Wooden Furniture: ಮಳೆಗಾಲದಲ್ಲಿ ಮನೆಯಲ್ಲಿರುವ ಪೀಠೋಪಕರಣಗಳು ಹಾಳಾಗದಂತೆ ನೋಡಿಕೊಳ್ಳಲು ಕೆಲವು ಟಿಪ್ಸ್

ಫನುಸ್ತಾ ಡಾಟ್ ಕಾಮ್ ನ ಸಿಇಒ ಶೈಲಂದರ್ ಕುಮಾರ್ ಮತ್ತು ಎಂಕೆಎಂಲ್ಯೂಕ್ಸ್ ಸ್ಯೂಸ್ಸೆ ಯುರೋಪಿಯನ್ ಡೆಕೋರ್ ಬ್ರಾಂಡ್ ನ ಸಿಇಒ ಮತ್ತು ಒಳಾಂಗಣ ವಿನ್ಯಾಸಕ ಜೇಡ್ ಡೇವಿಸ್ ಅವರು ಈ ಮಾನ್ಸೂನ್ ನಲ್ಲಿ ನಿಮ್ಮ ಮನೆಯಲ್ಲಿರುವಂತಹ ಮರದ ಪೀಠೋಪಕರಣಗಳನ್ನು ಚೆನ್ನಾಗಿಟ್ಟುಕೊಳ್ಳಲು ಮತ್ತು ಅವುಗಳು ಹಾಳಾಗದಂತೆ ನೋಡಿಕೊಳ್ಳಲು ಕೆಲವು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
‘ಸುಡುವ ಬಿಸಿಲಿನಿಂದ ಯಾವಾಗಪ್ಪಾ ಬಿಡುಗಡೆ ಸಿಗುತ್ತೆ’ ಅಂತ ನಾವು ಬಹುತೇಕರು ಮಳೆಗಾಲ (Rainy Season) ಬರುವುದನ್ನು ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತೇವೆ. ಆದರೆ ಪ್ರಾರಂಭದಲ್ಲಿ ನಾವು ಮಳೆಗಾಲವನ್ನು ತುಂಬಾನೇ ಆನಂದಿಸುತ್ತೇವೆ. ಅದೇ ಮಳೆ ಬಿಟ್ಟು ಬಿಡದೆ ಸುರಿಯಲು ಶುರು ಮಾಡಿದರೆ, 'ಏನಪ್ಪಾ ಈ ಮಳೆ (Rain) ಕಡಿಮೆನೆ ಆಗ್ತಾ ಇಲ್ವಲ್ಲಾ’ ಅಂತ ಅನ್ನಿಸುವುದಕ್ಕೆ ಶುರುವಾಗುತ್ತದೆ. ಮಳೆಗಾಲದಲ್ಲಿ ಬಟ್ಟೆ ಬೇಗ ಒಣಗುವುದಿಲ್ಲ, ಮನೆಯೆಲ್ಲಾ (Home) ಒಂದು ರೀತಿಯ ತೇವಾಂಶದಿಂದ ಕೂಡಿರುತ್ತದೆ, ಮಳೆಯಿಂದಾಗಿ ಮನೆಯ ಗೋಡೆಗಳು ಒದ್ದೆಯಾಗಿರುತ್ತವೆ ಮತ್ತು ಮನೆಯಲ್ಲಿರುವ ಮರದ ಕುರ್ಚಿ, ಟೇಬಲ್ ಗಳು ಸಹ ಒಂದು ರೀತಿಯಲ್ಲಿ ತೇವಾಂಶ (moisture) ತಗುಲಿ ಸ್ವಲ್ಪ ಗಟ್ಟಿತನವನ್ನು ಕಳೆದುಕೊಳ್ಳುತ್ತವೆ ಎಂದು ಹೇಳಬಹುದು.

ಇದರ ಜೊತೆಗೆ ಮನೆಯಿಂದ ಹೊರಗೆ ಹೋಗುವ ಹಾಗಿಲ್ಲ, ಹೋದರೆ ಬಂದ ಮೇಲೆ ಆ ಒದ್ದೆ ಬಟ್ಟೆಗಳನ್ನು ಒಣಗಿಸುವುದಕ್ಕೆ ಹಾಕಬೇಕು. ಆ ಬಟ್ಟೆಗಳು ಬೇಗ ಒಣಗುವುದಿಲ್ಲ ಹೀಗೆ ಸಮಸ್ಯೆಗಳು ಮಳೆಗಾಲದಲ್ಲಿ ತುಂಬಾನೇ ಇರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮನೆಯಲ್ಲಿರುವ ಪೀಠೋಪಕರಣಗಳು ಹಾಳಾಗದಂತೆ ಏನು ಮಾಡಬೇಕು
ನಿಮ್ಮ ಮನೆಯಲ್ಲಿರುವ ಪೀಠೋಪಕರಣಗಳು ಹಾಳಾಗದಂತೆ ನೋಡಿಕೊಳ್ಳುವುದು ಒಂದು ಸವಾಲು ಅಂತ ಹೇಳಬಹುದು. ಅಂತಹ ಪೀಠೋಪಕರಣಗಳನ್ನು ಮಳೆಗಾಲ ಮುಗಿಯುವವರೆಗೂ ಚೆನ್ನಾಗಿ ನಿರ್ವಹಿಸಲು ಕೆಲವು ಅತ್ಯುತ್ತಮ ಮಾರ್ಗಗಳೆಂದರೆ ಕೀಟನಾಶಕ ಡಿಯೋಡ್ರೆಂಟ್ ಮತ್ತು ಕರ್ಪೂರ ಅಥವಾ ನ್ಯಾಫ್ಥಲೀನ್ ಉಂಡೆಗಳನ್ನು ಬಳಸುವುದು.  ಏಕೆಂದರೆ ಅವು ತೇವಾಂಶವನ್ನು ಹೀರಿಕೊಳ್ಳುವವುಗಳಾಗಿವೆ.

ಫನುಸ್ತಾ ಡಾಟ್ ಕಾಮ್ ನ ಸಿಇಒ ಶೈಲಂದರ್ ಕುಮಾರ್ ಮತ್ತು ಎಂಕೆಎಂಲ್ಯೂಕ್ಸ್ ಸ್ಯೂಸ್ಸೆ ಯುರೋಪಿಯನ್ ಡೆಕೋರ್ ಬ್ರಾಂಡ್ ನ ಸಿಇಒ ಮತ್ತು ಒಳಾಂಗಣ ವಿನ್ಯಾಸಕ ಜೇಡ್ ಡೇವಿಸ್ ಅವರು ಈ ಮಾನ್ಸೂನ್ ನಲ್ಲಿ ನಿಮ್ಮ ಮನೆಯಲ್ಲಿರುವಂತಹ ಮರದ ಪೀಠೋಪಕರಣಗಳನ್ನು ಚೆನ್ನಾಗಿಟ್ಟುಕೊಳ್ಳಲು ಮತ್ತು ಅವುಗಳು ಹಾಳಾಗದಂತೆ ನೋಡಿಕೊಳ್ಳಲು ಕೆಲವು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

1. ತೇವಾಂಶವನ್ನು ದೂರವಿಡಿ
ಪೀಠೋಪಕರಣಗಳು ಗೋಡೆಗಳಿಂದ ತೇವಾಂಶವನ್ನು ಆಕರ್ಷಿಸುವ ಪ್ರವೃತ್ತಿಯನ್ನು ಹೊಂದಿವೆ, ಇದು ಅಂತಿಮವಾಗಿ ಆ ಪೀಠೋಪಕರಣದ ಮರದ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಹಾನಿಯನ್ನು ತಡೆಗಟ್ಟಲು ನಿಮ್ಮ ಸೋಫಾಗಳು, ಹಾಸಿಗೆಗಳು, ವಾರ್ಡ್ರೋಬ್ ಗಳು ಅಥವಾ ಕಪಾಟುಗಳನ್ನು ಗೋಡೆಗಳಿಂದ ಆರು ಇಂಚುಗಳಷ್ಟು ದೂರಕ್ಕೆ ಎಳೆದಿಡುವುದು ಒಳ್ಳೆಯದು. ಹೊರಗೆ ಮಳೆ ನಿಂತಾಗ ಮನೆಯ ಎಲ್ಲಾ ಕಿಟಕಿಗಳನ್ನು ತೆರೆದಿಡಿ, ಇದು ಸೂರ್ಯನ ಬೆಳಕು ಒಳಗೆ ಹೋಗಲು ಅವಕಾಶ ಮಾಡಿಕೊಡುತ್ತದೆ. ಇದು ಕೋಣೆಗಳನ್ನು ತೇವಾಂಶದಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Varicose Veins: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

2. ಕೀಟನಾಶಕ ಡಿಯೋಡರೆಂಟ್ ಬಳಸಿ
ಕರ್ಪೂರ ಅಥವಾ ನ್ಯಾಫ್ಥಲೀನ್ ಉಂಡೆಗಳು ಉತ್ತಮ ತೇವಾಂಶವನ್ನು ಹೀರಿಕೊಳ್ಳುತ್ತವೆ. ಗೆದ್ದಲುಗಳು ಮತ್ತು ಇತರ ಕೀಟಗಳಿಂದ ಬಟ್ಟೆಗಳು ಮತ್ತು ವಾರ್ಡ್ರೋಬ್ ಗಳನ್ನು ರಕ್ಷಿಸಲು ಸಹ ಅವು ಸಹಾಯ ಮಾಡುತ್ತವೆ. ನೀವು ಹೆಚ್ಚು ನೈಸರ್ಗಿಕವಾದದ್ದನ್ನು ಪಡೆಯಲು ಬಯಸಿದರೆ, ಬೇವಿನ ಎಲೆಗಳು ಅಥವಾ ಲವಂಗಗಳು ಅದೇ ಉದ್ದೇಶವನ್ನು ಪೂರೈಸುತ್ತವೆ.

3. ಹ್ಯೂಮಿಡಿಫೈಯರ್ ಬಳಸಿ
ತಾಪಮಾನ ಮತ್ತು ತೇವಾಂಶವನ್ನು ನಿಯಂತ್ರಣದಲ್ಲಿಡಲು ಹ್ಯೂಮಿಡಿಫೈಯರ್ ಗಳನ್ನು ಬಳಸುವುದು ಉತ್ತಮ. ಮನೆಯಲ್ಲಿ ತೇವಾಂಶದ ಮಟ್ಟಗಳ ಮೇಲೆ ನಿಯಂತ್ರಣವನ್ನು ಹೊಂದಿರುವುದು ನಿಮ್ಮ ಪೀಠೋಪಕರಣಗಳು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ.

4. ಒದ್ದೆ ಬಟ್ಟೆಗಳನ್ನು ಪೀಠೋಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ಬಳಸಬೇಡಿ
ನಿಮ್ಮ ಮನೆಯಲ್ಲಿ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಲು ಒದ್ದೆಯಾದ ಬಟ್ಟೆಗಳನ್ನು ಬಳಸಬೇಡಿ. ಬದಲಿಗೆ ಸ್ವಚ್ಛವಾದ ಮತ್ತು ಒಣಗಿದ ವೈಪಿಂಗ್ ಬಟ್ಟೆಗಳನ್ನು ಬಳಸುವುದು ಒಳ್ಳೆಯದು. ಇದಲ್ಲದೆ, ಮರದ ವಸ್ತುಗಳಿಗೆ ಅಂಟಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಮಳೆಗಾಲದಲ್ಲಿ ಧೂಳನ್ನು ಅಶುದ್ಧವಾಗಿ ಬಿಡಬಾರದು.

ಇದನ್ನೂ ಓದಿ:  Vastu Tips: ಅಪ್ಪಿತಪ್ಪಿಯೂ ಮನೆಯ ಮುಂದೆ ಈ ನಾಲ್ಕು ವಸ್ತುಗಳನ್ನ ಇರಿಸಬೇಡಿ

5. ಲ್ಯಾಕರ್ ಬಳಸಿ
ಪೀಠೋಪಕರಣಗಳ ಪಾಲಿಶ್ ಅನ್ನು ಅವಲಂಬಿಸಿ, ರಂಧ್ರಗಳನ್ನು ತುಂಬಲು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಲ್ಯಾಕರ್ ಅಥವಾ ವಾರ್ನಿಷ್ ಲೇಪನವನ್ನು ಹಚ್ಚಿ ಮತ್ತು ಅದರ ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ, ಏಕೆಂದರೆ ಇದು ಮರವು ಮಳೆಗಾಲದಲ್ಲಿ ಊದಿಕೊಳ್ಳುವುದನ್ನು ತಡೆಯುತ್ತದೆ.
Published by:Ashwini Prabhu
First published: