ನಿಮ್ಮ ಅಡುಗೆಮನೆಯನ್ನು ಆಳವಾಗಿ ಸ್ವಚ್ಛಗೊಳಿಸಲು 10 ಪರಿಣಾಮಕಾರಿ ವಿಧಾನಗಳು

ನಿಮ್ಮ ಸಿಂಕ್ ಕೊಳೆಯಾಗಿದ್ದರೆ ಅಥವಾ ಸಿಂಕ್ ನಲ್ಲಿ ಡ್ರೈನ್ ಕೊಳೆಯಾಗಿದ್ದರೆ, ಅದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಚಿಮುಕಿಸಿ. ಹಳೆಯ ಟೂತ್ ಬ್ರಶ್ ಅಥವಾ ಸ್ಪಂಜ್ ನಿಂದ ಅದನ್ನು ಉಜ್ಜಿ.

news18
Updated:July 16, 2019, 4:48 PM IST
ನಿಮ್ಮ ಅಡುಗೆಮನೆಯನ್ನು ಆಳವಾಗಿ ಸ್ವಚ್ಛಗೊಳಿಸಲು 10 ಪರಿಣಾಮಕಾರಿ ವಿಧಾನಗಳು
ಸಾಂದರ್ಭಿಕ ಚಿತ್ರ
  • News18
  • Last Updated: July 16, 2019, 4:48 PM IST
  • Share this:
ಅಡಿಗೆಮನೆ ಸ್ವಚ್ಛವಾಗಿಡುವುದರಿಂದ ಕೊಳೆ ಮತ್ತು ಕಸ ಇಲ್ಲದಂತೆ ಇಡಬಹುದು. ಈ ಲೇಖನದಲ್ಲಿ ನೀವು ನಿಮ್ಮ ಅಡಿಗೆಮನೆಯನ್ನು ಸ್ವಚ್ಛಗೊಳಿಸುವ ಹತ್ತು ಪರಿಣಾಮಕಾರಿ ವಿಧಾನಗಳ ಬಗ್ಗೆ ಮಾಹಿತಿ ಇದೆ.

ಬೇಕಿಂಗ್ ಸೋಡಾ ಅದ್ಭುತವನ್ನು ಉಂಟುಮಾಡುತ್ತದೆ
ನಿಮ್ಮ ಸಿಂಕ್ ಕೊಳೆಯಾಗಿದ್ದರೆ ಅಥವಾ ಸಿಂಕ್ ನಲ್ಲಿ ಡ್ರೈನ್ ಕೊಳೆಯಾಗಿದ್ದರೆ ಅದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಚಿಮುಕಿಸಿ. ನಂತರ ಹಳೆಯ ಟೂತ್ ಬ್ರಶ್ ಅಥವಾ ಸ್ಪಂಜ್​ನಿಂದ ಅದನ್ನು ಉಜ್ಜಿ. ಇದನ್ನು ಕೇವಲ ಸ್ಟೀಲ್ ಸಿಂಕ್​ಗೆ ಮಾತ್ರ ಬಳಕೆ ಮಾಡಬೇಕು. ಆಗ ಸಿಂಕ್ ಸ್ವಚ್ಛವಾಗುತ್ತದೆ.ಬರ್ನರ್ ಅನ್ನು ಅಮೋನಿಯಾದಿಂದ ಸ್ವಚ್ಛಗೊಳಿಸಿ
ಬರ್ನರ್ ಮೇಲಿನ ಗ್ರೀಸಿನ ಕಲೆಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಬರ್ನರ್​ಅನ್ನು ಅಮೋನಿಯಾ ಮತ್ತು ನೀರು ತುಂಬಿದ ಜಿಪ್ ಲಾಕ್ ಬ್ಯಾಗ್ ನಲ್ಲಿಡಿ. ರಾತ್ರಿಯಿಡೀ ಬರ್ನರ್ ನೀರಿನಲ್ಲಿರಲು ಬಿಡಿ. ಮರುದಿನ ಅದನ್ನು ಸೋಪ್ ನೀರಿನಿಂದ ತೊಳೆಯಿರಿ.

ಫ್ರಿಡ್ಜ್ ಗೆ ಬೇಕಿಂಗ್ ಸೋಡಾ
ಫ್ರಿಡ್ಜ್ ಸ್ವಚ್ಛಗೊಳಿಸಲು ಯಾವುದೇ ವಿಧದ ರಾಸಾಯನಿಕ ಬಳಸದಿರುವುದು ಉತ್ತಮ. ಬಾತ್ ಟಬ್ ಗೆ ಬೇಕಿಂಗ್ ಸೋಡಾ ಮತ್ತು ಬೆಚ್ಚಗಿನ ನೀರು ಹಾಕಿ. ಫ್ರಿಡ್ಜ್ ನ ಎಲ್ಲಾ ಶೆಲ್ಫಗಳನ್ನೂ ಅದರಲ್ಲಿ ಅದ್ದಿ. ಬೇಕಿಂಗ್ ಸೋಡಾ ಮತ್ತು ನೀರಿನ ಮಿಶ್ರಣದಿಂದ ಇಡೀ ಫ್ರಿಡ್ಜ್ ಸ್ವಚ್ಛಗೊಳಿಸಿ.ನಿಂಬೆಹಣ್ಣು ಅವೆನ್ ಸ್ವಚ್ಛಗೊಳಿಸಲು ನೆರವಾಗುತ್ತದೆ
ಒಂದು ಬೌಲ್ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ. ಜೊತೆಗೆ ನೀರಿನಲ್ಲಿ ಸ್ವಲ್ಪ ನಿಂಬೆಯ ತುಣುಕುಗಳನ್ನೂ ಸೇರಿಸಿ ಈಗ ಮೂರು ನಿಮಿಷಗಳವರೆಗೆ ಮೈಕ್ರೋವೇವ್ ನಲ್ಲಿ ನೀರನ್ನು ಅಧಿಕ ಉಷ್ಣಾಂಶದಲ್ಲಿಡಿ. ಶಾಖ ನೀಡದೇ 5 ನಿಮಿಷಗಳವರೆಗೆ ಅದನ್ನು ಒಳಗಿಡಿ. ಅವೆನ್ ಅನ್ನು ಒದ್ದೆ ಬಟ್ಟೆಯಿಂದ ಒರೆಸಿ.ಕಟ್ಟಿಂಗ್ ಬೋರ್ಡ್ ಗಳು
ಕಟ್ಟಿಂಗ್ ಬೋರ್ಡ್ ಮೇಲೆ ಕಂಡುಬರುವ ಯಾವುದೇ ವಿಧದ ಕೊಳೆಯನ್ನು ತೆಗೆಯಲು ಕೊಶೆರ್ ಸಾಲ್ಟ್ ನಲ್ಲಿ ನಿಂಬೆ ತುಣುಕು ಬಳಸಿ.ಸಣ್ಣ ಸಾಧನಗಳು
ಸೋಪ್ ನೀರಿನಿಂದ ಸಣ್ಣ ಸಾಧನಗಳನ್ನು ಒರೆಸಿ. ಆಳವಾದ ಸ್ವಚ್ಛತೆಗಾಗಿ ಅವುಗಳ ಗಾತ್ರವನ್ನು ನಿರ್ಲಕ್ಷಿಸದಿರುವುದು ಮುಖ್ಯ.ಅಡಿಗೆಮನೆಯ ಕ್ಯಾಬಿನೆಟ್ ಗಳು
ಮೊದಲು ತೆಳು ಬಣ್ಣದ ಕ್ಯಾಬಿನೆಟ್ ಗಳ ಮೇಲೆ ಗಮನಹರಿಸಿ ಮತ್ತು ಅವುಗಳು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಶೀಘ್ರವಾಗಿ ಸ್ವಚ್ಛಗೊಳಿಸಲು ಅಡಿಗೆಮನೆಯಲ್ಲಿ ಮೇಲಿನಿಂದ ಕೆಳಗೆ ಸ್ವಚ್ಛಗೊಳಿಸುವ ತಂತ್ರ ಅನುಸರಿಸಿ.ಕೌಂಟರ್ ಟಾಪ್​ಗಳು
ಕೌಂಟರ್ ಟಾಪ್​ಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಸೋಪ್ ವಾಟರ್ ಬಳಸಿ.ಫ್ಲೋರ್
ನೆಲ ಗುಡಿಸುವುದು ಅಥವಾ ವ್ಯಾಕ್ಯೂಂ ಮಾಡುವುದು ಮಾತ್ರ ಮುಖ್ಯವಲ್ಲ. ನೀವು ಒದ್ದೆ ಬಟ್ಟೆಯಿಂದ ನೆಲ ಒರೆಸುವುದು ಮತ್ತು ಇತರ ರೂಂಗಳಿಗೆ ಹೋಲಿಸಿದರೆ ಅಡಿಗೆ ಮನೆಯ ನೆಲ ಗ್ರೀಸ್ ಇರುವುದರಿಂದ ಅದನ್ನು ಒರೆಸುವುದು ಮುಖ್ಯ.ಫ್ಲೋರ್
ನೆಲ ಗುಡಿಸುವುದು ಅಥವಾ ವ್ಯಾಕ್ಯೂಂ ಮಾಡುವುದು ಮಾತ್ರ ಮುಖ್ಯವಲ್ಲ. ನೀವು ಒದ್ದೆ ಬಟ್ಟೆಯಿಂದ ನೆಲ ಒರೆಸುವುದು ಮತ್ತು ಇತರ ರೂಂಗಳಿಗೆ ಹೋಲಿಸಿದರೆ ಅಡಿಗೆ ಮನೆಯ ನೆಲ ಗ್ರೀಸ್ ಇರುವುದರಿಂದ ಅದನ್ನು ಒರೆಸುವುದು ಮುಖ್ಯ.

First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ