• Home
  • »
  • News
  • »
  • lifestyle
  • »
  • Madras Eye: ಹೆಚ್ಚಾಗುತ್ತಿದೆ ಮದ್ರಾಸ್​ ಐ ಪ್ರಕರಣಗಳು, ಹೀಗೆ ಮುನ್ನಚ್ಚರಿಕೆ ವಹಿಸಿ

Madras Eye: ಹೆಚ್ಚಾಗುತ್ತಿದೆ ಮದ್ರಾಸ್​ ಐ ಪ್ರಕರಣಗಳು, ಹೀಗೆ ಮುನ್ನಚ್ಚರಿಕೆ ವಹಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Madras Eye Symptoms: ಈ ಮದ್ರಾಸ್​ ಐಗೆ ಕಾರಣಗಳೇನು ಹಾಗೂ  ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ ಇಂಟರ್‌ನಲ್‌ ಮೆಡಿಸನ್‌ ಹಿರಿಯ ಸಲಹೆಗಾರ ಡಾ. ಆದಿತ್ಯ ಎಸ್‌. ಚೌತಿ ತಿಳಿಸಿದ್ದಾರೆ. 

  • Share this:

ಚಳಿಗಾಲ (Winter) ಬಂತೆಂದರೆ ಒಂದಷ್ಟು ಕಾಯಿಲೆಗಳು ಈ ಋತುವಿನಲ್ಲಿ ಕಾಣಸಿಕೊಳ್ಳುತ್ತವೆ. ಅದರಲ್ಲಿ ಮದ್ರಾಸ್‌ ಐ (Madras Eye) ವೈರಣು ರೋಗವೂ ಒಂದು. ಇದನ್ನು ಗುಲಾಬಿ ಕಣ್ಣು ಅಥವಾ ಕಂಜಕ್ಟಿವೈಟಿಸ್ ಎಂದೂ ಕರೆಯಲಾಗುತ್ತದೆ. ಈಗಾಗಲೇ ಈ ಕಾಯಿಲೆಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಗಾಳಿಯಲ್ಲಿ ತೇವಾಂಶ ಕಾಣಿಸಿಕೊಂಡಾಗ ಇದರಿಂದ ಉತ್ಪತ್ತಿಯಾಗುವ ಸೂಕ್ಷ್ಮಾಣು ಗಾಳಿಯಿಂದ ಗಾಳಿಗೆ ಹರಡುತ್ತವೆ. ಇದರಿಂದ ಈ ಸಮಸ್ಯೆ ಜನರಲ್ಲಿ ಸಹ ಹರಡುತ್ತದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ (South India) ಈ ಮದ್ರಾಸ್‌ ಐ ಪ್ರಕರಣ ಹೆಚ್ಚಾಗುತ್ತಿವೆ. ಈಗಾಗಲೇ ತಮಿಳುನಾಡು (Tamilnadu)  ಒಂದರಲ್ಲೇ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.


ಮದ್ರಾಸ್‌ ಐ ಬ್ಯಾಕ್ಟೀರಿಯಾಗಳಿಂದಲೇ  ಆಗುವ ಸಮಸ್ಯೆ ಆಗಿದ್ದು, ಇದು ಬರದಂತೆ ಕೆಲ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಮದ್ರಾಸ್​ ಐಗೆ ಕಾರಣಗಳೇನು ಹಾಗೂ  ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ ಇಂಟರ್‌ನಲ್‌ ಮೆಡಿಸನ್‌ ಹಿರಿಯ ಸಲಹೆಗಾರ ಡಾ. ಆದಿತ್ಯ ಎಸ್‌. ಚೌತಿ ತಿಳಿಸಿದ್ದಾರೆ.


ಮದ್ರಾಸ್‌ ಐನ ಲಕ್ಷಣಗಳು ಯಾವುವು?
ಮದ್ರಾಸ್‌ ಐ ಕೆಲವೊಮ್ಮೆ ಒಂದು ಕಣ್ಣು ಅಥವಾ ಕೆಲವೊಮ್ಮೆ ಎರಡೂ ಕಣ್ಣೂಗಳಲ್ಲೂ ಕಾಣಿಸಿಕೊಳ್ಳಬಹುದು. ಒಮ್ಮೆ ಮದ್ರಾಸ್‌ ಐ ಬಂತೆಂದರೆ, ಕಣ್ಣು ಕೆಂಪಾಗುವುದು, ಕೆರೆತ ಉಂಟಾಗುವುದು, ಕಣ್ಣಿನ ನೋವು ಮತ್ತು ಕಣ್ಣಿನಲ್ಲಿ ತಡೆದುಕೊಳ್ಳಲಾಗದ ಕಿರಿಕಿರಿ ಭಾವ, ಕಣ್ಣಿನ ಸುತ್ತಲೂ ಊತ, ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು ಸೇರಿದಂತೆ ಇತರೆ ಲಕ್ಷಣಗಳು ಕಾಣಿಸುತ್ತವೆ. ರಾತ್ರಿಯಾಗುತ್ತಲೇ, ಕಣ್ಣಿನಿಂದ ನೀರಿನಂತಹ ಸ್ರಾವ ಒಂದು ಸಹ ಹರಿಯುತ್ತದೆ. ಇನ್ನು, ಮದ್ರಾಸ್‌ ಐನಿಂದಾಗಿ ಕಣ್ಣಿನಿಂದ ಕೀವು ಸಹ ಬರಬಹುದು ಎನ್ನಲಾಗುತ್ತದೆ. ನೆಗಡಿ, ಉಸಿರಾಟದ ಸೋಂಕು ಅಥವಾ ಗಂಟಲು ಉರಿ ಸಹ ಕಾಣಿಸಿಕೊಳ್ಳಬಹುದು. ಆದರೆ, ಈ ಎಲ್ಲಾ ಲಕ್ಷಣಗಳು ಮದ್ರಾಸ್​ ಐ ಹೆಚ್ಚಾಗಿದೆ ಎನ್ನುವುದರ ಸಂಕೇತ ಎಂಬುದು ನೆನಪಿಡಿ.


ಇದನ್ನೂ ಓದಿ: ಪ್ಲಮ್​ ಕೇಕ್​ ಇಲ್ಲದೇ ಕ್ರಿಸ್​ಮಸ್​ ಇಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಇದರ ಹಿಂದಿನ ಇಂಟರೆಸ್ಟಿಂಗ್ ಕಹಾನಿ


ಮದ್ರಾಸ್‌ ಐಗೆ ಚಿಕಿತ್ಸೆಗಳು:
ಮದ್ರಾಸ್‌ ಐ ಚಿಕಿತ್ಸೆ ಎಂದರೆ ವೈದ್ಯರನ್ನು ಭೇಟಿಯಾಗುವುದು ಮಾತ್ರ. ವೈದ್ಯರು ಕೆಲವು ಕಣ್ಣಿನ ಡ್ರಾಪ್‌ಗಳನ್ನು ನೀಡುತ್ತಾರೆ, ಅದನ್ನು ಬಳಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿಕೊಳ್ಳಬಹುದು. ಏಳರಿಂದ ಹತ್ತು ದಿನಗಳಲ್ಲಿ ಈ ಊತ ಕಡಿಮೆಯಾಗುತ್ತದೆ. ಇದಲ್ಲದೇ ಮನೆಯಲ್ಲಿಯೂ ಸಹ ಒಂದಷ್ಟು ಮನೆ ಮದ್ದಿನಿಂದಲೂ ಗುಣಪಡಿಸಿಕೊಳ್ಳಬಹುದು ಎನ್ನಲಾಗುತ್ತದೆ.




ಕಣ್ಣಿಗೆ ಬೆಚ್ಚಗಿನ ಬಟ್ಟೆಯಿಂದ ಆಗಾಗ ಪ್ರೆಸ್​ ಮಾಡುವುದು ನಿಮಗೆ ಪರಿಹಾರ ನೀಡುತ್ತದೆ. ಆದರೆ, ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಕಾಂಟಾಕ್ಟ್‌ ಲೆನ್ಸ್‌ ಬಳಸಬೇಡಿ, ಇದರಿಂದ ಇನ್ನಷ್ಟು ನೋವು, ಸೋಂಕು ಹೆಚ್ಚಲಿದೆ ಎನ್ನುತ್ತಾರೆ ವೈದ್ಯರು. ನಿಮ್ಮ ಕೈಗಳನ್ನು ಆಗಾಗ ತೊಳೆದುಕೊಳ್ಳುವುದು ಬಹಳ ಉತ್ತಮ.


ಯಾರೊಂದಿಗಾದರೂ ಮಾತನಾಡುವ ಮುನ್ನ, ಮುಟ್ಟುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ವಹಿಸುವುದು ಬಹಳ ಉತ್ತಮ. ಇಲ್ಲವಾದರೆ ಇದು ಹರಡುವ ಸಾಧ್ಯತೆ ಹೆಚ್ಚೇ ಇರಲಿದೆ. ನಿಮ್ಮ ಐ ಡ್ರಾಪ್ಸ್‌ ಅಥವಾ ಟವಲ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ, ಧೂಳಿಗಳಿಗೆ ಕಣ್ಣುಗಳನ್ನು ಒಡ್ಡಿಕೊಳ್ಳಬೇಡಿ. ಕೊಳಕಾದ ಕೈಗಳಿಂದ ಕಣ್ಣುಗಳನ್ನು  ಮುಟ್ಟಬೇಡಿ, ನಿಮ್ಮ ತಲೆದಿಂಬುಗಳನ್ನು ಆಗಾಗ ತೊಳೆದು ಬದಲಾಯಿಸುತ್ತಿರಿ.


ಇದನ್ನೂ ಓದಿ: ಚಳಿಗಾಲದಲ್ಲಿ ಬೆಚ್ಚಗಿರಲು ಅತಿಯಾಗಿ ಬಿಸಿನೀರು ಕುಡಿಬೇಡಿ, ಅಪಾಯ ಅಂತಾರೆ ತಜ್ಞರು


ಚಳಿಗೆ ಒಡ್ಡಿಕೊಳ್ಳಬೇಡಿ
ಹವಾಮಾನ ಬದಲಾದಂತೆ ವೈರಾಣು ಹೆಚ್ಚಳ  ಆಗುವುದು ಸಾಮಾನ್ಯ. ಹೀಗಾಗಿ ಚಳಿಗೆ ಅದರಲ್ಲೂ ತೇವಾಂಶಯುಕ್ತ ಗಾಳಿಗೆ ಮೈಯನ್ನು ಒಡ್ಡಿಕೊಳ್ಳುವುದು ಆರೋಗ್ಯಕರವಲ್ಲ. ಇದರಿಂದ ಮದ್ರಾಸ್‌ ಐ ನಂತಹ ಸಮಸ್ಯೆ ಉಂಟಾಗಬಹುದು. ಮಕ್ಕಳಿಗೂ ಹೈಜಿನ್‌ ಕಾಪಾಡಿಕೊಳ್ಳಲು ಸಲಹೆ ನೀಡಿ. ಇದರಿಂದ ಸಮಸ್ಯೆ ಬರದಂತೆ ತಡೆಯಬಹುದು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು