Dialysis Patients: ಡಯಾಲಿಸಿಸ್ ಮಾಡಿಸುವವರೂ ಸವಿಯಬಹುದಾದ ರುಚಿಕರ ತಿನಿಸುಗಳ ರೆಸಿಪಿ ಇಲ್ಲಿದೆ !

Healthy eating: ಆರೋಗ್ಯದ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲವು ಆಹಾರಗಳಿಂದ ದೂರವಿರಬೇಕು. ತಮ್ಮ ನಾಲಗೆಯನ್ನು ಸಂತೋಷಪಡಿಸುವ ಇತರ ಮಾರ್ಗಗಳಿವೆ. ಬನ್ನಿ ಅದು ಯಾವುದು ಎಂದು ನೋಡೋಣ. ಡಯಾಲಿಸಿಸ್ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾದ ಎರಡು ಸರಳ ಪಾಕವಿಧಾನಗಳನ್ನು ನೆಫ್ರೋಪ್ಲಸ್‌ನ ಮುಖ್ಯ ಪೌಷ್ಟಿಕತಜ್ಞೆ ಅಪೇಕ್ಷಾ ಎಕ್‌ಬೋಟೆ ಹಂಚಿಕೊಂಡಿದ್ದಾರೆ. ಹಂತ ಹಂತದ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಡಯಾಲಿಸಿಸ್

ಡಯಾಲಿಸಿಸ್

  • Share this:

ಡಯಾಲಿಸಿಸ್‌ಗೆ ಒಳಗಾದಾಗ ಜನರ ಆಹಾರಕ್ರಮವು ಬದಲಾಗುತ್ತದೆ. ಹಾಗೂ ಅವರ ನೆಚ್ಚಿನ ಅನೇಕ ಆಹಾರಗಳಿಗೆ ಕತ್ತರಿ ಬೀಳುತ್ತದೆ. ಆಹಾರದಲ್ಲಿ ಕೆಲವು ಮಾರ್ಪಾಡುಗಳಿದ್ದು, ರೋಗಿಯು ತಾವು ಸೇವಿಸುವ ಆಹಾರ ಕುರಿತು ಜಾಗರೂಕರಾಗಿರಬೇಕು. ಆರೋಗ್ಯದ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲವು ಆಹಾರಗಳಿಂದ ದೂರವಿರಬೇಕು. ತಮ್ಮ ನಾಲಗೆಯನ್ನು ಸಂತೋಷಪಡಿಸುವ ಇತರ ಮಾರ್ಗಗಳಿವೆ. ಬನ್ನಿ ಅದು ಯಾವುದು ಎಂದು ನೋಡೋಣ. ಡಯಾಲಿಸಿಸ್ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾದ ಎರಡು ಸರಳ ಪಾಕವಿಧಾನಗಳನ್ನು ನೆಫ್ರೋಪ್ಲಸ್‌ನ ಮುಖ್ಯ ಪೌಷ್ಟಿಕತಜ್ಞೆ ಅಪೇಕ್ಷಾ ಎಕ್‌ಬೋಟೆ ಹಂಚಿಕೊಂಡಿದ್ದಾರೆ. ಹಂತ ಹಂತದ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.


ಪನೀರ್ ಶಶ್ಲಿಕ್: ತರಕಾರಿಗಳೊಂದಿಗೆ ಗ್ರಿಲ್‌ ಮಾಡಿದ ಪನೀರ್‌ ಅನ್ನು ಉಪಾಹಾರ ಅಥವಾ ಮುಖ್ಯ ಕೋರ್ಸ್ ಆಗಿ ತಿನ್ನಬಹುದು.


ಬೇಕಾಗಿರುವ ಪದಾರ್ಥಗಳು:


- ಪನ್ನೀರ್ - 500 ಗ್ರಾಂ


- ಹಸಿರು ಕ್ಯಾಪ್ಸಿಕಂ - 1 (50 ಗ್ರಾಂ)


- ಈರುಳ್ಳಿ - 1 (50 ಗ್ರಾಂ)


- ಟೊಮ್ಯಾಟೋ - 1 (50 ಗ್ರಾಂ)


- ಸಂಸ್ಕರಿಸಿದ ಎಣ್ಣೆ - ಗ್ರೀಸ್ ಮಾಡಲು 3-4 ಟೀಸ್ಪೂನ್


ಮ್ಯಾರಿನೇಡ್‌ಗಾಗಿ


- ಹಂಗ್ ಮೊಸರು - 100 ಗ್ರಾಂ


- ಧನಿಯಾ ಪುಡಿ - 1 ಟೀಸ್ಪೂನ್


- ಮೆಣಸಿನ ಪುಡಿ - 1 ಟೀಸ್ಪೂನ್


- ಗರಂ ಮಸಾಲ ಪುಡಿ - 1 ಟೀಸ್ಪೂನ್


- ನಿಂಬೆ ರಸ - ½ ಟೀಸ್ಪೂನ್


- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್


- ಕಾರ್ನ್‌ಫ್ಲೋರ್ - 1 ಟೀಸ್ಪೂನ್


- ಉಪ್ಪು -¼ ಟೀಸ್ಪೂನ್ ಅಥವಾ ಆಹಾರ ತಜ್ಞರ ಸಲಹೆಯಂತೆ


ಮಾಡುವ ವಿಧಾನ




  • ದೊಡ್ಡ ಗಾಜಿನ ಬಟ್ಟಲಿನಲ್ಲಿ ಮ್ಯಾರಿನೇಡ್‌ ಅನ್ನು ತಯಾರಿಸಿಕೊಳ್ಳಲು ಪಟ್ಟಿ ಮಾಡಲಾದ ಪದಾರ್ಥಗಳನ್ನು ಮಿಶ್ರಣ ಮಾಡಿ. ಇದಕ್ಕೆ ಪನ್ನೀರ್, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಟೊಮ್ಯಾಟೊ ಸೇರಿಸಿ.

  • ತರಕಾರಿಗಳು ಮತ್ತು ಪನ್ನೀರ್ ಅನ್ನು ಮ್ಯಾರಿನೇಡ್‌ನಿಂದ ಚೆನ್ನಾಗಿ ಕೋಟ್‌ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಂತರ ಬೌಲ್ ಅನ್ನು ಅಂಟಿಕೊಳ್ಳುವ ಹೊದಿಕೆಯೊಂದಿಗೆ ಮುಚ್ಚಿ, 1 ಗಂಟೆ ಫ್ರಿಡ್ಜ್‌ನಲ್ಲಿಡಿ.

  • ನಂತರ ಬಿದಿರಿನ ಕೋಲಿಗೆ ಎಣ್ಣೆಯಿಂದ ಗ್ರೀಸ್ ಮಾಡಿ ಮತ್ತು ಪನೀರ್, ಈರುಳ್ಳಿ, ಕ್ಯಾಪ್ಸಿಕಂ ಮತ್ತು ಟೊಮ್ಯಾಟೋವನ್ನು ಪರ್ಯಾಯವಾಗಿ ಶಶ್ಲಿಕ್‌ನಂತೆ ಬಿದಿರಿನ ಕೋಲಿನ ಮೇಲೆ ಜೋಡಿಸಿ.

  • ನೀವು ಓವನ್‌ನಲ್ಲಿ ಬೇಯಿಸುತ್ತಿದ್ದರೆ, ಓವನ್‌ನಲ್ಲಿ 250 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಹೀಟ್‌ ಮಾಡಿ ಮತ್ತು 20-25 ನಿಮಿಷ ಬೇಯಿಸಿ. ನೀವು ಅದನ್ನು ಬಾಣಲೆಯಲ್ಲಿ ಬೇಯಿಸಬಹುದು, ಪ್ಯಾನ್ ಅನ್ನು ಎಣ್ಣೆಯಿಂದ ಲೇಪಿಸಿ ಮತ್ತು ಪ್ರತಿ ಎರಡು ನಿಮಿಷಕ್ಕೆ ಮಧ್ಯಮ ಉರಿಯಲ್ಲಿ ಪನ್ನೀರ್‌ ರೋಲ್‌ಗಳನ್ನು ತಿರುಗಿಸಿ ನಂತರ ಬಿಸಿಯಾದ ಪನ್ನೀರ್‌ ಶಶ್ಲಿಕ್ ಬಡಿಸಿ.


ಪೌಷ್ಠಿಕಾಂಶದ ಮೌಲ್ಯ


ಕ್ಯಾಲೋರಿ - 151.7 ಕಿಲೋ ಕ್ಯಾಲೋರಿ


ಪ್ರೋಟೀನ್ - 7.2 ಗ್ರಾಂ


ಸೋಡಿಯಂ –73.3 ಮಿಗ್ರಾಂ


ಪೊಟ್ಯಾಸಿಯಮ್ –178.2 ಮಿಗ್ರಾಂ


ರಂಜಕ –187.3 ಮಿಗ್ರಾಂ


ರವಾ ಅಪ್ಪಂ:ಉಪಾಹಾರ ಅಥವಾ ಮುಖ್ಯ ಕೋರ್ಸ್ ಆಗಿ ತಿನ್ನಬಹುದು.


ಬೇಕಾಗಿರುವ ಪದಾರ್ಥಗಳು:


- ರವಾ / ಸೆಮೋಲಿನಾ - 1 ಕಪ್


- ಪೋಹಾ / ರೈಸ್ ಫ್ಲೇಕ್ಸ್ - ¾ ಕಪ್


- ಮೊಸರು - ½ ಕಪ್


- ಸಕ್ಕರೆ - 2 ಟೀಸ್ಪೂನ್


- ಉಪ್ಪು - ¼ ಟೀಸ್ಪೂನ್ ಅಥವಾ ಆಹಾರ ತಜ್ಞರ ಸಲಹೆಯಂತೆ


- ಅಡಿಗೆ ಸೋಡಾ - ¼ ಟೀಸ್ಪೂನ್


- ಸಂಸ್ಕರಿಸಿದ ಎಣ್ಣೆ - ಗ್ರೀಸ್ ಮಾಡಲು 1-2 ಟೀಸ್ಪೂನ್


ಮಾಡುವ ವಿಧಾನ




  • ರವಾ ಮತ್ತು ಪೋಹಾವನ್ನು ಮಿಕ್ಸಿಯಲ್ಲಿ ಯಾವುದೇ ನೀರನ್ನು ಸೇರಿಸದೆ ಉತ್ತಮವಾಗಿ ಪುಡಿ ಮಾಡಿ.

  • ನಂತರ ಮೊಸರು, ಸಕ್ಕರೆ, ಉಪ್ಪು ಮತ್ತು ಒಂದು ಕಪ್ ನೀರು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಅಡಿಗೆ ಸೋಡಾ ಸೇರಿಸಿ ಮತ್ತು ಮೃದುವಾದ ಹರಿಯುವ ಸ್ಥಿರತೆಯ ರೀತಿಯ ಮಿಶ್ರಣ ಮಾಡಿಕೊಳ್ಳಿ.

  • ಸ್ವಲ್ಪ ಎಣ್ಣೆಯಿಂದ ಗ್ರೀಸ್ ಮಾಡಿದ ಬಿಸಿ ತವಾದ ಮೇಲೆ ನೀವು ಮೊದಲು ಮಾಡಿಕೊಂಡ ಮಿಶ್ರಣವನ್ನು ಸುರಿಯಿರಿ. ಮೀಡಿಯಂ ಬೆಂಕಿಯಲ್ಲಿ ಬೇಯಿಸಿ. ಈರುಳ್ಳಿ ಚಟ್ನಿಯೊಂದಿಗೆ ಬಿಸಿಯಾದ ಅಪ್ಪಂ ಅನ್ನು ಬಡಿಸಿ.


ಪೌಷ್ಠಿಕಾಂಶದಮೌಲ್ಯ


ಕ್ಯಾಲೋರಿ - 38 ಕಿಲೋ ಕ್ಯಾಲೋರಿ


ಪ್ರೋಟೀನ್ - 4.2 ಗ್ರಾಂ


ಸೋಡಿಯಂ - 107.7 ಮಿಗ್ರಾಂ


ಪೊಟ್ಯಾಸಿಯಮ್ - 107.3 ಮಿಗ್ರಾಂ


ರಂಜಕ –75.9 ಮಿಗ್ರಾಂ

First published: