Bad Smell Armpits: ದೇಹದ ದುರ್ಗಂಧ ಮತ್ತು ಬೇಸಿಗೆಯಲ್ಲಿ ಉಂಟಾಗುವ ಬೆವರು ವಾಸನೆ ತೊಡೆದು ಹಾಕಲು ಇಲ್ಲಿವೆ ಕೆಲ ಸಲಹೆ  

ಫ್ಯಾನ್ ಮತ್ತು ಕೂಲರ್‌ ಬಿಟ್ಟು ಮನೆಯಿಂದ ಹೊರಗೆ ಹೆಜ್ಜೆ ಹಾಕಿದ ತಕ್ಷಣ ಬಿಸಿಲು, ಧೂಳು, ಗಾಳಿ, ಬೆವರು ಕಾಡುತ್ತದೆ. ಸೂರ್ಯನ ಬೆಳಕು ಮತ್ತು ಧೂಳಿನ ಕಣಗಳು ನಿಮ್ಮ ದೇಹವನ್ನು ಸುತ್ತುವರಿಯುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆಯ (Summer) ಬಿಸಿ (Heat), ಬಿಸಿಲಿನ ಶಾಖ, ಬೆವರು (Sweat) ವಾಸನೆ (Smell) ಬೇಸಿಗೆಯಲ್ಲಿ ಸಾಕಷ್ಟು ಕಾಡುತ್ತದೆ. ಎಷ್ಟೇ ಫ್ರೆಶ್ (Fresh) ಆಗಿ, ಸ್ನಾನ ಮಾಡಿ, ಪರ್ಪ್ಯೂಮ್ ಹಾಕಿಕೊಂಡು ಬಂದರೂ ಸಹ ಬಿಸಿಲಿನ ಹಬೆಗೆ ಮೈಯೆಲ್ಲಾ (Body) ರಾಡಿಯಾಗುತ್ತದೆ. ಬೆವರು ಹರಿದು, ಯಾವಾಗ ಸ್ನಾನ ಮಾಡುವುದೋ ಎಂಬಂತಾಗುತ್ತದೆ. ಫ್ಯಾನ್ ಮತ್ತು ಕೂಲರ್‌ ಬಿಟ್ಟು ಮನೆಯಿಂದ ಹೊರಗೆ ಹೆಜ್ಜೆ ಹಾಕಿದ ತಕ್ಷಣ ಬಿಸಿಲು, ಧೂಳು, ಗಾಳಿ, ಬೆವರು ಕಾಡುತ್ತದೆ. ಸೂರ್ಯನ ಬೆಳಕು ಮತ್ತು ಧೂಳಿನ ಕಣಗಳು ನಿಮ್ಮ ದೇಹವನ್ನು ಸುತ್ತುವರಿಯುತ್ತವೆ. ಬಿಸಿಲ ಧಗೆ ಈಗ ಹೆಚ್ಚಿದೆ. ಹಾಗಾಗಿ ಮನೆಯಲ್ಲಿದ್ದರೂ, ಮನೆಯಿಂದ ಹೊರಗೆ ಬಂದಾಗಲೂ ದೇಹವು ತುಂಬಾ ಬೆವರಲು ಪ್ರಾರಂಭಿಸುತ್ತದೆ.

    ಕಂಕುಳಿನ ಬೆವರು ವಾಸನೆಯಿಂದ ಮುಜುಗರ

    ಆದರೆ ಕೆಲವರ ದೇಹವು ಬೆವರಿನಿಂದಾಗಿ ಕೆಟ್ಟದಾಗಿ ವಾಸನೆ ಬರುತ್ತದೆ. ಅದರಲ್ಲೂ ಕಂಕುಳಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಅದರಿಂದ ಸಾಕಷ್ಟು ಮುಜುಗರ, ನಾಚಿಕೆ ಅನುಭವಿಸಬೇಕಾಗುತ್ತದೆ. ಮೈ ಬೆವರಿನ ವಾಸನೆ ಬರುತ್ತಿದ್ದರೆ ಅಂತಹ ಜನರೊಂದಿಗೆ ಕುಳಿತುಕೊಳ್ಳಲು ಜನರು ತುಂಬಾ ಕಷ್ಟ ಪಡುತ್ತಾರೆ.

    ಅನೇಕ ಬಾರಿ ಜನರು ಬೆವರಿನ ವಾಸನೆಯಿಂದ ಪರಿಹಾರ ಪಡೆಯಲು ಡಿಯೋ ಅಥವಾ ಸುಗಂಧ ದ್ರವ್ಯ ಲೇಪಿಸುತ್ತಾರೆ. ನಂತರ ಮನೆಯಿಂದ ಆಚೆ ಕಾಲಿಡುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಡಿಯೋ ಅಥವಾ ಸುಗಂಧ ದ್ರವ್ಯಗಳ ಪ್ರಭಾವ ಮತ್ತು ಪರಿಣಾಮ ಕಡಿಮೆಯಾಗಿ, ಮತ್ತೆ ದೇಹ ಬೆವರಿನ ವಾಸನೆ ಬರುತ್ತದೆ.

    ಇದನ್ನೂ ಓದಿ: ಹೀಟ್ ಸ್ಟ್ರೋಕ್​​ನಿಂದ ಹಲವು ಆರೋಗ್ಯ ಸಮಸ್ಯೆ! ಇದಕ್ಕೇನು ಪರಿಹಾರ?

    ಬೆವರು ವಾಸನೆ ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ

    ಹೆಚ್ಚಿನ ಜನರು ತಮ್ಮ ಕಂಕುಳ ಬೆವರು ವಾಸನೆಯಿಂದಾಗಿ ಬೇಸಿಗೆಯಲ್ಲಿ ಹೊರಗೆ ಹೋಗಲು ಕಷ್ಟ ಪಡುತ್ತಾರೆ. ಅಂತಹ ಸ್ಥಿತಿಯಲ್ಲಿ ಬೆವರಿನ ವಾಸನೆ ನಿಮ್ಮನ್ನು ಹೈರಾಣಾಗಿಸುತ್ತಿದ್ದರೆ ಇದರಿಂದ ನೀವು ತೊಂದರೆಗೆ ಒಳಗಾಗಿದ್ದರೆ ನೀವು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ. ಇದು ನಿಮ್ಮ ದೇಹ ಹಾಗೂ ಕಂಕುಳಿನ ಬೆವರಿನ ವಾಸನೆಯನ್ನು ಕಡಿಮೆ ಮಾಡಿ, ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಹಾಗಿದ್ದರೆ ಬೆವರು ವಾಸನೆ ಹೋಗಲಾಡಿಸಲು ಏನು ಮಾಡಬೇಕೆಂದು ತಿಳಿಯಿರಿ.

    ನಿಂಬೆ

    ಬೆವರು ಕೆಟ್ಟ ವಾಸನೆ ಹೋಗಲಾಡಿಸಲು ನಿಂಬೆ ಬಳಕೆ ಮಾಡಿ. ಇದನ್ನು ಬಳಸಲು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ. 10 ನಿಮಿಷದವರೆಗೆ ಅಂಡರ್ ಆರ್ಮ್ಸ್ ಮೇಲೆ ಉಜ್ಜಿಕೊಳ್ಳಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ.

    ಅಲೋವೆರಾ

    ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಳ್ಳಿ. ರಾತ್ರಿಯಲ್ಲಿ ಜೆಲ್ ಅನ್ನು ಅಂಡರ್ ಆರ್ಮ್ಸ್ ಮೇಲೆ ಅನ್ವಯಿಸಿ. ರಾತ್ರಿಯಿಡೀ ಹಾಗೆ ಬಿಡಿ ಮತ್ತು ಮರುದಿನ ಬೆಳಿಗ್ಗೆ ನೀರಿನಿಂದ ತೊಳೆಯಿರಿ. ಇದು ನಿಮಗೆ ವಾಸನೆಯಿಂದ ಪರಿಹಾರ ನೀಡುತ್ತದೆ.

    ರೋಸ್ ವಾಟರ್

    ಕಂಕುಳಲ್ಲಿ ಮತ್ತು ಬೆವರಿರುವ ಜಾಗಗಳ ಮೇಲೆ ರೋಸ್ ವಾಟರ್ ಸ್ಪ್ರೇ ಮಾಡಿ. ಅಥವಾ ಹತ್ತಿಯ ಸಹಾಯದಿಂದ ರೋಸ್ ವಾಟರ್ ಹಾಕಿ ಕಂಕುಳನ್ನು ಸ್ವಚ್ಛಗೊಳಿಸಿ. ಸ್ನಾನದ ನೀರಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಸ್ನಾನ ಮಾಡಿದರೆ ಬೆವರಿನ ವಾಸನೆ ಹೋಗಿ ಪರಿಹಾರ ಪಡೆಯಬಹುದು.

    ಅಡಿಗೆ ಸೋಡಾ

    ಒಂದು ಟೀ ಚಮಚ ಅಡಿಗೆ ಸೋಡಾವನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಮತ್ತು ಅದನ್ನು 15 ನಿಮಿಷದವರೆಗೆ ಅಂಡರ್ ರ್ಆರ್ಮ್ನಲ್ಲಿ ಇರಿಸಿ. ನಂತರ ಸ್ನಾನ ಮಾಡಿ. ಇದು ನಿಮಗೆ ಬೆವರಿನ ವಾಸನೆಯಿಂದ ಮುಕ್ತಿ ನೀಡುತ್ತದೆ.

    ಇದನ್ನೂ ಓದಿ: ಅಗತ್ಯ ನೆನಪಿಡಿ, ಕ್ಯಾನ್ಸರ್ ಅಪಾಯ ಹೆಚ್ಚಿಸೋ ಆಹಾರಗಳಿವು!

    ಹರಳೆಣ್ಣೆ

    ಹರಳೆಣ್ಣೆ ನಂಜು ನಿರೋಧಕ ಗುಣ ಹೊಂದಿದೆ. ಸ್ನಾನ ಮಾಡುವ ಮೊದಲು ಹರಳೆಣ್ಣೆಯನ್ನು ಕಂಕುಳಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಉಜ್ಜಿ ಚೆನ್ನಾಗಿ ತೊಳೆಯಿರಿ. ಇದು ಕಂಕುಳ  ವಾಸನೆ ತೆಗೆದು ಹಾಕುತ್ತದೆ. ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುತ್ತದೆ.
    Published by:renukadariyannavar
    First published: