Masala Tea: ಆರೋಗ್ಯಕರ ಮಸಾಲೆ ಟೀ ಮಾಡುವ ವಿಧಾನ..!

ಒಂದು ಪರಿಪೂರ್ಣವಾದ ಚಹಾ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಹೋದರೆ ನಮಗೆ ಒಂದೇ, ಎರಡೇ ಅನೇಕ ವಿಧಗಳು ಸಿಗುತ್ತವೆ. ಚಹಾದ ನಿಜವಾದ ರುಚಿ ಯಾವಾಗಲೂ ಅದರಲ್ಲಿ ಸೇರಿಸುವ ಮಸಾಲೆಯಲ್ಲಿದೆ ಎಂದರೆ ತಪ್ಪಾಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಬೆಳಗ್ಗೆ ಮತ್ತು ಸಂಜೆ ಕುಡಿಯುವ ಚಹಾ ಬರೀ ಹಾಲಿನ ಜೊತೆಗೆ ಚಹಾ ಪುಡಿ ಮತ್ತು ಸಕ್ಕರೆಯನ್ನು ಒಳಗೊಂಡಿದ್ದರೆ ನಿಮಗೆ ಅಷ್ಟೊಂದು ಹಿತ ಎನ್ನಿಸುವುದಿಲ್ಲ. ಅದರಲ್ಲೂ ಈ ಮಳೆಗಾಲ ಮತ್ತು ಚಳಿಗಾಲದಲ್ಲಿ ನೀವು ಕುಡಿಯುವ ಚಹಾಗೆ ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಅರೆದುಕೊಂಡು ಹಾಕಿಕೊಂಡರೆ ಅದರ ಮಜಾ  ವರ್ಣಿಸಲು ಸಾಧ್ಯವೇ ಇಲ್ಲ. ಅದನ್ನು ಸವಿದವರಿಗೆ ಗೊತ್ತು ಆ ಮಸಾಲೆ ಚಹಾದ (Masala Tea) ರುಚಿ.ಅದರಲ್ಲೂ ನಮ್ಮ ದೇಶದಲ್ಲಿ ಬಹುತೇಕ ಜನರಿಗೆ ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣವೇ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿದರೆ ಒಂದು ರೀತಿಯ ಸಮಾಧಾನ ಅಂತ ಹೇಳಬಹುದು. ಆದರೆ ನೀವು ಕುಡಿಯುವ ಈ ಚಹಾವನ್ನು ಇನ್ನಷ್ಟು ರುಚಿಕರ ಮತ್ತು ಆರೋಗ್ಯಕರ ಮಾಡಿಕೊಳ್ಳಲು ಮಸಾಲೆ ಚಹಾ ಮಾಡಿಕೊಳ್ಳುವುದು ಉತ್ತಮ ಆಯ್ಕೆ.

ಒಂದು ಪರಿಪೂರ್ಣವಾದ ಚಹಾ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಹೋದರೆ ನಮಗೆ ಒಂದೇ, ಎರಡೇ ಅನೇಕ ವಿಧಗಳು ಸಿಗುತ್ತವೆ. ಚಹಾದ ನಿಜವಾದ ರುಚಿ ಯಾವಾಗಲೂ ಅದರಲ್ಲಿ ಸೇರಿಸುವ ಮಸಾಲೆಯಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಈ ಮಸಾಲೆಗಳ ಮಿಶ್ರಣವು ನಮ್ಮ ಚಹಾವನ್ನು ಇನ್ನಷ್ಟು ಪರಿಮಳ ಭರಿತ ಮತ್ತು ರುಚಿಯನ್ನಾಗಿಸುತ್ತದೆ.

ಸಾಂದರ್ಭಿಕ ಚಿತ್ರ


ನಮ್ಮಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ಚಹಾಗೆ ಹಾಕಿಕೊಳ್ಳಲು ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಪ್ಯಾಕೆಟ್ ಮಸಾಲೆ ಖರೀದಿಸುತ್ತಾರೆ. ಇಲ್ಲಿ ನಾವು ಚಹಾ ಮಸಾಲೆಯನ್ನು ಮನೆಯಲ್ಲಿಯೇ ಹೇಗೆ ತಯಾರು ಮಾಡಿಕೊಳ್ಳಬಹುದು ಎಂದು ತಿಳಿಸಿ ಕೊಡುತ್ತೇವೆ. ಇದರಿಂದ ನೀವು ಕೆಲವೇ ನಿಮಿಷಗಳಲ್ಲಿ ಮಸಾಲೆ ಚಹಾವನ್ನು ತಯಾರಿಸಿಕೊಂಡು ಆನಂದಿಸಬಹುದು.

ಇದನ್ನೂ ಓದಿ: Tea: ನೀವು ಕುಡಿಯುವ ಟೀ ಬಗ್ಗೆ ನಿಮಗೆಷ್ಟು ಗೊತ್ತು..?

ಚಹಾ ಮಸಾಲೆ ಮಿಶ್ರಣ ತಯಾರಿಸಲು ನಿಮಗೆ ಬೇಕಾಗಿರುವುದು ಕೆಲವೇ ಕೆಲವು ಮಸಾಲೆ ಪದಾರ್ಥಗಳಾಗಿದ್ದು, ಅದನ್ನು ನೀವು ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಪಡೆಯಬಹುದು. ಈ ಮಿಶ್ರಣಕ್ಕೆ ಯಾವುದೇ ಅಲಂಕಾರಿಕ ಪದಾರ್ಥಗಳ ಅಗತ್ಯವಿಲ್ಲ ಮತ್ತು ಈ ಪಾಕ ವಿಧಾನದೊಂದಿಗೆ, ನಿಮ್ಮ ಚಹಾದ ರುಚಿ ಹಿಂದೆಗಿಂತಲೂ ವಿಭಿನ್ನವಾಗಿರುತ್ತದೆ.

ಚಹಾದಲ್ಲಿ ಸೇರಿಸಿಕೊಳ್ಳಲು ಮಸಾಲೆ ಮಿಶ್ರಣವನ್ನು ಹೇಗೆ ಮಾಡಿಕೂಳ್ಳುವುದು

ಚಹಾ ಮಸಾಲೆ ಮಿಶ್ರಣ ಮಾಡಿಕೊಳ್ಳಲು ನೀವು ಮೊದಲಿಗೆ ಮಸಾಲೆ ಪದಾರ್ಥಗಳಾದ ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಸೇರಿಸಿಕೊಂಡು ಮಿಕ್ಸರ್‌ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇವುಗಳನ್ನು ಪುಡಿ ಮಾಡಿದ ನಂತರ, ಅದನ್ನು ತಿಂಗಳುಗಳ ಕಾಲ ಜಾಡಿಯಲ್ಲಿ ಸಂಗ್ರಹಿಸಿಡಿ.

ಇದನ್ನೂ ಓದಿ: ಸೊಂಟದ ಕೊಬ್ಬು ಕರಗಿಸಬೇಕಾ?; ಹಾಗಿದ್ರೆ ನಿತ್ಯ ಈ ಟೀ ಕುಡಿದ್ರೆ ಸಾಕು!

ನೀವು ನಿಮ್ಮ ಚಹಾಕ್ಕೆ ಅರ್ಧ ಟೇಬಲ್ ಚಮಚ ಈ ಮಸಾಲೆ ಸೇರಿಸಬಹುದು ಮತ್ತು ಮಸಾಲೆಗಳ ರುಚಿ ನಿಮ್ಮ ಚಹಾದಲ್ಲಿ ಸರಿಯಾಗಿ ಬೆರೆಯಲು ಅದನ್ನು ಕುದಿಯಲು ಬಿಡಬೇಕು. ಈ ಚಹಾ ಮಸಾಲೆಯೊಂದಿಗೆ ನಿಮ್ಮ ಚಹಾಕ್ಕೆ ಒಂದು ಬೇರೆಯೇ ರುಚಿ ಮತ್ತು ಪರಿಮಳ ದೊರೆಯುತ್ತದೆ. ಈ ಮಸಾಲೆ ಮಿಶ್ರಣ ಸೇರಿಸಿಕೊಂಡು ಮಸಾಲೆ ಚಹಾ ಮಾಡಿಕೊಂಡು ನೀವು ಈ ಬಿಸಿ ಬಿಸಿ ಮಸಾಲೆ ಚಹಾದೊಂದಿಗೆ ರುಚಿಕರವಾದ ಕೆಲವು ತಿಂಡಿಗಳೊಂದಿಗೆ ಇದನ್ನು ಆನಂದಿಸಿ.
First published: