Lifestyle: ಅವಳಿ ಶಿಶುಗಳ ಆರೈಕೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು

ಅವಳಿ ಶಿಶುಗಳ ಜೊತೆ ಆರಂಭಿಕ ದಿನಗಳು ನಿಜಕ್ಕೂ ಒತ್ತಡದಾಯಕ. ಆದರೆ ಆ ದಿನಗಳಲ್ಲೇ ಎರಡೂ ಶಿಶುಗಳಿಗೆ ಒಂದೇ ಸಮಯಕ್ಕೆ ಊಟ ಮತ್ತು ನಿದ್ರೆ ಮಾಡುವ ದಿನಚರಿ ರೂಢಿಸಲು ಸಾಧ್ಯವಾದಷ್ಟು ಪ್ರಯತ್ನಪಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವಜಾತ ಶಿಶುಗಳ ಆರೈಕೆ ತುಂಬಾ ಕಷ್ಟಕರ. ಹೆರಿಗೆಯಿಂದ ಚೇತರಿಸಿಕೊಳ್ಳುವುದರ ಜೊತೆಗೆ, ಬಾಣಂತಿಯು ಶಿಶು ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡುವುದರ ಬಗ್ಗೆ ಮತ್ತು ಅದರ ಆರೋಗ್ಯಕರ ಬೆಳವಣಿಗೆಯ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅವಳಿ ಮಕ್ಕಳು ಹುಟ್ಟಿದರಂತೂ ಈ ಜವಾಬ್ಧಾರಿ ಇನ್ನಷ್ಟು ಹೆಚ್ಚಾಗುತ್ತದೆ. ಅವಳಿ ಮಕ್ಕಳನ್ನು ಹೆತ್ತರೆ, ತಾಯಂದಿರು  2 ಮಕ್ಕಳ ವೇಳಾಪಟ್ಟಿಯ ಜೊತೆಗೆ ಒದ್ದಾಡಬೇಕಾಗುತ್ತದೆ. ನವಜಾತ ಶಿಶುವಿನ ಹೆತ್ತವರು , ತಮ್ಮ ಮಕ್ಕಳು ಮಲಗಿದ ಮೇಲಷ್ಟೇ ಕೊಂಚ ನಿದ್ರಿಸಲು ಸಾಧ್ಯವಾಗುತ್ತದೆ. ಅವಳಿ ಮಕ್ಕಳ ಪೋಷಕರ ಕಥೆಯಂತು ಇನ್ನಷ್ಟು ಕಷ್ಟಕರ. ಅವರು ಎರಡೂ ಮಕ್ಕಳ ನಿದ್ರೆ ಮತ್ತು ಊಟದ ವೇಳಾಪಟ್ಟಿಯ ನಡುವೆ ಒದ್ದಾಡಬೇಕಾಗುತ್ತದೆ. ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಅವರು, ತಮ್ಮ ಅವಳಿ ಶಿಶುಗಳ ಆರೈಕೆಗೆ ಕುಟುಂಬದ ಸದಸ್ಯರ ಅಥವಾ ನೆರೆ ಹೊರೆಯವರ ಅಥವಾ ಸ್ನೇಹಿತರ ಸಹಾಯ ಕೇಳಲೇಬೇಕಾಗುತ್ತದೆ.

ನೀವು ಸಕ್ರಿಯರಾಗಿರಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇರುವುದು ಅಗತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಹಾಗಾಗಿ, ಅವಳಿ ಶಿಶುಗಳ ಆರೈಕೆಯ ಕುರಿತು ನೀವು ನಿರ್ದಿಷ್ಟ ಯೋಜನೆಗಳನ್ನು ಹಾಕಿಕೊಂಡು, ಅದನ್ನು ಅನುಸರಿಸುವುದರಿಂದ ಹೆಚ್ಚು ಅನುಕೂಲಗಳನ್ನು ಹೊಂದುವುದು ಸಾಧ್ಯವಿದೆ.

This world mental health day 2021 focus on young minds of children and help them be strong and fight depression do this when they are young say experts
ಪ್ರಾತಿನಿಧಿಕ ಚಿತ್ರ


ವೇಳಾಪಟ್ಟಿಯೊಂದಿಗೆ ಪ್ರಾರಂಭಿಸಿ: ಅವಳಿ ಶಿಶುಗಳ ಜೊತೆ ಆರಂಭಿಕ ದಿನಗಳು ನಿಜಕ್ಕೂ ಒತ್ತಡದಾಯಕ. ಆದರೆ ಆ ದಿನಗಳಲ್ಲೇ ಎರಡೂ ಶಿಶುಗಳಿಗೆ ಒಂದೇ ಸಮಯಕ್ಕೆ ಊಟ ಮತ್ತು ನಿದ್ರೆ ಮಾಡುವ ದಿನಚರಿ ರೂಢಿಸಲು ಸಾಧ್ಯವಾದಷ್ಟು ಪ್ರಯತ್ನಪಡಿ. ಎರಡೂ ಶಿಶುಗಳು ಒಂದೇ ಸಮಯಕ್ಕೆ ನಿದ್ರಿಸಿದರೆ, ನಿಮಗೂ ಕೊಂಚ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ. ಇಲ್ಲವಾದಲ್ಲಿ , ಒಂದೊಂದೇ ಶಿಶುವಿಗೆ ಪ್ರತ್ಯೇಕವಾಗಿ ಊಟ, ನಿದ್ದೆ ಮಾಡಿಸಿದರೆ ನೀವು ಅತ್ಯಧಿಕವಾಗಿ ದಣಿಯುವುದು ಖಚಿತ.

ಪ್ರತಿಯೊಂದನ್ನು ಎರಡೆರಡು ಖರೀದಿಸಬೇಡಿ: ಅವಳಿ ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬರು ಆಗಾಗ್ಗ ಮಾಡುವ ತಪ್ಪೆಂದರೆ ಎಲ್ಲವನ್ನು ಎರಡೆರಡು ಖರೀದಿಸುವುದು. ಅದರೂ, ಪ್ರತೀ ಮಗುವು ವಿಶಿಷ್ಟವಾಗಿರುತ್ತದೆ, ಹಾಗಾಗಿ ಇತರರು ಮಾಡುವ ಎಲ್ಲವನ್ನು ಪ್ರಶಂಸಿಸುವುದು ಸಾಧ್ಯವಿಲ್ಲ. ಆದರೆ, ಕಡಿಮೆ ಖರೀದಿ ಮಾಡುವುದರಿಂದ ದೀರ್ಘಾವಧಿಯಲ್ಲಿ ಹಣ ಉಳಿಸಲು ಸಾಧ್ಯವಾಗುತ್ತದೆ. ಅಷ್ಟು ಮಾತ್ರವಲ್ಲ ನಿಮ್ಮ ಶಿಶು ಎಷ್ಟು ಭಿನ್ನವಾಗಿದ್ದಾರೆ ಎಂದು ಸರಳವಾಗಿ ಗುರುತಿಸಲು ಕೂಡ ಸಾಧ್ಯವಾಗುತ್ತದೆ.

ಇದನ್ನೂ ಓದಿ: COVID-19: ಕೊರೋನಾ ಸೋಂಕಿತ ತಾಯಂದಿರು ಮಕ್ಕಳನ್ನು ಆರೈಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಅವಳಿ ಕ್ಯಾರಿಯರ್​: ಅವಳಿ ಶಿಶುಗಳನ್ನು ಒಂದೇ ಬಾರಿಗೆ ಎತ್ತಿಕೊಳ್ಳುವುದು ನಿಮಗೆ ಕಷ್ಟವಾಗಬಹುದು. ಹಾಗಾಗಿ, ರಾತ್ರಿಯ ವಾಕಿಂಗ್ ಅಥವಾ ಇನ್ನೆಲ್ಲಾದರೂ ಹೊರಗೆ ಹೋಗುವಾಗ ಸಹಾಯವಾಗುವ ಡಬಲ್ ಸ್ಟ್ರೋಲರನ್ನು ಖರೀದಿಸಿ. ಅವಳಿಗಳ ಎಲ್ಲ ವಸ್ತುಗಳನ್ನು ಒಯ್ಯಲು ನೀವು ಡಬಲ್ ಸ್ಟ್ರೋಲರನ್ನು ಬಳಸಿಕೊಳ್ಳಬಹುದು.

ಸಹಾಯ ಕೇಳಿ: ಅವಳಿ ಶಿಶುಗಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟ; ಹಾಗಾಗಿ ಸಹಾಯ ಕೇಳಲು ಹೆದರಬೇಡಿ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರಂತಹ, ನೀವು ನಂಬುವ ಯಾವುದೇ ವ್ಯಕ್ತಿಯ ಸಹಾಯವನ್ನು ನೀವು ಕೇಳಬಹುದು. ನಿಮ್ಮ ಹೆತ್ತವರು ಒಪ್ಪಿದರೆ, ಅವಳಿ ಶಿಶುಗಳು ಹುಟ್ಟಿದ ಆರಂಭದ ಕೆಲವು ತಿಂಗಳು ಅವರನ್ನು ನಿಮ್ಮೊಂದಿಗೆ ಬಂದಿರಲು ಹೇಳಬಹುದು.
First published: