• Home
 • »
 • News
 • »
 • lifestyle
 • »
 • ಋತುಚಕ್ರದ ಸಮಸ್ಯೆಗೆ ಕಾರಣ ಮತ್ತು ಪರಿಹಾರ ತಿಳಿದುಕೊಳ್ಳಬೇಕೆ?: ಈ ಸ್ಟೋರಿ ಓದಿ

ಋತುಚಕ್ರದ ಸಮಸ್ಯೆಗೆ ಕಾರಣ ಮತ್ತು ಪರಿಹಾರ ತಿಳಿದುಕೊಳ್ಳಬೇಕೆ?: ಈ ಸ್ಟೋರಿ ಓದಿ

ಅತಿಯಾದ ಹಾಗೂ ದೀರ್ಘಾವಧಿಯಲ್ಲಿ ಋತುಸ್ರಾವವಾಗುವುದು. ಇದು ಗರ್ಭಾಶಯದಲ್ಲಿ ಗಡ್ಡೆಗಳು, ಅನಿಮಿಯಾ,ಹಾರ್ಮೋನುಗಳ ಅಸಮತೋಲನದಿಂದ ಕಂಡುಬರುತ್ತದೆ.

ಅತಿಯಾದ ಹಾಗೂ ದೀರ್ಘಾವಧಿಯಲ್ಲಿ ಋತುಸ್ರಾವವಾಗುವುದು. ಇದು ಗರ್ಭಾಶಯದಲ್ಲಿ ಗಡ್ಡೆಗಳು, ಅನಿಮಿಯಾ,ಹಾರ್ಮೋನುಗಳ ಅಸಮತೋಲನದಿಂದ ಕಂಡುಬರುತ್ತದೆ.

ಅತಿಯಾದ ಹಾಗೂ ದೀರ್ಘಾವಧಿಯಲ್ಲಿ ಋತುಸ್ರಾವವಾಗುವುದು. ಇದು ಗರ್ಭಾಶಯದಲ್ಲಿ ಗಡ್ಡೆಗಳು, ಅನಿಮಿಯಾ,ಹಾರ್ಮೋನುಗಳ ಅಸಮತೋಲನದಿಂದ ಕಂಡುಬರುತ್ತದೆ.

 • News18
 • Last Updated :
 • Share this:

  ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ತಜ್ಞರು

  ತಿಂಗಳ ಆ ದಿನಗಳು ಹತ್ತಿರ ಬಂತೆಂದಾದರೆ ಮಹಿಳೆಯರಿಗೆ ಅದೇಕೋ ಬೇಜಾರು.. ಟೆನ್ಶನ್.. ಗೊಂದಲದ ವಾತಾವರಣ ಸೃಷ್ಟಿಯಾಗುವುದು. ಮುಟ್ಟಿನ ಆ 3 ದಿನಗಳನ್ನು ಕಳೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ರಕ್ತಸ್ರಾವದ ಜೊತೆಗೆ ಕಿಬ್ಬೊಟ್ಟೆಯ ನೋವು, ಸುಸ್ತು, ತಲೆ ತಿರುಗುವುದು, ಕಾಲಿನ ಸ್ನಾಯುಗಳ ಸೆಳೆತ, ಕೂರಲು ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ ಆಗಾಗ್ಗೆ ಪ್ಯಾಡ್ ಗಳನ್ನ ಬದಲಿಸಲು ಪಡುವ ಕಷ್ಟದೊಂದಿಗೆ ನರಕ ಯಾತನೆಯನ್ನು ಅನುಭವಿಸುತ್ತಾರೆ.

  ಋತುಚಕ್ರವು ಮಹಿಳೆಯರ ಜೀವನದ ಮಹತ್ವದ ಘಟ್ಟವಾಗಿದ್ದು, ಒಂದು ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ಮುಟ್ಟಾಗುವುದು ಕಡ್ಡಾಯವಾಗಿದೆ. ಆರೋಗ್ಯವಂತ ಮಹಿಳೆಯ ಚಕ್ರವು 28 ದಿನಗಳಾಗಿದ್ದು ಸಹಜವಾಗಿ 3 ರಿಂದ 5 ದಿನಗಳವರೆಗೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಿಂದಾಗಿ ಹೆಣ್ಣು ಮಕ್ಕಳು ಮುಟ್ಟು ಆಗುತ್ತಾರೋ ಇಲ್ಲವೋ ಎಂಬ ಹಂತಕ್ಕೆ ತಲುಪಿದ್ದೇವೆ. ಋತುಚಕ್ರದ ಏರುಪೇರು, ವಿಪರೀತ ರಕ್ತಸ್ರಾವ ಅಥವಾ ರಕ್ತಸ್ರಾವ ಇಲ್ಲದಿರುವಿಕೆಗೆ ಸಹ ಇನ್ಯಾವುದೋ ರೋಗಗಳ ಲಕ್ಷಣಗಳಾಗಿರುತ್ತವೆ.

  ಮುಟ್ಟಿನ ತೊಂದರೆಗಳು:
  ಮುಟ್ಟಾಗುವ 1 ವಾರದ ಮೊದಲು ಮಹಿಳೆಯರಿಗೆ ಅದರ ಬಗ್ಗೆ ಸೂಚನೆ ಸಿಕ್ಕಿರುತ್ತದೆ. ಹಲವರಿಗೆ ಕಿಬ್ಬೊಟ್ಟೆಯಲ್ಲಿ ನೋವು, ವಿಪರೀತ ಕೋಪ ಅಥವಾ ಡಿಪ್ರೆಶನ್, ತಲೆ ನೋವು ಕಾಣಿಸಿಕೊಂಡರೆ ಕೆಲವರಿಗೆ ಬೆನ್ನು ನೋವು, ಬಿಳಿ ಸೆರಗು ಹೋಗುವುದು, ಕಾಲಿನಲ್ಲಿ ಸೆಳೆತ, ಅತಿಯಾದ ಸುಸ್ತು , ಕೆಲಸ ಮಾಡಲು ಉಲ್ಲಾಸ ಇಲ್ಲದಿರುವುದು ಮೊದಲ ಲಕ್ಷಣಗಳಾಗಿವೆ.

  ಡಿಸ್ಮೆನೊರಿಯಾ: ಋತು ಚಕ್ರದ ಮೊದಲು ಅಥವಾ ಋತುಚಕ್ರದ ಸಮಯದಲ್ಲಿ ಉಂಟಾಗುವಂತಹ ನೋವಿನ ಸೆಳೆತಗಳು. ಗರ್ಭಾಶಯದ ಸಂಕೋಚನದಿಂದಾಗಿ ಹೊಟ್ಟೆಯಲ್ಲಿ ಒತ್ತಡದ ಭಾವನೆ, ಕಿಬ್ಬೊಟ್ಟೆ ಜೊತೆಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ನೋವು ಜಾಸ್ತಿಯಾದಾಗ ಅತಿಸಾರ, ಬೆವರುವುದು, ಡಿಹೈಡ್ರೇಷನ್,ತಲೆ ತಿರುಗುವುದು ಹಾಗೂ ವಾಂತಿ ಆಗುವುದು.

  ಅಮೆನೋರಿಯಾ: ಅನಿಮಿಯತ ಋತುಚಕ್ರದ ಸಮಸ್ಯೆಯಾಗಿದ್ದು ಸತತವಾಗಿ ಮೂರು ಋತು ಚಕ್ರದ ಅವಧಿಯಲ್ಲಿ ಏರುಪೇರು ಕಾಣಿಸಿಕೊಂಡರೆ ಅಮೆನೋರಿಯಾ ಲಕ್ಷಣ.

  ಮೆನೋರಾಜಿಯಾ: ಅತಿಯಾದ ಹಾಗೂ ದೀರ್ಘಾವಧಿಯಲ್ಲಿ ಋತುಸ್ರಾವವಾಗುವುದು. ಇದು ಗರ್ಭಾಶಯದಲ್ಲಿ ಗಡ್ಡೆಗಳು, ಅನಿಮಿಯಾ,ಹಾರ್ಮೋನುಗಳ ಅಸಮತೋಲನದಿಂದ ಕಂಡುಬರುತ್ತದೆ.

  ಮುಟ್ಟಿನ ತೊಂದರೆಗೆ ಕಾರಣಗಳು:
  - ಒತ್ತಡ
  - ಥೈರಾಡ್ ಸಮಸ್ಯೆ
  - ಅನಿಮಿಯಾ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್
  - ಔಷಧಿಗಳ ವಿಪರೀತ ಸೇವನೆ
  - ಆಹಾರದ ಸಮಸ್ಯೆ
  - ಅಸುರಕ್ಷಿತ ಲೈಂಗಿಕ ಕ್ರಿಯೆ
  - ಗರ್ಭಕೋಶ ಸಂಬಂಧಿ ಕಾಯಿಲೆಗಳು

  ಪರಿಹಾರೋಪಾಯಗಳು:
  ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹಲವು ತೊಂದರೆಗಳಿಗೆ ಪರಿಹಾರ ಹುಡುಕುವುದು ಕಷ್ಟಸಾಧ್ಯವಾದಾಗ ಎಷ್ಟೋ ಮಹಿಳೆಯರು ಗುಳಿಗೆಗಳ ಮೊರೆ ಹೋಗುತ್ತಾರೆ. ಆದರೆ ಕೆಲವೊಂದು ಸುಲಭ ಮಾರ್ಗಗಳನ್ನು ಅನುಸರಿಸುವುದರಿಂದಲೂ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು.

  • ಪ್ರಕೃತಿದತ್ತ ಆಹಾರ ಸೇವನೆ ಅತ್ಯಗತ್ಯ. ಅತಿ ಖಾರ, ಎಣ್ಣೆಯ ಪದಾರ್ಥಗಳನ್ನು ವರ್ಜಿಸಬೇಕು. ಹಣ್ಣು ತರಕಾರಿಗಳ ಸೇವನೆ ಹೆಚ್ಚಿನ ಪ್ರಮಾಣದಲ್ಲಿರಬೇಕು.
  • ಜೀವಸತ್ವಗಳು, ಖನಿಜಗಳು, ಪ್ರೊಟೀನ್ ಹಾಗೂ ಕಬ್ಬಿಣದ ಅಂಶಗಳು ಹೇರಳವಾಗಿರುವ ಆಹಾರಗಳನ್ನು ಸೇವಿಸಬೇಕು.
  • ಶುಂಠಿಯು ನೈಸರ್ಗಿಕ ನೋವು ನಿವಾರಕವಾಗಿದ್ದು ಆಹಾರದಲ್ಲಿ ಬಳಕೆ ಮಾಡಬೇಕು. ಕುದಿಸಿದ ಜೀರಿಗೆ ನೀರನ್ನು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ.
  • ಮುಟ್ಟಿನ ದಿನ ಹತ್ತಿರವಿರುವಾಗ ಪಪ್ಪಾಯಿ ಹಣ್ಣು ಸೇವಿಸುವುದರಿಂದ ಸಮಯಕ್ಕೆ ಸರಿಯಾಗಿ ಮುಟ್ಟನ್ನು ಹೊಂದಬಹುದು.
  • ಮುಟ್ಟಿನ ಸಮಯದಲ್ಲಿ ಡಿಹೈಡ್ರೇಷನ್ ಆಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್ ಸೇವನೆಯೂ ಮುಖ್ಯ.
  • ಕೋಲ್ಡ್ ಎಬ್ಡಮನ್ ಪ್ಯಾಕ್ ಸಹ ನೋವು ಕಡಿಮೆ ಮಾಡುವುದರೊಂದಿಗೆ ಸರಿಯಾದ ಪ್ರಮಾಣದಲ್ಲಿ ರಕ್ತಸ್ರಾವವಾಗುವಂತೆ ಮಾಡುತ್ತದೆ.
  • ಅಕ್ಯುಪಂಕ್ಚರ್ ಮಾಡಿಸಿಕೊಳ್ಳುವುದರಿಂದ ಅನಿಯಮಿತ ಮುಟ್ಟು ತಡೆದು ಪ್ರತಿ ತಿಂಗಳಿಗೊಮ್ಮೆ ಮುಟ್ಟನ್ನು ಹೊಂದಲು ಸಾಧ್ಯ.
  • ತಣ್ಣೀರಿನ ಕಟಿ ಸ್ನಾನದಿಂದ ಹಾರ್ಮೋನುಗಳ ಸಮತೋಲನವಾಗಿ ಮುಟ್ಟಿನ ತೊಂದರೆಗಳನ್ನು ನಿವಾರಿಸಬಹುದು.
  • ಆ ಸಂದರ್ಭದಲ್ಲಿ ಆಗುವಂತಹ ಮನಸ್ಸಿನ ಚಂಚಲತೆಯನ್ನು ನಿವಾರಿಸಲು ಯೋಗ, ಧ್ಯಾನವು ಸಹಾಯ ಮಾಡುತ್ತದೆ.
  • ಹೊಟ್ಟೆಯ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮಗಳನ್ನು ಪ್ರತಿದಿನ ಮಾಡಬೇಕು.
  • ಲ್ಯಾವೆಂಡರ್ ಎಣ್ಣೆಯನ್ನು ನೋವಿನ ಸಂದರ್ಭದಲ್ಲಿ ಹಚ್ಚುವುದರಿಂದ 10ರಿಂದ 15 ನಿಮಿಷಗಳಲ್ಲಿ ನೋವಿಗೆ ಮುಕ್ತಿ ದೊರೆಯುವುದು.

  First published: