ನಿಮ್ಮ ಅಡುಗೆಮನೆ ಅಲಂಕರಿಸಲು 10 ಅದ್ಭುತ ವಿಧಾನಗಳು

ಅಡುಗೆಮನೆ ಇಡೀ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಈ ಅಲಂಕಾರಿಕ ಉಪಾಯಗಳು ಮನೆ ನಿಮಗೆ ಖರ್ಚಿಲ್ಲದೇ ನಿಮ್ಮ ಅಡುಗೆಮನೆ ನೋಟ ಹೆಚ್ಚಿಸಲು ನೆರವಾಗುತ್ತದೆ.

news18
Updated:August 6, 2019, 3:05 PM IST
ನಿಮ್ಮ ಅಡುಗೆಮನೆ ಅಲಂಕರಿಸಲು 10 ಅದ್ಭುತ ವಿಧಾನಗಳು
ಕಿಚನ್ ಹಾಲ್​ನ ಸಾಂದರ್ಭಿಕ ಚಿತ್ರ
news18
Updated: August 6, 2019, 3:05 PM IST
ಅಡುಗೆಮನೆಗೆ ಹೆಚ್ಚುವರಿ ಆರೈಕೆ ಮತ್ತು ಪ್ರೀತಿಯ ಅಗತ್ಯವಿದೆ. ಸುಂದರವಾದ ಅಡುಗೆಮನೆ ಇಡೀ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಈ ಅಲಂಕಾರಿಕ ಉಪಾಯಗಳು ನಿಮಗೆ ಖರ್ಚಿಲ್ಲದೇ ಅಡುಗೆಮನೆ ನೋಟ ಹೆಚ್ಚಿಸಲು ನೆರವಾಗುತ್ತದೆ.

ಫ್ಲೋರ್ ಪೇಂಟಿಂಗ್
ನಿಮಗೆ ಪೇಂಟಿಂಗ್ ಕೆಲಸಗಾರರನ್ನು ಆಹ್ವಾನಿಸುವ ಅಗತ್ಯ ಇರುವುದಿಲ್ಲ. ನೀವು ಸ್ವತಃ ಇಡೀ ಕೆಲಸ ಮಾಡಬಹುದು. ನಿಖರವಾದ ಫ್ಲೋರ್ ಪೇಂಟಿಂಗ್ ನೀಡಲು ಕೆಲವು ಪೇಂಟರ್ಸ್ ಟೇಪ್ ಮತ್ತು ಬಣ್ಣಗಳನ್ನು ತೆಗೆದುಕೊಳ್ಳಿ.ಫ್ಲೋಟಿಂಗ್ ಶೆಲ್ಫ್ ಗಳು
ಫ್ಲೋಟಿಂಗ್ ಶೆಲ್ಫ್ ಗಳು ನಿಮ್ಮ ಅಡುಗೆಮನೆಗೆ ಸಮಕಾಲೀನ ನೋಟ ನೀಡುತ್ತದೆ. ಇವು ಸಂಗ್ರಹಣೆಯ ಸ್ಥಳವಾಗಿ ಮತ್ತು ಇಡೀ ಮನೆಯ ಅಂದವನ್ನು ಹೆಚ್ಚಿಸುವಂತೆ ಕಾರ್ಯ ನಿರ್ವಹಿಸುತ್ತದೆ.ಸಾಂಪ್ರದಾಯಿಕ ಮತ್ತು ಸಮಕಾಲೀನ ನೋಟ
ಉತ್ತಮವಾದ ಮತ್ತು ವಿಶಿಷ್ಟವಾದ ಅಡಿಗೆಮನೆಯ ನೋಟಕ್ಕಾಗಿ ನಿಮ್ಮ ಅಡುಗೆಮನೆಯಲ್ಲಿ ಸಮಕಾಲೀನ ಮತ್ತು ಸಾಂಪ್ರದಾಯಿಕ ವಿನ್ಯಾಸ ಮಿಶ್ರಮಾಡಿ.ಸೀಲಿಂಗ್ ಗೂ ಪೇಂಟ್ ಮಾಡಿ
ಪೇಂಟಿಂಗ್ ಇಡೀ ಮನೆಗೆ ಹೊಸ ನೋಟ ನೀಡುತ್ತದೆ. ನಿಮಗಿಷ್ಟವಾದ ಬಣ್ಣದಿಂದ ನಿಮ್ಮ ಅಡುಗೆಮನೆಯ ಮೇಲ್ಛಾವಣಿಗೆ ಬಣ್ಣ ಹಾಕಿ, ಸ್ವಲ್ಪ ವ್ಯತಿರಿಕ್ತ ಬಣ್ಣಗಳಿಗಾಗಿ ಸ್ಥಳ ನೀಡಿ.ಕೃತಕ ಸಸ್ಯಗಳು ಆಕರ್ಷಕವಾಗಿರುತ್ತವೆ
ನಿಮ್ಮ ಅಡುಗೆಮನೆಗೆ ಕೃತಕ ಸಸ್ಯಗಳು ದೊರೆತರೆ, ಅದು ಕೊಠಡಿಯ ನೋಟವನ್ನು ಸಂಪೂರ್ಣ ಬದಲಾಯಿಸುತ್ತದೆ. ಒಂದು ಬಾರಿ ಅವುಗಳನ್ನು ಪ್ರಯತ್ನಿಸಿ ಅದರ ವ್ಯತ್ಯಾಸ ಗಮನಿಸಿ.ಕಿಚನ್ ಐಲ್ಯಾಂಡ್ ಅನ್ನು ಸಂಗ್ರಹ ಸ್ಥಳವಾಗಿ ಬಳಸುವುದು
ಉಗ್ರಾಣದ ಆಯ್ಕೆ ಹೊಂದಿರುವ ಅಡಿಗೆಮನೆಯ ಕೌಂಟರ್ ಟಾಪ್ ಆಯ್ಕೆಮಾಡಿ. ನೀವು ಇದರಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸಬಹುದು ಮತ್ತು ಇದು ಅಡುಗೆಮನೆಗೆ ವಿಭಿನ್ನ ನೋಟವನ್ನೂ ನೀಡುತ್ತದೆ.ಪಾಟ್ ಸ್ಟ್ಯಾಂಡ್
ನಿಮ್ಮ ಸ್ಟೀಲ್ ಅಥವಾ ಕಾಪರ್ ವೇರ್ ಅಡಿಗೆಮನೆಯಲ್ಲಿ ಪ್ರಕಾಶಿಸಲಿ. ಕೆಲಸ ಮತ್ತಷ್ಟು ಸುಲಭವಾಗುವಂತೆ ಹೊಸ ಪಾಟ್ ಹ್ಯಾಂಡಲ್ ತನ್ನಿ.ಎಲೆಕ್ಟ್ರಿಕ್ ಟಚಸ್
ನಿಮ್ಮ ಅಡುಗೆಮನೆಯಲ್ಲಿ ಎಲೆಕ್ಟ್ರಿಕ್ ಟಚಸ್ ಹೊಚ್ಚ ಹೊಸ ನೋಟ ನೀಡುತ್ತದೆ.Image Source

ಸುಂದರವಾದ ರಗ್​ಗಳು
ಅಡುಗೆಮನೆಯಲ್ಲಿ ಸುಂದರವಾದ ರಗ್ ಗಳು ವಿಭಿನ್ನ ಮತ್ತು ಆತ್ಮೀಯ ನೋಟ ನೀಡುತ್ತದೆ. ವ್ಯತಿರಿಕ್ತ ಬಣ್ಣವಿರುವ ಕಾರ್ಪೆಟ್ ಗಳನ್ನು ಹಾಸುವುದನ್ನು ಖಚಿತಪಡಿಸಿಕೊಳ್ಳಿ.ಸಂಪೂರ್ಣ ಬಿಳಿಬಣ್ಣದ ಅಡಿಗೆಮನೆ
ಸಂಪೂರ್ಣ ಬಿಳಿ ಬಣ್ಣದ ಅಡುಗೆಮನೆ ಎಂದೆಂದಿಗೂ ಹೊಸ ಸ್ಟೈಲ್ ಆಗಿರುತ್ತದೆ. ಆದರೆ ಕಲೆಗಳಾಗದಂತೆ ಎಚ್ಚರವಹಿಸಿ.

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...