High Fibre Diet: ಫೈಬರ್‌ಯುಕ್ತ ಆಹಾರ ಎಂದರೇನು? ಮಳೆಗಾಲದಲ್ಲಿ ಈ 7 ಆಹಾರಗಳನ್ನು ಸೇವಿಸಿ

ಫೈಬರ್‌ಯುಕ್ತ ಆಹಾರಗಳು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಫೈಬರ್‌ಯುಕ್ತ ಆಹಾರದ ಸೇವನೆ ತೂಕ ಇಳಿಕೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.

(ಫೋಟೋ: ಗೂಗಲ್)

(ಫೋಟೋ: ಗೂಗಲ್)

  • Share this:

ಫೈಬರ್ ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಆಹಾರ ತಜ್ಞರು ಮತ್ತು ಆರೋಗ್ಯ ತಜ್ಞರು ನಮ್ಮ ಆಹಾರ ಕ್ರಮದಲ್ಲಿ ಫೈಬರನ್ನು ಸೇರಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಫೈಬರ್ ಅಂದರೇನು? ಅದು ಸಸ್ಯ ಆಧಾರಿತ ಆಹಾರದ ಒಂದು ಭಾಗವಾಗಿದ್ದು, ಮಾನವ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕಿಣ್ವಗಳಿಂದ ಸುಲಭವಾಗಿ ವಿಭಜನೆ ಆಗುವುದಿಲ್ಲ. ಅದು ದೇಹದಲ್ಲಿ ಅನಗತ್ಯ ಆಹಾರ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಫೈಬರ್‌ಯುಕ್ತ ಆಹಾರಗಳು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಫೈಬರ್‌ಯುಕ್ತ ಆಹಾರದ ಸೇವನೆ ತೂಕ ಇಳಿಕೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಅದು ಪಾರ್ಶ್ವವಾಯುವಿನ ಅಪಾಯ ಕಡಿಮೆ ಮಾಡುತ್ತದೆ ಹಾಗೂ ರಕ್ತ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.ನೀವು ಕೂಡ ನಿತ್ಯವೂ ಫೈಬರ್ ಸೇವಿಸಬೇಕು ಎಂದಾದಲ್ಲಿ, ನಿಮ್ಮ ಆಹಾರ ಕ್ರಮದಲ್ಲಿ ಈ ಕೆಳಗೆ ತಿಳಿಸಿರುವ 7 ಫೈಬರ್‌ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬಹುದು.


1) ಬಾಳೆ ಹಣ್ಣು


ಬಾಳೆ ಹಣ್ಣಿನಲ್ಲಿ ಅತ್ಯಧಿಕ ಫೈಬರ್ ಇದ್ದು, ಅದು ಮಲಬದ್ಧತೆ ದೂರ ಮಾಡುತ್ತದೆ ಎಂದು ನಂಬಲಾಗಿದೆ. ಬಾಳೆ ಹಣ್ಣು, ಪೊಟ್ಯಾಶಿಯಂ ಮತ್ತು ಕಬ್ಬಿಣಾಂಶ ಕೂಡ ಅಧಿಕ ಪ್ರಮಾಣದಲ್ಲಿ ಹೊಂದಿದೆ. ಬಾಳೆ ಹಣ್ಣನ್ನು ವಿವಿಧ ರೀತಿಯ ತಿನಿಸುಗಳನ್ನು ತಯಾರಿಸುವ ಮೂಲಕ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.


2) ಓಟ್ಸ್


ಓಟ್ಸ್‌ ಅನ್ನು ಫೈಬರ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದು ಎಂದು ಕರೆಯುತ್ತಾರೆ. ಅದನ್ನು ನಮ್ಮ ಆಹಾರ ಕ್ರಮದಲ್ಲಿ ಉಪ್ಪಿಟ್ಟು, ಪಾಯಸ, ದೋಸೆ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬಳಸಬಹುದು.


3) ಬೇಳೆ ಕಾಳುಗಳು


ಬೇಳೆ ಕಾಳುಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಅವು ಅತ್ಯಧಿಕ ಫೈಬರ್‌ನ ಮೂಲವೂ ಹೌದು. ಅವುಗಳಲ್ಲಿ ಇರುವ ಡಯೆಟರಿ ಫೈಬರ್ ಮತ್ತು ಕಾರ್ಬ್‍ಗಳು ದಿನವಿಡೀ ನಿಮ್ಮ ಚೈತನ್ಯದ ಮಟ್ಟವನ್ನು ಹೆಚ್ಚಿಸಿ, ಚಟುವಟಿಕೆಯಿಂದಿರುವಂತೆ ಮಾಡುತ್ತದೆ.


4) ಅಗಸೆ ಬೀಜಗಳು


ಅಗಸೆ ಬೀಜಗಳಲ್ಲಿ ತುಂಬಾ ಪ್ರೋಟೀನ್ ಮತ್ತು ಫೈಬರ್ ಇರುತ್ತದೆ. ಅವು ವಯಸ್ಕರಲ್ಲಿ ಮತ್ತು ಮಧುಮೇಹಿಗಳಲ್ಲಿ ಕರುಳಿನ ಪ್ರಕಿಯೆಗಳನ್ನು ಸುಧಾರಿಸುತ್ತದೆ. ಅಗಸೆ ಬೀಜಗಳನ್ನು ಹಲವಾರು ವಿಧಧ ತಿನಿಸುಗಳಲ್ಲಿ ಬಳಸಬಹುದು.


5) ಸೇಬು ಮತ್ತು ಪಿಯರ್ಸ್‍


ಸೇಬು ಮತ್ತು ಪಿಯರ್ಸ್‍ಗಳನ್ನು ಸಿಪ್ಪೆ ಸಮೇತ ತಿಂದರೆ ಹೆಚ್ಚು ಫೈಬರ್ ಸೇವಿಸಿದಂತಾಗುವುದು. ಏಕೆಂದರೆ ಆ ಹಣ್ಣುಗಳಿಗಿಂತ ಅವುಗಳು ಸಿಪ್ಪೆಯಲ್ಲೇ ಜಾಸ್ತಿ ಫೈಬರ್ ಇರುತ್ತದೆ.


6) ಬ್ರೊಕೋಲಿ


ಬ್ರೊಕೋಲಿಯಲ್ಲಿ ಅತ್ಯಧಿಕ ವಿಟಮಿನ್ ಮತ್ತು ಡಯೆಟರಿ ಫೈಬರ್ ಇರುತ್ತದೆ. ಕೊಂಚ ಎಣ್ಣೆ ಮತ್ತು ಬೆಳ್ಳುಳ್ಳಿ ಹಾಕಿ ಬ್ರೊಕೋಲಿಯನ್ನು ಹದವಾಗಿ ಹುರಿದು/ಬಾಡಿಸಿ ತಿಂದರೂ ರುಚಿಕರ. ಅಥವಾ ಬ್ರೊಕೋಲಿಯಿಂದ ತಯಾರಿಸಿದ ಪರೋಟ ಮತ್ತಿತರ ತಿನಿಸುಗಳನ್ನು ಸೇವಿಸಬಹುದು.


7) ಡ್ರೈ ಫ್ರೂಟ್ಸ್‌


ಬಾದಾಮಿ ಬೀಜದಿಂದ ಹಿಡಿದು ಗೋಡಂಬಿ ಮತ್ತು ವಾಲ್‍ನಟ್ ಬೀಜಗಳವರೆಗೆ ಎಲ್ಲಾ ರೀತಿಯ ಒಣ ಬೀಜಗಳು ಫೈಬರ್‌ನ ಆಗರವಾಗಿದೆ. ಬೆಳಗ್ಗಿನ ಜಾವ ಒಂದು ಬೌಲ್ ಎಲ್ಲಾ ಡ್ರೈ ಫ್ರೂಟ್ಸ್‌ ಸೇವನೆ ನಿಮ್ಮ ಆರೋಗ್ಯಕ್ಕೆ ಲಾಭದಾಯಕ. ಅದನ್ನು ಹಣ್ಣುಗಳೊಂದಿಗೆ ಸೇರಿಸಿ ಸ್ಮೂದಿ ತಯಾರಿಸಿ ಸೇವಿಸಿದರೆ ಇನ್ನಷ್ಟು ರುಚಿಕರವಾಗಿರುತ್ತದೆ.

First published: