Pet Dog: ಸಾಕು ನಾಯಿಯ ತೂಕ ಇಳಿಸಲು ಈ ನಿಯಮಗಳನ್ನು ಪಾಲಿಸಿ..!

Dog Over Weight: ನಾಯಿಗಳು ಅಧಿಕ ತೂಕದ ಸಮಸ್ಯೆಯಿಂದಾಗಿ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತವೆ. ಹೀಗಾಗಬಾರದು ಅಂದರೆ ಅವುಗಳ ಹೆಚ್ಚಿದ ತೂಕವನ್ನು ಇಳಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅತಿಯಾದ ತೂಕದ ಸಮಸ್ಯೆ ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳನ್ನೂ ಕಾಡುತ್ತದೆ. ಅದರಲ್ಲೂ ಮನೆಗಳಲ್ಲಿ ಮುದ್ದಿಗಾಗಿ ಸಾಕುವ ನಾಯಿಗಳಲ್ಲಿ ಅಧಿಕ ತೂಕದ ಸಮಸ್ಯೆ ಕಾಡುತ್ತದೆ. ಅಮೆರಿಕದಲ್ಲಿ ಸುಮಾರು ಶೇ 56ರಷ್ಟು ನಾಯಿಗಳು ಅಧಿಕ ತೂಕ ಹೊಂದಿವೆಯಂತೆ. ಅಮೆರಿಕದಲ್ಲಿ ಅರ್ಧದಷ್ಟು ನಾಯಿಗಳು ಹೆಚ್ಚು ತೂಕದ ಸಮಸ್ಯಯಿಂದ ಬಳಲುತ್ತಿದೆ. ಈ ರೀತಿಯ ಸಮಯದಲ್ಲಿ ನಿಮಗೆ ‘ನನ್ನ ನಾಯಿ ಅಧಿಕ ತೂಕ ಹೊಂದಿರಬಹುವುದೇ?’ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಬರುವುದು ಸಹಜ. ನಿಮ್ಮ ನಾಯಿ ಎಷ್ಟು ತೂಕ ಇರಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. ಆದರೆ ನಾಯಿಯು ಅಧಿಕ ತೂಕವಿರುವುದು ಕೆಟ್ಟದ್ದೇ. ಮಾನವರಂತೆಯೇ ನಾಯಿಗಳಲ್ಲಿನ ಕೊಬ್ಬಿನ ಅಂಶವು ಆರೋಗ್ಯದ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು. ಅಧಿಕ ತೂಕ ಹೊಂದಿರುವ ನಾಯಿಗಳು ಸಾಕಷ್ಟುಸಮಸ್ಯೆಗಳನ್ನು ಎದುರಿಸುತ್ತವೆ.  

ನಾಯಿಗಳು ಅಧಿಕ ತೂಕದ ಸಮಸ್ಯೆಯಿಂದಾಗಿ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತವೆ. ನಾಯಿಗಳ ದೇಹದ ತೂಕ ಹೆಚ್ಚಿದರೆ ಈ ಕೆಳಗಿನ ಸಮಸ್ಯೆಗಳು ಎದುರಾಗುತ್ತವೆ.

dog is disturbed by the memory of the dead owner Waiting for 3 weeks without even taking a sip of water Viral
ಸಂಗ್ರಹ ಚಿತ್ರ


  • ಸಂಧಿವಾತ

  • ಕ್ಯಾನ್ಸರ್

  • ಮಧುಮೇಹ

  • ಹೃದಯರೋಗ

  • ತೀವ್ರ ರಕ್ತದೊತ್ತಡ

  • ರೋಗನಿರೋಧಕ ಸಮಸ್ಯೆಗಳು

  • ಶ್ವಾಸಕೋಶದ ಅಸ್ವಸ್ಥತೆಗಳು


ಈ ಕಾಯಿಲೆಗಳು ನಾಯಿಗೆ ಬಂದರೆ ಕೆಲವೊಮ್ಮೆ ಪರಿಸ್ಥಿತಿ ಮಾರಣಾಂತಿಕವಾಗಬಹುದು. ನಾಯಿಯ ಮಾಲೀಕರಾಗಿ  ಸಾಕು ಪ್ರಾಣಿಗಳು ಯಾವಾಗಲೂ ಆರೋಗ್ಯಕರ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.

ಇದನ್ನೂ ಓದಿ: Happy Birthday Yogesh: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಲೂಸ್ ಮಾದ ಯೋಗಿ..!

ನಿಮ್ಮ ನಾಯಿ ಅಧಿಕ ತೂಕ ಹೊಂದಿದೆ ಎಂದು ಹೇಗೆ ಹೇಳುವುದು..?

ನಿಮ್ಮ ನಾಯಿ ಅಧಿಕ ತೂಕ ಹೊಂದಿದೆಯೆ ಎಂದು ನೀವು ಕಂಡುಹಿಡಿಯಲು ಎರಡು ಮಾರ್ಗಗಳಿವೆ.

ಮೊದಲನೇ ಮಾರ್ಗ: ನಿಮ್ಮ ನಾಯಿಗೆ ಸೂಕ್ತವಾದ ತೂಕ ಏನೆಂದು ಕಂಡುಹಿಡಿಯಲು ಯಾವುದಾದರು ಅಧಿಕೃತ ಕೆನೈನ್​ ಕ್ಲಬ್​ಗಳ ಮೂಲಕ ತಿಳಿದುಕೊಳ್ಳಿ.

ಎರಡನೆಯ ಮಾರ್ಗ: ನಿಮ್ಮ ನಾಯಿಯನ್ನು ಡಾಕ್ಟರ್‌ ಬಳಿ ಕೊಂಡೊಯ್ಯುವುದು ಮತ್ತು ಅವುಗಳನ್ನು ಅಲ್ಲಿ ತೂಕ ಮಾಡಿಸುವುದು. ನಿಮ್ಮ ನಾಯಿ ಅಧಿಕ ತೂಕ ಹೊಂದಿದೆಯೋ ಇಲ್ಲವೋ ಎಂಬುವುದರ ಕುರಿತು ನಿಮ್ಮ ಡಾಕ್ಟರ್‌ ನಿಮಗೆ ಸಲಹೆ ನೀಡುತ್ತಾರೆ. ತೂಕಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ನಿಮಗೆ ಮಾಹಿತಿ ಒದಗಿಸುತ್ತಾರೆ.

ಹೆಚ್ಚಿನ ತೂಕದ ನಾಯಿಗಳಿದ್ದರೆ ನಿಮಗೆ ಇಲ್ಲಿದೆ ಕೆಲವು ಸಲಹೆಗಳು

ನಿಮ್ಮ ನಾಯಿಗೆ ಪ್ರತಿದಿನ ವ್ಯಾಯಾಮ ಮಾಡಿಸಿ: ನಿಮ್ಮ ನಾಯಿ ಅಧಿಕ ತೂಕ ಹೊಂದಿದ್ದರೆ ಹಾಗೂ ವಿಶೇಷವಾಗಿ ಬೊಜ್ಜು ಹೊಂದಿದ್ದರೆ ವ್ಯಾಯಾಮ ಮುಖ್ಯ. ನೀವು ಹೇಗಾದರೂ ನಿಮ್ಮ ನಾಯಿಯನ್ನು ಪ್ರತಿ ದಿನ ಸಂಜೆ ಕೆಲವು ನಿಮಿಷಗಳವರೆಗೆ ಸುತ್ತಾಡಿಸಿ ಇದು ನಿಮ್ಮ ನಾಯಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಆದರೆ ವ್ಯಾಯಾಮದ ಸಮಯದಲ್ಲಿ ಹವಾಮಾನದ ಕಡೆ ಗಮನ ನೀಡಿ. ತುಂಬಾ ಬಿಸಿಯಾಗಿದ್ದರೆ ನಿಮ್ಮ ನಾಯಿಗೆ ಹೀಟ್‌ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ನಾಯಿ ದಿನಕ್ಕೆ ಎರಡು ಬಾರಿ 20 ನಿಮಿಷಗಳ ವ್ಯಾಯಾಮವನ್ನು ಮಾಡಿಸಲು ಡಾಕ್ಟರ್‌ ಶಿಫಾರಸು ಮಾಡಿದ್ದಾರೆ. ಇದು ನಿಮ್ಮ ನಾಯಿಯ ಜೊತೆ ನಿಮಗೂ ಒಳ್ಳೆಯದು. ನಿಮ್ಮ ನಾಯಿಗೆ ಸೂಕ್ತವಾದ ಯಾವುದೇ ರೀತಿಯ ವ್ಯಾಯಾಮದ ಕುರಿತು ನಿಮ್ಮ ಪಶು ವೈದ್ಯರ‌ ಸಹಾಯವನ್ನು ಪಡೆಯಿರಿ.

ಅಧಿಕ ತೂಕದ ನಾಯಿಗಳಿಗೆ ಸರಿಯಾದ ನಾಯಿ ಆಹಾರವನ್ನು ನೀಡಿ: ಎಲ್ಲ ನಾಯಿ ಆಹಾರಗಳು ನಿಮ್ಮ ಪ್ರೀತಿಯ ಸಾಕುಪ್ರಾಣಿಗಳಿಗೆ ಸೂಕ್ತವೆಂದು ನಿಮಗೆ ಅನಿಸಬಹುದು. ಆದರೆ ಮಾನವ ಆಹಾರದಂತೆಯೇ ಕೆಲವು ನಾಯಿ ಆಹಾರವು ಹೆಚ್ಚಿನ ಕ್ಯಾಲರಿಗಳನ್ನು ಹೊಂದಿರುತ್ತವೆ ಹಾಗೂ ನಿಮ್ಮ ನಾಯಿ ಆರೋಗ್ಯವಾಗಿರಲು ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ನಾವು ಸೇವಿಸುವ ಜಂಕ್ ಫುಡ್ ರೀತಿ ಆದರಿಂದ ಸರಿಯಾದ ಆಹಾರವನ್ನು ನಿಮ್ಮ ನಾಯಿಗೆ ನೀಡಲು ನಿಮ್ಮಪಶು ವೈದ್ಯರ ಸಲಹೆ ಪಡೆಯಿರಿ.

ಆಹಾರದ ಪ್ರಮಾಣದ ಕುರಿತು ಯೋಚಿಸಿ: ಮನುಷ್ಯರಂತೆಯೇ ನಾಯಿಗಳು ಅತಿಯಾಗಿ ತಿನ್ನುವ ಸಾಧ್ಯತೆ ಇದೆ. ಅದು ಬ್ರೀಡ್​ಗಳ ಮೇಲೆ ಆಧಾರವಾಗಿತ್ತದೆ. ಆಗಾಗ್ಗೆ ನಿಮ್ಮ ನಾಯಿಗೆ ನೀವು ಹೆಚ್ಚು ಆಹಾರವನ್ನು ನೀಡಿದರೆ ನಾಯಿ ಹೆಚ್ಚು ತಿನ್ನುತ್ತದೆ. ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ಆಹಾರ ನೀಡುವುದು ಅತ್ಯಗತ್ಯ. ನಿಮ್ಮ ಡಾಕ್ಟರ್‌ ಅನ್ನು ಭೇಟಿ ಮಾಡಿ ನಿಮ್ಮ ನಾಯಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಡಾಕ್ಟರ್‌ ಸೂಚಿಸಿದಷ್ಟು ಆಹಾರವನ್ನು ಮಾತ್ರ ನೀಡಿ.

ಊಟವನ್ನು ನೀಡಲು ಬ್ರೇಕಪ್‌ ನಿಯಮವನ್ನು ಪಾಲಿಸಿ: ನಿಮ್ಮ ನಾಯಿಗೆ ದಿನಕ್ಕೆ ಎರಡು ಸಲ ಹೆಚ್ಚಿನ ಪ್ರಮಾಣದಲ್ಲಿ ಊಟ ನೀಡುವ ಬದಲು, ಅದರ ಊಟವನ್ನು ಸಣ್ಣ ಭಾಗಗಳಾಗಿ ಮಾಡಿ ನೀಡಿ. ಪ್ರತಿದಿನ ಮೂರರಿಂದ ಆರು ಊಟ ನೀಡುವುದರಿಂದ ನಿಮ್ಮ ನಾಯಿ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕ್ಯಾಲರಿಗಳನ್ನು ಅಗತ್ಯ ಇರುವ ಕಾರಣ ಇದು ತೂಕ ನಷ್ಟಕ್ಕೆ ಸಹಾಯವಾಗುತ್ತದೆ. ಜತೆಗೆ ಹಸಿವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ನಾಯಿಗೆ ಆರೋಗ್ಯಕರ ಟ್ರೀಟ್‌ಗಳನ್ನು ನೀಡಿ: ಟ್ರೀಟ್‌ಗಳು ಸಾಕಷ್ಟು ಚಿಕ್ಕದಾಗಿರಬಹುದು, ಆದರೆ ಅವುಗಳು ಹೆಚ್ಚು ಕ್ಯಾಲರಿ ಹೊಂದಿರುತ್ತದೆ. ನಿಮ್ಮ ನಾಯಿ ಟ್ರೀಟ್‌ಗಳನ್ನು ಇಷ್ಟಪಡುತ್ತಿದ್ದಾರೆ ನೀವು ಟ್ರೀಟ್‌ ಬದಲು ನಿಮ್ಮ ನಾಯಿಗೆ ಏನು ನೀಡಬೇಕೆಂದು ನೀವು ಕೆಲವು ಪರ್ಯಾಯಗಳನ್ನು ಹುಡುಕಬೇಕಾಗಬಹುದು. ಕಾರ್ಬ್-ಹೆವಿ ಟ್ರೀಟ್‌ಗಳ ಬದಲಾಗಿ ನಿಮ್ಮ ನಾಯಿಗೆ ನೀವು ಕ್ಯಾರೆಟ್‌ನಂತಹ ಸಣ್ಣ ತರಕಾರಿಗಳನ್ನು ಉತ್ತಮ ರೀತಿಯಲ್ಲಿ ನೀಡಲು ದಾರಿಯನ್ನು ಕಂಡುಕೊಳ್ಳಿ. ಇದು ನಿಮ್ಮ ನಾಯಿ ಆರೋಗ್ಯಕ್ಕೆ ಉತ್ತಮ.

ಮಾನವರು ಸೇವಿಸುವ ಆಹಾರವನ್ನು ತಪ್ಪಿಸಿ : ನಿಮ್ಮ ನಾಯಿಗೆ ನೀವು ತಿನ್ನುವ ಆಹಾರವನ್ನು ನೀಡುವುದು ಸಾಕಷ್ಟು ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಮಾನವರು ತಿನ್ನುವ ಆಹಾರವನ್ನು ಹೆಚ್ಚು ನೀಡಬೇಡಿ. ಏಕೆಂದರೆ ಅದು ಹೆಚ್ಚಿನ ಕ್ಯಾಲರಿಗಳನ್ನು ಹೊಂದಿರುತ್ತದೆ. ಇದು ನಿಮ್ಮ ನಾಯಿಗೆ ಒಳ್ಳೆಯದಕ್ಕಿಂತ ಹೆಚ್ಚಿನ ಅಪಯಕಾರಿ ಸಮಸ್ಯೆಯನ್ನು ಉಂಟುಮಾಡುತ್ತದೆ ಹಾಗೂ ಹೆಚ್ಚಿನ ಕ್ಯಾಲೊರಿಗಳನ್ನು ಸಹ ಹೊಂದಿದೆ. ನಿಮ್ಮ ತಟ್ಟೆಯಿಂದ ನಿಮ್ಮ ನಾಯಿಗೆ ಆಹಾರವನ್ನು ನೀಡುವುದನ್ನು ನೀವು ತಪ್ಪಿಸಬೇಕು. ಇದರಿಂದ ನಿಮ್ಮ ನಾಯಿಯ ತೂಕವನ್ನು ಉತ್ತಮ ರೀತಿಯಲ್ಲಿ ನೀವು ಇಳಿಸಬಹುದು.

ಇದನ್ನೂ ಓದಿ: KGF Chapter 2 Release Date: ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್​..!

  • ವೈದ್ಯಕೀಯ ಪರಿಸ್ಥಿತಿಗಳನ್ನು ನಿಯಂತ್ರಿಸಿ


ನಿಮ್ಮ ನಾಯಿಗಾಗಿ ನೀವು ಶಿಫಾರಸು ಮಾಡಿದ ಕ್ಯಾಲೋರಿ ಪ್ರಾಮಾಣವನ್ನು ಮೀರಿದರೆ ಮತ್ತು ನೀವು ಪ್ರತಿದಿನ ನಿಮ್ಮ ನಾಯಿಗೆ ವ್ಯಾಯಾಮ ಮಾಡಿಸುತ್ತಿದ್ದಾರು ನಿಮ್ಮ ನಾಯಿಯಲ್ಲಿ ಯಾವುದೇ ತೂಕ ಇಳಿಕೆಯಾಗದಿದ್ದರೆ , ನೀವು ಕೂಡಲೇ ನಿಮ್ಮ ಡಾಕ್ಟರ್‌ ಅನ್ನು ಭೇಟಿ ಮಾಡಿ. ತೂಕ ಹೆಚ್ಚಾಗಲು ಕಾರಣವಾಗುವ ವೈದ್ಯಕೀಯ ಸ್ಥಿತಿಯ ಕುರಿತು ತಿಳಿದಿಕೊಳ್ಳಿ ಹಾಗೂ ನಿಮ್ಮ ನಾಯಿಯ ತೂಕದ ಕಡೆ ಗಮನವನ್ನು ನೀಡಿ. ಹೈಪೋಥೈರಾಯ್ಡಿಸಮ್ ಅಥವಾ ಕುಶಿಂಗ್ ಸಿಂಡ್ರೋಮ್‌ನಿಂದ ತೂಕ ಹೆಚ್ಚಾಗಬಹುದು.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮುಖ್ಯವಾಗಿದೆ. ಮತ್ತು ಅವರಿಗೆ ಮಾನವರು ಸೇವಿಸುವ ಆಹಾರವನ್ನು ನೀಡುವುದನ್ನು ನಿಲ್ಲಿಸಬೇಕು. ಹಾಗೂ ಮೇಲೆ ನೀಡಿರುವ ಸಲಹೆಗಳನ್ನು ಅನುಸರಿಸಿ ನಿಮ್ಮ ನಾಯಿ ತೂಕದ ಕಡೆ ಗಮನ ನೀಡಿ.


Published by:Anitha E
First published: