• Home
  • »
  • News
  • »
  • lifestyle
  • »
  • Military Hotels: ಆಹಾರ ಪ್ರಿಯರ ಫೇವರೇಟ್ ಈ ಮಿಲಿಟರಿ ಹೋಟೆಲ್​ಗಳು, ಇದರ ಇತಿಹಾಸ ರೋಚಕ

Military Hotels: ಆಹಾರ ಪ್ರಿಯರ ಫೇವರೇಟ್ ಈ ಮಿಲಿಟರಿ ಹೋಟೆಲ್​ಗಳು, ಇದರ ಇತಿಹಾಸ ರೋಚಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Military Hotels: ಫೈವ್‌ ಸ್ಟಾರ್‌, ದೊಡ್ಡ ದೊಡ್ಡ ರೆಸ್ಟೊರೆಂಟ್‌, ಚೈನೀಸ್‌, ಇಟಾಲಿಯನ್‌ ಆಹಾರ ಸವಿಯುವವರೂ ಸಹ ಮಿಲಿಟರಿ ಹೋಟೆಲ್‌ನಲ್ಲಿ ಒಮ್ಮೆಯಾದರೂ ಆ ಬಿಸಿಯಾದ, ರುಚಿಯಾದ ಮಾಂಸದ ಆಹಾರ ಸವಿಯಲು ಕಾಯುತ್ತಿರುತ್ತಾರೆ.

  • Trending Desk
  • Last Updated :
  • New Delhi, India
  • Share this:

ಶಿವಾಜಿ ಮಿಲಿಟರಿ ಹೋಟೆಲ್‌ (Shivaji Military Hotel) , ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್, ಮೈಲಾರಿ ಮಿಲಿಟರಿ ಹೋಟೆಲ್‌. ಹೀಗೆ ಮಿಲಿಟಿರಿ ಹೋಟೆಲ್‌ನ ಜನಪ್ರಿಯತೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ವಿಶೇಷವಾಗಿ ಬೆಂಗಳೂರಿಗರಿಗೆ (Bengaluru) ಈ ಹೋಟೆಲ್‌ ಬಗ್ಗೆ ಹೆಚ್ಚು ವಿವರಿಸೋದೇ ಬೇಡ. ಫೈವ್‌ ಸ್ಟಾರ್‌ ಹೋಟೆಲ್‌, ರೆಸ್ಟೊರೆಂಟ್​ಗಳನ್ನು (Restaurants)  ಮೀರಿಸಿದ ಈ ಹೋಟೆಲ್‌ಗಳು ಭೋಜನಪ್ರಿಯರ (Food Lovers) ಹಾಟ್‌ ಫೇವರೇಟ್‌ ಸ್ಥಳ. ಖೈಮಾ ಉಂಡೆ, ಬೋಟಿ ಪ್ರೈ, ಕಾಲು ಸೂಪ್, ತಲೆಮಾಂಸ, ಮುದ್ದೆ, ಮಟನ್‌ ಚಾಪ್ಸ್‌, ಫಿಶ್‌ ಫ್ರೈ, ನಾಟಿ ಕೋಳಿ ಸಾರು ಸೇರಿ ಇನ್ನೂ ಹತ್ತಾರು ಆಹಾರಗಳು ಮಿಲಿಟರಿ ಹೋಟೆಲ್‌ನ ವಿಶೇಷತೆಗಳು. ಈ ಆಹಾರಗಳು ಬೇರೆ ಹೋಟೆಲ್‌, ರೆಸ್ಟೊರೆಂಟ್​ಹಿಂತ ತುಂಬಾ ಭಿನ್ನವಾಗಿ, ರುಚಿಯಾಗಿ ಇರುತ್ತದೆ ಎನ್ನುವುದು ಆಹಾರ ಪ್ರಿಯರ ಅನಿಸಿಕೆ.


ವಸಾಹತುಶಾಹಿ ಕಾಲದ ಮಿಲಿಟರಿ ಹೋಟೆಲ್‌ಗಳು
ಹಲವರಿಗೆ ಮಿಲಿಟರಿ ಹೋಟೆಲ್‌ ಉಗಮ ಆಗಿದ್ಯಾವಾಗ? ಯಾಕೆ ಈ ಹೆಸರು ಬಂತು ಅನ್ನೋದು ತಿಳಿದಿಲ್ಲ. ವಸಾಹತುಶಾಹಿ ಗತಕಾಲದ ಕೆಲವು ಅವಶೇಷಗಳು ಬೆಂಗಳೂರಿನಲ್ಲಿ ನೋಡುವುದಾದರೆ ಅವುಗಳಲ್ಲಿ ಮಿಲಿಟರಿ ಹೋಟೆಲ್‌ ಕೂಡ ಒಂದು.


‘ಮಿಲಿಟರಿ ಹೋಟೆಲ್’ ಪರಿಕಲ್ಪನೆಯು ನಗರದ ಆಹಾರ ಸಂಸ್ಕೃತಿಯ ಕೇಂದ್ರವಾಗಿದೆ. ಮಸಾಲೆದೋಸೆ, ಇಡ್ಲಿ, ವಡಾ ಮತ್ತು “ಬೈ ಟು” ಕಾಫಿ ಹೋಟೆಲ್‌ಗಳು, ಉಪಹಾರ ಮಂದಿರಗಳು ಆಹಾರೋದ್ಯಮದಲ್ಲಿ ಬರುವ ಮುನ್ನವೇ ಮರಾಠಾ ಶೈಲಿಯ ಮಾಂಸಾಹಾರಿ ಆಹಾರಗಳು ವಸಾಹತುಶಾಹಿ ಕಾಲದಲಲಿಯೇ ತಮ್ಮ ಹೆಗ್ಗುರುತನ್ನು ಮೂಡಿಸಿದ್ದವು.


114 ವರ್ಷಗಳ ಹಳೆಯ ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್
ಕಾಟನ್‌ಪೇಟೆಯಲ್ಲಿರುವ ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್ ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ಮಿಲಿಟರಿ ಹೋಟೆಲ್‌ ಆಗಿದೆ. 114 ವರ್ಷಗಳಷ್ಟು ಹಳೆಯದಾದ ಈ ರೆಸ್ಟೊರೆಂಡ್​ ಅನ್ನು ಈಗ ಮೂರನೇ ತಲೆಮಾರಿನ ಮಾಲೀಕ ಕಿಶೋರ್ ಕುಮಾರ್ ನಡೆಸಿಕೊಂಡು ಹೋಗುತ್ತಿದ್ದಾರೆ.


ಇಂಡಿಯನ್‌ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಕುಮಾರ್, ಅಕ್ಕಿಪೇಟೆಯಲ್ಲಿ 1,300 ಚದರ ಅಡಿ ವಿಸ್ತೀರ್ಣದ ಮನೆಯಲ್ಲಿ ವಾಸಿಸುತ್ತಿದ್ದ ತಮ್ಮ ಮುತ್ತಜ್ಜ ಗೋವಿಂದ ರಾವ್ ಮತ್ತು ಅವರ ಇಬ್ಬರು ಹೆಂಡತಿಯರು "ಹೋಮ್ ಮೆಸ್" ಎಂಬ ಕಲ್ಪನೆಯನ್ನು ಪರಿಚಯಿಸಿದರು, ಆದರೆ ಈ ಉದ್ಯಮ ಅವರ ಕೈ ಹಿಡಿಯಲಿಲ್ಲ.


ಆಗ ನನ್ನ ದೊಡ್ಡಪ್ಪ ಮತ್ತು ಅವರ ಇಬ್ಬರು ಹೆಂಡತಿಯರು ಇಡ್ಲಿ, ಪುಲಾವ್ ಮತ್ತು ಚಿಕನ್ ಪುಲಾವ್ ಅನ್ನು ತಯಾರಿಸಿ ನೆರೆಹೊರೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ತುಪ್ಪ ಮತ್ತು ಮಸಾಲೆಗಳೊಂದಿಗೆ ತಯಾರಾಗುತ್ತಿದ್ದ ಈ ಆಹಾರಗಳು ಎಲ್ಲರ ಮೆಚ್ಚುಗೆ ಪಡೆದವು" ಎಂದು ಕುಮಾರ್ ತಮ್ಮ ಹೋಟೆಲ್‌ನ ಆರಂಭದ ದಿನಗಳ ಬಗ್ಗೆ ಹೇಳಿದರು.


ಮರಾಠ ಶೈಲಿಯ ಪಾಕಪದ್ಧತಿಗೆ ಮನಸೋತಿದ್ದ ಬ್ರಿಟಿಷರು


"ಬ್ರಿಟಿಷರು ತಮ್ಮ ಮಿಲಿಟರಿ ಶಿಬಿರದಲ್ಲಿರುವಾಗ ನನ್ನ ಮುತ್ತಜ್ಜನ ಹೋಟೆಲ್‌ಗೆ ಹೆಚ್ಚು ಭೇಟಿ ನೀಡುತ್ತಿದ್ದರು. ಮರಾಠ ಶೈಲಿಯ ಪಾಕಪದ್ಧತಿಗಳು ಅವರ ಮೆಚ್ಚುಗೆಗೆ ಪಾತ್ರವಾಗಿದ್ದವು. 20 ನೇ ಶತಮಾನದ ಆರಂಭದಿಂದಲೂ, ಹಲವಾರು ಬ್ರಿಟಿಷ್ ಮಿಲಿಟರಿ ಸಿಬ್ಬಂದಿಗಳು ಬಿರಿಯಾನಿ ಮತ್ತು ಚಪಾತಿ ಮತ್ತು ಇತರ ಮಾಂಸ ಭಕ್ಷ್ಯಗಳನ್ನು ಸವಿಯಲು ಮುಂಜಾನೆಯೇ ಈ ಹೋಟೆಲ್‌ಗೆ ಭೇಟಿ ನೀಡುತ್ತಿದ್ದರು” ಎಂದು ಕುಮಾರ್ ತಿಳಿಸಿದ್ದಾರೆ.
'ಮಿಲಿಟರಿ ಹೋಟೆಲ್' ಎಂದು ಕರೆದ ಬ್ರಿಟಿಷ್ ಅಧಿಕಾರಿಗಳು


"ಈ ಹೋಟೆಲ್‌ನಲ್ಲಿ ಹೆಚ್ಚಾಗಿ ಮಿಲಿಟರಿ ಸಿಬ್ಬಂದಿಗಳೇ ಬರುತ್ತಿದ್ದರಿಂದ ಇದನ್ನು ಮಿಲಿಟರಿ ಸಿಬ್ಬಂದಿ ಹೋಟೆಲ್ ಎಂದು ಕರೆಯಲು ಪ್ರಾರಂಭಿಸಿದರು. ಬ್ರಿಟಿಷ್ ಅಧಿಕಾರಿಗಳು ಸ್ವತಃ ಹೋಟೆಲ್‌ ಅನ್ನು 'ಮಿಲಿಟರಿ ಹೋಟೆಲ್' ಎಂದು ಕರೆಯಲು ಸೂಚಿಸಿದ್ದರು. ಇದಲ್ಲದೆ, ಮರಾಠ ಸಮುದಾಯದ ಜನರು, ಛತ್ರಪತಿ ಶಿವಾಜಿ ಮಹಾರಾಜರನ್ನು ಯೋಧನಂತೆ ಕಾಣುತ್ತೇವೆ. ಅದೇ ಸಮಯದಲ್ಲಿ, ನಾವು ಮಾಂಸ ಪ್ರಿಯರೂ ಆಗಿದ್ದೇವೆ, ಹೀಗಾಗಿ ಮಿಲಿಟರಿ ಹೋಟೆಲ್‌ ಎಂದು ನಾವು ಸಹ ಒಪ್ಪಿಕೊಂಡೆವು" ಎನ್ನುತ್ತಾರೆ ಕುಮಾರ್


ಇದನ್ನೂ ಓದಿ: ಬೆಳಗಿನ ತಿಂಡಿಗೆ ಮಸಾಲಾ ಕಾರ್ನ್ ಟೋಸ್ಟ್ ರೆಸಿಪಿ ತಯಾರಿಸಿ


ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್‌ನಲ್ಲಿ ರುಚಿಗೂ ಒಂದು ಗುಟ್ಟಿದೆ


ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್‌ನಲ್ಲಿ ಅಡುಗೆಯವರು ಮುಂಜಾನೆ 3 ಗಂಟೆಗೆ ಎದ್ದು ತಿಂಡಿಯಿಂದ ಹಿಡಿದು ಎಲ್ಲಾ ಮೆನುವಿನ ಕೆಲಸವನ್ನು ಪ್ರಾರಂಭಿಸುತ್ತಾರೆ. ಬೆಳಗ್ಗೆ ಇಡ್ಲಿ, ಮಟನ್ ಲೆಗ್ ಸೂಪ್ ಮತ್ತು ಮಂಸದ ಸ್ಟಾಕ್‌ನಲ್ಲಿ ಬೇಯಿಸಿ ಮಾಡುವ ಬಿಸಿ ಪುಲಾವ್ ತಯಾರಿಸುತ್ತಾರೆ. ಊಟಕ್ಕೆ ಬಿರಿಯಾನಿ, ಖೈಮಾ ಉಂಡೆ, ಮಟನ್ ಲಿವರ್ ಫ್ರೈ, ಚಿಕನ್ ಪೆಪ್ಪರ್ ಡ್ರೈ ಮತ್ತು ಚಿಲ್ಲಿ ಚಿಕನ್‌ ತಯಾರಿಸಲಾಗುತ್ತದೆ.


“ಖಂಡಿತವಾಗಿಯೂ, ಆಹಾರ ರುಚಿಯಾಗಿ ತಯಾರಾಗಲು ನಮ್ಮಲ್ಲಿ ವಿಶೇಷವಾದ ಪದಾರ್ಥವಿದೆ, ಅದು ವ್ಯಾಪಾರದ ರಹಸ್ಯವಾಗಿದೆ ಮತ್ತು ಅದು ನಮ್ಮ ಆಹಾರಗಳ ರುಚಿಯನ್ನು ಹೆಚ್ಚಿಸುತ್ತದೆ" ಎಂದು ಕುಮಾರ್ ಹೇಳುತ್ತಾರೆ.


ಶಿವಾಜಿ ಮಿಲಿಟರಿ ಹೋಟೆಲ್


ಬನಶಂಕರಿಯಲ್ಲಿ 91 ವರ್ಷದ ಶಿವಾಜಿ ಮಿಲಿಟರಿ ಹೋಟೆಲ್ ನಡೆಸುತ್ತಿರುವ ಲೋಕೇಶ್ ಮತ್ತು ರಾಜೀವ್ ಕೂಡ ಮರಾಠಾ ಪಾಕಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮಿಲಿಟರಿ ಹೋಟೆಲ್‌ ಎಂದರೆ ಮೊದಲು ನೆನೆಪಾಗೋದೆ ಶಿವಾಜಿ ಮಿಲಿಟರಿ ಹೋಟೆಲ್.


ಈ ಹೋಟೆಲ್‌ ಮಾಲೀಕರು ಹೇಳುವ ಪ್ರಕಾರ, ಸಾಂಪ್ರದಾಯಿಕ ಮರಾಠಾ ಶೈಲಿಯ ಪಾಕವಿಧಾನಗಳೇ ಈ ಹೋಟೆಲ್‌ಗಳ ಜನಪ್ರಿಯತೆಯನ್ನು ಉಳಸಿಕೊಳ್ಳಲು ಸಹಕಾರಿಯಾಗಿವೆಯಂತೆ. ಇಲ್ಲಿ ಸಿಗುವ ಪ್ರತಿಯೊಂದು ಆಹಾರ ಪದಾರ್ಥಗಳು ವಿಶೇಷ ರುಚಿ ಹೊಂದಿವೆ. ಒಣಗಿದ ಎಲೆಗಳಿಂದ ತಯಾರಿಸಿದ ಪ್ಲೇಟ್​ನಲ್ಲಿ ಕೊಡುವ ಬಿರಿಯಾನಿ ಇಲ್ಲಿನ ವಿಶೇಷತೆ. ಇದನ್ನು ಸವಿಯಲೇ ಬೇಕು.


ಈ ಸ್ಥಳವು ಪ್ರಸಿದ್ಧ ಚಿಕನ್ ಮತ್ತು ಮಟನ್ ದೊನ್ನೆ ಬಿರಿಯಾನಿ, ಚಿಕನ್ ಲೆಗ್, ಮಟನ್ ಡ್ರೈ, ಮಟನ್ ಫ್ರೈ, ಚಿಲ್ಲಿ ಚಿಕನ್, ಪೆಪ್ಪರ್ ಚಿಕನ್ ಮತ್ತು ಇನ್ನೂ ಹೆಚ್ಚಿನ ಆಹಾರಗಳನ್ನು ಒದಗಿಸುತ್ತದೆ.


ಇದನ್ನೂ ಓದಿ: ಬೆಳ್ಳುಳ್ಳಿಯನ್ನು ಇದರ ಜೊತೆ ತಿಂದ್ರೆ ಬೇಗ ತೂಕ ಇಳಿಯತ್ತಂತೆ


ಒಟ್ಟಾರೆ ಹೇಳುವುದಾದರೆ ಫೈವ್‌ ಸ್ಟಾರ್‌, ದೊಡ್ಡ ದೊಡ್ಡ ರೆಸ್ಟೊರೆಂಟ್‌, ಚೈನೀಸ್‌, ಇಟಾಲಿಯನ್‌ ಆಹಾರ ಸವಿಯುವವರೂ ಸಹ ಮಿಲಿಟರಿ ಹೋಟೆಲ್‌ನಲ್ಲಿ ಒಮ್ಮೆಯಾದರೂ ಆ ಬಿಸಿಯಾದ, ರುಚಿಯಾದ ಮಾಂಸದ ಆಹಾರ ಸವಿಯಲು ಕಾಯುತ್ತಿರುತ್ತಾರೆ.

Published by:Sandhya M
First published: