ಆಲೂಗಡ್ಡೆಯನ್ನು ದೀರ್ಘಕಾಲ ಸಂಗ್ರಹಿಸಿಡಲು ಇಲ್ಲಿವೆ ಒಂದಿಷ್ಟು ಸಲಹೆಗಳು

ಆಲೂಗಡ್ಡೆಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸುವುದು ಹೇಗೆಂದು ನಿಮಗೆ ತಿಳಿದಿದ್ದರೆ, ಕೆಲವು ವಾರಗಳ ವರೆಗೆ ಅಥವಾ ತಿಂಗಳ ವರೆಗೆ ಸಂಗ್ರಹಿಸಿ ಇಡಲು ಸಾಧ್ಯವಾಗುತ್ತದೆ.

ಆಲೂಗಡ್ಡೆ

ಆಲೂಗಡ್ಡೆ

  • Share this:
ಆಲೂಗಡ್ಡೆ ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ಆಲೂಗಡ್ಡೆ ಇಲ್ಲದ ಅಡುಗೆ ಮನೆ ಇರಲಿಕ್ಕಿಲ್ಲ. ಸಸ್ಯಾಹಾರವಿರಲಿ, ಮಾಂಸಹಾರವಿರಲಿ ಎರಡರಲ್ಲೂ ಹೊಂದಿಕೊಳ್ಳುತ್ತದೆ ಆಲೂಗಡ್ಡೆ. ತರಾವರಿ ಖಾದ್ಯಗಳಲ್ಲಿ ಅದನ್ನು ಬಳಸಲಾಗುತ್ತದೆ. ಹುರಿದು ತಿನ್ನಿ... ಕರಿದು ತಿನ್ನಿ... ಆಲೂಗಡ್ಡೆಯ ರುಚಿಗೆ ಸಾಟಿಯಿಲ್ಲ. ಆದರೆ ತುಂಬಾ ದಿನ ಅವುಗಳನ್ನು ಸಂಗ್ರಹಿಸಿಟ್ಟರೆ, ಅವು ಸ್ವಲ್ಪ ಮಟ್ಟಿನ ತಾಜಾತನ ಕಳೆದುಕೊಳ್ಳುತ್ತವೆ ಮತ್ತು ಕ್ರಮೇಣ ಮೊಳಕೆ ಒಡೆಯಲು ಆರಂಭಿಸುತ್ತವೆ.ಹಾಗಾಗಿ ಆಲೂಗಡ್ಡೆಗಳನ್ನು ತುಂಬಾ ದಿನ ಸಂಗ್ರಹಿಸಿಡಲು ನೀವು ಕೆಲವು ಸರಳ ವಿಧಾನಗಳನ್ನು ಅನುಸರಿಸಬೇಕು. ಈ ಕುರಿತು ಶೆಫ್ ಕುನಾಲ್ ಕಪೂರ್ ಅವರು ಕೆಲವು ಸಲಹೆ ಮತ್ತು ಉಪಾಯಗಳನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಆಲೂಗಡ್ಡೆಗಳನ್ನು ಇತರ ಹಣ್ಣು ಮತ್ತು ತರಕಾರಿಗಳಿಗಿಂತ ಹೆಚ್ಚು ದಿನ ಸಂಗ್ರಹಿಸಿ ಇಡಲು ಸಾಧ್ಯವಿದೆ ಎಂಬುವುದು ನಿಮಗೆ ಗೊತ್ತೇ? ಆದರೆ ಕ್ರಮೇಣ ಅವುಗಳಲ್ಲಿ ಹಸಿರು ಚಿಗುರುಗಳು ಕಾಣಿಸಿಕೊಳ್ಳ ತೊಡಗುತ್ತವೆ ಮತ್ತು ಅವು ತಾಜಾತನ ಹಾಗೂ ಪರಿಮಳವನ್ನು ಕಳೆದುಕೊಳ್ಳುತ್ತದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸುವುದು ಹೇಗೆಂದು ನಿಮಗೆ ತಿಳಿದಿದ್ದರೆ, ಕೆಲವು ವಾರಗಳ ವರೆಗೆ ಅಥವಾ ತಿಂಗಳ ವರೆಗೆ ಸಂಗ್ರಹಿಸಿ ಇಡಲು ಸಾಧ್ಯವಿದೆ ಎಂದು ಕುನಾಲ್ ಕಪೂರ್ ಅವರು ಬರೆದಿದ್ದಾರೆ.

ಶೆಫ್ ನೀಡಿದ ಸಲಹೆಗಳು ಈ ಕೆಳಗಿನಂತಿವೆ:

ಆಲೂಗಡ್ಡೆಗಳನ್ನು ತಂಪಾದ ಮತ್ತು ಚೆನ್ನಾಗಿ ಗಾಳಿಯಾಡುವ ಪ್ರದೇಶದಲ್ಲಿ ಇಡಿ.

ರೆಫ್ರಿಜಿರೇಟರ್‌ನ ತಾಪಮಾನವು ಆಲೂಗಡ್ಡೆಯ ಪಿಷ್ಠವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಅದರ ಪರಿಣಾಮವಾಗಿ ಬೇಯಿಸಿದಾಗ ಅದರ ರುಚಿ ಸಿಹಿಯಾಗುತ್ತದೆ ಮತ್ತು ಅದು ಬಣ್ಣವನ್ನು ಕಳೆದುಕೊಳ್ಳುತ್ತದೆ.

ಇದನ್ನೂ ಓದಿ: ಹೊಸ ದಾಖಲೆಯತ್ತ ಕೆಜಿಎಫ್​ ಚಾಪ್ಟರ್​ 2: ಪ್ರಶಾಂತ್​ ನೀಲ್​ ಕೊಟ್ರು ಸಿಹಿ ಸುದ್ದಿ

ಅಧಿಕ ಉಷ್ಣಾಂಶ ಮತ್ತು ಹೆಚ್ಚು ಸೂರ್ಯ ಬೆಳಕು ಬೀಳುವ ಜಾಗದಲ್ಲಿ ಆಲೂಗಡ್ಡೆಯನ್ನು ಇಡಬೇಡಿ. ಯಾವಾಗಲೂ ತಂಪಾದ ಮತ್ತು ಬೆಳಕಿಲ್ಲದ ಜಾಗದಲ್ಲಿ ಅವುಗಳನ್ನು ಇಡಬೇಕು.

ರಂಧ್ರವುಳ್ಳ ಪ್ಲಾಸ್ಟಿಕ್ ಚೀಲಗಳು ಮತ್ತು ಕಾಗದದ ಚೀಲಗಳಲ್ಲಿ ಇಟ್ಟರೆ, ಅವುಗಳು ದೀರ್ಘ ಕಾಲ ಸಂಗ್ರಹಿಸಿ ಇಡಬಹುದು.

ಇದನ್ನೂ ಓದಿ: Bigg Boss Kannada Season 8: ಬಿಗ್ ಬಾಸ್​ ಮನೆಯಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪ್ರಶಾಂತ್ ಸಂಬರಗಿ..!

ಆಲೂಗಡ್ಡೆಗಳನ್ನು ಸಂಗ್ರಹಿಸಿ ಇಡುವ ಮೊದಲು ತೊಳೆಯಬೇಡಿ. ತೇವಾಂಶ ಇದ್ದರೆ ಅವು ಬೇಗ ಹಾಳಾಗುತ್ತವೆ.

ಆಲೂಗಡ್ಡೆಯ ಮೇಲೆ ಸೊಲನೈನ್ ಎಂಬ ರಾಸಾಯನಿಕದ ಕಾರಣದಿಂದ ಹಸಿರು ಬಣ್ಣ ಕಾಣಿಸಿಕೊಳ್ಳುತ್ತದೆ. ಆಲೂಗಡ್ಡೆಯನ್ನು ಹೆಚ್ಚು ಬೆಳಕಿಗೆ ತೆರೆದಿಟ್ಟಾಗ ಉಂಟಾಗುವ ಸಹಜ ಪ್ರಕ್ರಿಯೆ ಅದು.

ಸೊಲನೈನ್ ಒಂದು ಕಹಿ ರುಚಿಯನ್ನು ಉತ್ಪಾದಿಸುತ್ತದೆ. ಅದನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅನಾರೋಗ್ಯ ಉಂಟಾಗಬಹುದು.

ಆಲೂಗಡ್ಡೆಯ ಸ್ವಲ್ಪ ಭಾಗ ಮಾತ್ರ ಹಸಿರಾಗಿದ್ದರೆ, ಅಡುಗೆಗೆ ಬಳಸುವ ಮೊದಲು ಆ ಭಾಗವನ್ನು ಮಾತ್ರ ಕತ್ತರಿಸಿ ಎಸೆಯಿರಿ , ಉಳಿದದ್ದನ್ನು ಮಾತ್ರ ಬಳಸಿ.

ಇದನ್ನೂ ಓದಿ: Ajay Devgn: ಪೆಪ್ಪರ್​ ಆ್ಯಂಡ್ ಸಾಲ್ಟ್​ ಲುಕ್​ನಲ್ಲಿ ಅಜಯ್ ದೇವಗನ್​: ರಿವೀಲ್​ ಆಯ್ತು ಮೊದಲ ವೆಬ್ ಸರಣಿ ಲುಕ್​..!

ಮೊಳಕೆಗಳು , ಆಲೂಗಡ್ಡೆ ಬೆಳೆಯುತ್ತಿರುವುದರ ಸಂಕೇತ. ತಂಪಾದ, ಬೆಳಕಿಲ್ಲದ, ಒಣ ಸ್ಥಳದಲ್ಲಿ ಅವುಗಳನ್ನು ಇಟ್ಟರೆ ಬೇಗ ಮೊಳಕೆ ಬರುವುದಿಲ್ಲ.

ಆಲೂಗಡ್ಡೆಯನ್ನು ಬಳಸುವ ಮುನ್ನ ಮೊಳಕೆಗಳನ್ನು ಕತ್ತರಿಸಿ ತೆಗೆದು, ಬಳಿಕ ಬೇಯಿಸಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.


Published by:Anitha E
First published: