ನಾವು ಹೊರಗಡೆ ತಿನ್ನಲೇಬಾರದಾಗಿತ್ತು, ಬಾಯಿ ರುಚಿಗೆ ಅಂತಾ ತಿಂದದ್ದು ಈಗ ಹೊಟ್ಟೆ ನೋವು ಶುರುವಾಗಿದೆ ಎಂದು ಅನೇಕ ಬಾರಿ ನಾವು ಹೇಳುತ್ತಿರುತ್ತೇವೆ. ಯಾಕೋ ಬೆಳಗ್ಗೆಯಿಂದ ನನ್ನ ಹೊಟ್ಟೆ ಸರಿಯಿಲ್ಲ, ತುಂಬಾ ಹೊಟ್ಟೆ ನೋವುತ್ತಿದೆ, ಯಾವುದೇ ಮಾತ್ರೆ ತೆಗೆದುಕೊಂಡರೂ ಹೊಟ್ಟೆ ನೋವು ಕಡಿಮೆಯಾಗುತ್ತಿಲ್ಲ ಎಂದು ತುಂಬಾ ಜನರು ಆಗಾಗ ಹೇಳುತ್ತಿರುವುದನ್ನು ನಾವೆಲ್ಲಾ ಕೇಳಿರುತ್ತೆವೆ.ಹೀಗೆ ಹೊಟ್ಟೆ ನೋವು ಶುರುವಾದರೆ ಕಡಿಮೆ ಆಗುವುದೇ ಇಲ್ಲ. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ.
ಇಂತಹ ಹೊಟ್ಟೆ ನೋವು ಶಮನಗೊಳಿಸಲು ಮತ್ತು ನಮ್ಮ ಜೀರ್ಣಕ್ರಿಯೆಯು ಸುಲಲಿತವಾಗಿ ಕಾರ್ಯ ನಿರ್ವಹಿಸಲು ಮನೆಯಲ್ಲಿಯೇ ಕೆಲವು ಪದಾರ್ಥಗಳು ಲಭ್ಯವಿದ್ದು ಅವುಗಳು ಔಷಧಿಯ ಗುಣ ಹೊಂದಿವೆ. ಮನೆಯಲ್ಲಿಯೇ ಇವುಗಳನ್ನು ಪ್ರತಿದಿನ ಸೇವಿಸುವುದರಿಂದ ನಾವು ಹೊಟ್ಟೆ ನೋವಿನಿಂದ ಪಾರಾಗಬಹುದು ಮತ್ತು ನಮ್ಮ ಜೀರ್ಣಕ್ರಿಯೆ ಚೆನ್ನಾಗಿಟ್ಟುಕೊಳ್ಳಬಹುದಾಗಿದೆ.
![health benefits of ginger tea from weight loss to kidney problem lifestyle]()
ಸಾಂದರ್ಭಿಕ ಚಿತ್ರ
ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಲು ಇಲ್ಲಿವೆ ಮನೆಮದ್ದು
ಶುಂಠಿ ಸೇವಿಸಿ
ನೀವು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ನೀವು ಸಾಮಾನ್ಯವಾಗಿ ವಾಂತಿ ಮಾಡಿಕೊಳ್ಳುತ್ತೀರಿ. ಈ ವಾಂತಿಯನ್ನು ತಡೆದರೆ ನಮ್ಮ ದೇಹವು ಸ್ವಲ್ಪ ಮಟ್ಟಿಗೆ ಹೊಟ್ಟೆ ನೋವಿನಿಂದ ಬಳಲುವುದನ್ನು ಕಡಿಮೆ ಮಾಡಬಹುದಾಗಿದೆ. ವಾಂತಿಗೆ ನೈಸರ್ಗಿಕ ಪರಿಹಾರವೆಂದರೆ ಶುಂಠಿ. "ಶುಂಠಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಒಳ್ಳೆಯದು. ನೀವು ಅದನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು ಮತ್ತು ಪರಿಣಾಮಕಾರಿ ಫಲಿತಾಂಶಗಳಿಗಾಗಿ ದ್ರವವಾಗಿ ಸೇವಿಸಬಹುದು. ಶುಂಠಿಯು ಅತ್ಯುತ್ತಮ ಜೀರ್ಣಕಾರಿ ಗುಣ ಹೊಂದಿದೆ" ಎಂದು ಡಾ. ಅಹುಜಾ ಹೇಳುತ್ತಾರೆ.
ಪುದೀನಾ ಸೇವಿಸಿ
ನೀವು ಇರಿಟೇಬಲ್ ಬೌಲ್ ಸಿನ್ಡ್ರೋಮ್ (ಐಬಿಎಸ್) ನಿಂದಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಕೆಲವೊಮ್ಮೆ ವಾಂತಿ ಜೊತೆಗೆ ಭೇದಿಯು ಸಮಸ್ಯೆಯೂ ಸೇರಿಕೊಂಡಿರುತ್ತದೆ. ಪುದೀನಾವನ್ನು ಯಾವುದೇ ರೂಪದಲ್ಲಿ ಸೇವಿಸಬಹುದಾಗಿದೆ. ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ದೊರೆತು ಹೊಟ್ಟೆ ನೋವು ತ್ವರಿತವಾಗಿ ಕಡಿಮೆಯಾಗಬಹುದಾಗಿದೆ. ಪುದೀನಾದಲ್ಲಿರುವ ಅಂಶವು ಹೊಟ್ಟೆಯೊಳಗಿನ ಜೀರ್ಣಕ್ರಿಯೆ ಸುಲಭಗೊಳಿಸಿ ವಾಂತಿ, ಭೇದಿಗೆ ಕಡಿವಾಣ ಹಾಕುತ್ತದೆ. ಇದರಿಂದ ಹೊಟ್ಟೆ ನೋವು ಬೇಗನೆ ವಾಸಿಯಾಗುತ್ತದೆ.
ಬಾಳೆಹಣ್ಣು ತಿನ್ನಿರಿ
ಬಾಳೆಹಣ್ಣು ತಿನ್ನುವುದರಿಂದ ನಿಮಗೆ ವಾಂತಿ ಮತ್ತು ಭೇದಿಯಿಂದ ಮುಕ್ತಿ ನೀಡಿ ಹೊಟ್ಟೆ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಬಾಳೆಹಣ್ಣು ವಿಶೇಷ ರೀತಿಯ ಫೈಬರ್ ಹೊಂದಿರುತ್ತವೆ. ಇದರಲ್ಲಿ ವಾಂತಿ, ಭೇದಿ ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6, ಪೊಟ್ಯಾಷಿಯಮ್ ಮತ್ತು ಫೋಲೇಟ್ ಸಹ ಇರುತ್ತದೆ. ಈ ಪೋಷಕಾಂಶಗಳು ನೋವು ಮತ್ತು ಸ್ನಾಯು ಸೆಳೆತ ನಿವಾರಿಸಲು ಸಹಾಯ ಮಾಡುತ್ತದೆ.
ಮೊಸರು ಸೇವಿಸಿ
ನಿಮ್ಮ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳ ಅಸಮತೋಲನದಿಂದ ಉಂಟಾಗುತ್ತದೆ. ಪ್ರೋಬಯಾಟಿಕ್ ಅಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳು ಈ ಅಸಮತೋಲನ ಸರಿಪಡಿಸಲು ಸಹಾಯ ಮಾಡುತ್ತದೆ. ಮೊಸರು ತಿನ್ನುವುದರಿಂದ ಹೊಟ್ಟೆಯಲ್ಲಿ ನಿಮ್ಮ ಜೀರ್ಣಕ್ರಿಯೆ ಸುಲಭವಾಗುವುದರಿಂದ ಹೊಟ್ಟೆ ನೋವು ಅಷ್ಟಾಗಿ ಕಾಣಿಸುವುದಿಲ್ಲ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ