Amazon Prime Day Sale 2022: ನಿಮ್ಮ ಬಜೆಟ್‌ಗೆ ಸೂಟ್ ಆಗುವ 7 ಬೆಸ್ಟ್‌ ಬ್ಯಾಕ್‌ಪ್ಯಾಕ್‌ಗಳು ಇಲ್ಲಿವೆ

ನಿಮ್ಮ ಲ್ಯಾಪ್‌ಟಾಪ್‌ನಿಂದ ಹಿಡಿದು ಲಂಚ್‌ ಬಾಕ್ಸ್‌ವರೆಗೆ ಎಲ್ಲವನ್ನು ಇಟ್ಟುಕೊಳ್ಳಲು ನಿಮಗೆ ಈ ಬ್ಯಾಗ್‌ಗಳು ಬೇಕೆ ಬೇಕು. ಆದ್ದರಿಂದ ನಾವು ಈ ಕೆಳಗೆ, ನಿಮ್ಮ ಆನ್‌ಲೈನ್ ಶಾಪಿಂಗ್ ಅನುಕೂಲಕ್ಕಾಗಿ ಬ್ಯಾಕ್‌ಪ್ಯಾಕ್‌ಗಳ ಮೇಲಿನ ಬೆಸ್ಟ್‌ ಡೀಲ್‌ಗಳನ್ನು ಪಟ್ಟಿ ಮಾಡಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಎಲ್ಲ ಆನ್‌ಲೈನ್‌ ಯುಗ. ಒಂದು ಚಿಕ್ಕ ಪೆನ್ಸಿಲ್‌ ಕೊಂಡುಕೊಳ್ಳಬೇಕು ಅಂದ್ರೂ, ಆನ್‌ಲೈನ್‌ನಲ್ಲಿಯೇ (Online) ತೆಗೆದುಕೊಳ್ಳುತ್ತೆವೆ. ಆನ್‌ಲೈನ್‌ ಶಾಪಿಂಗ್‌ ಗಳಿಸಿದಷ್ಟು (Online Shopping) ಜನಪ್ರಿಯತೆ ಮತ್ತೆ ಯಾವುದು ಗಳಿಸಿರಲಿಲ್ಲ. ಈಗ ಅಮೆಜಾನ್ ಪ್ರೈಮ್ ಡೇ 2022 ಸೇಲ್ (Amazon Prime Day Sale) ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಶಾಪಿಂಗ್‌ನಲ್ಲಿ ನೀವು ಚೌಕಾಸಿ ಮಾಡಿ ಹೆಚ್ಚು ವಸ್ತುಗಳನ್ನು ಕೊಂಡುಕೊಳ್ಳುವ ಸಂಭ್ರಮ ನಿಮ್ಮದಾಗುತ್ತದೆ. ಈಗ ಎಲ್ಲರೂ ಬಗೆ-ಬಗೆಯ ಬ್ಯಾಗ್‌ಗಳನ್ನು ಬಳಸುತ್ತಾರೆ. ನೀವು ಕೂಡ ಯಾವಾಗಲೋ ಒಮ್ಮೆ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ಬ್ಯಾಗ್‌ಗಳ ಬಗ್ಗೆ ಹುಡುಕಾಟ ನಡೆಸಿರಬಹುದು. ಅದರಲ್ಲಿ ನೋಡಿದಂತಹ ಅತ್ಯಾಧುನಿಕ ಲೆದರ್ ಬ್ಯಾಗ್‌ಗಳಿಂದ (Leather Bags) ಹಿಡಿದು ಹಗುರವಾದ ಸುಂದರ ಬ್ಯಾಗ್‌ ಮತ್ತು ಇನ್ನಿತರ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯುವ ಸಮಯ ಇದಾಗಿದೆ.

ನಿಮ್ಮ ಲ್ಯಾಪ್‌ಟಾಪ್‌ನಿಂದ ಹಿಡಿದು ಲಂಚ್‌ ಬಾಕ್ಸ್‌ವರೆಗೆ ಎಲ್ಲವನ್ನು ಇಟ್ಟುಕೊಳ್ಳಲು ನಿಮಗೆ ಈ ಬ್ಯಾಗ್‌ಗಳು ಬೇಕೆ ಬೇಕು. ಆದ್ದರಿಂದ ನಾವು ಈ ಕೆಳಗೆ, ನಿಮ್ಮ ಆನ್‌ಲೈನ್ ಶಾಪಿಂಗ್ ಅನುಕೂಲಕ್ಕಾಗಿ ಬ್ಯಾಕ್‌ಪ್ಯಾಕ್‌ಗಳ ಮೇಲಿನ ಬೆಸ್ಟ್‌ ಡೀಲ್‌ಗಳನ್ನು ಪಟ್ಟಿ ಮಾಡಿದ್ದೇವೆ.

ನಿಮ್ಮ ಬಜೆಟ್‌ಗೆ ಹೊಂದುವ 7 ಬೆಸ್ಟ್‌ ಬ್ಯಾಕ್‌ಪ್ಯಾಕ್‌ಗಳು ಇಲ್ಲಿವೆ:
1) ಪುರುಷರಿಗಾಗಿ ಲ್ಯಾನ್ಸಿನ್ ಪುಲ್‌ ಗ್ರೆನ್‌ ಲೆದರ್‌ನ ಎಕ್ಸ್‌ಪೆಂಡಬಲ್‌ ಲ್ಯಾಪ್‌ಟಾಪ್‌ ಬ್ಯಾಕ್‌ಪ್ಯಾಕ್‌
 ಈ ಲೆದರ್‌ ಬ್ಯಾಗ್‌ಗಳು ಒಂದು ರೀತಿಯಲ್ಲಿ ಕ್ಲಾಸಿ ಲುಕ್‌ ಕೊಡುತ್ತವೆ ಎಂದು ಹೇಳಬಹುದು. ಇವುಗಳು ಆಫೀಸ್‌ ಗೆ ಚೆನ್ನಾಗಿ ಒಪ್ಪುತ್ತವೆ. ನೋಟ್‌ಬುಕ್‌ಗಳಿಂದ ಹಿಡಿದು ಫೈಲ್‌ಗಳವರೆಗೆ ಯಾವುದನ್ನಾದರೂ ಈ ಬ್ಯಾಗ್‌ನಲ್ಲಿ ಒಯ್ಯಬಹುದು. ನಿಮ್ಮ ಲ್ಯಾಪ್‌ಟಾಪ್‌ ಅನ್ನು ಆಕಸ್ಮಿಕ ಅಪಘಾತಗಳಿಂದ ಸುರಕ್ಷಿತವಾಗಿರಿಸಲು ಇದು ಪ್ರತ್ಯೇಕ ಪ್ಯಾಡ್ಡ್ ವಿಭಾಗವನ್ನು ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಸಾಕಷ್ಟು ಸ್ಥಳವನ್ನು ಹೊಂದಿರುವ ಪೊರ್ಟ್‌ಬಲ್‌ ಬ್ಯಾಗ್‌ ಆಗಿದೆ. ಇದರ ಬೆಲೆಯು11,158.32 ರೂಪಾಯಿಗಳು ಆಗಿದೆ.

2) ಮಹಿಳೆಯರಿಗಾಗಿ VANKEAN 15.6 ಇಂಚಿನ ಲ್ಯಾಪ್‌ಟಾಪ್ ಬ್ಯಾಕ್‌ಪ್ಯಾಕ್
ಈ ಬ್ಯಾಗ್‌ನಲ್ಲಿ ಒಂದುವಿಶೇಷತೆ ಇದೆ ಅದೇನೆಂದರೆ ಪ್ರಯಾಣ ಮಾಡಬೇಕಾದರೆ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡುವಾಗ ಸ್ವಲ್ಪ ಅನಾನುಕೂಲವಾಗಬಹುದು. ಇದು ಬಾಹ್ಯ USB ಪೋರ್ಟ್‌ ಸಿಸ್ಟಮ್‌ ಹೊಂದಿದೆ. ಇದನ್ನು ಎಲ್ಲಿ ಬೇಕಾದರೂ ಪ್ಲಗ್ ಮಾಡಬಹುದು. ಇದು ನೋಡಲು ಕೂಡ ತುಂಬಾ ಸುಂದರವಾಗಿದೆ. ಇದರ ಬೆಲೆ 2,153.06 ರೂಪಾಯಿಗಳು ಆಗಿದೆ.

3)ಕ್ಲೂಸಿ ವಿಶೇಷ ಪರ್ಸ್‌ ಬ್ಯಾಗ್‌
ಇದು ಮಹಿಳೆಯರ ವೆನಿಟಿ ಬ್ಯಾಗ್‌ ಮತ್ತು ಪರ್ಸ್‌ ಎರಡು ಕೂಡ ಆಗಿದೆ. ಇದು ವಾಟರ್‌ಪ್ರೂಪ್‌ ಬ್ಯಾಗ್‌ ಆಗಿದ್ದು, ಮಳೆಯಿಂದ ನಿಮ್ಮ ವಸ್ತುಗಳನ್ನು ರಕ್ಷಿಸುತ್ತದೆ. ಇದರ ಬೆಲೆ 2,789.78 ರೂಪಾಯಿಗಳು ಆಗಿದೆ.

ಇದನ್ನೂ ಓದಿ: Belagavi Bags: ಯೂರೋಪ್​ ಮಹಿಳೆಯರ ಬೆನ್ನ ಮೇಲೆ ನಮ್ಮ ಬೆಳಗಾವಿ!

4) ಅಬ್ಶೂ ಕ್ಲಾಸಿಕಲ್ ಬೇಸಿಕ್ ಟ್ರಾವೆಲ್ ಬ್ಯಾಕ್‌ಪ್ಯಾಕ್
ಇದು ಶಾಲೆ ಮತ್ತು ಕಾಲೇಜಿಗೆ ಹೋಗುವ ಮಕ್ಕಳಿಗೆ ಹೇಳಿ ಮಾಡಿಸಿದಂತಹ ಬ್ಯಾಗ್‌ ಆಗಿದೆ. ಇದು ವಾಟರ್‌ ಪ್ರೂಪ್‌ ಆಗಿದ್ದು, ನೋಟ್‌ಬುಕ್‌ಗಳು, ಪೆನ್ನುಗಳು, ಪ್ರಾಜೆಕ್ಟ್‌ಗಳು ಇತ್ಯಾದಿಗಳನ್ನು ಇರಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಈ ಬ್ಯಾಗ್‌ ಹೊಂದಿದೆ. ಅಲ್ಲದೆ, ಇದು 2 ಸೈಡ್ ಪಾಕೆಟ್‌ಗಳು ಮತ್ತು ದ್ವಿಮುಖ ಝಿಪ್ಪರ್‌ಗಳೊಂದಿಗೆ ಬರುತ್ತದೆ. ಇದರ ಬೆಲೆ 1,912.48 ರೂಪಾಯಿಗಳು ಆಗಿದೆ.

5) ಲೀಪರ್ ಫ್ಲೋರಲ್ ಸ್ಕೂಲ್‌ ಬ್ಯಾಗ್‌ಪ್ಯಾಕ್‌
ಈ ಬ್ಯಾಗ್‌ ನೋಡಲು ತುಂಬಾ ಆಕರ್ಷಕವಾಗಿದೆ. ಉತ್ತಮ ಗುಣಮಟ್ಟದ ಕ್ಯಾನ್ವಾಸ್ ಮತ್ತು ಕೃತಕ ಚರ್ಮದಿಂದ ಇದನ್ನು ತಯಾರಿಸಲಾಗಿದೆ. ಈ ಬ್ಯಾಗ್ ಸಾಕಷ್ಟು ಫ್ಯಾಶನ್ ಆಗಿ ಕಾಣುತ್ತದೆ ಮತ್ತು ಹೂವಿನ ಚಿತ್ರಗಳನ್ನು ಹೊಂದಿದೆ. ಇದರ ಬೆಲೆ 1,928.52 ರೂಪಾಯಿಗಳು ಆಗಿದೆ.

6) ಪುರುಷರಿಗಾಗಿ WolfWarriorX ಬ್ಯಾಕ್‌ಪ್ಯಾಕ್‌ಗಳು
ಈ ಬ್ಯಾಗ್‌ಗಳು ಟ್ರಕಿಂಗ್‌ ಮತ್ತು ಟ್ರಿಪ್‌ಗಳಿಗಾಗಿಯೇ ವಿಶೇಷವಾಗಿ ತಯಾರು ಆಗಿವೆ. ಇದು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದು, ಬ್ಯಾಗ್‌ನ ಬದಿಯಲ್ಲಿ ನೀರಿನ ಬಾಟಲ್‌ ಪಾಕೆಟ್‌ ಬರುತ್ತದೆ. ಇದರ ಬೆಲೆ 2,485.56 ರೂಪಾಯಿಗಳು ಆಗಿದೆ.

7) ಮೈಗ್ರೀನ್ ಕಿಡ್ ಚೈಲ್ಡ್ ಗರ್ಲ್ ಕ್ಯೂಟ್ ಪ್ಯಾಟರ್ನ್ಸ್ ಪ್ರಿಂಟೆಡ್ ಬ್ಯಾಕ್‌ಪ್ಯಾಕ್ ಸ್ಕೂಲ್ ಬ್ಯಾಗ್
ಈ ಬ್ಯಾಗ್‌ ಮಕ್ಕಳಿಗೆ ಹೇಳಿ ಮಾಡಿಸಿದಂತಹ ಬ್ಯಾಗ್‌ ಆಗಿದೆ. ಈ ಬ್ಯಾಗ್‌ ಅನೇಕ್‌ ಕಂಪರ್ಟ್‌ಗಳನ್ನು ಹೊಂದಿದ್ದು, ಕ್ಯಾರಿ ಮಾಡಲು ಸುಲಭವಾಗಿದೆ. ಇದರ ಬೆಲೆ 1,817.84 ರೂಪಾಯಿಗಳು ಆಗಿದೆ.

ಇದನ್ನೂ ಓದಿ:  Good News: ಎಸಿ, ಫ್ರಿಜ್, ವಾಷಿಂಗ್ ಮೆಷಿನ್‌ ಬೆಲೆ ಕಡಿಮೆಯಾಗುತ್ತಂತೆ!

ಈ ಅಮೆಂಜಿಗ್‌ ಆಫರ್‌ಗಳನ್ನು ಮಿಸ್‌ ಮಾಡಿಕೊಳ್ಳಬೇಡಿ! ಅವುಗಳನ್ನು ನಿಮ್ಮ ಶಾಪಿಂಗ್‌ ಕಾರ್ಟ್‌ಗೆ ಸೇರಿಸಿ ಅಥವಾ ಮುಂದುವರಿಯಿರಿ ಮತ್ತು ಸಾಧ್ಯವಾದಷ್ಟು ಬೇಗ ಖರೀದಿಸಿ ಏಕೆಂದರೆ ಈ ಬ್ಯಾಕ್‌ಪ್ಯಾಕ್‌ಗಳು ವೇಗವಾಗಿ ಸೋಲ್ಡ್‌ ಔಟ್‌ ಆಗುವ ಸಾಧ್ಯತೆ ಇದೆ.
Published by:Ashwini Prabhu
First published: