Health Tips: ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ನಿದ್ರಾಹೀನತೆಗೆ ಇಲ್ಲಿದೆ ಅತ್ಯುತ್ತಮ ಆಹಾರಗಳು

ನಿಮ್ಮ ದೈಹಿಕ ಚಟುವಟಿಕೆಗಳ ಮೇಲೂ ನೀವು ಉತ್ತಮ ಹಿಡಿತವನ್ನು ಸಾಧಿಸಬೇಕಾಗುತ್ತದೆ. ತಿಂದದ್ದು ಅರಗಲು ದೈಹಿಕ ಚಟುವಟಿಕೆ ಅತಿ ಮುಖ್ಯವಾದುದು. ಜೊತೆಗೆ ಆಹಾರ ಸೇವನೆಗೆ ನೀವು ನಿಗದಿತ ಸಮಯವನ್ನು ಆಯೋಜಿಸುವುದೂ ನಿದ್ರಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ನಿದ್ದೆ (Sleeping) ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ದೈನಂದಿನ ಚಟುವಟಿಕೆಯಾಗಿದೆ. ರಾತ್ರಿ ವೇಳೆ ಪರಿಪೂರ್ಣವಾಗಿ ನಿದ್ದೆ ಮಾಡುವ ವ್ಯಕ್ತಿ ಆರೋಗ್ಯಪೂರ್ಣನಾಗಿ (Healthy) ಇರುತ್ತಾನೆ. ಒಂದು ವೇಳೆ ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಅದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯವಶ್ಯಕವಾಗಿದೆ. ಆದರೆ ಇಂದು ಸಾಕಷ್ಟು ಜನ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕಾಂಶ ಹಾಗೂ ನಿದ್ರೆಯು ಒಂದಕ್ಕೊಂದು ಪೂರಕವಾಗಿದೆ ಎಂಬ ವಿಷಯ ನಿಮಗೆ ಗೊತ್ತಿದೆಯೇ? ನಿಮ್ಮ ದೈನಂದಿನ ಆಹಾರದಲ್ಲಿ ನೀವು ಪೌಷ್ಟಿಕಾಂಶದ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ ಅದು ನಿಮ್ಮ ನಿದ್ದೆಗೆ ತೊಡಕು ಉಂಟು ಮಾಡುತ್ತದೆ ಎಂಬುದು ಇತ್ತೀಚಿನ ಅಧ್ಯಯನಗಳಿಂದ ತಿಳಿದು ಬಂದಿರುವ ವಿಷಯವಾಗಿದೆ. ನಿದ್ರಾಹೀನತೆ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದಲ್ಲಿ ಇದಕ್ಕೆ ಪರೋಕ್ಷ ಕಾರಣ ಪೌಷ್ಟಿಕಾಂಶದ ಕೊರತೆ ಆಗಿರಬಹುದು. ನೀವು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದಲ್ಲಿ ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ನಿದ್ರಾಹೀನತೆಯಿಂದ ನಿಮ್ಮ ದೈನಂದಿನ ಕೆಲಸ ಕಾರ್ಯಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾದರೆ ಈ ಕುರಿತು ಮತ್ತಷ್ಟು ಅಂಶಗಳನ್ನು ತಿಳಿದುಕೊಳ್ಳೋಣ.

    ಪೌಷ್ಠಿಕಾಂಶವು ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

    ನಿಮ್ಮ ಆರೋಗ್ಯದ ಬೆನ್ನುಲುಬಾಗಿ ಕಾರ್ಯ ನಿರ್ವಹಿಸುವ ನಿದ್ರೆಯು ನಿಮಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಪೌಷ್ಟಿಕಾಂಶ, ಬೊಜ್ಜು, ಮಧುಮೇಹ ಹಾಗೂ ಹೃದಯದ ಆರೋಗ್ಯ ಒಂದಕ್ಕೊಂದು ಬೆಸೆದುಕೊಂಡಿದೆ. ಈ ಎಲ್ಲಾ ಅಂಶಗಳು ಉತ್ತಮ ನಿದ್ರೆಗೆ ಸಹಕಾರಿಯಾಗಿದೆ. ಹಾಗಾಗಿ ಇವೆಲ್ಲವೂಗಳಿಗೆ ಪ್ರಮುಖ ಆಧಾರವಾಗಿರುವ ಪೌಷ್ಟಿಕಾಂಶದ ಕೊರತೆಯನ್ನು ನೀವು ಎದುರಿಸುತ್ತಿದ್ದಲ್ಲಿ ನಿದ್ರೆಯ ಮೇಲೂ ಇದು ಪರಿಣಾಮ ಬೀರುತ್ತದೆ.

    ಹಾಗಾದರೆ ನಿದ್ರೆಯನ್ನು ಉತ್ತಮಗೊಳಿಸುವ ಪ್ರಮುಖ ಆಹಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ

    ಹಾಲು

    ಉತ್ತಮ ನಿದ್ರೆಗೆ ಹಾಲು ಸಹಕಾರಿಯಾಗಿದೆ. ಅಮಿನೊ ಆ್ಯಸಿಡ್ ಹಾಲಿನಲ್ಲಿದ್ದು ಉತ್ತಮ ನಿದ್ರೆಗೆ ಹೇಳಿ ಮಾಡಿಸಿದ ಪರಿಹಾರವಾಗಿದೆ. ಮಲಗುವ ಮೊದಲು ಒಂದು ಗಂಟೆ ಮುಂಚಿತವಾಗಿ ಹಾಲು ಸೇವಿಸಿ.

    ಬಾದಾಮಿ

    ಇದು ಹೆಚ್ಚಿನ ಮೆಲಟೊನಿನ್ ಅನ್ನು ಒಳಗೊಂಡಿದ್ದು ಈ ಹಾರ್ಮೋನು ನಿದ್ರೆಗೆ ಹಾಗೂ ಎಚ್ಚರಗೊಳ್ಳಲು ಸಹಕಾರಿಯಾಗಿದೆ. 5- 6 ಬಾದಾಮಿಗಳು ಉತ್ತಮ ಪ್ರಮಾಣದ ಮೆಗ್ನೇಶಿಯಂ ಹಾಗೂ ಕ್ಯಾಲ್ಶಿಯಂ ಅನ್ನು ಒಳಗೊಂಡಿದೆ.

    ಕ್ಯಾಮೊಮೈಲ್ ಚಹಾ

    ಉರಿಯೂತ ನಿವಾರಕ ಹಾಗೂ ನಿದ್ರಾಹೀನತೆಗೆ ಚಿಕಿತ್ಸೆಯಾಗಿ ಈ ಚಹಾವನ್ನು ಬಳಸಲಾಗುತ್ತದೆ. ಕ್ಯಾಮೊಮೈಲ್ ಅನ್ನು ನಿದ್ರಾ ಪ್ರಚೋದಕ ಎಂದು ಕೂಡ ಕರೆಯಲಾಗಿದೆ. ಕ್ಯಾಮೊಮೈಲ್ ಚಹಾದಲ್ಲಿ ಆಪಿಜೆನಿನ್ ಎಂಬ ಉತ್ಕರ್ಷಣ ನಿರೋಧಕವಿದೆ, ಇದು ಉತ್ತಮ ನಿದ್ರೆಗೆ ಸಹಕಾರಿಯಾಗಿದೆ.

    ವಾಲ್‌ನಟ್‌ಗಳು

    ಇದು ಮೆಲಟೋನಿನ್ ಮತ್ತು ಸಿರೊಟೋನಿನ್ ಸೇರಿದಂತೆ ನಿದ್ರೆಯನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಕೆಲವು ಸಂಯುಕ್ತಗಳನ್ನು ಒಳಗೊಂಡಿದೆ. ವಾಲ್‌ನಟ್‌ನ ಪ್ರತಿಯೊಂದು ಸೇವನೆಯು ಮೆಗ್ನೀಸಿಯಮ್ ನಂತಹ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುವ ಇತರ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.

    ಇದನ್ನು ಓದಿ: Health Tips: ಈ ಪದಾರ್ಥಗಳ ಜೊತೆ ಮೊಸರನ್ನು ಸೇವಿಸಬೇಡಿ: ಅಪಾಯ ಖಂಡಿತ...!

    ಈ ಎಲ್ಲಾ ಆಹಾರಗಳನ್ನು ಸೇವಿಸುವುದರ ಜೊತೆಗೆ ನಿದ್ರೆ ಹಾಗೂ ಪೌಷ್ಟಿಕಾಂಶದ ಸಂಪರ್ಕಗಳ ಮಟ್ಟವನ್ನು ಪರಿಶೋಧಿಸಬೇಕಾಗುತ್ತದೆ. ಎರಡನ್ನೂ ಸಮಬದ್ಧವಾಗಿ ಉತ್ತಮಗೊಳಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಚುರುಕಾಗಿ ಸೇವಿಸಲು, ಚೆನ್ನಾಗಿ ನಿದ್ರೆ ಮಾಡಲು ಹಾಗೂ ಆರೋಗ್ಯಕರ ಜೀವನ ನಡೆಸಲು ಈ ಎಲ್ಲಾ ಅಂಶಗಳು ಸಹಕಾರಿಯಾಗಿದೆ. ಇದರೊಂದಿಗೆ ನಿಮ್ಮ ದೈಹಿಕ ಚಟುವಟಿಕೆಗಳ ಮೇಲೂ ನೀವು ಉತ್ತಮ ಹಿಡಿತವನ್ನು ಸಾಧಿಸಬೇಕಾಗುತ್ತದೆ. ತಿಂದದ್ದು ಅರಗಲು ದೈಹಿಕ ಚಟುವಟಿಕೆ ಅತಿ ಮುಖ್ಯವಾದುದು. ಜೊತೆಗೆ ಆಹಾರ ಸೇವನೆಗೆ ನೀವು ನಿಗದಿತ ಸಮಯವನ್ನು ಆಯೋಜಿಸುವುದೂ ನಿದ್ರಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.
    Published by:HR Ramesh
    First published: