Beauty Tips: ಕೂದಲಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ 8 ಆಸನಗಳನ್ನು ಮಾಡಿ..!

ಯೋಗಾಭ್ಯಾಸ ನಿತ್ಯದ ಜೀವನದಲ್ಲಿ ಸಾಕಷ್ಟು ಲಾಭದಾಯ. ಹೌದು, ಇದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ. ಈಗ ಕೂದಲ ಸಮಸ್ಯೆಗೂ ಸಹ ಇದರಲ್ಲಿ ಪರಿಹಾರವಿದೆಯಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಿನ ಒತ್ತಡದ ಜೀವನ ಶೈಲಿಯಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು (Hair Related Problems) ತಲೆದೋರುವುದು ಸಾಮಾನ್ಯ ಸಂಗತಿಯಾಗಿದೆ. ಬಹಳಷ್ಟು ಮಂದಿ ಕೂದಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದುಬಾರಿ ಔಷಧಿ, ಶಾಂಪೂ ಅಥವಾ ಮನೆ ಮದ್ದುಗಳನ್ನು ಬಳಸಿದರೂ ಅನೇಕ ಸಲ ಯಾವುದೇ ಪರಿಹಾರ ಸಿಗುವುದಿಲ್ಲ. ಏಕೆಂದರೆ ಕೂದಲು ಉದುರುವಿಕೆ, ಬಿಳಿಯಾಗುವುದು ಮುಂತಾದ ತೊಂದರೆಗಳಿಗೆ ಬಾಹ್ಯ ಮಾತ್ರವಲ್ಲ, ದೇಹದ ಆಂತರಿಕ ಸಮಸ್ಯೆಗಳು ಕೂಡ ಕಾರಣ ಆಗಿರುತ್ತವೆ. ಕೆಲವು ಸರಳ ಯೋಗಾಸನಗಳನ್ನು (Yoga) ಮಾಡುವುದರಿಂದ ನಮ್ಮ ಕೂದಲಿಗೆ  ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆಯಂತೆ. ಅಂತಹ ಕೆಲವು ಆಸನಗಳ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಯೋಗಾಭ್ಯಾಸ ನಿತ್ಯದ ಜೀವನದಲ್ಲಿ ಸಾಕಷ್ಟು ಲಾಭದಾಯ. ಹೌದು, ಇದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ. ಈಗ ಕೂದಲ ಸಮಸ್ಯೆಗೂ ಸಹ ಇದರಲ್ಲಿ ಪರಿಹಾರವಿದೆಯಂತೆ. ಅದಕ್ಕಾಗಿ 8 ರೀತಿಯ ಆಸನಗಳನ್ನು ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದಾಗಿದೆ.

How to control Hair Problem, Hair Growth, Tips for long hair, tips to contole hair loss, ಕೂದಲ ಆರೈಕೆ, ಕೂದಲುದುರುವಿಕೆಗೆ ಟಿಪ್ಸ್​, ಉದ್ದ ಕೂದಲಿಗೆ ಈ ಕ್ರಮ ಅನುಸರಿಸಿ, ಕೂದಲ ಸಮದ್ಯೆಗೆ ಇಲ್ಲಿದೆ ಪರಿಹಾರ, Hair problems, Yoga, Stress, ಕೂದಲಿನ ಸಮಸ್ಯೆಗಳು, ಯೋಗ, ಒತ್ತಡ, Here is a yoga asanas to control hair problem and growth
ಸಾಂದರ್ಭಿಕ ಚಿತ್ರ


ಅಧೋ ಮುಖ ಶ್ವಾನಾಸನ: ಇದು ತಲೆಯ ಕಡೆಗೆ ರಕ್ತ ಪರಿಚಲನೆ ಆಗಲು ಸಹಾಯ ಮಾಡುತ್ತದೆ. ಆ ಮೂಲಕ ಸುಪ್ತ ಹೇರ್ ಫಾಲಿಕಲ್ಸ್‌ಗಳನ್ನು ಕೂದಲ  ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ: ಥೈರಾಯ್ಡ್​​ನಿಂದ ಆಗುವ ಕೂದಲುದುರುವಿಕೆ ತಡೆಯುವುದು ಹೇಗೆ..?

ಸಲಂಭ ಸರ್ವಾಂಗಾಸನ: ಈ ಆಸನದಿಂದ ತಲೆಯ ಕಡೆಗೆ ರಕ್ತದ ಹರಿವು ಇರುತ್ತದೆ, ಆ ಮೂಲಕ ನೆತ್ತಿಯಲ್ಲಿ ಜಲಸಂಚಯನಕ್ಕೆ ಉತ್ತೇಜನ ದೊರೆಯುತ್ತದೆ. ಅದರಿಂದಾಗಿ ಒಣ , ಹೊಳಪಿಲ್ಲದ ಮತ್ತು ತೆಳು ಕೂದಲಿನ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಸಾಂದರ್ಭಿಕ ಚಿತ್ರ


ವಜ್ರಾಸನ: ಒತ್ತಡ ಮತ್ತು ಚಿಂತೆ ಕೂದಲು ಉದುರುವಿಕೆ ಮತ್ತು ಅಕಾಲಿಕ ಬಿಳಿ ಕೂದಲು ಸಮಸ್ಯೆಗೆ ಮುಖ್ಯ ಕಾರಣ. ವಜ್ರಾಸನ ಮಾಡುವುದರಿಂದ ದೇಹ ತನ್ನಷ್ಟಕ್ಕೆ ಆರಾಮದಾಯಕ ಸ್ಥಿತಿಗೆ ಬರುತ್ತದೆ. ಅದರಿಂದ ಒತ್ತಡ ನಿವಾರಣೆ ಸಾಧ್ಯವಾಗಿ, ಕೂದಲು ಉದುರುವಿಕೆ ಮತ್ತು ಅಕಾಲಿಕ ಬಿಳಿ ಕೂದಲು ಸಮಸ್ಯೆಗಳು ದೂರವಾಗುತ್ತವೆ.

ಶೀರ್ಷಾಸನ: ಈ ಆಸನ ಮಾಡುವುದರಿಂದ ಕೂಡ ನೆತ್ತಿಯಲ್ಲಿ ರಕ್ತ ಪರಿಚಲನೆ ಉತ್ತಮವಾಗಿ ನಡೆಯುತ್ತದೆ. ಆಗ ಕೂದಲು ಉದುರುವಿಕೆ, ನೆತ್ತಿ ಬೋಳಾಗುವುದು ಮತ್ತು ತೆಳು ಕೂದಲಿನಂತಹ ಸಮಸ್ಯೆಗಳು ನಿವಾರಣೆ ಆಗುತ್ತವೆ. ಶೀರ್ಷಾಸನ ಮಾಡುವುದರಿಂದ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: Weight Loss: ಸೂರ್ಯ ನಮಸ್ಕಾರ ಮಾಡಿ ದೇಹದ ತೂಕ ಇಳಿಸಿ..!

ಉತ್ತಾನಾಸನ: ಈ ಆಸನವನ್ನು ಮಾಡುವುದರಿಂದ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವೆ ಮತ್ತು ರಕ್ತ ಪರಿಚಲನೆ ಉತ್ತೇಜಿಸಲು ಸಹಾಯ ಆಗುತ್ತದೆ. ಅದರಿಂದಾಗಿ ದೃಢ ಮತ್ತು ಉದ್ದನೆಯ ಕೂದಲು ಬೆಳೆಯಲು ಸಹಾಯವಾಗುತ್ತದೆ.

ಬಾಲಾಸನ: ಈ ಆಸನವನ್ನು ಮಾಡುವುದರಿಂದ ಕೂದಲ ಉದುರುವಿಕೆಗೆ ಕಾರಣವಾಗುವ ಎರಡು ಪ್ರಮುಖ ಅಂಶಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಅವು ಯಾವುವೆಂದರೆ ಒತ್ತಡ ಮತ್ತು ಜೀರ್ಣ ಸಮಸ್ಯೆ. ಬಾಲಾಸನ ಕಾಂತಿಯುತ ಕೂದಲು ಹೊಂದಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ


 ಮತ್ಸ್ಯಾಸನ: ಈ ಆಸನ ಸ್ನಾಯುವಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ದೇಹಕ್ಕೆ ಆರಾಮ ನೀಡುತ್ತದೆ. ಈ ಆಸನ ತಲೆಯ ಕಡೆಗೆ ತಲೆಯ ಕಡೆಗೆ ರಕ್ತ ಪರಿಚಲನೆ ಆಗುವಂತೆ ಮಾಡುವ ಮೂಲಕ ಕೂದಲ ಫಾಲಿಕಲ್ಸ್‌ ದೃಢವಾಗುವಂತೆ ಮಾಡಿ, ಕೂದಲ ಬೆಳವಣಿಯನ್ನು ಉತ್ತೇಜಿಸುತ್ತದೆ.

ಸರಳ ಉಸಿರಾಟದ ಆಸನ: ಉಸಿರಾಟದ ಆಸನ ಮಾಡುವುದರಿಂದ ದೇಹದಲ್ಲಿ  ಆಮ್ಲಜನಕದ ಪರಿಚಲನೆ ಉತ್ತಮಗೊಳಿಸುತ್ತದೆ. ನಿತ್ಯವೂ ಸರಳ ಉಸಿರಾಟದ ಆಸನಗಳನ್ನು ಮಾಡುವುದರಿಂದ ಕೂದಲ ಬೆಳವಣಿಗೆ ಹೆಚ್ಚುತ್ತದೆ ಮತ್ತು ಕೂದಲು ಸದೃಢವಾಗುತ್ತದೆ.
Published by:Anitha E
First published: