Folic Acid: ಫೋಲಿಕ್ ಆಸಿಡ್ ಮಾತ್ರೆ ತಗೊಂಡ್ರೆ ಬೇಗ ಗರ್ಭಿಣಿಯಾಗಬಹುದಾ? ತಜ್ಞವೈದ್ಯರು ಉತ್ತರಿಸಿದ್ದಾರೆ

Folic Acid: ಗರ್ಭಾವಸ್ಥೆಯ ಮೊದಲ ತಿಂಗಳು ಸಾಮಾನ್ಯವಾಗಿ ಗರ್ಭಾವಸ್ಥೆಯನ್ನು ಹೊಂದಿದ್ದೇವೆ ಎನ್ನುವುದನ್ನು ಯಾರೂ ತಿಳಿದಿರುವುದಿಲ್ಲ. ಆ ಕ್ಷಣದಿಂದಲೇ ಮಗುವಿನ ಬೆಳವಣಿಗೆ ಆರಂಭವಾಗಿರುತ್ತದೆ. ಹಾಗಾಗಿ ಗರ್ಭಧಾರಣೆಯ ನಂತರ 6 ವಾರಗಳ ಕಾಲ ಫೋಲಿಕ್ ಆಮ್ಲವನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗರ್ಭಾವಸ್ಥೆಯಲ್ಲಿ(Pregnancy Time) ಇರುವಾಗ ತಾಯಿಯ(Mother) ಆರೋಗ್ಯದಲ್ಲಿ (Health)ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಅಂತಹ ಬದಲಾವಣೆಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಫೋಲಿಕ್ ಆಮ್ಲ ಅತ್ಯಗತ್ಯ. ಜೊತೆಗೆ ಮಗುವಿ(Kids)ನ ಆರೋಗ್ಯಕರವಾದ ಬೆಳವಣಿಗೆಗೆ ಸಹಾಯ ಮಾಡುವುದು. ಹಾಗಾಗಿ ಗರ್ಭಾವಸ್ಥೆಯಲ್ಲಿರುವಾಗ ಫೋಲಿಕ್ ಆಮ್ಲದ ಮಾತ್ರೆ ಅಥವಾ ಔಷಧಗಳನ್ನು(Medicine) ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಹಾಗಾದ್ರೆ ಫೋಲಿಕ್  ಆಮ್ಲ(Folic Acid) ಎಷ್ಟು ಉಪಯುಕ್ತ. ಗರ್ಭಾವಸ್ಥೆಯಲ್ಲಿ ಇದನ್ನು ಏಕೆ ಸೇವನೆ ಮಾಡಬೇಕು ಎಂಬುದರ ಬಗ್ಗೆ  ರಾಧಾ ಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ವಿದ್ಯಾ ಭಟ್ ನ್ಯೂಸ್​ 18 ಕನ್ನಡದ ಜೊತೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಫೋಲಿಕ್ ಆಮ್ಲ ಬಿ ಕಾಂಫ್ಲೆಕ್ಸ್​ನ ಇನ್ನೊಂದು ರೂಪ. ನಮ್ಮ ದೇಹವು ಅದನ್ನು ಬಳಸುವ ಮೊದಲು, ಅದನ್ನು ಬೇರೆ ರೂಪಕ್ಕೆ ಪರಿವರ್ತಿಸಬೇಕು. ರಕ್ತದಲ್ಲಿ ಕಡಿಮೆ ಪ್ರಮಾಣದ ಫೋಲೇಟ್ ಇರುವುದು ಹುಟ್ಟುವ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್ಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಇದರ ಸೇವನೆ ಬಹಳ ಮುಖ್ಯ.

ಫೋಲಿಕ್ ಆಮ್ಲ ಎಂದರೇನು?

ಫೋಲಿಕ್ ಆಮ್ಲಇದು ವಿಟಮಿನ್ ಬಿ 9 ನ ಸ್ಥಿರ, ಕೃತಕ ರೂಪವಾಗಿದೆ. ಇದು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುವುದಿಲ್ಲ, ಇದನ್ನು ಸಾಮಾನ್ಯವಾಗಿ ಸಂಸ್ಕರಿಸಿದ ಆಹಾರಗಳಿಗೆ ಸೇರಿಸಲಾಗುತ್ತದೆ ಮತ್ತು ಮಲ್ಟಿವಿಟಮಿನ್-ಖನಿಜ ಪೂರಕಗಳಲ್ಲಿ ಬಳಸಲಾಗುತ್ತದೆ.

ಕೆಲವರು ಎಂಟಿಎಚ್‌ಎಫ್ಆರ್ ಕಿಣ್ವಗಳನ್ನು ಬಳಸುತ್ತಾರೆ ಫೋಲಿಕ್ ಆಮ್ಲ ಇದು ಆನುವಂಶಿಕ ರೂಪಾಂತರಗಳನ್ನು ಹೊಂದಿದ್ದು ಅದು 5-MTHF ಗೆ ಪರಿವರ್ತಿಸುವಲ್ಲಿ ಕಡಿಮೆ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಇಯರ್ ಬಡ್ಸ್​ ಬಳಸದೇ ಕಿವಿ ಸ್ವಚ್ಛ ಮಾಡಲು ಇಲ್ಲಿದೆ ಟ್ರಿಕ್

ಈ ಫೋಲಿಕ್ ಮಾತ್ರೆಯನ್ನು ಯಾವಾಗ ತೆಗೆದುಕೊಳ್ಳಬೇಕು?

ಸಾಮಾನ್ಯವಾಗಿ ಗರ್ಭಧಾರಣೆಯಾಗಿ 28 ದಿನಗಳ ನಂತರ ಮಗುವಿನ ನರವ್ಯವಸ್ಥೆ, ಮಿದುಳು ಮತ್ತು ಬೆನ್ನು ಹುರಿಯ ಬೆಳವಣಿಗೆ ಆಗುವುದು. ಅಂತಹ ಸಮಯದಲ್ಲಿ ಸೂಕ್ತ ಪ್ರಮಾಣದ ಫೋಲಿಕ್ ಆಮ್ಲದ ಸೇವನೆಯನ್ನು ಮಾಡಿದರೆ ಮಗುವಿನ ದೇಹದಲ್ಲಿ ನರ ವ್ಯವಸ್ಥೆಯ ಸಮಸ್ಯೆಗಳು, ಮಿದುಳಿನ ಬೆಳವಣಿಗೆ ಹಾಗೂ ಮೂಳೆ ದೋಷ ಉಂಟಾಗುವುದಿಲ್ಲ.

ಫೋಲಿಕ್ ಆಮ್ಲದ ಪ್ರಯೋಜನಗಳು

ಗರ್ಭದಲ್ಲಿ ಮಗುವಿನ ಬೆಳವಣಿಗೆ ಪ್ರಾರಂಭವಾಗುತ್ತಿದ್ದಂತೆ ಅದರ ಬೆಳವಣಿಗೆಗೆ ಅಗತ್ಯವಾದ  ಪೋಷಕಾಂಶಗಳು ಅತ್ಯಗತ್ಯವಾಗಿರುತ್ತದೆ. ಗರ್ಭಧಾರಣೆಯಾಗಿ ಮೊದಲ 6 ರಿಂದ 10 ವಾರಗಳಲ್ಲಿ ಮಗುವಿನ ದೇಹದ ರಚನೆ ಆಗುತ್ತದೆ. ಅಂತಹ ಸಮಯದಲ್ಲಿ ಫೋಲಿಕ್ ಆಸಿಡ್ ಪೂರೈಕೆ ಅಗತ್ಯ.

ತಜ್ಞರು ಹಾಗೂ ಕೆಲವು ಸಂಶೋಧನೆಗಳ ಪ್ರಕಾರ ಗರ್ಭಿಣಿಯರು ಪ್ರತಿದಿನ ಕನಿಷ್ಠ 600 ಮೈಕ್ರೋಗ್ರಾಂ(ಎಮ್‍ಜಿಸಿ) ಫೋಲಿಕ್ ಆಮ್ಲವನ್ನು ಸೇವನೆ ಮಾಡಬಹುದು. ಇದು ಗರ್ಭಿಣಿಯರಿಗೆ ಅಗತ್ಯವಾದ ಜೀವಸತ್ವಗಳನ್ನು ಪೂರೈಸುತ್ತದೆ. ಸಾಮಾನ್ಯವಾಗಿ ನೀವು ಗಮನಿಸಿರಬಹುದು, ಇತ್ತೀಚಿನ ದಿನಗಳಲ್ಲಿ ಪೋಷಕಾಂಶಗಳ ಕೊರತೆಯಿಂದ ಗರ್ಭಾಪಾತವಾಗುವ ಸಂಖ್ಯೆಗಳು ಹೆಚ್ಚಿವೆ. ಇದನ್ನು ತಪ್ಪಿಸಲು ಫೋಲಿಕ್ ಆಮ್ಲವನ್ನು ಸೇವನೆ ಮಾಡಬೇಕು.

ಗರ್ಭಾವಸ್ಥೆಯ ಮೊದಲ ತಿಂಗಳು ಸಾಮಾನ್ಯವಾಗಿ ಬಹಳ ಮುಖ್ಯವಾದ ತಿಂಗಳು. ಆ ಕ್ಷಣದಿಂದಲೇ ಮಗುವಿನ ಬೆಳವಣಿಗೆ ಆರಂಭವಾಗಿರುತ್ತದೆ. ಹಾಗಾಗಿ ಗರ್ಭಧಾರಣೆಯ ನಂತರ 6 ವಾರಗಳ ಕಾಲ ಫೋಲಿಕ್ ಆಮ್ಲವನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಹೆರಿಗೆಯ ನಂತರವೂ ತಾಯಿ 400 ಎಮ್‍ಜಿಸಿ ಅಷ್ಟು ಫೋಲಿಕ್ ಆಮ್ಲವನ್ನು ಸೇವನೆ ಮಾಡಬೇಕು.

ನಾವು ಸೇವಿಸುವ ಸೊಪ್ಪು, ಗಡ್ಡೆ, ತರಕಾರಿಗಳು, ಸಿರಿಧಾನ್ಯಗಳಿಂದ ಹಾಗೂ ಕಿತ್ತಳೆ ಹಣ್ಣಿನ ರಸಗಳಿಂದ ಫೋಲಿಕ್ ಆಮ್ಲ ಇರುತ್ತದೆ, ಆದರೆ ಅದು ನಮ್ಮ ದೇಹಕ್ಕೆ ಗರ್ಭಾವಸ್ಥೆಯ ಸಮಯದಲ್ಲಿ ಸಾಕಾಗುವುದಿಲ್ಲ. ಈ ಕಾರಣದಿಂದ ಪೂರಕವಾಗಿ ಇದನ್ನು ಸೇವನೆ ಮಾಡುವುದು ಉತ್ತಮ.

ಇದನ್ನೂ ಓದಿ: ಮುಟ್ಟಿನ ದಿನಗಳಲ್ಲಿ ವ್ಯಾಯಾಮ ಮಾಡ್ಬೇಕಾ, ಮಾಡ್ಬಾರ್ದಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ಜನರು ವೈದ್ಯರ ಸಲಹೆ ಇಲ್ಲದೆ ಸಹ ಗರ್ಭಾವಸ್ಥೆಯ ಸಮಯದಲ್ಲಿ ಇದನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಲ್ಲ ಎನ್ನುತ್ಥಾರೆ ಡಾಕ್ಟರ್ ವಿದ್ಯಾ.
Published by:Sandhya M
First published: