HOME » NEWS » Lifestyle » HERE ARE SOME THINGS THAT YOU MAY BE DOING WRONG WITH YOUR DIETING AND HOW YOU CAN FIX IT STG HG

Dieting mistakes: ಡಯೆಟ್‍ ಮಾಡಿದರು ತೂಕ ಇಳಿಯುತ್ತಿಲ್ಲವೇ? ಹಾಗಾದರೆ ಅಲ್ಲೇನೊ ಎಡವಟ್ಟಾಗಿದೆ!

Dieting mistakes: ನೀವು ನಿರ್ದಿಷ್ಟ ಆಹಾರಕ್ರಮವನ್ನು ಅನುಸರಿಸುತ್ತಿರಬಹುದು, ಆದರೆ ನಿಮಗೆ ತಿಳಿಯದಂತೆ ಅದರಲ್ಲಿ ಏನಾದರೂ ತಪ್ಪಾಗಿರಬಹುದು. ಅಂತಹ ಕೆಲವು ತಪ್ಪುಗಳು ಮತ್ತು ಅವುಗಳನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

news18-kannada
Updated:June 23, 2021, 12:27 PM IST
Dieting mistakes: ಡಯೆಟ್‍ ಮಾಡಿದರು ತೂಕ ಇಳಿಯುತ್ತಿಲ್ಲವೇ? ಹಾಗಾದರೆ ಅಲ್ಲೇನೊ ಎಡವಟ್ಟಾಗಿದೆ!
Photo: Google
  • Share this:

ನಿರ್ದಿಷ್ಟ ಆಹಾರಕ್ರಮವನ್ನು ಅನುಸರಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಅದಕ್ಕೆ ಅಪಾರ ಪ್ರೇರಣೆ ಮತ್ತು ಶ್ರಮ ಬೇಕಾಗುತ್ತದೆ. ಕೆಲವರ ಪಾಲಿಗೆ ಇದು ಹೆಚ್ಚು ಕಷ್ಟವಲ್ಲದ ಕಾರ್ಯವಾಗಿರಬಹುದು, ಆದರೆ ಇನ್ನು ಕೆಲವರ ಪಾಲಿಗೆ ಅನಿಶ್ಚಿತ ಮತ್ತು ಅತ್ಯಂತ ಕಷ್ಟದಾಯಕ ಆಗಿರಬಹುದು. ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲು ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಯಾವುದಾದರೂ ಕಾರಣ ಇದ್ದೇ ಇರುತ್ತದೆ. ಆದರೆ ಹೆಚ್ಚಿನವರು ನೀಡುವ ಕಾರಣ ತೂಕ ಇಳಿಸುವುದು. ನೀವು ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಿದ್ದರೂ, ಅದರಿಂದ ಯಾವುದೇ ಫಲಿತಾಂಶ ಸಿಗದಿದ್ದರೆ, ಅದು ನಿರಾಶೆ ಮತ್ತು ಬೇಸರಕ್ಕೆ ಕಾರಣವಾಗುವುದು ಸಹಜ.


ಆಹಾರಕ್ರಮದ ತಪ್ಪುಗಳು ಮತ್ತು ಅದಕ್ಕೆ ಪರಿಹಾರನೀವು ನಿರ್ದಿಷ್ಟ ಆಹಾರಕ್ರಮವನ್ನು ಅನುಸರಿಸುತ್ತಿರಬಹುದು, ಆದರೆ ನಿಮಗೆ ತಿಳಿಯದಂತೆ ಅದರಲ್ಲಿ ಏನಾದರೂ ತಪ್ಪಾಗಿರಬಹುದು. ಅಂತಹ ಕೆಲವು ತಪ್ಪುಗಳು ಮತ್ತು ಅವುಗಳನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.


1. ಏನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದರ ಬಗ್ಗೆ ಗಮನ ಹರಿಸಿ


ತಿನ್ನಬಾರದು ಎಂದುಕೊಳ್ಳುವ ಆಹಾರದ ಬಗ್ಗೆಯೂ ಗಮನಹರಿಸಿ. ಹಾಗಂತ ಅದೇ ಗುರಿಯಾಗಿ ಇರಬಾರದು. ಕೆಲವರು ಐಸ್‍ಕ್ರೀಂ ತಿನ್ನುವುದನ್ನೇನೋ ಆರಾಮವಾಗಿ ತ್ಯಜಿಸಬಲ್ಲರು, ಆದರೆ ಚಾಕೊಲೇಟ್ ತಿನ್ನುವುದನ್ನು ನಿಲ್ಲಿಸಿರುವುದಿಲ್ಲ. ಆಗ ಸಹಜವಾಗಿಯೇ ಕ್ಯಾಲೊರಿ ಸೇವನೆ ಹೆಚ್ಚುತ್ತದೆ. ಏನು ಮತ್ತು ಎಷ್ಟು ತಿನ್ನಬೇಕು ಎಂಬುದರ ಬಗ್ಗೆ ನಮ್ಮ ಗಮನ ಕೇಂದ್ರೀಕೃತವಾಗಿರಬೇಕೇ ಹೊರತು, ಯಾವುದನ್ನು ತಿನ್ನಬಾರದು ಎಂಬುದರ ಮೇಲೆ ಅಲ್ಲ.


2. ‘ಉಪವಾಸ’ ಆಹಾರಕ್ರಮದ ಭಾಗವಾಗದಿರಲಿ


ಆಹಾರಕ್ರಮದ ಹೆಸರಿನಲ್ಲಿ ಹಸಿವಿನಿಂದ ಬಳಲಿದರೆ ಅದು ಮೂರ್ಖತನ. ಅದು ನಿಮ್ಮ ತೂಕ ಇಳಿಸುವ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದನ್ನು ತಪ್ಪಿಸಬೇಕೆಂದರೆ, ನಿಮ್ಮ ಆಹಾರದಲ್ಲಿ ಅಧಿಕ ಪ್ರೋಟೀನ್ ಇರುವ ಆಹಾರವನ್ನು ಸೇವಿಸಿಕೊಳ್ಳಿ. ಅದು ಹಸಿವಿನಿಂದ ನರಳುವುದನ್ನು ತಪ್ಪಿಸುತ್ತದೆ. ಒತ್ತಾಯಪೂರ್ವಕವಾಗಿ ದೇಹವನ್ನು ಉಪವಾಸಕ್ಕೆ ಕೆಡವುದರಿಂದ ದೇಹ ದುರ್ಬಲವಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.

3. ಒತ್ತಡವನ್ನು ನಿಯಂತ್ರಿಸಿ


ಒತ್ತಡವನ್ನು ನಿವಾರಿಸಿಕೊಳ್ಳಲು ಕೆಲವರು ಸಿಕ್ಕಾಪಟ್ಟೆ ತಿನ್ನುತ್ತಾರೆ. ಹಾಗೆ ಮಾಡುವುದರಿಂದ, ನಿರ್ದಿಷ್ಟ ಆಹಾರಕ್ರಮ ಅನುಸರಿಸಿ ಕಳೆದುಕೊಂಡ ಕ್ಯಾಲೋರಿಗಳನ್ನು ಮತ್ತೆ ಪಡೆದುಕೊಳ್ಳುತ್ತಾರೆ. ಅದರಿಂದಾಗಿ ಆಹಾರಕ್ರಮ ವಿಫಲವಾಗುತ್ತದೆ. ಅದಕ್ಕೆ ಯೋಗ, ಧ್ಯಾನ ಮತ್ತು ಥೆರಪಿಯ ಮೂಲಕ ಮನಸ್ಸಿನ ಒತ್ತಡವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.


4. ಆಹಾರದ ಪ್ರಮಾಣದ ಬಗ್ಗೆ ಎಚ್ಚರವಿರಲಿ


ಕ್ಯಾಲೋರಿ ಲೆಕ್ಕಾಚಾರ ತೂಕ ಇಳಿಸುವಿಕೆಯ ಪ್ರಮುಖ ಭಾಗ. ಆಹಾರದ ಪ್ರಮಾಣವು ಕ್ಯಾಲೋರಿ ಸೇವನೆಯನ್ನು ನಿರ್ಧರಿಸುತ್ತದೆ. ಹೆಚ್ಚಿನ ಪ್ರಮಾಣದ ಅಂದರೆ ಅಳತೆ ಮೀರಿ ತಿಂದರೆ ಕ್ಯಾಲೊರಿ ಸೇವನೆ ಹೆಚ್ಚುತ್ತದೆ. ಇದನ್ನು ತಪ್ಪಿಸಬೇಕೆಂದರೆ, ನೀವು ತಿನ್ನುವ ಆಹಾರದ ಮೇಲೆ ಅಷ್ಟೇ ಅಲ್ಲದ ಅದರ ಪ್ರಮಾಣದ ಮೇಲೆಯೂ ಗಮನ ಇಡಿ.


5. ಕೇವಲ ಆಹಾರಕ್ರಮ ಸಾಕಾಗುವುದಿಲ್ಲ


ಕೇವಲ ಆಹಾರ ಕ್ರಮವನ್ನು ಅನುಸರಿದರೆ ತೂಕ ಇಳಿಯುದಿಲ್ಲ. ದೈಹಿಕ ಶ್ರಮವೂ ಅಗತ್ಯ. ಸೂಕ್ತ ಆಹಾರಕ್ರಮದ ಜೊತೆ ನಿತ್ಯವೂ ವ್ಯಾಯಾಮ ಮಾಡುವುದನ್ನು ಮರೆಯದಿರಿ.

First published: June 23, 2021, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories