ಕ್ರೆಡಿಟ್ ಕಾರ್ಡ್ ಆಯ್ಕೆಮಾಡುವಾಗ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ..

ನಿಮ್ಮ ಜೀವನಶೈಲಿಗೆ ಅನುಗುಣವಾದ ಕಾರ್ಡ್ ಆಯ್ಕೆಯನ್ನು ನೀವು ಮಾಡಬೇಕಾಗುತ್ತದೆ. ಕಾರ್ಡ್‌ಗಳು ಹೆಚ್ಚುವರಿ ಸೇವೆ ಒದಗಿಸಿದರೂ ಬಳಸುವಾಗ ಎಚ್ಚರಿಕೆ ವಹಿಸಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಬ್ಯಾಂಕ್ ವಹಿವಾಟುಗಳ ಸಲುವಾಗಿ ನಾವು ಆರಿಸುವ ಕ್ರೆಡಿಟ್ ಕಾರ್ಡ್ ಯಾವಾಗಲೂ ಅತ್ಯುತ್ತಮವಾಗಿರುವುದಿಲ್ಲ ಎಂಬುದು ನಿಮಗೆ ಗೊತ್ತೇ? ಹೌದು ನಮಗೆ ಹೊಂದುವ ಅತ್ಯುತ್ತಮ ಕ್ರೆಡಿಟ್ ಕಾರ್ಡ್ ಯಾವುದು ಎಂಬುದನ್ನು ಆಯ್ಕೆ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಹಾಗಾದರೆ ನಮಗೆ ಉತ್ತಮವಾದ ಕ್ರೆಡಿಟ್ ಕಾರ್ಡ್‌ಗಳು ಯಾವುವು? ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.


ಡಿಸ್ಕೌಂಟ್, ಪ್ರಯೋಜನ ಹಾಗೂ ಬಹುಮಾನಗಳು


ಕೆಲವೊಂದು ಕ್ರೆಡಿಟ್ ಕಾರ್ಡ್‌ಗಳು ರೆಸ್ಟೋರೆಂಟ್‌ಗಳಲ್ಲಿ ಡಿಸ್ಕೌಂಟ್‌ ಒದಗಿಸುತ್ತವೆ. ಇನ್ನು ಕೆಲವು ಕಾರ್ಡ್‌ಗಳು ಪೆಟ್ರೋಲ್ ಬಂಕ್‌ಗಳಲ್ಲಿ ಉಪಯೋಗಕ್ಕೆ ಬಂದರೆ ಇನ್ನು ಕೆಲವು ರಿವಾರ್ಡ್‌ ಪಾಯಿಂಟ್‌ಗಳನ್ನು ಒದಗಿಸುತ್ತವೆ. ಇಂತಹ ವೈಶಿಷ್ಟ್ಯಗಳು ಬಳಕೆದಾರ ಅನುಭವವನ್ನು ವರ್ಧಿಸುವುದು ಮಾತ್ರವಲ್ಲದೆ ಕಾರ್ಡ್‌ ಬಳಕೆಯನ್ನು ಹೆಚ್ಚಿಸುತ್ತವೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿರುವ ಕಾರ್ಡ್‌ಗಳನ್ನು ಆರಿಸಿ.


ಕ್ಯಾಶ್‌ಬ್ಯಾಕ್ ಅಥವಾ ರಿವಾರ್ಡ್


ನಿಮ್ಮ ಕ್ರೆಡಿಟ್ ಕಾರ್ಡ್ ಬಳಸುವ ಸಮಯದಲ್ಲಿ ರಿವಾರ್ಡ್ ಪಾಯಿಂಟ್‌ಗಳು ಬೋನಸ್‌ನಂತೆ ಕೆಲಸ ಮಾಡುತ್ತವೆ. ನಿಮ್ಮ ವೆಚ್ಚ ಆಧರಿಸಿ ಈ ಪಾಯಿಂಟ್‌ಗಳು ನಿಮಗೆ ಲಭ್ಯವಾಗುತ್ತವೆ. ಸ್ಮಾರ್ಟ್‌ಫೋನ್ ಆಫರ್‌ಗಳು, ಇಲ್ಲವೇ ಟಿಕೆಟ್ ಖರೀದಿಯಲ್ಲಿ ದೊರೆಯುವ ರಿವಾರ್ಡ್ ಪಾಯಿಂಟ್‌ಗಳು ಹೆಚ್ಚು ಅನುಕೂಲ ಎಂದೆನಿಸಿವೆ.


ಅಂತಾರಾಷ್ಟ್ರೀಯ ಪ್ರಯೋಜನಗಳು


ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ಲಾಂಜ್ ಪ್ರವೇಶವನ್ನು ಯಾವುದೇ ಹೆಚ್ಚುವರಿ ದರವಿಲ್ಲದೆ ಒದಗಿಸುವ ಕಾರ್ಡ್‌ ಆಯ್ಕೆ ಮಾಡಿಕೊಳ್ಳಿ. ಹೊರದೇಶಗಳಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮ್ಮ ವೆಚ್ಚ ಭಾರತೀಯ ರೂಪಾಯಿಗಳಿಗೆ ಮಾರ್ಪಾಡಾಗುತ್ತದೆ. ಇದು ನಿಮ್ಮ ವೆಚ್ಚದ 3% ಹೆಚ್ಚುವರಿಯಾಗಿರುತ್ತದೆ. ಆದ್ದರಿಂದ ಕಾರ್ಡ್ ಆರಿಸುವಾಗ ಕೊಂಚ ಎಚ್ಚರಿಕೆ ವಹಿಸಿ.


ನೀವು ಹೆಚ್ಚು ಪ್ರಯಾಣಿಸದಿದ್ದರೆ, ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುವ ಕಾರ್ಡ್ ಅನವಶ್ಯಕ ಎನ್ನಿಸಬಹುದು. ಬದಲಾಗಿ, ಶಾಪಿಂಗ್ ಮತ್ತು ಹೆಚ್ಚುವರಿ ವೋಚರ್‌ಗಳ ಮೇಲೆ ರಿಯಾಯಿತಿ ನೀಡುವ ಕಾರ್ಡ್ ಉಪಯುಕ್ತವಾಗಬಹುದು.


ಇದನ್ನು ಓದಿ: ರಾಜಕೀಯಕ್ಕೆ ಬ್ರೇಕ್‌ ಘೋಷಿಸಿ ವ್ಯವಹಾರದ ಕಡೆ ವಾಲಿದ ತಮಿಳುನಾಡಿನ ಮಾಜಿ ಸಚಿವ..!

ಹೆಚ್ಚುವರಿ ವೈಶಿಷ್ಟ್ಯಗಳು


ಇನ್ನು ಕೆಲವು ಕಾರ್ಡ್‌ಗಳು ಪ್ರಯಾಣ, ಆಸ್ಪತ್ರೆ ಖರ್ಚುಗಳಲ್ಲಿ ವಿಮೆಯನ್ನು ಒದಗಿಸುತ್ತವೆ. ನಿಮ್ಮ ಜೀವನಶೈಲಿಗೆ ಅನುಗುಣವಾದ ಕಾರ್ಡ್ ಆಯ್ಕೆಯನ್ನು ನೀವು ಮಾಡಬೇಕಾಗುತ್ತದೆ. ಕಾರ್ಡ್‌ಗಳು ಹೆಚ್ಚುವರಿ ಸೇವೆ ಒದಗಿಸಿದರೂ ಬಳಸುವಾಗ ಎಚ್ಚರಿಕೆ ವಹಿಸಿ.


ಸರಿಯಾದ ಸಮಯಕ್ಕೆ ಬಿಲ್ ಪಾವತಿಸಿ


ಕಾರ್ಡ್ ಬಳಕೆ ಮಾಡಿದರೆ ಸಾಲದು, ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸುವುದು ಅಗತ್ಯವಾಗಿದೆ. ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಶುಲ್ಕ ಪಾವತಿಸದಿದ್ದಲ್ಲಿ ಶುಲ್ಕ ಹಾಗೂ ಬಡ್ಡಿ ಕೊಂಚ ವೆಚ್ಚದಾಯಕವಾಗಬಹುದು.


ಕಾರ್ಡ್‌ಗಳನ್ನು ಆಯ್ಕೆ ಮಾಡುವಾಗ ನಿಮ್ಮ ಅಗತ್ಯಗಳೆಡೆಗೆ ಗಮನ ಹರಿಸಿ. ಬೇಕಾಬಿಟ್ಟಿಯಾಗಿ ಕಾರ್ಡ್‌ಗಳ ಬಳಕೆ ಮಾಡಬೇಡಿ. ನೀವು ಹೆಚ್ಚು ಪ್ರಯಾಣ ಮಾಡದವರಾಗಿದ್ದರೆ ಶಾಪಿಂಗ್‌, ಸಿನಿಮಾ ಟಿಕೆಟ್‌ಗಳಲ್ಲಿ ವಿನಾಯಿತಿ ನೀಡುವ ಕಾರ್ಡ್‌ ಬಳಸಿ.


ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆದಲ್ಲಿ ಚೆಕ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ. ಆದರೆ ಬಡ್ಡಿಯನ್ನು ನೀವು ಪಾವತಿಸಬೇಕಾಗುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್‌ನಿಂದ ಹಣ ಪಡೆಯುವುದು ಅಷ್ಟೊಂದು ಉತ್ತಮ ಸಲಹೆಯಲ್ಲ. ಒಟ್ಟಿನಲ್ಲಿ ಡೆಬಿಟ್ ಕಾರ್ಡ್‌ಗಿಂತ ಕ್ರೆಡಿಟ್ ಕಾರ್ಡ್ ಕೈಯಲ್ಲಿದ್ದರೆ ರಿವಾರ್ಡ್ ಪಾಯಿಂಟ್‌ಗಳು ಸುಲಭವಾಗಿ ದೊರೆಯುತ್ತವೆ. ವಸ್ತು, ಉಡುಗೊರೆ ಖರೀದಿಸಲು, ಪ್ರಯಾಣ ಟಿಕೆಟ್ ಬುಕ್ ಮಾಡಲು ನೆರವಾಗುತ್ತವೆ.First published: