ಡೆಂಘಿಗೆ ಕಾರಣವಾಗಬಹುದಾದ ಸೊಳ್ಳೆಯನ್ನು ತಡೆಗಟ್ಟಲು ಇಲ್ಲಿದೆ ಸುಲಭ ಉಪಾಯ

ಸೊಳ್ಳೆಗಳ ಕಾಟ ನಿಯಂತ್ರಿಸಲು ಎಲೆಕ್ಟ್ರಿಕ್ ರಾಕೆಟ್, ಮೊಸ್​ಕಿಟೊ ಕಾಯಿಲ್​ಗಳು ಲಭ್ಯವಿದೆ. ಆದರೂ ಕೆಲವೊಮ್ಮೆ ಈ ಸಣ್ಣ ಜೀವಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

Rajesh Duggumane | news18
Updated:August 15, 2019, 1:24 PM IST
ಡೆಂಘಿಗೆ ಕಾರಣವಾಗಬಹುದಾದ ಸೊಳ್ಳೆಯನ್ನು ತಡೆಗಟ್ಟಲು ಇಲ್ಲಿದೆ ಸುಲಭ ಉಪಾಯ
ಸೊಳ್ಳೆಗಳ ಕಾಟ ನಿಯಂತ್ರಿಸಲು ಎಲೆಕ್ಟ್ರಿಕ್ ರಾಕೆಟ್, ಮೊಸ್​ಕಿಟೊ ಕಾಯಿಲ್​ಗಳು ಲಭ್ಯವಿದೆ. ಆದರೂ ಕೆಲವೊಮ್ಮೆ ಈ ಸಣ್ಣ ಜೀವಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
Rajesh Duggumane | news18
Updated: August 15, 2019, 1:24 PM IST
ಡೆಂಘಿ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಸಮಸ್ಯೆಗೆ ಮೂಲ ಕಾರಣ ಬಿಳಿ ಸೊಳ್ಳೆ ಮೂಲ ಕಾರಣ. ಬದಲಾಗುವ ಹವಾಮಾನಕ್ಕೆ ತಕ್ಕಂತೆ ಸೊಳ್ಳೆಗಳೂ ಕಾಣಿಸಿಕೊಳ್ಳುತ್ತದೆ. ಇವುಗಳಿಂದ ಪಾರಾಗಲು ನಮ್ಮ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗುತ್ತದೆ. ಮುಖ್ಯವಾಗಿ ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅದೇ ರೀತಿ ಅನುಪಯುಕ್ತ ತೊಟ್ಟಿ, ಡ್ರಮ್​ ಸೇರಿದಂತೆ ನೀರು ನಿಲ್ಲುವ ಸ್ಥಳಗಳ ಬಗ್ಗೆ ಎಚ್ಚರವಹಿಸಬೇಕಾಗುತ್ತದೆ.

ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ಕಾಣಿಸಿಕೊಳ್ಳುವ ಸೊಳ್ಳೆಗಳ ಕಾಟ ನಿಯಂತ್ರಿಸಲು ಎಲೆಕ್ಟ್ರಿಕ್ ರಾಕೆಟ್, ಮೊಸ್​ಕಿಟೊ ಕಾಯಿಲ್​ಗಳು ಲಭ್ಯವಿದೆ. ಆದರೂ ಕೆಲವೊಮ್ಮೆ ಈ ಸಣ್ಣ ಜೀವಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಭಾರತದಂತಹ ದೇಶದಲ್ಲಿ ಹಿಂದೆಯಿಂದಲೂ ಸೊಳ್ಳೆಗಳ ನಿಯಂತ್ರಣಕ್ಕೆ ಕೆಲ ಮನೆ ಪರಿಹಾರಗಳು ಚಾಲ್ತಿಯಲ್ಲಿದೆ. ಯಾವುದೇ ಸೈಡ್ ಎಫೆಕ್ಟ್​ ಇರದ ನಿಯಂತ್ರಣ ಕ್ರಮಗಳನ್ನು ಬಳಸಿಕೊಳ್ಳುವ ಮೂಲಕ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು. ಅಂತಹ ಕೆಲ ಪರಿಹಾರಗಳ ಪಟ್ಟಿ ಇಲ್ಲಿದೆ.

*  ನಿಮ್ಮ ಕೊಠಡಿಯಲ್ಲಿರುವ ಸೊಳ್ಳೆಗಳನ್ನು ಓಡಿಸಲು ಮಾಡಬೇಕಾಗಿದ್ದು ಇಷ್ಟೇ. ಸಾಮಾನ್ಯವಾಗಿ ಸಿಗುವ ಕರ್ಪೂರವನ್ನು ಹತ್ತಿ ಬಟ್ಟೆಯಲ್ಲಿರಿಸಿ ಕೊಠಡಿಯನ್ನು ಬಂದ್ ಮಾಡಿ. ಹೀಗೆ ಮಾಡುವುದರಿಂದ ಸೊಳ್ಳೆಗಳು ರೂಮ್​ನಿಂದ ಹೊರ ಹೋಗುತ್ತದೆ.

* ಸೊಳ್ಳೆ ಕಾಟದಿಂದ ನಿದ್ರಿಸಲು ಸಾಧ್ಯವಾಗುತ್ತಿದ್ದರೆ, ನಿಮ್ಮ ದೇಹದ ಮೇಲೆ ಬೆಳ್ಳುಳ್ಳಿ ರಸವನ್ನು ಅನ್ವಯಿಸಿ. ಇದರಿಂದ ಸೊಳ್ಳೆಗಳು ನಿಮ್ಮ ಬಳಿ ಬರುವುದಿಲ್ಲ. ಹಾಗೆಯೇ ಬೆಳ್ಳುಳ್ಳಿ ರಸದ ಸ್ಪ್ರೇಯನ್ನು ಸಿಂಪಡಿಸಿ. ಇದರ ಪರಿಮಳಕ್ಕೆ ಸೊಳ್ಳೆಗಳು ನಿಲ್ಲುವುದಿಲ್ಲ.

*  ಲ್ಯಾವೆಂಡರ್​ ಸುಗಂಧದಿಂದ ಸಹ ಸೊಳ್ಳೆಗಳು ದೂರವಿರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಲ್ಯಾವೆಂಡರ್​ ಪರಿಮಳ ಹೊಂದಿರುವ ಅನೇಕ ರೂಮ್ ಫ್ರೆಶ್​ನರ್ ಲಭ್ಯವಿದ್ದು, ಇದನ್ನು ನಿಮ್ಮ ಮನೆಯೊಳಗೆ ಸಿಂಪಡಿಸುವುದರಿಂದ ಕೂಡ ಸೊಳ್ಳೆಗಳನ್ನು ನಿಯಂತ್ರಿಸಬಹುದು.

*  ಸೊಳ್ಳೆಗಳನ್ನು ಮನೆಯಿಂದ ಹೊರ ಓಡಿಸಲು ಕರ್ಪೂರ ಬಹಳ ಪರಿಣಾಕಾರಿ. ಇದಕ್ಕಾಗಿ ನೀವು ಮನೆಯೊಳಗೆ ಅಥವಾ ಕೊಠಡಿಯಲ್ಲಿ ಕರ್ಪೂರ್ ಹಚ್ಚಿ 10 ನಿಮಿಷಗಳ ಕಾಲ ಬಾಗಿಲನ್ನು ಬಂದ್ ಮಾಡಿ. ಇದರಿಂದ ಸೊಳ್ಳೆಗಳು  ಹೊರ ಹೋಗುತ್ತದೆ.

ಸಾಸಿವೆ ಎಣ್ಣೆ ಮತ್ತು ಅಜ್ವೈನ್ ಪುಡಿಯನ್ನು ಬಳಸಿ ಸಹ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಇದಕ್ಕಾಗಿ ನೀವು ಸಾಸಿವೆ ಎಣ್ಣೆಯಲ್ಲಿ ಅಜ್ವೈನ್ ಪುಡಿಯನ್ನು ಮಿಶ್ರಣ ಮಾಡಿ ಕೋಣೆಯ ಮೂಲೆಯಲ್ಲಿರಿಸಿ. ಹೀಗೆ ಮಾಡುವುದರಿಂದ ಮನೆಯೊಳಗೆ ಸೊಳ್ಳೆಗಳು ಕಾಣಿಸಿಕೊಳ್ಳುವುದಿಲ್ಲ.
Loading...

First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...