Breakfast Recipe: ಉದ್ದಿನ ಬೇಳೆ ಹಾಕದೇ ತುಪ್ಪದ ದೋಸೆ ಮಾಡೋದು ಎಷ್ಟು ಸುಲಭ ನೋಡಿ

ಸಾಮಾನ್ಯವಾಗಿ ದೋಸೆಗೆ ಹುದುಗುವಿಕೆ ಬರಲು ಉದ್ದಿನ ಬೇಳೆಯನ್ನು ಬಳಸುತ್ತಾರೆ. ಆದರೆ ಇಲ್ಲಿ ನಾವು ಹೇಳುತ್ತಿರುವ ದೋಸೆಗೆ ಉದ್ದಿನಬೇಳೆಯ ಅವಶ್ಯಕತೆ ಇಲ್ಲ. ಅದರ ಬದಲು ತುಪ್ಪ ಮತ್ತು ಟೀ ಚಮಚ ಮೆಂತ್ಯ ಬೀಜಗಳನ್ನು ಹಾಕಿ ಈ ರೆಸಿಪಿಯನ್ನು ಅತ್ಯಂತ ರುಚಿಯಾಗಿ ಮಾಡಬಹುದು.

ತುಪ್ಪ ದೋಸೆ

ತುಪ್ಪ ದೋಸೆ

  • Share this:
ನಮ್ಮ ಭಾರತದ ಆಹಾರಗಳಲ್ಲಿ (Indian Food) ಅತ್ಯಂತ ರುಚಿಕರ ಆಹಾರ ತಿನಿಸು ಅಥವಾ ಉಪಹಾರ ಎಂದರೆ ಅದು ದೋಸೆ ಎಂದು ಹೇಳಬಹುದು. ಅದರಲ್ಲೂ ಈ ದೋಸೆಯಲ್ಲಿ (Dosa) ಅನೇಕ ವಿಧಗಳು ಕೂಡ ಇವೆ. ದೋಸೆಗಳಲ್ಲಿ ಮಸಾಲೆ ದೋಸೆ, ಬ್ರೆಡ್‌ ದೋಸೆ, ಜೋಳದ ದೋಸೆ, ಪ್ರೋಟಿನ್‌ ದೋಸೆ (Protein Dosa) ಮಂತಾದ ದೋಸೆಗಳನ್ನು ಕಾಣಬಹುದು. ಈ ದೋಸೆಗೆ ಮುಖ್ಯವಾಗಿ ಬೇಕಾದುದು ಚೆನ್ನಾಗಿ ಹುದುಗುವಿಕೆ ಬರುವುದು. ಹುದುಗುವಿಕೆ ಚೆನ್ನಾಗಿ ಬಂದರೆ ದೋಸೆ ಕೂಡ ಚೆನ್ನಾಗಿ ಬರುತ್ತವೆ. ಸಾಮಾನ್ಯವಾಗಿ ದೋಸೆಗೆ ಹುದುಗುವಿಕೆ ಬರಲು ಉದ್ದಿನ ಬೇಳೆಯನ್ನು ಬಳಸುತ್ತಾರೆ. ಆದರೆ ಇಲ್ಲಿ ನಾವು ಹೇಳುತ್ತಿರುವ ದೋಸೆಗೆ ಉದ್ದಿನಬೇಳೆಯ ಅವಶ್ಯಕತೆ ಇಲ್ಲ. ಅದರ ಬದಲು ತುಪ್ಪ (Ghee) ಮತ್ತು ಟೀ ಚಮಚ ಮೆಂತ್ಯ ಬೀಜಗಳನ್ನು ಹಾಕಿ ಈ ರೆಸಿಪಿಯನ್ನು (Recipe) ಅತ್ಯಂತ ರುಚಿಯಾಗಿ ಮಾಡಬಹುದು.

ಈ ದೋಸೆಯ ಬಗ್ಗೆ ಕೆಲವು ಆಹಾರ ಇತಿಹಾಸಕಾರರ ಪ್ರಕಾರ, ಈ ತುಪ್ಪದ ದೋಸೆಯು ಕರ್ನಾಟಕದ ಉಡುಪಿಯ ಮೂಲದಿಂದ ಬಂದಿದೆ. ಅಲ್ಲಿ ಈ ದೋಸೆಯನ್ನು ಚಾಲುಕ್ಯ ರಾಜ ಸೋಮೇಶ್ವರ III ಸಮಯದಲ್ಲಿ ಬಂದಿರುವುದಾಗಿ ಇತಿಹಾಸಕಾರರೊಬ್ಬರು ಉಲ್ಲೇಖಿಸಿದ್ದಾರೆ. ಅವರು ತಮ್ಮ ಪುಸ್ತಕ ಮಾನಸೋಲ್ಲಾಸದಲ್ಲಿ ದೋಸೆಕಾ ಎಂಬ ಹೆಸರಿನ ಪಾಕವಿಧಾನವನ್ನು ಉಲ್ಲೇಖಿಸಿದ್ದಾರೆ. ಆದರೆ ತಮಿಳುನಾಡು ಈ ದೋಸೆಯು ನಮ್ಮಲ್ಲಿ ಮೊದಲು ಬಂದಿದ್ದು ಎಂದು ವಾದ ಮಾಡುತ್ತಿದೆ. ದೋಸೆಯನ್ನು ತಮಿಳುನಾಡಲ್ಲಿ ದೋಸೈ ಎಂದು ಕರೆಯುತ್ತಾರೆ. ದೋಸೆಯು ತಮಿಳು ಸಂಸ್ಕೃತಿಯ ಭಾಗವಾಗಿದೆ ಎಂದು ಸಂಗಮ್ ಸಾಹಿತ್ಯದಲ್ಲಿ ಬರೆಯಲಾಗಿದೆ. ಇಷ್ಟೊಂದು ಇತಿಹಾಸ ಇರುವ ಈ ತುಪ್ಪದ ದೋಸೆ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹಾಗಿದ್ರೆ ಈ ತುಪ್ಪ ದೋಸೆಯನ್ನು ಮಾಡುವ ಸಂಪೂರ್ಣ ವಿಧಾನವನ್ನು ಇಲ್ಲಿ ತಿಳಿಯೋಣ ಬನ್ನಿ
ತಯಾರಿ ಸಮಯ: ಕನಿಷ್ಠ 8-10 ಗಂಟೆಗಳ ಕಾಲ ಅಕ್ಕಿಯನ್ನು ನೆನೆಸಬೇಕು.
ಅಡುಗೆ ತಯಾರಿಸಲು ಬೇಕಾಗುವ ಸಮಯ: 20-25 ನಿಮಿಷಗಳು

ಬೇಕಾಗುವ ಪದಾರ್ಥಗಳು:

  • 1.5 ಕಪ್ ದೋಸೆ ಅಥವಾ ಇಡ್ಲಿ ಅಕ್ಕಿ

  • 1 ಟೀಸ್ಪೂನ್ - ಮೆಂತ್ಯ / ಮೇಥಿ ಬೀಜಗಳು

  • ಅಕ್ಕಿ ತೊಳೆಯಲು ನೀರು

  • ½ ಕಪ್ - ಅವಲಕ್ಕಿ / ಪೋಹಾ

  • ಕತ್ತರಿಸಿದ 1 ಕಪ್ ಮಾಗಿದ ಬಾಳೆಹಣ್ಣು

  • ½ ಟೀಸ್ಪೂನ್ ಉಪ್ಪು

  • 3-4 ಟೀಸ್ಪೂನ್ - ತುಪ್ಪ


ಇದನ್ನೂ ಓದಿ: Momo ತಯಾರಿಸಲು ಬರೀ ಅರ್ಧ ಗಂಟೆ ಸಾಕು! ನೀವೂ ಟ್ರೈ ಮಾಡಿ ನೋಡಿ

ಮಾಡುವ ವಿಧಾನ:

  • ಒಂದು ಬಟ್ಟಲಿನಲ್ಲಿ, ಮೆಂತ್ಯ ಬೀಜಗಳೊಂದಿಗೆ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ.

  • ನಂತರ ಅಕ್ಕಿಯನ್ನು 8-10 ಗಂಟೆಗಳ ಕಾಲ ನೆನೆಸಿಡಿ.

  • ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿ.

  • ನೆನೆಸಿದ ಅಕ್ಕಿ ಮತ್ತು ಆಗ ತಾನೇ ನೆನೆಸಿ ಇಟ್ಟ ಅವಲಕ್ಕಿಯನ್ನು ಮಿಕ್ಸರ್ ಗ್ರೈಂಡರ್‌ಗೆ ಹಾಕಿ, ½ ಕಪ್ ನೀರು ಸೇರಿಸಿ ಮತ್ತು ನುಣ್ಣಗೆ ರುಬ್ಬಿಕೊಳ್ಳಿ.

  • ದೋಸೆ ಹಿಟ್ಟು ಹದವಾಗಿರಬೇಕು.

  • ನಂತರ ಅಕ್ಕಿ ಹಿಟ್ಟಿಗೆ ಚಕ್ಕೆ ಬಾಳೆಹಣ್ಣನ್ನು ಮಿಕ್ಸರ್‌ಗೆ ಹಾಕಿ ಮತ್ತು ರುಬ್ಬಿಕೊಳ್ಳಿ.

  • ಈ ಎಲ್ಲ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ.

  • ಈ ಎಲ್ಲ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ.

  • ಈ ಹಿಟ್ಟನ್ನು 8-10 ಗಂಟೆಗಳ ಕಾಲ ಹುದುಗಲು ಬಿಡಿ ಮತ್ತು ರಾತ್ರಿಯಿಡೀ ಬಿಟ್ಟರೆ ಇನ್ನು ಉತ್ತಮ.


ಇದನ್ನೂ ಓದಿ:  Non-Veg Recipe: ಕೊಡಗಿನ ಶೈಲಿಯ ರುಚಿಕರ ಸ್ಪೆಷಲ್ ಚಿಕನ್ ಫ್ರೈ, ಓಮ್ಮೆ ಟ್ರೈ ಮಾಡಿ

  • ಬೆಳಿಗ್ಗೆ, 1 ಟೀಸ್ಪೂನ್ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

  • ತವಾವನ್ನು ಪೂರ್ಣ ಉರಿಯಲ್ಲಿ ಬಿಸಿ ಮಾಡಿ ಮತ್ತು ದೋಸೆ ಹಿಟ್ಟು ಹರಡುವಾಗ ಸ್ವಲ್ಪ ಗ್ಯಾಸ್‌ ಫ್ಲೇಮ್‌ ಅನ್ನು ಕಡಿಮೆ ಮಾಡಿ.

  • ದೋಸೆ ಬೆಂದ ನಂತರ ಅದಕ್ಕೆ ಒಂದು ಚಮಚ ತುಪ್ಪವನ್ನು ಸುರಿಯಿರಿ ಮತ್ತು ಮೀಡಿಯಮ್‌ ಉರಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ.

  • ಮತ್ತೆ ಮುಚ್ಚಳ ತೆಗೆದು ಇನ್ನೊಂದು ಚಮಚ ತುಪ್ಪ ಹಾಕಿ.

  • ಈಗ ಸಿದ್ಧವಾಗಿದೆ ನಿಮ್ಮ ತುಪ್ಪ ದೋಸೆ.

  • ತೆಂಗಿನಕಾಯಿ ಚಟ್ನಿ ಮತ್ತು/ಅಥವಾ ವೆಜಿಟೆಬಲ್‌ ಪಲ್ಯದ ಜೊತೆಗೆ ಬಿಸಿ-ಬಿಸಿಯಾಗಿ ಸೇವಿಸಿದರೆ ಆಹಾ ಎಂಥ ರುಚಿ.


ಈ ದೋಸೆಗಳು ಕಾರ್ಬೋಹೈಡ್ರೇಟ್‌ಗಳನ್ನು ಹೆಚ್ಚು ಹೊಂದಿರುತ್ತವೆ. ದೋಸೆಯು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ಅವು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ಉತ್ತಮ ಉಪಹಾರ ಎಂದು ಬೇರೆ ಹೇಳಬೇಕಿಲ್ಲ.
Published by:Ashwini Prabhu
First published: