Reiki ಚಿಕಿತ್ಸೆ ನಿಮ್ಮ ಆರೋಗ್ಯದ ಈ ಸಮಸ್ಯೆಗಳಿಗೆ ಪರಿಹಾರವಂತೆ

Reiki Benefits: ನೋವುಗಳನ್ನು ಗುಣಪಡಿಸುವ ಪರ್ಯಾಯ ವಿಧಾನಗಳಲ್ಲಿ  ರೇಖಿಯ ಉಪಯುಕ್ತತೆಯು ಇನ್ನೂ ಕೆಲವು ಸಂದೇಹಗಳಿವೆ. ಆದರೂ, ವಿವಿಧ ಜನರು ಈ ಗುಣಪಡಿಸುವ ಚಿಕಿತ್ಸೆಯು ತುಂಬಾನೇ ಉಪಯುಕ್ತ ಎಂದು ಭರವಸೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೇಹದ ಒಳಗಿನ ಶಕ್ತಿ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಶಕ್ತಿಯು ನಮ್ಮ ಯೋಗ ಕ್ಷೇಮದ ಮೇಲೆ ತುಂಬಾನೇ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ನಾವು ಸಾಮಾನ್ಯವಾಗಿ ಹೇಳುವುದನ್ನು ಕೇಳಿರಬಹುದು. ಆದರೆ ಜಪಾನಿನಲ್ಲಿ ಒಂದು ಪುರಾತನವಾದ ವಿಧಾನವು ನಿಮ್ಮ ದೇಹದ ಯೋಗ ಕ್ಷೇಮವನ್ನು ಕಾಪಾಡುವಲ್ಲಿ ತುಂಬಾನೇ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ..? ಹೌದು.. ಅಂಗೈ ಗುಣಪಡಿಸುವಿಕೆ ಎಂದೂ ಕರೆಯಲ್ಪಡುವ ರೇಖಿ, ಸಾಮಾನ್ಯವಾಗಿ ಅಭ್ಯಾಸ ಮಾಡಲಾದ ವಿಭಿನ್ನ ಗುಣಪಡಿಸುವ ತಂತ್ರವಾಗಿದ್ದು, ಮಾನವ ದೇಹಕ್ಕೆ ಚಿಕಿತ್ಸೆ ನೀಡಲು ಮತ್ತು ಅನೇಕ ಚಿಕ್ಕ ಪುಟ್ಟ ರೋಗಗಳನ್ನು ಗುಣಪಡಿಸಲು ಹೊರ ಪರಿಸರದ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ಒಟ್ಟಿನಲ್ಲಿ ಜಪಾನಿನ ಭಾಷೆಯಲ್ಲಿ ರೇ ಎಂದರೆ ಬ್ರಹ್ಮಾಂಡ ಮತ್ತು ಖಿ ಎಂದರೆ ಶಕ್ತಿ ಎಂದರ್ಥವಾಗುತ್ತದೆ. ಇದು ಒಂದು ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರೇಖೆಯು ಹೆಚ್ಚುವರಿ ಚಿಕಿತ್ಸಾ ವಿಧಾನವಾಗಿದ್ದು, ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಬದಲಿಯಾಗಿ ಇದನ್ನು ಬಳಸಬಾರದು.

ರೇಖಿಯ ಪ್ರಯೋಜನಗಳು

ಈ ಗುಣಪಡಿಸುವ ವಿಧಾನದ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಪಬ್ ಮೆಡ್ ಸೆಂಟ್ರಲ್‌ನಲ್ಲಿ ಪ್ರಕಟವಾದ ಅಧ್ಯಯನದಂತಹ ಕೆಲವು ಅಧ್ಯಯನಗಳು ಈ ವಯಸ್ಕರಲ್ಲಿ ಈ ನೋವು ಮತ್ತು ಆತಂಕದ ಮೇಲೆ ರೇಖಿ ಚಿಕಿತ್ಸೆಯು ಯಾವ ರೀತಿಯ ಪರಿಣಾಮ ಬೀರಬಹುದು ಮತ್ತು ಮನಸ್ಸಿನಲ್ಲಿರುವ ಆತಂಕ ನಿರ್ವಹಣೆಗೆ ಸಹಾಯ ಮಾಡುವಲ್ಲಿ ರೇಖಿ ಚಿಕಿತ್ಸೆಯ ಪ್ರಯೋಜನಗಳನ್ನು ಎತ್ತಿ ತೋರಿಸುತ್ತವೆ.

ರೇಖಿಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ

1. ನೋವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು: ರೋಗಿಗಳಲ್ಲಿ ಅಥವಾ ವಯಸ್ಸಾದವರಲ್ಲಿ ಅನೇಕ ರೀತಿಯ ನೋವನ್ನು ನಿರ್ವಹಿಸಲು ರೇಖಿಯನ್ನು ಹೆಚ್ಚಾಗಿ ಹೆಚ್ಚುವರಿ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಈ ಪ್ರಯೋಜನವನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಬೆನ್ನು ನೋವು, ಕೀಲು ನೋವುಗಳು, ತಲೆನೋವು ಇತ್ಯಾದಿಗಳನ್ನು ಕಡಿಮೆ ಮಾಡುವಲ್ಲಿ ರೇಖಿಯ ಪ್ರಯೋಜನಗಳ ಮೇಲೆ ಕೆಲವು ಪುರಾವೆಗಳು ಬೆಳಕು ಚೆಲ್ಲುತ್ತವೆ ಎಂದು ಹೇಳಬಹುದು.

2. ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ: ರೇಖಿಯು ನಿಮ್ಮ ಆಂತರಿಕ ಒತ್ತಡವನ್ನು ನಿವಾರಿಸುವಲ್ಲಿ ತುಂಬಾನೇ ಸಹಾಯಕವಾಗುತ್ತದೆ. ಈ ತಂತ್ರದಿಂದ ನಮಗೆ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಸಹ ಹೇಳಲಾಗುತ್ತದೆ.

ಇದನ್ನೂ ಓದಿ: Diabetes ನಿಂದ ಸುಸ್ತು ಜಾಸ್ತಿ ಆಗ್ತಿದ್ರೆ ಇವುಗಳನ್ನು ತಿನ್ನಿ ಸಾಕು, ಎಲ್ಲಾ ಮಾಯವಾಗುತ್ತೆ

3. ಮನಸ್ಥಿತಿಯನ್ನು ಸುಧಾರಿಸಬಹುದು: ಆರೋಗ್ಯಕರ ಮನಸ್ಸು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಬಹುದು. ರೇಖಿಯು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆ ಮೂಲಕ ಮನಸ್ಸನ್ನು ನಿರಾಳಗೊಳಿಸಲು ಮತ್ತು ಕಿರಿಕಿರಿ, ಹತಾಶೆಯಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತದೆ.

4. ಯೋಗ ಕ್ಷೇಮವನ್ನು ಕಾಪಾಡುತ್ತದೆ: ಆರೋಗ್ಯಕ್ಕೆ ದೊಡ್ಡ ಅಡ್ಡಿ ಉಂಟು ಮಾಡುವ ರೋಗಗಳಿಗೆ ಸಂಬಂಧಿಸಿದ ತಲೆ ನೋವು, ವಾಕರಿಕೆ, ನಿದ್ರಾಹೀನತೆ ಮುಂತಾದ ರೋಗಲಕ್ಷಣಗಳನ್ನು ಸುಲಭಗೊಳಿಸಲು ಈ ರೇಖಿ ಸಹಾಯ ಮಾಡುತ್ತದೆ. ಮೇಲೆ ಉಲ್ಲೇಖಿಸಿದ ರೋಗಲಕ್ಷಣಗಳ ಚಿಕಿತ್ಸೆಯನ್ನು ಬೆಂಬಲಿಸುವ ಮೂಲಕ, ರೇಖಿ ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

5. ವಿಶ್ರಾಂತಿಯನ್ನು ಒದಗಿಸಬಹುದು: ತುಂಬಾ ಕೆಲಸ ಮಾಡಿ ನೀವು ಸುಸ್ತಾದರೆ, ನಿಮ್ಮ ದೇಹವನ್ನು ವಿಶ್ರಾಂತಿಗೊಳಿಸಲು ಬಯಸಿದರೆ, ರೇಖಿ ಚಿಕಿತ್ಸೆಯನ್ನು ಪಡೆಯುವುದರ ಮೂಲಕ ವಿಶ್ರಾಂತಿ ಪಡೆಯಬಹುದು. ರೇಖಿ ದೇಹದಿಂದ ಆಯಾಸವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಮತ್ತೆ ಶಕ್ತಿಯುತಗೊಳಿಸುತ್ತದೆ.

ರೇಖಿ ಎಷ್ಟು ಉಪಯುಕ್ತ?

ಇದನ್ನೂ ಓದಿ: ಗರ್ಭಧರಿಸುವ ಆಲೋಚನೆಯಲ್ಲಿದ್ರೆ ಈ ಅಂಶಗಳನ್ನು ಮರೆಯಬೇಡಿ

ನೋವುಗಳನ್ನು ಗುಣಪಡಿಸುವ ಪರ್ಯಾಯ ವಿಧಾನಗಳಲ್ಲಿ  ರೇಖಿಯ ಉಪಯುಕ್ತತೆಯು ಇನ್ನೂ ಕೆಲವು ಸಂದೇಹಗಳಿವೆ. ಆದರೂ, ವಿವಿಧ ಜನರು ಈ ಗುಣಪಡಿಸುವ ಚಿಕಿತ್ಸೆಯು ತುಂಬಾನೇ ಉಪಯುಕ್ತ ಎಂದು ಭರವಸೆ ನೀಡಿದ್ದಾರೆ. ನೀವು ಇದನ್ನು ಪ್ರಯತ್ನಿಸದ ಹೊರತು ಅದು ಹೇಗಿದೆ ಎಂದು ನಿಮಗೆ ತಿಳಿಯುವುದಿಲ್ಲ. ಪರ್ಯಾಯ ಗುಣಪಡಿಸುವ ವಿಧಾನಗಳು ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದು ನಿಜವಾದರೂ, ಆರೋಗ್ಯ ಆರೈಕೆ ವೃತ್ತಿಪರರನ್ನು ಸಂಪರ್ಕಿಸಿದರೇ ಖಂಡಿತವಾಗಿಯೂ ರೇಖಿಯನ್ನು ಆಯ್ಕೆ ಮಾಡಬಹುದು ಎಂದು ಹೇಳುತ್ತಾರೆ.
Published by:Sandhya M
First published: