Time Management: ವರ್ಕ್ ಫ್ರಂ ಹೋಮ್ ಸಮಯದಲ್ಲಿ ಮನೆ-ಆಫೀಸ್ ಕೆಲಸ ನಿರ್ವಹಿಸಲು ಇಲ್ಲಿವೆ ಟಿಪ್ಸ್

ಮನೆಯಲ್ಲಿಯೂ ಸಹ ವೈಯಕ್ತಿಕ ಮತ್ತು ವೃತ್ತಿಪರ ಜೀವನ ನಿರ್ವಹಿಸುವುದು ಸಾಕಷ್ಟು ಶ್ರಮ ಹೆಚ್ಚು ಮಾಡುತ್ತದೆ. ಇದು ತುಸು ಕಷ್ಟಕರವೂ ಆಗಿದೆ. ಮನೆಯಿಂದ ಕೆಲಸ ಮಾಡುವವರು ಮಕ್ಕಳು ವೃದ್ಧರು ಮನೆ ಕೆಲಸ ಹಾಗೂ ಆಫೀಸಿನ ಕೆಲಸ ಎಲ್ಲದರ ಜವಾಬ್ದಾರಿಯನ್ನು ಸಮಾನವಾಗಿ ನಿರ್ವಹಣೆ ಮಾಡಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಕೋವಿಡ್ ವೈರಸ್ (Corona Virus) ಕಡಿಮೆ ಆಗಿದೆ. ಆದರೆ ಕೋವಿಡ್ ವೈರಸ್ ಹೆಚ್ಚಳ ಮತ್ತು ಕಡಿಮೆ ಆಗುವುದು ಇನ್ನೂ ಸಹ ಆತಂಕದ ವಾತಾವರಣ (Anxiety Atmosphere) ಸಂಪೂರ್ಣವಾಗಿ ತೊಲಗಿಲ್ಲ. ಹಾಗಾಗಿ ಈಗಲೂ ಅನೇಕ ಕಂಪನಿಗಳು (Companies) ವರ್ಕ್ ಫ್ರಂ ಹೋಂ (Work From Home) ಆಪ್ಶನ್ ನೀಡಿವೆ. ಹೀಗಾಗಿ ಕಂಪನಿ ಕೆಲಸಗಾರರು ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೋವಿಡ್‌ ವೈರಸ್ ನಿಂದ ಮನೆಯಿಂದ ಕೆಲಸ ಮಾಡುವುದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಮನೆಯಿಂದ ಕೆಲಸ ಮಾಡುವ ಪ್ರಕ್ರಿಯೆ ಹೆಚ್ಚುತ್ತಿದೆ. ಹಾಗಾಗಿ ಒಂದು ಸೂಕ್ತ ಮತ್ತು ಸರಿಯಾದ ವೇಳಾಪಟ್ಟಿಯನ್ನು ರೆಡಿ ಮಾಡಿ ಕೆಲಸ ಮಾಡುವುದು ತುಂಬಾ ಮುಖ್ಯ ಆಗಿದೆ.

    ಮನೆ ಕೆಲಸ ಹಾಗೂ ಆಫೀಸಿನ ಕೆಲಸ ನಿರ್ವಹಣೆ

    ಮನೆಯಲ್ಲಿಯೂ ಸಹ ವೈಯಕ್ತಿಕ ಮತ್ತು ವೃತ್ತಿಪರ ಜೀವನ ನಿರ್ವಹಿಸುವುದು ಸಾಕಷ್ಟು ಶ್ರಮ ಹೆಚ್ಚು ಮಾಡುತ್ತದೆ. ಇದು ತುಸು ಕಷ್ಟಕರವೂ ಆಗಿದೆ. ಮನೆಯಿಂದ ಕೆಲಸ ಮಾಡುವವರ ಸ್ಥಿತಿಯಲ್ಲಿ ಮಕ್ಕಳು, ವೃದ್ಧರು, ಮನೆ ಕೆಲಸ ಹಾಗೂ ಆಫೀಸಿನ ಕೆಲಸ ಎಲ್ಲದರ ಜವಾಬ್ದಾರಿಯನ್ನು ಸಮಾನವಾಗಿ ನಿರ್ವಹಣೆ ಮಾಡಬೇಕಾಗುತ್ತದೆ.

    ಹೀಗಾಗಿ ಎಲ್ಲಾ ಕೆಲಸವೂ ಮನೆಯಲ್ಲೇ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇದು ಮನೆ ಕೆಲಸ ಮತ್ತು ಆಪೀಸ್ ಕೆಲಸದಲ್ಲಿ ಕೆಲವೊಮ್ಮೆ ಸಮಸ್ಯೆ ಹುಟ್ಟು ಹಾಕುತ್ತದೆ. ಯಾಕೆಂದರೆ ಮನೆಗೆ ಬಂದು ಹೋಗುವ ಅತಿಥಿಗಳು, ಅಡುಗೆ, ಮಕ್ಕಳನ್ನು ಸಂಭಾಳಿಸುವುದು ಹೀಗೆ ಸಾಕಷ್ಟು ಕೆಲಸಗಳನ್ನು ಮಾಡುವುದು ಹೆಚ್ಚು ಚಾಲೆಂಜಿಂಗ್ ಆಗುತ್ತದೆ.

    ಇದನ್ನೂ ಓದಿ: ಈ ಹಣ್ಣಿನ ಬೀಜ ತಿಂದರೆ ಆರೋಗ್ಯಕ್ಕೆ ಹಾನಿ ಗ್ಯಾರೆಂಟಿ, ಹಣ್ಣು ತಿನ್ನುವ ಮುನ್ನ ಯೋಚಿಸಿ

    ಹಾಗಾಗಿ ಮನೆಯಿಂದ ಕೆಲಸ ಮಾಡುವರು, ಮಕ್ಕಳ ಸರಿಯಾದ ಸಮಯ ನಿರ್ವಹಣೆ ನಿರ್ವಹಿಸಲು ನಿಮಗೆ ಸಾಧ್ಯವಾಗದೇ ಹೋದರೆ ಇಲ್ಲಿ ಹೇಳಲಾದ ಕೆಲವು ಸಲಹೆಗಳು ನಿಮಗೆ ತುಂಬಾ ಉಪಯುಕ್ತ ಆಗುತ್ತವೆ.

     ಉತ್ತಮ ವೇಳಾಪಟ್ಟಿ ರಚಿಸಿ

    ನೀವು ಮನೆಯಿಂದ ಆಫೀಸಿನ ಕೆಲಸ ಮಾಡುತ್ತಿದ್ದರೆ, ಮಕ್ಕಳಿಗಾಗಿ ವೇಳಾಪಟ್ಟಿ ರೆಡಿ ಮಾಡಿ. ಮಕ್ಕಳ ವೇಳಾಪಟ್ಟಿ ರೆಡಿ ಮಾಡುವ ಮೂಲಕ, ನೀವು ಅವರ ಜೊತೆ ಸಮಯ ಕಳೆಯಲು ಸಾಧ್ಯ ಆಗುತ್ತದೆ. ಮತ್ತು ಮಕ್ಕಳು ತಮ್ಮ ದಿನಚರಿಯಲ್ಲಿ ಸರಿಯಾದ ಸಮಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಮನೆಯಿಂದ ಕೆಲಸವನ್ನು ನಿರ್ವಹಿಸಲು ಇದು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.

    ಮಕ್ಕಳ ಕೋಣೆ ಮತ್ತು ಚಟುವಟಿಕೆ ಬಗ್ಗೆ ಉಪಾಯ

    ನಿರಂತರವಾಗಿ ಮೊಬೈಲ್ ಅಥವಾ ಟಿವಿಯಲ್ಲಿ ಹಲವು ಗಂಟೆಗಳ ಕಾಲ ಕಳೆಯುವುದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗೆ ಮಾಡುವುದು ಅವರ ಕಣ್ಣು ಆರೋಗ್ಯ ಕೆಡುತ್ತದೆ. ಈ ಕೆಟ್ಟ ಚಟ ಹೆಚ್ಚುವುದು ಮಕ್ಕಳ ಅನಾರೋಗ್ಯಕ್ಕೆ ಕಾರಣ ಆಗುತ್ತದೆ.

    ಅಂತಹ ಸ್ಥಿತಿಯಲ್ಲಿ, ಮಕ್ಕಳನ್ನು ಈ ಎಲ್ಲ ವಿಷಯಗಳಿಂದ ದೂರವಿರಿಸಲು, ನೀವು ಮಕ್ಕಳ ಕೋಣೆ ರಚಿಸಿ. ಇದರಲ್ಲಿ ಮಕ್ಕಳಿಗೆ ಸಾಕಷ್ಟು ಮೋಜಿನ ಚಟುವಟಿಕೆ ಇರಿಸಿ. ಇದನ್ನು ಮಾಡುವುದು ಮಕ್ಕಳು ಉತ್ತಮ ಸಮಯ ಆನಂದಿಸಲು ಸಾಧ್ಯ ಆಗುತ್ತದೆ. ಮತ್ತು ನೀವು ಸುಲಭವಾಗಿ ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯ ಆಗುತ್ತದೆ. ಆಗ ಸಿಕ್ಕ ಸಮಯವನ್ನು ಮಕ್ಕಳೊಂದಿಗೆ ಆರಾಮವಾಗಿ ಕಳೆಯಬಹುದು.

    ಕೆಲಸದ ಸಮಯ

    ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ, ಮಕ್ಕಳು ಮತ್ತೆ ಮತ್ತೆ ಕೆಲಸದ ಮಧ್ಯೆ ಬರುತ್ತಿದ್ದರೆ, ಮಕ್ಕಳು ಶಾಲೆಗೆ ಹೋದ ಅಥವಾ ಮಲಗುವ ಸಮಯದಲ್ಲಿ ನಿಮ್ಮ ಆಫೀಸಿನ ಕೆಲಸವನ್ನು ಮಾಡಿ ಮುಗಿಸಿ. ಹೀಗೆ ಮಾಡುವುದು ನಿಮ್ಮ ಕೆಲಸವನ್ನು ಆರಾಮ ಮತ್ತು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯ ಆಗುತ್ತದೆ. ಮತ್ತು ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯ ಆಗುತ್ತದೆ.

    ಇದನ್ನೂ ಓದಿ: ಒಂದು ಕಪ್ ವಾಲ್ ನಟ್ಸ್​ನಲ್ಲಿಯ ಪೋಷಕಾಂಶ, ಪ್ರಯೋಜನಗಳ ಸೀಕ್ರೆಟ್

    ಒಟ್ಟಿಗೆ ಆಹಾರ ಸೇವಿಸಿ

    ಮನೆಯಿಂದ ಕೆಲಸ ಮಾಡುವಾಗ ಊಟದ ಸಮಯದಲ್ಲಿ ಮಕ್ಕಳೊಂದಿಗೆ ಊಟ ಮಾಡಿ. ಹೀಗೆ ಮಾಡುವುದು ನೀವು ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಲು ಸಾಧ್ಯವಾಗುತ್ತದೆ.
    Published by:renukadariyannavar
    First published: