Stress: ‘ಅಯ್ಯೋ ಜನ ಏನಂತಾರೋ’ ಅನ್ನೋ ಚಿಂತೆ ಬಿಡಿ, ಈ ಟಿಪ್ಸ್​ ಫಾಲೋ ಮಾಡಿ ಖುಷಿಯಾಗಿರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತರರು ಏನೆಂದುಕೊಳ್ಳುತ್ತಾರೆ ಮತ್ತು ಅವರ ಅಭಿಪ್ರಾಯಗಳ ಸುಳಿಯಲ್ಲಿ ಸಿಲುಕಿಕೊಳ್ಳುವುದು ತುಂಬಾನೇ ಸುಲಭ, ಆದರೆ ಅದರಿಂದ ಹೊರ ಬರುವುದು ಮಾತ್ರ ತುಂಬಾನೇ ಕಷ್ಟದ ಕೆಲಸ ಎನ್ನುವುದನ್ನು ಮರೆಯಬೇಡಿ. ಇತರರ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸುವುದು ಹೇಗೆ ಮತ್ತು ನಿಮ್ಮ ಮನಸ್ಸನ್ನು ಯಾವುದೇ ಬಿಕ್ಕಳಿಕೆಗಳಿಂದ ಮುಕ್ತಗೊಳಿಸುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಮುಂದೆ ಓದಿ ...
  • Share this:

‘ನೀನು ಹೀಗೆ ಮಾಡಿದರೆ ಸಮಾಜದಲ್ಲಿರೋ (Society) ನಾಲ್ಕು ಜನರು ಏನಂತಾರೆ ಗೊತ್ತೇ’ ಎಂಬ ಮಾತನ್ನು ನಾವು ಪ್ರತಿದಿನ ಯಾವುದಾದರೊಂದು ಸಂದರ್ಭದಲ್ಲಿ ಕೇಳುತ್ತಲೇ ಇರುತ್ತೇವೆ ಎಂದು ಹೇಳಿದರೆ ಸುಳ್ಳಲ್ಲ. ಹೌದು,  ತುಂಬಾ ಹಿಂದಿನಿಂದಲೂ ಜನರು (People) ತಮ್ಮ ಮನೆಯ ಮಗ ಹೀಗೆ ಮಾಡಿದರೆ, ನೋಡಿದವರು ಏನಂತಾರೋ ಮತ್ತು ಮನೆಯ ಮಗಳು ಈ ಕೆಲಸ (Work) ಮಾಡಿದರೆ ನೋಡಿದವರು ಏನಂತಾರೋ ಅಂತ ಸುಮ್ಮನೆ ಚಿಂತೆ (worry) ಮಾಡುವುದನ್ನು ನಾವು ಒಂದಲ್ಲ ಒಂದು ಸಂದರ್ಭದಲ್ಲಿ ನೋಡಿರುತ್ತೇವೆ. ಈ ನಾಲ್ಕು ಮಂದಿ ಏನೆಂದು ಕೊಳ್ಳುತ್ತಾರೆ ಅನ್ನೋ ಮಾತಿನಲ್ಲಿ ನಮ್ಮ ಇಷ್ಟದ ಬದುಕನ್ನು (Life) ಬದುಕುವುದಕ್ಕೆ ನಾವೆಲ್ಲಾ ಹಿಂಜರಿಯುತ್ತಿದ್ದೇವೆ ಅಂತ ಹೇಳಬಹುದು.


ಯಾರು ಯಾರ ಬಗ್ಗೆ ಯೋಚನೆ ಮಾಡಲು ಸಮಯವಿದೆ ಹೇಳಿ? ಹಾಗೆ ಯೋಚನೆ ಮಾಡಿ ಒಂದೆರಡು ಟೀಕೆ ಮಾತಾಡಿದರೆ ಏನಾಗುತ್ತದೆ ಹೇಳಿ? ಹೀಗೆ ಎಂದುಕೊಂಡು ನಮ್ಮ ಇಷ್ಟದ ಕೆಲಸಗಳನ್ನು ಮತ್ತು ಆಯ್ಕೆಗಳನ್ನು ಜೀವನದಲ್ಲಿ ಮಾಡಿಕೊಳ್ಳುವುದು ನಮ್ಮ ವೈಯುಕ್ತಿಕ ಬೆಳವಣಿಗೆಗೆ ತುಂಬಾನೇ ಸಹಾಯ ಮಾಡುತ್ತದೆ.


ಇತರರು ಏನೆಂದುಕೊಳ್ಳುತ್ತಾರೆ ಮತ್ತು ಅವರ ಅಭಿಪ್ರಾಯಗಳ ಸುಳಿಯಲ್ಲಿ ಸಿಲುಕಿಕೊಳ್ಳುವುದು ತುಂಬಾನೇ ಸುಲಭ, ಆದರೆ ಅದರಿಂದ ಹೊರ ಬರುವುದು ಮಾತ್ರ ತುಂಬಾನೇ ಕಷ್ಟದ ಕೆಲಸ ಎನ್ನುವುದನ್ನು ಮರೆಯಬೇಡಿ. ಇತರರ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸುವುದು ಹೇಗೆ ಮತ್ತು ನಿಮ್ಮ ಮನಸ್ಸನ್ನು ಯಾವುದೇ ಬಿಕ್ಕಳಿಕೆಗಳಿಂದ ಮುಕ್ತಗೊಳಿಸುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕೆಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.


ಈ ಬಗ್ಗೆ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಕಾಮ್ನಾ ಚಿಬ್ಬರ್ ಅವರ ಸಲಹೆಗಳೇನು?
"ಇತರರ ಅಭಿಪ್ರಾಯಗಳ ಬಗ್ಗೆ ಯೋಚಿಸುವುದು ಹೆಚ್ಚಿನ ಜನರಿಗೆ ಸ್ವಾಭಾವಿಕವಾಗಿ ಬರುತ್ತದೆ. ಸ್ವತಂತ್ರ ಮತ್ತು ವೈಯಕ್ತಿಕ ಚಿಂತನಾ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವುದು ಯಾವಾಗಲೂ ಸುಲಭವಲ್ಲ ಮತ್ತು ವ್ಯಕ್ತಿಯ ಬೆಳೆಯುತ್ತಿರುವ ವರ್ಷಗಳಲ್ಲಿ ಅಗತ್ಯವಾಗಿ ಪೋಷಿಸುವ ವಿಷಯ ಇದಲ್ಲ" ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಕಾಮ್ನಾ ಚಿಬ್ಬರ್ ಅವರು ಹೇಳಿದ್ದಾರೆ.


ನಿಮ್ಮ ಕನಸುಗಳು ಮತ್ತು ಬಯಕೆಗಳ ಮೇಲೆ ಕೇಂದ್ರೀಕರಿಸುವ ಬದಲು ಜನರು ಸರಿ ಎಂದು ಭಾವಿಸುವ ಪ್ರಕಾರ ನೀವು ನಿಮ್ಮ ಜೀವನವನ್ನು ಕುಶಲತೆಯಿಂದ ನಿರ್ವಹಿಸುವುದನ್ನು ಮುಂದುವರಿಸಿದರೆ, ಒಂದು ದಿನ ನೀವು ಉಸಿರುಗಟ್ಟಿದ ಭಾವನೆಗೆ ಒಳಗಾಗುತ್ತೀರಿ. ನಮಗೆ ಒಂದು ಜೀವನವಿದೆ, ಅದನ್ನು ಬದುಕೋಣ, ಅಷ್ಟಕ್ಕೂ 'ಜನ ಎಲ್ಲದಕ್ಕೂ ಏನಾದರೂ ಹೇಳುತ್ತಾರೆ, ನಾವು ನಮ್ಮ ರೀತಿಯಲ್ಲಿ ಕೆಲಸಗಳನ್ನು ಮಾಡೋಣ.


ಜನರು ಏನಂತಾರೆ ಎಂಬುದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಲು ಇಲ್ಲಿವೆ ನೋಡಿ ಕೆಲವು ಸಲಹೆಗಳು
ಜನರು ತಮ್ಮದೇ ಆದ ವಿಶಿಷ್ಟ ಆಲೋಚನಾ ವಿಧಾನಗಳಲ್ಲಿ ಹೆಚ್ಚಿನ ನಂಬಿಕೆಯನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬಹುದಾದ ಮಾರ್ಗಗಳಿವೆ. ಜನರ ನಕಾರಾತ್ಮಕ ಟೀಕೆಗಳನ್ನು ಎದುರಿಸಲು ಡಾ. ಚಿಬ್ಬರ್ ಈ ಕೆಳಗಿನ ಮಾರ್ಗಗಳನ್ನು ಸೂಚಿಸುತ್ತಾರೆ ನೋಡಿ.


ಇದನ್ನೂ ಓದಿ:  5 Hour Rule: ಇದೇನಿದು 5 ಗಂಟೆಗಳ ನಿಯಮ? ಎಲೋನ್ ಮಸ್ಕ್ ಮತ್ತು ಬಿಲ್ ಗೇಟ್ಸ್ ಸಹ ಇದನ್ನೇ ಫಾಲೋ ಮಾಡ್ತಾರಂತೆ


1. ನಿಮಗೆ ಯಾವುದು ಮುಖ್ಯವೋ ಅದರ ಬಗ್ಗೆ ಮಾತ್ರ ಆಲೋಚಿಸಿ
ನಿಮಗೆ ಯಾವುದು ಮುಖ್ಯವೋ ಅದರ ಮೇಲೆ ನಿಮ್ಮ ಗಮನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಲೇ ಇರಿ. ಜನರು ಯಾವಾಗಲೂ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ ಮತ್ತು ಅದು ನಿಮ್ಮ ಸ್ವಂತ ಸ್ವತಂತ್ರ ಚಿಂತನಾ ಪ್ರಕ್ರಿಯೆಯ ಪ್ರಾಮುಖ್ಯತೆ ಅಥವಾ ಪ್ರಸ್ತುತತೆಯನ್ನು ಹೆಚ್ಚಿಸುವುದಿಲ್ಲ ಅಥವಾ ಕಡಿಮೆ ಮಾಡುವುದಿಲ್ಲ ಎಂಬುದನ್ನು ಅರಿತುಕೊಳ್ಳಿ.


2. ಇತರರ ಯೋಚನೆಯನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ
ಜನರು ಏನನ್ನು ಬಯಸುತ್ತಾರೆಂದು ಯೋಚಿಸುವುದನ್ನು ನೀವು ತಡೆಯಲು ಸಾಧ್ಯವಿಲ್ಲ, ಆದರೆ ನೀವು ಏನು ಮಾಡಬೇಕೆಂದು ನಿಮ್ಮ ಗಮನವನ್ನು ಖಂಡಿತವಾಗಿಯೂ ತಿರುಗಿಸಬಹುದು. ನಿಮ್ಮ ಕೆಲಸಗಳು ಮತ್ತು ಚಟುವಟಿಕೆಗಳ ಕಡೆಗೆ ನಿಮ್ಮ ಗಮನವನ್ನು ಮರು ನಿರ್ದೇಶಿಸಲು ಸಾಧ್ಯವಾಗುವುದು ಇತರರು ಏನು ಯೋಚಿಸಬಹುದು ಎಂಬುದರ ಬಗ್ಗೆ ಯೋಚಿಸದೆ ಇರುವುದರಿಂದ ಎಂಬುದನ್ನು ಅರಿತುಕೊಳ್ಳಿರಿ.


3. ನಿಮ್ಮ ಕೆಲಸಗಳು ನಿಮ್ಮ ಆಯ್ಕೆಯಾಗಿರಬೇಕು
ನೀವು ತೆಗೆದುಕೊಳ್ಳುವ ಕ್ರಮಗಳು ಅಥವಾ ನೀವು ಆಲೋಚಿಸುವ ವಿಧಾನದಿಂದಾಗಿ ಜನರು ನಿಮ್ಮ ಬಗ್ಗೆ ಹೇಗೆ ಯೋಚಿಸುತ್ತಿದ್ದಾರೆ ಎಂಬುದು ಮುಖ್ಯವಲ್ಲ ಎಂಬ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ. ಬದಲಾಗಿ ನಿಮ್ಮ ಕಾರ್ಯಗಳು ಜನರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದು ಮುಖ್ಯವಾಗಿದೆ. ಇದರ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಇತರರು ನಿಮ್ಮನ್ನು ಹೇಗೆ ಗ್ರಹಿಸುತ್ತಿದ್ದಾರೆ ಎಂಬುದರ ಬಗ್ಗೆ ಚಿಂತಿತರಾಗುವುದರಿಂದ ದೂರವಿರಲು ನಿಮಗೆ ಸಾಧ್ಯವಾಗುತ್ತದೆ.


ಇದನ್ನೂ ಓದಿ:  Working Women: ಒತ್ತಡವಿಲ್ಲದೆ ಮಹಿಳೆಯರು ಕೆಲಸ ಮಾಡುವುದು ಹೇಗೆ? ಈ ಕೆಲವು ಟಿಪ್ಸ್ ಮರೆಯಬೇಡಿ


4. ನಿಮ್ಮ ದೃಷ್ಟಿಕೋನವೆ ಉತ್ತಮವಾದದ್ದು
ನಿಮ್ಮ ಉದ್ದೇಶ ಮತ್ತು ತಾರ್ಕಿಕತೆಯನ್ನು ನೀವು ಮಾತ್ರ ಚೆನ್ನಾಗಿ ತಿಳಿಯಲು ಸಾಧ್ಯ. ಹಾಗಾಗಿ ನಿಮ್ಮ ದೃಷ್ಟಿಕೋನವೆ ಉತ್ತಮವಾಗಿರುತ್ತದೆ ಎಂಬುದನ್ನು ಅರಿತುಕೊಳ್ಳಿರಿ. ನಿಮ್ಮ ಆಲೋಚನೆಯು ಎಲ್ಲಿದೆ ಅಥವಾ ಏಕೆ ಇದೆ ಎಂಬುದನ್ನು ಬೇರೆ ಯಾರೂ ನಿಜವಾಗಿಯೂ ಗ್ರಹಿಸಲು ಸಾಧ್ಯವಿಲ್ಲ. ಯಾವುದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೀವೇ ನಿರ್ಧರಿಸಿ ಮತ್ತು ನಿಮ್ಮ ಗುರಿಗಳನ್ನು ತಲುಪಲು ನಿಮಗೆ ಸಹಾಯವಾಗುವಂತೆ ಅದನ್ನು ಸುಧಾರಿಸುವತ್ತ ಕೆಲಸ ಮಾಡಿ.


5. ಸ್ವಯಂ-ಜಾಗೃತರಾಗಿರಿ
ನೀವು ಏನು ಮಾಡುತ್ತಿದ್ದೀರಿ ಮತ್ತು ನೀವು ಅದನ್ನು ಏಕೆ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನೀವು ಹೊಂದಿರುವ ತಿಳುವಳಿಕೆಯಲ್ಲಿ ನಿಮ್ಮನ್ನು ನೀವು ನೆಲೆಗೊಳಿಸಿಕೊಳ್ಳಿ. ಹೆಚ್ಚಿನ ಸ್ವಯಂ-ಅರಿವು ಮತ್ತು ತಿಳುವಳಿಕೆಯು ಇತರರ ಗ್ರಹಿಕೆಗಳ ಬಗ್ಗೆ ಚಿಂತೆ ಮತ್ತು ಕಾಳಜಿಯಿಂದ ದೂರ ಸರಿಯಲು ಸಾಧ್ಯವಾಗುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.


6. ಎಲ್ಲವೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ
ಪರಿಪೂರ್ಣತೆಗಾಗಿ ಶ್ರಮಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವ ಮತ್ತು ಕೆಲಸ ಮಾಡುವ ಗುರಿಯನ್ನು ಇಟ್ಟುಕೊಳ್ಳಿ. ನೆನಪಿಡಿ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ ಮತ್ತು ಜೀವನದುದ್ದಕ್ಕೂ ನಾವು ಸರಿ ತಪ್ಪು ಮತ್ತು ತಿದ್ದುಕೊಳ್ಳುವಿಕೆಯ ಪ್ರಕ್ರಿಯೆಯ ಮೂಲಕ ಹಾದು ಹೋಗುತ್ತೇವೆ.


7. ನಿಮ್ಮ ಸಾಧನೆಗಳನ್ನು ಒಪ್ಪಿಕೊಳ್ಳಿ
ನೀವು ಇದುವರೆಗೂ ಏನನ್ನು ಸಾಧಿಸಿದ್ದೀರಿ ಎಂಬುದನ್ನು ಮೊದಲು ನೀವು ಒಪ್ಪಿಕೊಳ್ಳುವ ಮೂಲಕ ಮತ್ತು ಆಂತರಿಕವಾಗಿ ನಿಮ್ಮನ್ನು ನೀವು ಹೊಗಳುವಿಕೆಯ ಮೂಲಕ ನಿಮಗೆ ನೀವೇ ಧನಾತ್ಮಕ ಬಲವರ್ಧನೆಯನ್ನು ನೀಡಿ. ನೀವು ಏನು ಮಾಡುತ್ತೀರಿ ಮತ್ತು ನೀವು ಅದನ್ನು ಹೇಗೆ ಮಾಡುತ್ತೀರಿ ಎಂಬುದರ ಬಗ್ಗೆ ನಿಮ್ಮ ಚಿಂತನೆ ಇರಲಿ.


8. ನಿಮ್ಮ ಗ್ರಹಿಕೆ ಯಾವಾಗಲೂ ನಿಜವಾಗಿರುವುದಿಲ್ಲ
ಕೊನೆಯದಾಗಿ, ನೀವು ಏನನ್ನು ಗ್ರಹಿಸುತ್ತೀರೋ ಅದು ಪರಿಸ್ಥಿತಿಯ ನಿಖರವಾದ ವಾಸ್ತವತೆಯಾಗಿರದೇ ಇರಬಹುದು ಎಂಬುದನ್ನು ನೆನಪಿಡಿ. ಇನ್ನೊಬ್ಬರು ನಿಮ್ಮ ಬಗ್ಗೆ ಏನನ್ನು ಭಾವಿಸಬಹುದು ಮತ್ತು ನೀವು ಯೋಚಿಸುವ ವಿಧಾನಗಳು ಅವರಿಗೆ ಸರಿ ಅನ್ನಿಸದೆ ಇರಬಹುದು. ಹಾಗಂತ ನಿಮ್ಮ ಗ್ರಹಿಕೆ ತಪ್ಪು ಅಲ್ಲ ಮತ್ತು ಯಾವಾಗಲೂ ನಿಜವೂ ಆಗಿರುವುದಿಲ್ಲ. ಜನರ ಅಭಿಪ್ರಾಯಗಳಿಗೆ ಕಿವಿಗೊಡುವ ಬದಲು, ನೀವು ಏನು ಮಾಡುತ್ತೀರಿ ಮತ್ತು ನೀವು ಅದನ್ನು ಏಕೆ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಿ.


ಇದನ್ನೂ ಓದಿ:  Healthy Relationship: ಆರೋಗ್ಯಕರ ಸಂಬಂಧದಲ್ಲಿ ಎಂದಿಗೂ ಈ ವಿಷಯಗಳಲ್ಲಿ ಮಾತ್ರ ರಾಜಿ ಮಾಡ್ಕೋಬೇಡಿ


ಇವುಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ನೀವು ಇತರರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಲು ಮತ್ತು ನಿಮ್ಮ ಮೇಲೆ ಗಮನ ಕೇಂದ್ರೀಕರಿಸಲು ಸಹಾಯವಾಗುತ್ತದೆ.

top videos
    First published: