ಒಬ್ಬರ ಜೀವನದಲ್ಲಿ (Life) ಪ್ರೀತಿ (Love) ಅನ್ನೋದು ಮುಖ್ಯ. ಮನುಷ್ಯ ಎಷ್ಟೇ ಶ್ರೀಮಂತನಾಗಿದ್ದರೂ ಅಲ್ಲಿ ಅವನನ್ನು ಪ್ರೀತಿಸುವ ಜೀವವಿಲ್ಲದಿದ್ದರೆ, ನೋವು-ನಲಿವನ್ನು ಹಂಚಿಕೊಳ್ಳುವ ಹೃದಯವಿಲ್ಲದಿದ್ದರೆ (Heart) ಅವನ/ಅವಳ ಬಾಳು ನಶ್ವರ ಎನ್ನಬಹುದು. ಪ್ರೀತಿ ಒಂದು ಮಾಯೆ ಇದ್ದಂತೆ, ಅದು ಪ್ರತಿಯೊಬ್ಬರ ಬದುಕಿಗೂ ಅಗತ್ಯವಾದ ಸಂಜೀವಿನಿ. ಪ್ರೀತಿ ಅನ್ನೋದು ಒಂದು ಪವಿತ್ರ ಭಾವನೆ (Purest feeling), ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ಅಗತ್ಯತೆಗೆ ತಕ್ಕಂತೆ, ಟೈಂ ಪಾಸ್ಗೆ (Time Pass) , ಅದು ಇದು ಅಂತಾ ಬಳಸಿಕೊಳ್ಳಲಾಗುತ್ತಿದೆ. ವಯಸ್ಸಿನ ಒಂದು ಹಂತದಲ್ಲಿ ಪ್ರತಿಯೊಂದು ಜೀವಿಯೂ ಪ್ರೀತಿಯನ್ನು ಬಯಸುತ್ತದೆ. ಇತರರು ನಮ್ಮನ್ನು ನೋಡಬೇಕು, ಆಕರ್ಷಿತರಾಗಬೇಕು (Attraction) ಹೀಗೆ ಹುಚ್ಚು ಮನಸ್ಸಿನಲ್ಲಿ ಹತ್ತಾರು ಯೋಚನೆಗಳು ಬರುತ್ತವೆ.
ಕೆಲವೊಬ್ಬರಿಗೆ ಯಾರೋ ತುಂಬ ಇಷ್ಟವಾಗಿರುತ್ತಾರೆ. ಅವರಿಲ್ಲದೇ ಬದುಕನ್ನು ಊಹಿಸಿಕೊಳ್ಳುವುದು ಕಷ್ಟವಾಗಿರುತ್ತದೆ. ಆದರೆ ಎದುರಿನ ವ್ಯಕ್ತಿಯಿಂದ ಪ್ರೀತಿಗೆ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿರುವುದಿಲ್ಲ.
ಈ ಸಮಯದಲ್ಲಿ ಆ ವ್ಯಕ್ತಿಯನ್ನು ಆಕರ್ಷಿಸುವುದು ಹೇಗೆ? ಅವರೂ ಸಹ ನಿಮ್ಮನ್ನು ಪ್ರೀತಿ ಮಾಡುವಂತೆ ಮಾಡುವುದು ಹೇಗೆ ಅನ್ನೋದಕ್ಕೆ ಸೈಕಾಲಜಿಯು ಕೆಲ ಸಲಹೆಗಳನ್ನು ನೀಡಿದೆ.
ಕ್ಲಿನಿಕಲ್ ಸೈಕಾಲಜಿಸ್ಟ್ ಬಾಬ್ಬಿ ವೆಗ್ನರ್ ಪ್ರೀತಿಯಲ್ಲಿ ಒಬ್ಬರನ್ನು ಹೇಗೆ ಬೀಳಿಸಿಕೊಳ್ಳುವುದು ಅಂತಾ ಹೇಳಿದ್ದಾರೆ. ಅವರು ಒಬ್ಬರು ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳ ಬಗ್ಗೆ ಆಕರ್ಷಣೆ, ಕಾಮ ಮತ್ತು ಬಾಂಧವ್ಯವನ್ನು ತಮ್ಮದೆ ಆದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ.
ಪ್ರೀತಿ-ಪ್ರೇಮ ಗುರು ಇಲ್ಲದೆ, ಯಾರ ಸಲಹೆಯೂ ಇಲ್ಲದೇ ಕಲಿಯುವ ವಿದ್ಯೆಯಾದರೂ ಕೂಡ ಕೆಲವೊಮ್ಮೆ ತಜ್ಞರು ಹೇಳಿದ ಸಲಹೆಗಳ ಬಗ್ಗೆ ಗಮನಹರಿಸಬೇಕು. ಇದು ನಿಮ್ಮ ದೀರ್ಘಾವಧಿಯ ಲವ್ ರಿಲೇಷನ್ಶಿಪ್ಗೆ ಸಹಕಾರಿಯಾಗಿದೆ.
ಒಬ್ಬರನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡಲು ಸಲಹೆ
1. ಆತ್ಮೀಯತೆಯನ್ನು ಹೆಚ್ಚಿಸಿ
ನಿಮಗೆ ಒಬ್ಬರ ಮೇಲೆ ಪ್ರೀತಿ ಆಗಿದೆ ಆದರೆ ಅವರಿಂದ ನಿಮಗೆ ಯಾವುದೇ ಉತ್ತರ ಬಂದಿಲ್ಲ ಅಥವಾ ಅಂತಹ ಭಾವನೆ ನಿಮ್ಮ ಮೇಲೆ ಇಲ್ಲ ಎಂದು ನಿಮಗನಿಸಿದರೆ ಅವರಿಗೆ ಇನ್ನೂ ಹತ್ತಿರವಾಗಲು ಪ್ರಯತ್ನಿಸಿ.
ಅಂದರೆ ಉತ್ತಮ ಸ್ನೇಹಿತರಾಗಿ ಹೆಚ್ಚಿನ ಆತ್ಮೀಯತೆಯನ್ನು ತೋರಿಸಿ. ಇಬ್ಬರ ಸಂಬಂಧವೂ ಪ್ರೀತಿಯಾಗಿ ಗಟ್ಟಿಗೊಳ್ಳಬೇಕಂದರೆ ಇಬ್ಬರ ಮಧ್ಯೆ ಹೆಚ್ಚಿನ ಆತ್ಮೀಯತೆ ಇರಬೇಕು. ಇದು ನಿಮ್ಮನ್ನು ಅನ್ಯೋನ್ಯವಾಗಿರಿಸುತ್ತದೆ ಕ್ರಮೇಣ ಪ್ರೀತಿ ಕಡೆಗೂ ವಾಲಬಹುದು.
ಮನಶ್ಶಾಸ್ತ್ರಜ್ಞರಾದ ಆರ್ಥರ್ ಅರಾನ್, ಪಿಎಚ್ಡಿ ಮತ್ತು ಎಲೈನ್ ಅರಾನ್, ಅಭಿವೃದ್ಧಿಪಡಿಸಿದ ವರದಿಯಲ್ಲಿ ಈ ಆತ್ಮೀಯತೆ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ಹಲವರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಮತ್ತು ಈ ಕ್ರಿಯೆ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.
2. ಬಾಡಿ ಲಾಂಗ್ವೇಜ್ ಬಳಸಿ.
ಹದಿಹರೆಯದ ಪ್ರೀತಿ ಹೆಚ್ಚಾಗಿ ಆಕರ್ಷಣೆಯಾಗಿರುತ್ತದೆ. ಆ ಆಕರ್ಷಣೆ ಮತ್ತು ಬಯಕೆಯನ್ನು ನೀವು ತೋರಿಸುವ ಒಂದು ಮಾರ್ಗವೆಂದರೆ ದೇಹ ಭಾಷೆ. ಕಣ್ಣು ಸುಳ್ಳು ಹೇಳುವುದಿಲ್ಲ, ಅದು ನಮ್ಮ ಮನಸ್ಸಿನ, ಮುಖದ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುತ್ತದೆ.
ಹೀಗಾಗಿ ಕಣ್ಣಿನ ಮೂಲಕ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿ. ಹಾಗೆಯೇ ಸೂಕ್ಷ್ಮ ಮತ್ತು ನಿಷ್ಕಲ್ಮಶ ಸ್ಪರ್ಶ ಇಬ್ಬರ ನಿಕಟತೆಯ ಭಾವನೆಗಳನ್ನು ಹೆಚ್ಚಿಸಬಹುದು.
ಸೈಕಾಲಜಿ ಕೂಡ ದೇಹ ಭಾಷೆ ಒಬ್ಬರ ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ಆ ವ್ಯಕ್ತಿ ಇವರ ಜೊತೆ ಪ್ರೀತಿಯಲ್ಲಿ ಬೀಳಲು ಸಹಕಾರಿಯಾಗಿದೆ ಎಂದಿದೆ.
3. ನಿಮ್ಮ ಆರಾಮ ವಲಯಗಳನ್ನು ಒಟ್ಟಿಗೆ ಆನಂದಿಸಿ
ಪ್ರೀತಿಯಲ್ಲಿ ಬೀಳುವಾಗ ಇಬ್ಬರೂ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ನೀವು ಪ್ರೀತಿಸುವಂತಹ ವ್ಯಕ್ತಿಯ ಇಷ್ಟಕ್ಕೆ ಇಲ್ಲಾ ಅವರ ಆರಾಮ ವಲಯದ ಜೊತೆ ನೀವು ಸಹ ಸಮಯ ಕಳೆಯಿರಿ. ಇದು ನೀವಿಬ್ಬರೂ ಹೆಚ್ಚು ಆತ್ಮೀಯವಾಗಿರಲು ಮತ್ತು ಪ್ರೀತಿ ಮೂಡಲು ಕಾರಣವಾಗಬಹುದು.
4. ನಿಮ್ಮ ತನವನ್ನು ಕಳೆದುಕೊಳ್ಳಬೇಡಿ
ಪ್ರೀತಿಸುವ ವ್ಯಕ್ತಿಯನ್ನು ಮೆಚ್ಚಿಸುವ ಭರದಲ್ಲಿ ನಿಮ್ಮ ತನವನ್ನು ಕಳೆದುಕೊಳ್ಳಬೇಡಿ. ಯಾವುದೇ ಕಪಟವಿಲ್ಲದೇ ನೀವು ನೀವಾಗಿಯೇ ಇರುವ ಮೂಲಕ ಶುದ್ಧ ಮನಸ್ಸಿನ ಪ್ರೀತಿಯನ್ನು ವ್ಯಕ್ತಪಡಿಸಿ. ಇದು ದೀರ್ಘಾವಧಿಯಲ್ಲಿಯೂ ನಿಮ್ಮ ಸಂಬಂಧ ಉತ್ತಮವಾಗಿರಲು ಮತ್ತು ಆ ವ್ಯಕ್ತಿ ನಿಮ್ಮನ್ನು ಪ್ರೀತಿಸಲು ಕಾರಣವಾಗಬಹುದು.
"ಸಾಮಾನ್ಯವಾಗಿ ಸಂಬಂಧಗಳಲ್ಲಿ, ವಿಶೇಷವಾಗಿ ದೀರ್ಘಕಾಲದ ಸಂಬಂಧಗಳಲ್ಲಿ, ಜನರು ಪರಸ್ಪರ ಆಕರ್ಷಣೆಯನ್ನು ಕಳೆದುಕೊಳ್ಳುತ್ತಾರೆ. ಅವರು ಇನ್ನು ಮುಂದೆ ದೈಹಿಕವಾಗಿ ಆಕರ್ಷಕವಾಗಿಲ್ಲದ ಕಾರಣ ಹೊಸತನವು ಕಳೆದುಹೋಗುತ್ತದೆ," ಎಂದು ವೆಗ್ನರ್ ಅವರು ವಿವರಿಸುತ್ತಾರೆ.
"ಅದಕ್ಕಾಗಿಯೇ ದೀರ್ಘಾವಧಿಯ ಪಾಲುದಾರರು ತಮ್ಮ ಸ್ವಂತ ಹಿತಾಸಕ್ತಿಗಳಿಗೆ ಬದ್ಧರಾಗಿವುದು ಮುಖ್ಯ ಎನ್ನುತ್ತಾರೆ.
5. ಪ್ರೀತಿಸುತ್ತಿರುವವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ
ಪ್ರೀತಿಯಲ್ಲಿ ಒಬ್ಬರ ಮನಸ್ಸನ್ನು, ಆಸೆಗಳನ್ನು, ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ಒಬ್ಬರನ್ನು ನಿಮ್ಮ ಪ್ರೀತಿ ತೆಕ್ಕೆಯಲ್ಲಿ ಬೀಳಿಸಿಕೊಳ್ಳಬೇಕಾದಲ್ಲಿ ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.
ಹಾಗೆಯೇ ಅವರ ಅಗತ್ಯತೆಗಳನ್ನು, ಖಾಸಗಿತನವನ್ನು ಗೌರವಿಸಿ. ಇದು ನಿಮ್ಮ ಎದುರಿನ ವ್ಯಕ್ತಿಗೆ ನಿಮ್ಮ ಮೇಲೆ ನಂಬಿಕೆ ತರಿಸುತ್ತದೆ. ಪ್ರೀತಿಗೆ ಬೇಕಾಗಿದ್ದೇ ನಂಬಿಕೆ, ಹೀಗಾಗಿ ಈ ನಿಮ್ಮ ವ್ಯಕ್ತಿತ್ವ ಅವರಗಿರುವ ನಿಮ್ಮ ಭಾವನೆಯನ್ನು ಪ್ರೀತಿಗೆ ತಿರುಗಿಸಬಹುದು.
6. ಕಾಳಜಿ ಇರಲಿ
ಒಬ್ಬರ ಮೇಲಿನ ಪ್ರೀತಿಯನ್ನು ತೋರಿಸಲು ಪ್ರಮುಖ ದಾರಿ ಎಂದರೆ ಅದು ಕಾಳಜಿ. ಪ್ರೀತಿ ಮತ್ತು ಕಾಳಜಿಯನ್ನು ಪ್ರತಿಬಿಂಬಿಸುವ ಸಣ್ಣ ಕೆಲಸಗಳನ್ನು ನಿಯತಕಾಲಿಕವಾಗಿ ಮಾಡಿದ್ದಲ್ಲಿ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗಬಹುದು.
ಅಥವಾ ನಿಮ್ಮ ಮೇಲೆ ಅವರಿಗೆ ಪ್ರೀತಿ ಇಲ್ಲದಿದ್ದಲ್ಲಿ ನಿಮ್ಮ ಕಾಳಜಿಯ ವ್ಯಕ್ತಿತ್ವ ನಿಮ್ಮ ಮೇಲೆ ಪ್ರೀತಿಯನ್ನು ಹುಟ್ಟುವ ಹಾಗೆ ಮಾಡಬಹುದು. ನಿಮ್ಮನ್ನು ಪ್ರೀತಿಸುವ ವ್ಯಕ್ತಿಗೆ ಅವರು ಕೆಲಸದಲ್ಲಿ ನಿರತವಾಗಿರುವಾಗ ಕಾಫಿ ಕೋಡೋದಾಗಲಿ, ಸಣ್ಣ-ಪುಟ್ಟ ಕೆಲಸದಲ್ಲಿ ಸಹಾಯ ಮಾಡುವುದು ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸುವ ಮಾರ್ಗಗಳಾಗಿವೆ.
ಇದನ್ನೂ ಓದಿ: Love Letter: ವಿದ್ಯಾರ್ಥಿನಿಗೆ ಶಿಕ್ಷಕನೇ ಬರೆದ ಲವ್ ಲೆಟರ್! ಬೇಲಿನೇ ಎದ್ದು ಹೊಲ ಮೇಯುವುದು ಅಂದ್ರೆ ಇದೇನಾ?
7. ತಾಳ್ಮೆಯಿಂದಿರಿ
ಜೀವನದಲ್ಲಿ ಪ್ರತಿ ಒಳ್ಳೆಯದಕ್ಕೂ ತಾಳ್ಮೆಯಿಂದ ಕಾಯಬೇಕು. ಪ್ರೀತಿಯಲ್ಲೂ ಇದು ಸತ್ಯ. ನಿಜವಾದ ಪ್ರೀತಿಯು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ನೀವು ಪ್ರೀತಿಸುವ ವ್ಯಕ್ತಿ ನಿಮ್ಮ ಪ್ರೀತಿಯಲ್ಲಿ ಬೀಳಬೇಕಾದಲ್ಲಿ ನೀವು ತಾಳ್ಮೆಯಿಂದಿರಬೇಕು.
ಇಬ್ಬರೂ ಎಷ್ಟು ಸಮಯ ಒಟ್ಟಿಗೆ ಕಳೆಯುತ್ತೀರಿ, ಎಷ್ಟು ಬೇಗನೆ ನೀವು ಭಾವನಾತ್ಮಕವಾಗಿ ಹತ್ತಿರವಾಗುತ್ತೀರಿ ಹೀಗೆ ಈ ಎಲ್ಲಾ ವಿಷಯಗಳು ಸಹ ನಮ್ಮ ಎದುರಿನ ವ್ಯಕ್ತಿ ನಮ್ಮ ಜೊತೆ ಪ್ರೀತಿಯಲ್ಲಿ ಬೀಳುವಂತೆ ಮಾಡುವ ಮುಖ್ಯ ವಿಷಯಗಳು.
8. ಒತ್ತಾಯ ಮಾಡಬೇಡಿ
ಬಲವಂತದ ಪ್ರೀತಿ ಹೆಚ್ಚು ದಿನ ಇರುವುದಿಲ್ಲ. ಹೀಗಾಗಿ ಪ್ರೀತಿಯನ್ನು ನೀವು ಪಡೆದುಕೊಳ್ಳಲು ನೀವು ಈ ಎಲ್ಲಾ ಕೆಲಸಗಳನ್ನು ಸಹ ಶುದ್ಧ ಮನಸ್ಸಿನಿಂದ ಯಾವುದೇ ನಾಟಕ, ಕಪಟ ಇಲ್ಲದಂತೆ ಮಾಡಿ.
ಆದರೆ ಇದ್ಯಾವುದು ಫಲಿಸದೇ ಇದ್ದಾಗ ಅವರನ್ನು ಪ್ರೀತಿಸುವಂತೆ ಒತ್ತಾಯ ಮಾಡಬೇಡಿ. ವೆಗ್ನರ್, ಪ್ರೀತಿಯು ಸ್ವತಃ ಒಂದು ಶಕ್ತಿ. ಅದು ತಾನಾಗಿಯೇ ಬರಬೇಕು ವಿನಃ ಒತ್ತಾಯದಿಂದ ಅಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ