New Year Party: ಹೊಸವರ್ಷವನ್ನು ನೀವು ಹೀಗೂ ಆಚರಿಸಬಹುದು

New Year Celebration: ಮುಂದಿನ ವರ್ಷದಲ್ಲಿ ನೀವು  ಬದಲಾಯಿಸಲು ಅಥವಾ ಪ್ರಾರಂಭಿಸಲು ನೀವು ಎದುರುನೋಡುತ್ತಿರುವ ವಿಷಯಗಳ ಪಟ್ಟಿಯನ್ನು ತಯಾರಿಸಿ. ನಿಮ್ಮ ಪಟ್ಟಿಯನ್ನು ಇತರರೊಂದಿಗೆ ವಿನಿಮಯ ಮಾಡಿಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು 2021ಕ್ಕೆ ವಿದಾಯ ಹೇಳುತ್ತಿದ್ದೇವೆ , ಹೊಸವರ್ಷಕ್ಕಾಗಿ (New Year) ಕಾತರದಿಂದ ಕಾಯುತ್ತಿದ್ದೇವೆ. ಮುಂದಿನ ವರ್ಷಕ್ಕೆ ಹೊಸ ಭರವಸೆ (Hopes) , ನಮ್ಮ ಗುರಿಗಳು ಮತ್ತು ಹೊಸ ಕನಸುಗಳ (New Dreams) ಕಡೆಗೆ ಕೆಲಸ ಮಾಡುವ ಉತ್ಸಾಹ ಹೆಚ್ಚಿರುತ್ತದೆ. ಕರೋನ ವೈರಸ್ (Coronavirus) ಕಾರಣದಿಂದ ಕಳೆದ ಎರಡು ವರ್ಷಗಳು ನಮಗೆ ಕಷ್ಟಕರವಾಗಿದ್ದವು. ಈ ಸಾಂಕ್ರಾಮಿಕ ರೋಗವು ನಮ್ಮ ಪ್ರೀತಿಪಾತ್ರರಿಂದ (Loved Ones) ದೂರವಿರುವಂತೆ ಮಾಡಿದೆ, ವೈರಸ್ (Virus) ನಮ್ಮ ಹತ್ತಿರದ ಮತ್ತು ಆತ್ಮೀಯರನ್ನು ದೂರ ಮಾಡಿದೆ. ನಾವು ಭಯದಲ್ಲಿ ಜೀವನ ಸಾಗಿಸಿದ್ದೇವೆ. ಈ ಕಾರಣದಿಂದ ಆಚರಣೆಗಳು (Celebration) ಮಂದವಾಗಿದೆ.  

ಈಗ ಮತ್ತೊಂದು ವರ್ಷಕ್ಕೆ ವಿದಾಯ ಹೇಳುವ ಸಮಯ ಇದೀಗ ಬಂದಿದೆ, ಅದು ನಾವು ಒಟ್ಟಿಗೆ ಇದ್ದಾಗ, ಯಾವುದೇ ವೈರಸ್​ ನಮ್ಮನ್ನ ಹೆದರಿಸಲು ಸಾಧ್ಯವಿಲ್ಲ. ನಮ್ಮ ಹೃದಯದಲ್ಲಿ ಭರವಸೆ ಇದ್ದಾಗ  ಹಾಗೂ ಮುನ್ನೆಚ್ಚರಿಕೆ ವಹಿಸಿದಾಗ, ನಾವು ಯಾವಾಗಲೂ ವಿಜಯಶಾಲಿಯಾಗಬಹುದು. ಈ ಹೊಸ ವರ್ಷದ ಮುನ್ನಾದಿನವು ವಿಶೇಷವಾಗಿದೆ, ಈ ವರ್ಷ, ನಾವು ನಮ್ಮ ಕುಟುಂಬ, ಸ್ನೇಹಿತರನ್ನು ಭೇಟಿಯಾಗಲು ಉತ್ತಮ ಸಮಯ. ಈ ವರ್ಷ ಹೊಸ ವರ್ಷದ ಹಿಂದಿನ ದಿನ ಹೇಗೆ ಆಚರಿಸಬಹುದು ಎಂಬುದು ಇಲ್ಲಿದೆ.

 ಹೊಸ ವರ್ಷದ ಮುನ್ನಾ ದಿನ ವಿಶೇಷ ಊಟ ಏರ್ಪಡಿಸಿ 

ನಿಮ್ಮ ಪ್ರೀತಿಪಾತ್ರರನ್ನು ಮನೆಗೆ ಆಹ್ವಾನಿಸಿ, ಸ್ನೇಹಿತರು ಕುಟುಂಬದವರನ್ನು ಕರೆದು ಭರ್ಜರಿ ಊಟ ಹಾಕಿ.  ತಮ್ಮ ಉದ್ಯೋಗ ಅಥವಾ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳು ಅಥವಾ ದೇಶಗಳಲ್ಲಿ ಇರುವ ಜನರು ವರ್ಷದ ಅಂತ್ಯ ಮತ್ತು ಮುಂದಿನ ವರ್ಷದ ಆರಂಭವನ್ನು ಒಟ್ಟಿಗೆ ಆಚರಿಸಲು ಮನೆಗೆ ಬರುತ್ತಾರೆ. ನಿಮ್ಮವರೊಂದಿಗೆ ಒಳ್ಳೆಯ ಸಮಯ ಕಳೆಯುವುದು ನಿಮ್ಮ ಎಲ್ಲಾ ಒತ್ತಡಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೀಗೆ ಹೊಸ ವರ್ಷ ಎಂಜಾಯ್ ಮಾಡಿ

ಹೊಸ ವರ್ಷಕ್ಕೆ ತಿಂಡಿ ತಯಾರಿಸಿ 

ಮರುದಿನ ನೀವು ರುಚಿಕರವಾದ ತಿಂಡಿಯನ್ನು ಸಹ ತಯಾರಿಸಬಹುದು. ಮರುದಿನವು ಬೇರೆಯದ್ದೇ ದಿನವಾಗಿರುತ್ತದೆ. ನಿಮ್ಮ ದಿನವನ್ನು ಟೇಸ್ಟೀ ತಿಂಡಿಯೊಂದಿಗೆ ಆರಂಭಿಸುವುದು ಬಹಳ ಉತ್ತಮ. ಕೇಕ್‌ಗಳಿಂದ ಪ್ಯಾನ್‌ಕೇಕ್‌ಗಳಿಂದ ಬನಾನಾ ಬ್ರೆಡ್‌ ಹೀಗೆ ವಿವಿದ ರೀತಿಯ ತಿಂಡಿ ತಯಾರಿಸಬಹುದು.

ರಾತ್ರಿಯಿಡಿ ಫಿಲ್ಮ್ ನೋಡಬಹುದು

ಕೊರೊನಾ ವೈರಸ್ ಇನ್ನು ಕಡಿಮೆಯಾಗಿಲ್ಲ. ಅದರ ಭಯ ಇನ್ನೂ ಹಾಗೆಯೇ ಇದೆ. ಹಾಗಾಗಿ ಮನೆಯಿಂದ ಹೊರ ಹೋಗಲು ಹಲವಾರು ಜನರು ಭಯ ಪಡುತ್ತಾರೆ. ಹಾಗಾಗಿ ನೀವು ಸಹ ಮನೆಯಲ್ಲಿ ಕುಳಿತು ಹೊಸವರ್ಷ ಎಂಜಾಯ್ ಮಾಡಲು ಯೋಚನೆ ಮಾಡ್ತಿದ್ರೆ ಮನೆಲ್ಲಿ ಕುಳಿತು ಟಿವಿ ನೋಡಿ, ನಿಮ್ಮ ಸಂಗಾತಿ ಜೊತೆ ಮೂವಿ ನೈಟ್ ಎಂಜಾಯ್ ಬಿಟ್ಟರೆ ಉತ್ತಮ ಆಯ್ಕೆ ಯಾವುದಿದೆ.

ಮಾಕ್‌ಟೇಲ್ ಮಾಡಿ 

ಮಾಕ್‌ಟೇಲ್‌ಗಳು ಆರೋಗ್ಯಕರ, ಟೇಸ್ಟಿ ಮತ್ತು ಅವುಗಳನ್ನು ತಯಾರಿಸುವುದು ತುಂಬಾ ಖುಷಿಯಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರ ನಡುವೆ ಸ್ಪರ್ಧೆಯನ್ನು ಏರ್ಪಡಿಸಿ, ಮತ್ತು ಯಾರು ಅತ್ಯುತ್ತಮವಾದ ಮಾಕ್ಟೈಲ್ ಅನ್ನು ತಯಾರಿಸುತ್ತಾರೆಯೋ ಅವರಿಗೆ ಉಡುಗೊರೆಯನ್ನು ನೀಡಬಹುದು. ಇದು ನಿಮ್ಮ ಹೊಸವರ್ಷದ ಪಾರ್ಟಿಯನ್ನು ಸಂತೋಷದಾಯವಾಗಿರಿಸುತ್ತದೆ.

ಹೊಸ ವರ್ಷಕ್ಕಾಗಿ ಗುರಿಗಳನ್ನು ನಿಗಧಿ ಮಾಡಿ

ಇದನ್ನೂ ಓದಿ: ಪಾರ್ಟಿ ಹ್ಯಾಂಗೋವರ್​ನಿಂದ ಹೊರ ಬರೋಕೆ ಒದ್ದಾಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಮುಂದಿನ ವರ್ಷದಲ್ಲಿ ನೀವು  ಬದಲಾಯಿಸಲು ಅಥವಾ ಪ್ರಾರಂಭಿಸಲು ನೀವು ಎದುರುನೋಡುತ್ತಿರುವ ವಿಷಯಗಳ ಪಟ್ಟಿಯನ್ನು ತಯಾರಿಸಿ. ನಿಮ್ಮ ಪಟ್ಟಿಯನ್ನು ಇತರರೊಂದಿಗೆ ವಿನಿಮಯ ಮಾಡಿಕೊಳ್ಳಿ.
Published by:Sandhya M
First published: