ, ಪ್ಯಾಲೆಸ್​ ಆರ್ಕೆಡ್​, ಸದಾಶಿವ ನಗರ, ಬೆಂಗಳೂರು

ಮೊಬೈಲ್ ನಂಬರ್: 080- 23616678, 9980189488 (ಸದಾಶಿವನಗರ) 080-41233940, 9980189488

ಸಮಯ: ಮಧ್ಯಾಹ್ನ 12 ರಿಂದ ಸಂಜೆ 4ರ ವರೆಗೆ

ಕರಾವಳಿ, ರೆಸಿಡೆನ್ಸಿ ರಸ್ತೆ

ಓಣಂ ಸದ್ಯವನ್ನು ಸವಿಯಲು ರೆಸಿಡೆನ್ಸಿ ರಸ್ತೆಯಲ್ಲಿರುವ ಕರಾವಳಿ ಬೆಸ್ಟ್​ ಸ್ಥಳಗಳಲ್ಲಿ ಒಂದು. ಈ ರೆಸ್ಟೊರೆಂಟ್​ ಪ್ರತಿ ವರ್ಷ ಸಾಂಪ್ರದಾಯಿಕ ಓಣಂ ಸದ್ಯವನ್ನು ಆಯೋಜಿಸುತ್ತದೆ. ಮುಂಚಿತವಾಗಿಯೇ ಬುಕ್​ ಮಾಡುವುದು ಬಹಳ ಉತ್ತಮ. ಇದು ಬೆಂಗಳೂರಿನಲ್ಲಿ ನಿಮಗೆ ಉತ್ತಮವಾದ ಓಣಂ ಸದ್ಯವನ್ನು ನೀಡುತ್ತದೆ.

ವಿಳಾಸ: ಕರಾವಳಿ, ತಾಜ್ ಗೇಟ್‌ವೇ, ರೆಸಿಡೆನ್ಸಿ ರಸ್ತೆ

ಮೊಬೈಲ್​ ನಂಬರ್: +91 9538638137, +91 9898780004

ಸಮಯ: ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ

ಡೆನ್ ಹೋಟೆಲ್,  ವೈಟ್‌ಫೀಲ್ಡ್​

ವೈಟ್‌ಫೀಲ್ಡ್‌ನಲ್ಲಿರುವ ಡೆನ್ ಹೋಟೆಲ್‌ನಲ್ಲಿ ಓಣಂ ಸದ್ಯದ ಅದ್ದೂರಿ ಊಟವನ್ನು ಮಿಸ್​ ಮಾಡಿಕೊಳ್ಳಬೇಡಿ. ಕರಾವಳಿಯ ನೆಚ್ಚಿನ ಖಾದ್ಯಗಳಾದ ತಕ್ಕಾಳಿ ಚಾರು, ಅವಿಯಲ್, ವಡೈ ಮತ್ತು ಪುಲಿಸ್ಸೇರಿಯನ್ನು ಇಲ್ಲಿ ಸವಿಯಬಹುದು.

ಇದನ್ನೂ ಓದಿ: ಬೆಂಗಳೂರಿನ ಈ ರೆಸ್ಟೊರೆಂಟ್​ಗಳಲ್ಲಿ ಡಿಫರೆಂಟ್​ ಟೈಪ್​ ಥಾಲಿ ಸಿಗುತ್ತಂತೆ

ವಿಳಾಸ: ITPL ಮುಖ್ಯ ರಸ್ತೆ, KIADB ಎಕ್ಸ್​ಪೋರ್ಟ್​ ಪ್ರಮೋಷನ್ ಕೈಗಾರಿಕಾ ಪ್ರದೇಶ, ವೈಟ್‌ಫೀಲ್ಡ್, ಬೆಂಗಳೂರು

ಮೊಬೈಲ್​ ನಂಬರ್: +91 80 7117272

ಸಮಯ: ಬೆಳಗ್ಗೆ 10 ರಿಂದ ರಾತ್ರಿ 11ರ ವರೆಗೆ



ರೂರಲ್ ಬ್ಲೂಸ್, ಸರ್ಜಾಪುರ ರಸ್ತೆ

ನೀವು ಮನೆಯಿಂದ ದೂರವಿದ್ದರೆ, ಅಧಿಕೃತ ಓಣಂ ಸದ್ಯ ಊಟವನ್ನು ಇಲ್ಲಿ ಎಂಜಾಯ್ ಮಾಡಬಹುದು.  ಮಧ್ಯಾಹ್ನ 12 ಗಂಟೆಯಿಂದ ಇಲ್ಲಿ ಅದ್ಭುತ ಊಟ ಸಿಗುತ್ತದೆ. ಅಲ್ಲದೇ, ಆ ದಿನ ವಿಶೇಷವಾಗಿ, ಸಂಗೀತ ಕಾರ್ಯಕ್ರಮ ಇರುತ್ತದೆ.

ವಿಳಾಸ: 112, ಕೊಡತಿ ಗೇಟ್,  ವಿಪ್ರೋ SEZ, ಸರ್ಜಾಪುರ್ ರೋಡ್ ಹತ್ತಿರ, ಬೆಂಗಳೂರು

ಮೊಬೈಲ್ ನಂಬರ್: 080 47 111 100

ಸಮಯ: ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ

ಕರ್ನಾಟಿಕ್, ಚರ್ಚ್ ಸ್ಟ್ರೀಟ್​

ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ನೀವು ಇಲ್ಲಿ ಓಣಂ ಸದ್ಯವನ್ನು ಸವಿಯಲೇಬೇಕು. ನಿಮ್ಮ ಸ್ನೇಹಿತರ ಜೊತೆ ಒಂದು ಸುಂದರ ದಿನ ಇಲ್ಲಿ ಕಳೆಯಬಹುದು. ಬಾಳೆಹಣ್ಣಿನ ಚಿಪ್ಸ್, ಇಂಜಿ ಪುಲಿ, ಇದ್ದಿಯಪ್ಪಂ, ಅವಿಯಲ್, ರಸಂ, ಅನ್ನ ಮತ್ತು ಇನ್ನೂ ಅನೇಕ ರುಚಿಕರವಾದ ಪದಾರ್ಥಗಳನ್ನು ಸವಿಯಬಹುದು.

ವಿಳಾಸ: 30, ಆಫ್ ಎಂಜಿ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು, ಚರ್ಚ್ ಸ್ಟ್ರೀಟ್, ಬೆಂಗಳೂರು

ಮೊಬೈಲ್​ ನಂಬರ್: +91 8296702777, +91 8296703777

ಇದನ್ನೂ ಓದಿ: ಸೂಪರ್ ಪಲಾವ್​ ಸವಿಯೋಕೆ ಬೆಂಗಳೂರಿನ ಟಾಪ್ 5 ಸ್ಥಳಗಳೇ ಬೆಸ್ಟ್

ಮರಿಯಾ ಟೇಸ್ಟ್ ಸರ್ಕಲ್, ಮಾರತಹಳ್ಳಿ

ಮಾರತಹಳ್ಳಿಯಲ್ಲಿರುವ ಮಾರಿಯಾ ಟೇಸ್ಟ್ ಸರ್ಕಲ್‌ಗೆ ಭೇಟಿ ನೀಡಲೇಬೇಕು. ಸುಮಾರು 31 ರುಚಿಕರವಾದ ಕೇರಳದ ಆಹಾರ ಪದಾರ್ಥಗಳನ್ನು ಇಲ್ಲಿ ಸವಿಯಬೇಕು. ಬೆಂಗಳೂರಿನಲ್ಲಿ ಓಣಂ ಸದ್ಯಕ್ಕೆ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಇಲ್ಲಿ ಓಣಂ ಸದ್ಯ ಸಿಗುತ್ತದೆ.

ವಿಳಾಸ: 1 ನೇ ಮುಖ್ಯ, ಶ್ರೀ ರಾಮಾಂಜನೇಯ ಲೇಔಟ್, ಮಾರತಹಳ್ಳಿ, ಬೆಂಗಳೂರು

ಮೊಬೈಲ್​ ನಂಬರ್: +91 9035520077, +91 9035520088

ಸಮಯ: ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ
Published by:Sandhya M
First published: