Pregnancy Health: ಗರ್ಭಿಣಿಯರು ಎಷ್ಟು ತಿಂಗಳವರೆಗೆ ಲೈಂಗಿಕವಾಗಿ ಸಕ್ರಿಯರಾಗಿರಬಹುದು? ಅದರಿಂದ ಮಗುವಿಗೆ ಅಪಾಯವಿದ್ಯಾ? ತಜ್ಞರು ವಿವರಿಸಿದ್ದಾರೆ

Pregnancy Tips: ಮತ್ತೊಂದು ಮುಖ್ಯ ವಿಚಾರ ಎಂದರೆ ಕೆಲವರಿಗೆ ಗರ್ಭಾವಸ್ಥೆಯ 9 ತಿಂಗಳು ಸಹ ಲೈಂಗಿಕ ಕ್ರಿಯೆ ನಡೆಸಲು ಸಮಸ್ಯೆ ಇರುವುದಿಲ್ಲ, ಆದರೆ ಕೆಲವರಿಗೆ ಮೊದಲ ಮೂರು ತಿಂಗಳು ಉತ್ತಮವಾದರೆ ಇನ್ನೂ ಕೆಲವರಿಗೆ ಎರೆಡನೆಯ ಮೂರು ತಿಂಗಳು ಉತ್ತಮವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ದಂಪತಿಗಳಿಗೆ ಪೋಷಕರಾಗುವುದು (Parents) ನಿಜಕ್ಕೂ ಸಂತೋಷದ ವಿಚಾರ. ಆದರೆ ಮೊದಲ ಬಾರಿ ಪೋಷಕರಾಗುತ್ತಿರುವ ಸಮಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಎಂದರೆ ಗರ್ಭಾವಸ್ಥೆಯಲ್ಲಿ (Pregnancy) ಲೈಂಗಿಕ ಕ್ರಿಯೆ ಮಾಡಬಹುದಾ? ಎಂಬುದು. ಈ ಬಗ್ಗೆ ಹಲವಾರು ದಂಪತಿಗಳು ಡಾಕ್ಟರ್ ಬಳಿ ಪ್ರಶ್ನೆ ಕೇಳಲು ಮುಜುಗರ ಮಾಡಿಕೊಳ್ಳುತ್ತಾರೆ.  ಆದರೆ ಈ ಬಗ್ಗೆ  ಸ್ತ್ರೀರೋಗತಜ್ಞರಾದ ಡಾ ವಿದ್ಯಾ ಭಟ್​ ನ್ಯೂಸ್​ 18 ಕನ್ನಡ (News18kannada) ಜೊತೆ ಮಾಹಿತಿ ಹಂಚಿಕೊಂಡಿದ್ದು, ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲಿದೆ.  

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ತಪ್ಪಲ್ಲ

ವೈದ್ಯರ ಪ್ರಕಾರ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಮಾಡುವುದು ತಪ್ಪಲ್ಲ. ಇದನ್ನು ನೀವು 9 ತಿಂಗಳು ಸಹ ಮಾಡಬಹುದು ಎನ್ನಲಾಗುತ್ತದೆ. ಆದರೆ ಈ ಬಗ್ಗೆ ನಿಮ್ಮ ವೈದ್ಯರ ಬಳಿ ಚರ್ಚಿಸುವುದು ಸಹ ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ಕೆಲ ಆರೋಗ್ಯದ ಕಾರಣದಿಂದ ವೈದ್ಯರು ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸದಂತೆ ಹೇಳುತ್ತಾರೆ. ಹಾಗಾಗಿ ಮಗು ಆರೋಗ್ಯದ ದೃಷ್ಟಿಯಿಂದ ವೈದ್ಯರ ಸಲಹೆಯನ್ನು ಒಮ್ಮೆ ಪಡೆಯಿರಿ. ಇನ್ನು ಕೆಲವರಲ್ಲಿ ಭಯ ಕಾಡುತ್ತದೆ. ಲೈಂಗಿಕ ಕ್ರಿಯೆ ಮಾಡುವುದರಿಂದ ಮಗುವಿನ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ, ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೆದರುತ್ತಾರೆ.  ಆದರೆ ಈ ಭಯ ಬಿಡುವುದು ಉತ್ತಮ. ನೀವು ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆ ನಡೆಸುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆ ಸ್ವಲ್ಪ ಎಚ್ಚರದಿಂದ ಇರಬೇಕು ಅಷ್ಟೇ.  ಈ ಸಮಯದಲ್ಲಿ ಸ್ವಲ್ಪ ಆಲೋಚನೆ ಮಾಡಿ  ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಲೈಂಗಿಕ ಕ್ರಿಯೆ ಮಾಡುವುದು ಉತ್ತಮ.

ವಿವಿಧ ಭಂಗಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸುವುದು ಸಾಮಾನ್ಯ, ಆದರೆ ಗರ್ಭಾವಸ್ಥೆಯಲ್ಲಿ ಮಹಿಳೆಯ ಆರೋಗ್ಯ ಸೂಕ್ಷ್ಮವಾಗಿರುವುದರಿಂದ ವಿವಿಧ  ಭಂಗಿಗಳನ್ನು ಪ್ರಯತ್ನಿಸಲು ಹೋಗಬೇಡಿ. ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.  ಕೇವಲ ಗರ್ಭಿಣಿಯ ಆರೋಗ್ಯಕ್ಕೆ ಮಾತ್ರವಲ್ಲದೇ,  ಮಗುವಿನ ಬೆಳವಣಿಗೆಗೆ ಸಹ ಅಪಾಯಕಾರಿ.

ಬೆಳಗಿನ ಸಮಯದಲ್ಲಿ ಲೈಂಗಿಕ ಕ್ರಿಯೆ ಅಪಾಯ

ನೀವು ಸಾಮಾನ್ಯವಾಗಿ ಗಮನಿಸಿ ನೋಡಿ, ಗರ್ಭಿಣಿ ಮಹಿಳೆಯರಿಗೆ ಬೆಳಗಿನ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ವಾಂತಿ, ತಲೆ ಸುತ್ತುವುದು, ಸುಸ್ತು ಹೀಗೆ ಹಲವಾರು ಸಮಸ್ಯೆ ಇರುತ್ತದೆ. ಹಾಗಾಗಿ ಬೆಳಗಿನ ಸಮಯದಲ್ಲಿ ಲೈಂಗಿಕ ಕ್ರಿಯೆ ಮಾಡುವುದು ಉತ್ತಮವಲ್ಲ.  ನೀವು ಬೆಳಗ್ಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಉಂಟಾಗಿ, ಹೆಚ್ಚು ಅಪಾಯಕ್ಕೆ ಕಾರಣವಾಗಬಹುದು. ಹಾಗಾಗಿ ನೀವು ರಾತ್ರಿಯ ವೇಳೆಯಲ್ಲಿ ಸಂಭೋಗ ಮಾಡುವುದು ಉತ್ತಮ.

ಇದನ್ನೂ ಓದಿ: ಕಣ್ಣಿನ ಆಯಾಸ ನಿವಾರಿಸಲು ಮೂರು ಸರಳ ವ್ಯಾಯಾಮಗಳು: ಹೀಗೆ ಮಾಡಿದ್ರೆ ದೃಷ್ಟಿ ಸಮಸ್ಯೆ ಬರಲ್ವಂತೆ!

ಯೋನಿ ಡಿಸ್ಚಾರ್ಜ್ ಸಮಸ್ಯೆ ಇದ್ರೆ ಎಚ್ಚರ

ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಯೋನಿಯ ಡಿಸ್ಚಾರ್ಜ್ ಸಾಮನ್ಯ. ಇದು ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಆದರೆ ಆಕಸ್ಮಕವಾಗಿ ಯೋನಿಯ ಭಾಗದಲ್ಲಿ  ವಿಪರೀತ ಒಣಗುವಿಕೆ ಮತ್ತು ಕಿರಿ ಕಿರಿ ಉಂಟಾದರೆ ಇದರ ಬಗ್ಗೆ ಸ್ವಲ್ಪ ಎಚ್ಚರದಿಂದ ಇರುವುದು ಉತ್ತಮ.  ಈ ಒಣಗುವಿಕೆ ಸಮಸ್ಯೆ ನಿಮಗೆ ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ಲೈಂಗಿಕ ಕ್ರಿಯೆ ಮಾಡದಿರುವುದು ಉತ್ತಮ. ಇದು ಉತ್ತಮ ಅಪಾಯಕಾರಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಮಾಡುವಾಗ ಈ ವಿಚಾರಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: ರಂಜಾನ್ ತಿಂಗಳಲ್ಲಿ ಮಧ್ಯಂತರ ಉಪವಾಸ ಡಯಟ್ ನಿಂದ ಸಿಗುವ ಆರೋಗ್ಯ ಪ್ರಯೋಜನಗಳು ಯಾವವು?

ಮತ್ತೊಂದು ಮುಖ್ಯ ವಿಚಾರ ಎಂದರೆ ಕೆಲವರಿಗೆ ಗರ್ಭಾವಸ್ಥೆಯ 9 ತಿಂಗಳು ಸಹ ಲೈಂಗಿಕ ಕ್ರಿಯೆ ನಡೆಸಲು ಸಮಸ್ಯೆ ಇರುವುದಿಲ್ಲ, ಆದರೆ ಕೆಲವರಿಗೆ ಮೊದಲ ಮೂರು ತಿಂಗಳು ಉತ್ತಮವಾದರೆ ಇನ್ನೂ ಕೆಲವರಿಗೆ ಎರೆಡನೆಯ ಮೂರು ತಿಂಗಳು ಉತ್ತಮವಾಗಿರುತ್ತದೆ. ಆದರೆ ಯಾವುದೇ ಮಹಿಳೆಗೆ ಕೊನೆಯ ಮೂರು ತಿಂಗಳು ಉತ್ತಮವಲ್ಲ ಎಂಬ ಅಭಿಪ್ರಾಯವಿದೆ.ಹಾಗಾಗಿ ಗರ್ಭಾವಸ್ಥೆಯ ಸಮಯದಲ್ಲಿ ಎಚ್ಚರದಿಂದ, ವೈದ್ಯರ ಸಲಹೆ ಪಡೆದು ಲೈಂಗಿಕ ಕ್ರಿಯೆ ನಡೆಸುವುದು ಸೂಕ್ತ.
Published by:Sandhya M
First published: