ಇನ್ನೇನು ಹೊಸವರ್ಷದ ಆಚರಣೆಗೆ (New Year Celebration) ಕ್ಷಣಗಣನೆ ಆರಂಭವಾಗಿದೆ. ಆದರೆ ಕೊರೊನಾ (Corona) ರೂಪಾಂತರ ಓಮೈಕ್ರಾನ್ (Omicron) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೊಸ ವರ್ಷದ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ವಿವಿಧ ಜಿಲ್ಲೆಗಳಲ್ಲಿ ಸಂಭ್ರಮಾಚರಣೆ ಹೇಗಿದೆ, ಅಲ್ಲಿನ ನಿಯಮಗಳೇನು ಎಂಬುದು ಇಲ್ಲಿದೆ.
ಮಂಡ್ಯ ಜಿಲ್ಲೆ
ಕಾವೇರಿ ನದಿ ತೀರಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಕೆಆರ್ಎಸ್ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳಲ್ಲಿ ಇಂದು ಬೆಳಗೆಯಿಂದ ನಾಳೆ ರಾತ್ರಿ 10 ಗಂಟೆ ವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿದೆ. ಕೆ ಆರ್ ಎಸ್ ಸುತ್ತಮುತ್ತ, ಬಲಮುರಿ, ಎಡಮುರಿಗಳ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಆದೇಶ ನೀಡಿದ್ದಾರೆ.
ಅಲ್ಲದೇ, ಮಂಡ್ಯದ ಪಾಂಡವಪುರದ ಪ್ರವಾಸಿತಾಣಗಳಲ್ಲೂ ಹೊಸ ವರ್ಷ ಹಿನ್ನೆಲೆ ಮೇಲುಕೋಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಮೇಲುಕೋಟೆ, ಕೆರೆ ತೊಣ್ಣೂರು, ಕುಂತಿ ಬೆಟ್ಟ ಹಾಗೂ ಕೆಆರ್ಎಸ್ ಹಿನ್ನೀರಿನ ವೇಣುಗೋಪಾಲಸ್ವಾಮಿ ಬೆಟ್ಟಕ್ಕೆ ಇಂದು ಬೆಳಗೆಯಿಂದ ನಾಳೆ ರಾತ್ರಿ 10 ಗಂಟೆ ವರೆಗೆ ಪ್ರವೇಶ ನಿಷೇಧಿಸಿ ಪಾಂಡವಪುರದಲ್ಲಿ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಯಾದಗಿರಿ ಜಿಲ್ಲೆ
ರಾಜ್ಯದಂತ ನೈಟ್ ಕರ್ಫೂ ಜಾರಿ ಮಾಡಿರುವ ಹಿನ್ನೆಲೆ ಸಂಭ್ರಮದ ಹೊಸ ವರ್ಷ ಆಚರಣೆ ಮಾಡದಂತೆ ಯಾದಗಿರಿ ಎಸ್ಪಿ ಖಡಕ್ ಎಚ್ಚರಿಕೆ ನೀಡಿದ್ದು, ರಾತ್ರಿ 10 ಗಂಟೆ ಒಳಗೆ ಹೊಟೇಲ್, ವೈನ್ ಶಾಪ್, ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಇನ್ನಿತರ ಅಂಗಡಿಗಳು ಬಂದ್ ಮಾಡಬೇಕು, ಬಂದ್ ಮಾಡದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹೊಸವರ್ಷವನ್ನು ನೀವು ಹೀಗೂ ಆಚರಿಸಬಹುದು
ರಾತ್ರಿ 10 ಗಂಟೆ ನಂತರ ಯಾವುದೇ ಅಂಗಡಿ ಓಪನ್ ಮಾಡಬಾರದು ಹಾಗೂ ಜನರು ಸಹ ಅನಾವಶ್ಯಕ ವಾಗಿ ಓಡಾಡಬೇಡಿ, ರಸ್ತೆಯಲ್ಲಿ ವಾಹನ ಕಂಡುಬಂದರೆ ಮತ್ತು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಅದ್ದೂರಿ ಹೊಸ ವರ್ಷ ಆಚರಣೆ ಮಾಡದೆ ಜನರು ಕೊವೀಡ್ ನಿಯಮ ಪಾಲಿಸಬೇಕೆಂದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಜನರಲ್ಲಿ ಮನವಿ ಮಾಡಿದ್ದಾರೆ.
ಮಂಗಳೂರು
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಮೈಕ್ರಾನ್ ಭೀತಿ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗಿದ್ದು,ಕಡಲ ಕಿನಾರೆಯಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಡಾಳಿತ ಬ್ರೇಕ್ ಹಾಕಿದೆ. ಮಂಗಳೂರು ಸುತ್ತಮುತ್ತ ಇರುವ ಬೀಚ್ ಗಳಿಗೆ ಸಂಜೆ 7 ಗಂಟೆಯ ಬಳಿಕ ಪ್ರವೇಶ ನಿಷೇಧ ಮಾಡಲಾಗಿದ್ದು, ಮಂಗಳೂರಿನ ಪಣಂಬೂರು, ತಣ್ಣುರುಬಾವಿ, ಸೋಮೇಶ್ವರ, ಉಳ್ಳಾಲ, ಮುಕ್ಕಾ, ಸುರತ್ಕಲ್ , ಕೆ ಆರ್ ಇ ಸಿ ಬೀಚ್ ಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ನಿರ್ಬಂಧ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ನೀಡಿದ್ದಾರೆ.
ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೊಸ ವಷಾ೯ಚರಣೆ ಮಾಡುವಂತಿಲ್ಲ ಎಂದು ಎಡಿಸಿ ಮಹಾದೇವ ಮುರುಗಿ ಆದೇಶಿಸಿದ್ದು, ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿಯಲ್ಲಿ ಗುಂಪು ಸೇರಿ ವಷಾ೯ಚರಣೆ ಮಾಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದ್ದು, ಬಾದಾಮಿ, ಐಹೊಳೆ, ಪಟ್ಟದಕಲ್ಲ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಡಿ.30ರಿಂದ ಜ.2ರವರೆಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.
ಹೊಟೇಲ್ ಗಳಲ್ಲಿ ಸರ್ಕಾರದ ಶೇ.50 ರಷ್ಟು ಅನುಮತಿ ಪಾಲನೆ ಮಾಡಲು ಸೂಚನೆ ನೀಡಲಾಗಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ನೈಟ್ ಕಪ್ಯೂ೯ ಜಾರಿಯಲ್ಲಿದೆ. 10 ಗಂಟೆ ನಂತರ ತುತು೯ ಕೆಲಸವಿದ್ದಲ್ಲಿ ಹೊರತುಪಡಿಸಿ ಓಡಾಡುವಂತಿಲ್ಲ. ರೂಲ್ಸ್ ಫಾಲೋ ಮಾಡದೇ ಹೋದರೆ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ
ಹೊಸ ವರ್ಷದ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿರುವುದರಿಂದ ಬೆಳಗಾವಿಯಲ್ಲಿ ಓಲ್ಡ್ ಮ್ಯಾನ್ ದಹಿಸೋ ಕಾರ್ಯಕ್ಕೆ ಸಹ ಈ ಬಾರಿ ಬ್ರೇಕ್ ಬಿದ್ದಿದೆ. ಬೆಳಗಾವಿ ಕ್ಯಾಂಪ್ ಸೇರಿ ಪ್ರತಿಯೊಂದು ಬಡಾವಣೆಯಲ್ಲಿ ಓಲ್ಡ್ ಮ್ಯಾನ್ ದಹಿಸೋ ಸಂಪ್ರದಾಯವಿದೆ. ಓಲ್ಡ್ ಮ್ಯಾನ್ ದಹಿಸುವ ಮೂಲಕ ವರ್ಷ ಕಹಿ ನೆನಪು ಮರೆತು ಹೊಸ ಜೀವನ ಆರಂಭಿಸುವ ಸಂಪ್ರದಾಯ ಇದು. ಆದರೆ ಈ ಬಾರಿ ಆಚರಣೆಗೆ ಬ್ರೇಕ್ ಬಿದ್ದಿದೆ.
ವಿಜಯನಗರ
ಹೊಸವರ್ಷದ ಹಿನ್ನೆಲೆ ಹಂಪಿಗೆ ಹೆಚ್ಚು ಪ್ರವಾಸಿಗರು ಬಂದಿದ್ದು, ರಾಜ್ಯ ಸರ್ಕಾರದ ನಿಯಮದಂತೆ 50-50 ರಂತೆ ಹೋಟೆಲ್ ಗಳನ್ನು ನಡೆಸಬೇಕು. ಕ್ಲಬ್,ರೆಸ್ಟೋರೆಂಟ್ ಏನೇ ಇರಲಿ 50 ರಷ್ಟಿರಬೇಕು, 300 ಕ್ಕಿಂತ ಹೆಚ್ಚು ಜನ ಸೇರಿಸಿ ಸಭೆ,ಸಮಾರಂಭ ಮಾಡುವಂತಿಲ್ಲ. ಹೋಟೆಲ್ ಗಳಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಡಿ.ಸಿ ಆದೇಶಿಸಿದ್ದಾರೆ.
ಮೈಸೂರು
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೀಗೆ ಹೊಸ ವರ್ಷ ಎಂಜಾಯ್ ಮಾಡಿ
ಕೊರೊನಾ ಭೀತಿ ಹಿನ್ನೆಲೆ ಅರಮನೆ ನಗರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿದೆ. ಈ ಬಾರಿ ಅರಮನೆಯಲ್ಲಿ ಸಹ ಹೊಸ ವರ್ಷದ ಸಂಭ್ರಮ ಇಲ್ಲ. ಪ್ರತಿವರ್ಷವು ಬಾಣ ಬಿರುಸುಗಳ ಮೂಲಕ ಹೊಸ ವರ್ಷದ ಆಚರಣೆ ಮಾಡಲಾಗುತ್ತಿತ್ತು, ಅಲ್ಲದೇ ಸಂಗೀತ ರಸಸಂಜೆ, ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಅರಮನೆ ದೀಪಾಲಂಕಾರ ಹೀಗೆ ವಿವಿಧ ರೀತಿಯಲ್ಲಿ ಹೊಸವರ್ಷದ ಆಚರಣೆ ಮಾಡಲಾಗುತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಯ ಮೇರೆಗೆ ಎಲ್ಲಾ ಕಾರ್ಯಕ್ರಮವನ್ನು ಆಚರಿಸದಿರಲು ನಿರ್ಧರಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ