Breast Cancer: ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ- ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚರ

Breast Cancer: ಮ್ಯಾಮೊಗ್ರಾಮ್ ಮಾಡುವುದರಿಂದ ಪ್ರಯೋಜನಗಳಿದ್ದರೂ, ಕೆಲವು ಸಂದರ್ಭಗಳಲ್ಲಿ ಇದು ತಪ್ಪು ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ. ಅಂತಹ ಸಮಯದಲ್ಲಿ ಮರು ಪರೀಕ್ಷೆ ಮಾಡುವುದರಿಂದ ಅದು ಕ್ಯಾನ್ಸರ್ ಅಲ್ಲ ಎಂದು ತಿಳಿದು ಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಶ್ವದಾದ್ಯಂತ ಸ್ತನ ಕ್ಯಾನ್ಸರ್​ಗೆ(Breast Cancer) ಒಳಗಾಗುವ ಮಹಿಳೆಯರ ಸಂಖ್ಯೆಯು ಬೆಳೆಯುತ್ತಿದೆ. ಸರಿಯಾದ ಅರಿವಿನ ಕೊರತೆಯಿಂದಾಗಿ ಸ್ತನ ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೂ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮಹಿಳೆಯರು ತಮ್ಮ ಜೀವಗಳನ್ನು ಉಳಿಸಿಕೊಳ್ಳಬಹುದು. ಮಹಿಳೆಯರು, ವಿಶೇಷವಾಗಿ ನಿಯಮಿತ ಸ್ಕ್ರೀನಿಂಗ್ ಹೊಂದಿರುವವರು ಸ್ತನ ಕ್ಯಾನ್ಸರ್​ನಿಂದ ಬದುಕುಳಿಯಬಹುದು. ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ವೈದ್ಯರು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಾರೆ.  ಸ್ತನ ಕ್ಯಾನ್ಸರ್ ಲಕ್ಷಣಗಳನ್ನು ಪರೀಕ್ಷಿಸಲು ಮ್ಯಾಮೊಗ್ರಾಮ್ ಸ್ಕ್ರೀನಿಂಗ್(Mammogram) ಮಾಡುವುದು ಇದರ ಒಂದು ಭಾಗವಾಗಿದೆ. ನಿಮ್ಮ 30 ನೇ ವಯಸ್ಸಿನಲ್ಲಿ ಈ ಸ್ಕ್ರೀನಿಂಗ್ ಅನ್ನು  ಮಾಡಲಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಈ ಪರೀಕ್ಷೆಯನ್ನು 45 ವರ್ಷಕ್ಕಿಂತ ಮೊದಲು ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.  ಮ್ಯಾಮೊಗ್ರಾಮ್‌ಗಳ ಸ್ಕ್ರೀನಿಂಗ್ ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಪತ್ತೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಸ್ತನ ಕ್ಯಾನ್ಸರ್ 40 ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಸಂಶೋಧನೆಯು ಮ್ಯಾಮೊಗ್ರಮ್ ಸ್ಕ್ರೀನಿಂಗ್ 40-50 ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸುತ್ತದೆ.

ಮ್ಯಾಮೊಗ್ರಾಮ್ ಸ್ಕ್ರೀನಿಂಗ್ ಈ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡುತ್ತದೆ. ಆದರೆ ಅದೇ ಅವಧಿಯಲ್ಲಿ ಯಕೃತ್ತು, ಶ್ವಾಸಕೋಶಗಳು ಮತ್ತು ಇತರ ಅಂಗಗಳಿಗೆ ಸ್ತನ ಕ್ಯಾನ್ಸರ್ ಹರಡುತ್ತಿರುವುದು ಹೆಚ್ಚಳವಾಗಿದೆ.. ಅದಕ್ಕಾಗಿಯೇ ವೈದ್ಯರು ಮ್ಯಾಮೊಗ್ರಾಮ್ ಮಾಡುವುದನ್ನು ಕಡ್ಡಾಯಗೊಳಿಸುತ್ತಾರೆ. ಇದು ಗುಣಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಕುಡಿಯೋದ್ರಿಂದ ಒಂದು ತಿಂಗಳಲ್ಲಿ ತೂಕ ಇಳಿಸಬಹುದು

ಮ್ಯಾಮೊಗ್ರಾಮ್ ಮಾಡುವುದರಿಂದ ಪ್ರಯೋಜನಗಳಿದ್ದರೂ, ಕೆಲವು ಸಂದರ್ಭಗಳಲ್ಲಿ ಇದು ತಪ್ಪು ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ. ಅಂತಹ ಸಮಯದಲ್ಲಿ ಮರು ಪರೀಕ್ಷೆ ಮಾಡುವುದರಿಂದ ಅದು ಕ್ಯಾನ್ಸರ್ ಅಲ್ಲ ಎಂದು ತಿಳಿದು ಬರುತ್ತದೆ. 40 ಮತ್ತು 50 ರ ವಯಸ್ಸಿನ ಮಹಿಳೆಯರಲ್ಲಿ ನಕಲಿ ಫಲಿತಾಂಶಗಳು ಸಾಮಾನ್ಯ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಸಂದೇಹವಿದ್ದರೆ ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ ನಿರ್ಧಾರ.

ಸಾಮಾನ್ಯವಾಗಿ, ವಯಸ್ಸಾದ ಮಹಿಳೆಯರು ಸ್ತನ ಕ್ಯಾನ್ಸರ್ ಬರುವುದಿಲ್ಲ ಎಂದು ನಂಬುತ್ತಾರೆ. ಸ್ತನ ಕ್ಯಾನ್ಸರ್ ಹೊಂದಿರುವ ಸುಮಾರು 5% ಮಹಿಳೆಯರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆದ್ದರಿಂದ ಎಲ್ಲರೂ ಎಚ್ಚರದಿಂದ ಇರುವುದು ಒಳ್ಳೆಯದು.

ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮಹಿಳೆಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು 

ನೀವು ದಪ್ಪವಾಗಿದ್ದರೂ ಅಥವಾ ತುಂಬಾ ತೆಳ್ಳಗಿದ್ದರೂ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಉತ್ತಮ. ಹೆಚ್ಚು ಮದ್ಯ ಸೇವಿಸಬೇಡಿ. ಆಲ್ಕೋಹಾಲ್ ಸೇವಿಸುವ ಮಹಿಳೆಯರಲ್ಲಿ ಶೇಕಡಾ 15 ರಷ್ಟು ಸ್ತನ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ. ಅಧ್ಯಯನಗಳು ಆಲ್ಕೋಹಾಲ್ ಡಿಎನ್ಎ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಸ್ತನ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಹೇಳಿದೆ.

ಪ್ರತಿದಿನ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆಯ ಕೊರತೆಯು ವಿವಿಧ ರೋಗಗಳಿಗೆ ಕಾರಣವಾಗಬಹುದು. ಸ್ತನ್ಯಪಾನವು ಸ್ತನ ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಯುವತಿಯರು ತಮ್ಮ ಸ್ತನದಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಹೀಗೆ ಹೆಚ್ಚು ಹೊತ್ತು ಮರೆಮಾಡಿದರೆ ಅವು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಕೌನ್ಸೆಲಿಂಗ್ ನೀಡಬೇಕು.

ಸ್ತನದಲ್ಲಿನ ಬದಲಾವಣೆಗಳನ್ನು ವರದಿ ಮಾಡಲು ವೈದ್ಯರನ್ನು ಭೇಟಿ ಮಾಡಿ. ಸ್ತನದಲ್ಲಿ ಉಂಡೆಗಳು, ಮೊಲೆತೊಟ್ಟುಗಳ ಸ್ರವಿಸುವಿಕೆ, ನಿರ್ದಿಷ್ಟ ಪ್ರದೇಶದಲ್ಲಿ ನೋವು ಅಥವಾ ಚರ್ಮದಲ್ಲಿನ ಬದಲಾವಣೆಗಳನ್ನು ನೀವು ಗಮನಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಮ್ಯಾಮೊಗ್ರಾಮ್ ಸ್ಕ್ರೀನಿಂಗ್‌ಗೆ ಒಳಗಾಗಬೇಕೇ? 

ಇದನ್ನೂ ಓದಿ:ಸರಿಯಾಗಿ ನಿದ್ರೆ ಬರ್ತಿಲ್ವ? ಹಾಗಾದ್ರೆ ಕ್ಯಾಮೊಮೈಲ್ ಟೀ ಕುಡಿಯಿರಿ

ಸಾಮಾನ್ಯವಾಗಿ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಸ್ಕ್ರೀನಿಂಗ್ ಅಗತ್ಯವಿಲ್ಲ. 30 ವರ್ಷದೊಳಗಿನ ಮಹಿಳೆಯರ ಯಾವುದೇ ಸಂಬಂಧಿಕರಿಗೆ ಸ್ತನ ಕ್ಯಾನ್ಸರ್ ಇದ್ದಲ್ಲಿ ಸ್ಕ್ರೀನಿಂಗ್ ಮಾಡುವುದು ಉತ್ತಮ. ಹೆಚ್ಚಿನ ಅಪಾಯವಿರುವ ಮಹಿಳೆಯರು ಮ್ಯಾಮೊಗ್ರಫಿಯ ಜೊತೆಗೆ ಎಂಆರ್‌ಐ ಪರೀಕ್ಷೆಯನ್ನು ಮಾಡಿಸಬೇಕು.
Published by:Sandhya M
First published: