Protein Rich Breakfast: ಪ್ರೋಟೀನ್ ಭರಿತ ಉಪಹಾರ, ಇಲ್ಲಿದೆ ನೋಡಿ ನುಚ್ಚಿನುಂಡೆ ಮಾಡುವ ವಿಧಾನ

ನೀವು ಬೆಳಗ್ಗಿನ ಉಪಾಹಾರಕ್ಕೆ ಹಗುರವಾದ ಮತ್ತು ಎಣ್ಣೆರಹಿತವಾದ ತಿಂಡಿ ಮಾಡಿಕೊಳ್ಳಲು ಬಯಸಿದರೆ ಈ ಹಬೆಯಲ್ಲಿ ಬೇಯಿಸಿದ ‘ದಾಲ್ ಡಂಪ್ಲಿಂಗ್ಸ್’ ಗಳು ಉತ್ತಮ ಆಯ್ಕೆಯಾಗಿದೆ.

ಸಾಂದರ್ಭಿಕ ಚಿತ್ರ (PC: Nandini)

ಸಾಂದರ್ಭಿಕ ಚಿತ್ರ (PC: Nandini)

  • Share this:
ನಮ್ಮೆಲ್ಲರ ಮನೆಯಲ್ಲಿ ಬೆಳಗ್ಗೆ ಏನು ಉಪಹಾರ (Breakfast) ಮಾಡಬೇಕೆಂದು ತುಂಬಾನೇ ತಲೆ ಕೆಡಿಸಿಕೊಂಡಿರುವುದನ್ನು ನಾವೆಲ್ಲ ನೋಡಬಹುದು. ಆದರೆ ದಕ್ಷಿಣ ಭಾರತದ ಆಹಾರದ ವಿಷಯಕ್ಕೆ ಬಂದಾಗ, ನಮಗೆ ಅನೇಕ ರೀತಿಯ ಉಪಾಹಾರಗಳನ್ನು ತಯಾರಿಸಿಕೊಳ್ಳಬಹುದು.ನಾವು ಹೊಸ ಹೊಸ ಅಡುಗೆಯನ್ನು ಪ್ರಯತ್ನಿಸುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ ಎಂದು ಹೇಳಬಹುದು. ನಿಮಗೆ ಸಿಹಿ, ಮಸಾಲೆಯುಕ್ತ ಅಥವಾ ಎರಡರ ಮಿಶ್ರಣದ ಉಪಾಹಾರ ಬೇಕೆ, ದಕ್ಷಿಣ ಭಾರತದಲ್ಲಿ ಸಾಕಷ್ಟು ರೀತಿಯ ಉಪಾಹಾರಗಳನ್ನು ನಾವು ಮಾಡಿಕೊಳ್ಳಬಹುದು.

ಈ ಪಾಕ ಪದ್ಧತಿಯಲ್ಲಿ ನೀವು ಪ್ರಯತ್ನಿಸಬೇಕಾದ ಅಂತಹ ಒಂದು ಉಪಹಾರವೆಂದರೆ ಪ್ರೋಟೀನ್ ಭರಿತವಾದ ನುಚ್ಚಿನುಂಡೆ ಡಂಪ್ಲಿಂಗ್ಸ್ ಎಂದರೆ ತಪ್ಪಾಗಲಾರದು. ನೀವು ಮೊದಲ ಬಾರಿಗೆ ಈ ಭಕ್ಷ್ಯದ ಬಗ್ಗೆ ಕೇಳುತ್ತಿದ್ದರೆ, ನಮ್ಮನ್ನು ಒಂದು ಬಾರಿ ನಂಬಿ ಏಕೆಂದರೆ ಈ ನುಚ್ಚಿನುಂಡೆಗಳು (Dal Dumplings) ತುಂಬಾನೇ ಆರೋಗ್ಯಕರವಾಗಿರುತ್ತವೆ ಮತ್ತು ಸ್ವಾದಿಷ್ಟವಾಗಿರುತ್ತವೆ.

here is a recipe of high protein and low carb south Indian Dal Dumplings ae
ಸಾಂದರ್ಭಿಕ ಚಿತ್ರ (PC: Nandini)


ದಕ್ಷಿಣ ಭಾರತದಲ್ಲಿ ಈ ಸಾಮಾನ್ಯ ಉಪಾಹಾರ ಪದಾರ್ಥವನ್ನು ಎರಡು ರೀತಿಯ ಬೇಳೆಯೊಂದಿಗೆ ತಯಾರಿಸಲಾಗುತ್ತದೆ ಮತ್ತು ಮಸಾಲೆಗಳೊಂದಿಗೆ ಬೆರೆಸಲಾಗುತ್ತದೆ ಹಾಗೂ ನಂತರ ಅದನ್ನು ಬೇಯಿಸಲಾಗುತ್ತದೆ.

ಇದನ್ನೂ ಓದಿ: ಹಾಸ್ಯದ ಜೊತೆಗೆ ಗಂಭೀರ ವಿಷಯ ಹೊತ್ತು ತಂದ Petromax​: ಟ್ರೇಲರ್​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ

ನಾವು ಪ್ರತಿದಿನ ಈ ಪರೋಟಾ, ಅವಲಕ್ಕಿ, ಬ್ರೆಡ್ ಸ್ಯಾಂಡ್ವಿಚ್, ಇಡ್ಲಿ, ವಡೆ, ದೋಸೆ ಅಥವಾ ಇತರೆ ಉಪಾಹಾರಗಳನ್ನು ತಯಾರಿಸಲು ಬಳಸುವ ಪಾಕ ವಿಧಾನಗಳಿಗಿಂತ ಇದನ್ನು ಮಾಡುವುದು ತುಂಬಾನೇ ಭಿನ್ನವಾಗಿರುತ್ತದೆ. ನೀವು ಬೆಳಗ್ಗಿನ ಉಪಾಹಾರಕ್ಕೆ ಹಗುರವಾದ ಮತ್ತು ಎಣ್ಣೆರಹಿತವಾದ ತಿಂಡಿ ಮಾಡಿಕೊಳ್ಳಲು ಬಯಸಿದರೆ ಈ ಹಬೆಯಲ್ಲಿ ಬೇಯಿಸಿದ ‘ದಾಲ್ ಡಂಪ್ಲಿಂಗ್ಸ್’ ಗಳು ಉತ್ತಮ ಆಯ್ಕೆಯಾಗಿದೆ.

ಅವುಗಳಲ್ಲಿ ಕಾರ್ಬ್ಸ್ ಕಡಿಮೆ ಇರುವುದಲ್ಲದೆ ಪ್ರೋಟೀನ್‌ಗಳು ಹೆಚ್ಚಾಗಿರುವುದರಿಂದ ಎಲ್ಲಾ ವಯಸ್ಸಿನವರಿಗೂ ಆರೋಗ್ಯಕರ ಭಕ್ಷ್ಯವಾಗಿದೆ. ಇವುಗಳನ್ನು ಮಸಾಲೆಯುಕ್ತ ಟೊಮ್ಯಾಟೋ ಚಟ್ನಿಯೊಂದಿಗೆ ನೀವು ಹಚ್ಚಿಕೊಂಡು ಸೇವಿಸಬಹುದು. ಈ ವಿವಿಧ ತರಹದ ಬೇಳೆಯಿಂದ ತಯಾರಿಸಿಕೊಳ್ಳಬಹುದಾದ ಡಂಪ್ಲಿಂಗ್ಸ್ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ ನೋಡಿಕೊಳ್ಳಿ.

ನುಚ್ಚಿನುಂಡೆ ಮಾಡುವ ವಿಧಾನ

ಈ ಡಂಪ್ಲಿಂಗ್ಸ್ ಅನ್ನು ತೊಗರಿ ಬೇಳೆ ಮತ್ತು ಕಡಲೆ ಬೇಳೆಯಿಂದ ತಯಾರಿಸಿಕೊಳ್ಳಬಹುದು. ಮೊದಲಿಗೆ ಈ ಎರಡು ಬೇಳೆಯಲ್ಲಿ ನೀವು ಇಷ್ಟಪಡುವಂತಹ ಬೇಳೆ ತೆಗೆದುಕೊಂಡು ಅವುಗಳನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟುಕೊಳ್ಳಿರಿ.

ಆನಂತರ ಆ ಬೇಳೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ ಮತ್ತು ಬೇಳೆಯು ಒರಟಾಗಿರುವುದನ್ನು ಖಚಿತಪಡಿಸಿಕೊಂಡು ಈ ಮಿಶ್ರಣವನ್ನು ಒಂದು ದೊಡ್ಡ ಬೌಲ್‌ನಲ್ಲಿ ಹಾಕಿ ಮತ್ತು ತೆಂಗಿನ ಕಾಯಿ, ಕರಿಬೇವು, ಕೊತ್ತಂಬರಿ, ಶುಂಠಿ, ಜೀರಿಗೆ, ಮೆಣಸಿನಕಾಯಿ ಮತ್ತು ರುಚಿಗೆ ಅನುಗುಣವಾಗಿ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಇದನ್ನೂ ಓದಿ: Javed Akhtar ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ Kangana Ranaut

ಈಗ ಈ ನುಚ್ಚಿನುಂಡೆಗಳನ್ನು ನಿಮಗೆ ಬೇಕಾದಂತಹ ಆಕಾರ ಮಾಡಿಕೊಂಡು ಮತ್ತು ಅವುಗಳನ್ನು ಸುಮಾರು 20 ನಿಮಿಷಗಳ ಕಾಲ ಸ್ಟೀಮರ್-ಹಬೆಯಲ್ಲಿ ಬೇಯಿಸಿ. ನಂತರ ಅದನ್ನು ನಿಮ್ಮ ತಟ್ಟೆಗೆ ಹಾಕಿಕೊಂಡು ಮಸಾಲೆಯುಕ್ತ ಟೊಮ್ಯಾಟೋ ಚಟ್ನಿಯೊಂದಿಗೆ ಅದನ್ನು ಸೇವಿಸಿರಿ.
Published by:Anitha E
First published: