Benefits Of Banana Leaves: ಬಾಳೆಎಲೆಯಲ್ಲಿ ಆಹಾರ ಸೇವನೆ ಮಾಡುವುದು ಎಷ್ಟು ಪ್ರಯೋಜಕಾರಿ ಗೊತ್ತಾ?

Health Tips: ಬಾಳೆ ಎಲೆಗಳ ಮೇಲೆ ಆಹಾರ ಸೇವನೆ ಮಾಡುವ  ಈ ಸಂಪ್ರದಾಯವು ಸಾವಿರಾರು ವರ್ಷಗಳಿಂದಲೂ ಇದೆ ಮತ್ತು ಇದು ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಸಾಮಾನ್ಯವಾಗಿ ಗಮನಿಸಿ ನಮ್ಮ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಅಭ್ಯಾಸವಿದೆ. ಆದರೆ ಉತ್ತರ ಭಾರತದಲ್ಲಿ ಈ ಪದ್ಧತಿ ಇಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಬಾಳೆ ಎಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಭಾರತೀಯ ಪದ್ದತಿ ಬಗ್ಗೆ ಅರಿವು ಇರುವ ವಿದೇಶಿಗರು ಸಹ ದಕ್ಷಿಣ ಭಾರತಕ್ಕೆ ಬಂದಾಗ ಬಾಳೆ ಎಲೆಯ ಮೆಲೆ ಊಟ ಮಾಡಲು ಇಷ್ಟಪಡುತ್ತಾರೆ. ಈ ಬಾಳೆ ಎಲೆ ದಕ್ಷಿಣ ಭಾರತೀಯರ ಆಹಾರ ಪದ್ಧತಿಯಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಹಬ್ಬ ಮತ್ತು ಉಳಿದ ಆಚರಣೆಯ ಸಮಯದಲ್ಲಿ ಕೂಡ ಬಾಳೆ ಎಲೆಯ ಮೇಲೆ ಊಟ ಮಾಡುವುದು ಸಾಮಾನ್ಯ. ಕೇವಲ ಮನೆಗಳಲ್ಲಿ ಮಾತ್ರವಲ್ಲದೇ, ನೀವು ಯಾವುದೇ ಕೆಲವೊಂದು ಹೋಟೆಲ್​ಗಳಲ್ಲಿ ಬಾಳೆ ಎಲೆಯ ಊಟ ಲಭ್ಯವಿರುತ್ತದೆ.   

ಬಾಳೆ ಎಲೆಗಳ ಮೇಲೆ ಆಹಾರ ಸೇವನೆ ಮಾಡುವ  ಈ ಸಂಪ್ರದಾಯವು ಸಾವಿರಾರು ವರ್ಷಗಳಿಂದಲೂ ಇದೆ ಮತ್ತು ಇದು ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಬಾಳೆ ಎಲೆಗಳಲ್ಲಿ ಎಲ್ಲಾ ರೀತಿಯ ಆಹಾರವನ್ನು ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ, ಬಾಳೆಹಣ್ಣು ಹಲವಾರು ಸಸ್ಯ ಆಧಾರಿತ ಸಂಯುಕ್ತಗಳನ್ನು ಹೊಂದಿದೆ. ಬಾಳೆ ಎಲೆಗಳಲ್ಲಿ ಇರುವ ಪದಾರ್ಥಗಳನ್ನು ಪಾಲಿಫಿನಾಲ್‌ಗಳು ಅಥವಾ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅಥವಾ ಇಜಿಸಿಜಿ ಎಂದು ಕರೆಯಲಾಗುತ್ತದೆ, ಈ ವಸ್ತು ನಿಮಗೆ ಗ್ರೀನ್ ಟೀ ಯಲ್ಲಿ ಕೂಡ ಲಭ್ಯವಿರುತ್ತದೆ.  ಇದು ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದರಿಂದ  ಸ್ವತಂತ್ರ ರಾಡಿಕಲ್ಗಳು ಇದರಿಂದ ಕಡಿಮೆಯಾಗುತ್ತವೆ ಮತ್ತು ಪದೇ ಪದೇ ಎದುರಾಗುವ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

ಇದನ್ನೂ ಓದಿ: ನೀವು ತಿನ್ನುವ ಹಸಿರು ತರಕಾರಿ ರಾಸಾಯನಿಕ ಮುಕ್ತ ಎಂಬುದರ ಪತ್ತೆಗೆ ಈ ಸರಳ ವಿಧಾನ ಅನುಸರಿಸಿ

ಬಾಳೆ ಎಲೆಗಳ ಮೇಲೆ ಆಹಾರವನ್ನು ಹಾಕಿಕೊಂಡು ಸೇವನೆ ಮಾಡುವುದು ಅದರಲ್ಲಿರುವ ಪೌಷ್ಟಿಕಾಂಶ ನಮ್ಮ ದೇಹಕ್ಕೆ ಸೇರಲು ಸಹಾಯವಾಗುತ್ತದೆ. ಬ್ಯಾಕ್ಟೀರಿಯಾನಾಶಕ ಗುಣಲಕ್ಷಣಗಳನ್ನು ಈ ಬಾಳೆ ಎಲೆಗಳು ಹೊಂದಿವೆ. ಅವು ಊಟದಲ್ಲಿ ಇರುವ ರೋಗಾಣುಗಳನ್ನು ಕೊಲ್ಲುತ್ತದೆ. ಇದರಿಂದ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ.

ಬಾಳೆ ಎಲೆಯ ಮೇಲೆ ಮೇಣದ ರೀತಿಯ ಒಂದು ಲೇಪನವಿರುತ್ತದೆ. ಅದರ ಅತ್ಯಂತ ಸೂಕ್ಷ್ಮ ಪರಿಮಳವು ಬಿಸಿ ಆಹಾರದೊಂದಿಗೆ ಬೆರೆತು, ಅದರ ರುಚಿಯನ್ನು ಹೆಚ್ಚು ಮಾಡುತ್ತದೆ. ಈ ಎಲೆಗಳು ಪರಿಸರ ಸ್ನೇಹಿಯಾಗಿರುವುದರಿಂದ ಪ್ಲಾಸ್ಟಿಕ್ ತಟ್ಟೆಗಳನ್ನು ಬಳಕೆ ಮಾಡುವುದು ಕಮ್ಮಿ ಮಾಡಬಹುದು. ಇನ್ನೊಂದು ತಮಾಷೆಯ ವಿಚಾರ ಎಂದರೆ ಬಾಳೆ ಎಲೆಯಲ್ಲಿ ಆಹಾರ ಸೇವನೆ ಮಾಡುವುದು ನಮ್ಮ ಕೆಲಸವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಊಟದ ನಂತರ ತಟ್ಟೆ ತೊಳೆಯುವ ಅವಶ್ಯಕತೆ ಇರುವುದಿಲ್ಲ.

ಇದಿಷ್ಟೇ ಅಲ್ಲದೆ,  ಸಾಬೂನು ಪದಾರ್ಥಗಳು ವ್ಯಕ್ತಿಯ ಹೊಟ್ಟೆಗೆ ತಲುಪಿ, ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಲು ಇದು ಯಾವುದೇ ಅವಕಾಶವನ್ನು ನೀಡುವುದಿಲ್ಲ. ಬಾಳೆ ಎಲೆಗಳನ್ನು ಬಳಸುವ ಮೊದಲು ಅವುಗಳನ್ನು ಸ್ವಚ್ಛಗೊಳಿಸುವುದು ಮುಖ್ಯ. ಬಾಳೆ ಎಲೆಗಳ ಮೇಲೆ ತಿನ್ನುವುದು ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಚರ್ಮ ರೋಗಗಳು, ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ಸೇರಿದಂತೆ ಹಲವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: