HOME » NEWS » Lifestyle » HERE ARE SOME OF THE POTENTIAL BENEFITS OF POMEGRANATE ZP

Health Tips: ಸ್ತನ ಕ್ಯಾನ್ಸರ್ ತಡೆಗಟ್ಟಲು ದಾಳಿಂಬೆ ಸಹಕಾರಿ: ಇನ್ನಿತರ 5 ಪ್ರಯೋಜನಗಳ ಬಗ್ಗೆ ತಿಳಿಯಿರಿ

ಹೃದಯ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ದಾಳಿಂಬೆ ರಸ ಪ್ರಯೋಜನಕಾರಿ. ಕೆಲವು ಅಧ್ಯಯನಗಳು ದಾಳಿಂಬೆ ರಸವು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಅಪಧಮನಿಗಳು ಗಟ್ಟಿಯಾಗಿ ಮತ್ತು ದಪ್ಪವಾಗುವುದನ್ನು ತಡೆಯುತ್ತದೆ ಎಂದು ತಿಳಿಸಿದೆ.

news18-kannada
Updated:March 9, 2021, 7:27 AM IST
Health Tips: ಸ್ತನ ಕ್ಯಾನ್ಸರ್ ತಡೆಗಟ್ಟಲು ದಾಳಿಂಬೆ ಸಹಕಾರಿ: ಇನ್ನಿತರ 5 ಪ್ರಯೋಜನಗಳ ಬಗ್ಗೆ ತಿಳಿಯಿರಿ
pomegranate
  • Share this:
ದಾಳಿಂಬೆ ಒಂದು ರಸವತ್ತಾದ ಹಣ್ಣು. ಅದರ ರುಚಿ ಹಾಗೂ ಆರೋಗ್ಯಕಾರಿ ಪ್ರಯೋಜನಗಳಿಂದಾಗಿ ಪ್ರತಿಯೊಬ್ಬರೂ ದಾಳಿಂಬೆಯನ್ನು ತಿನ್ನಲು ಇಷ್ಟಪಡುತ್ತಾರೆ. ಇನ್ನು ನಿಯಮಿತವಾಗಿ ದಾಳಿಂಬೆ ಸೇವನೆ ರಕ್ತಹೀನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೆಯೇ ದಾಳಿಂಬೆ ಆರೋಗ್ಯಕ್ಕೆ ಇತರ ಹಲವು ವಿಧಗಳಲ್ಲಿ ಪ್ರಯೋಜನಕಾರಿ.

ಇನ್ನು ದಾಳಿಂಬೆ ರಸದಲ್ಲಿ ಇತರ ಹಣ್ಣಿನ ರಸಗಳಿಗಿಂತ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಕೆಂಪು ವೈನ್ ಮತ್ತು ಹಸಿರು ಚಹಾಕ್ಕಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಹೀಗಾಗಿ ದಾಳಿಂಬೆ ಸೇವನೆಯು ಶರೀರದ ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ನಾಲ್ಕು ಜೀರ್ಣಕಾರಿ ಸಮಸ್ಯೆಗಳಿದ್ದರೆ ದಾಳಿಂಬೆ ನಿಮಗೆ ಪ್ರಯೋಜನಕಾರಿಯಾಗಿದೆ. ದಾಳಿಂಬೆ ರಸವು ಕರುಳಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೆಲವು ಸಂಶೋಧನೆಗಳ ಪ್ರಕಾರ, ಪ್ರತಿದಿನ ದಾಳಿಂಬೆ ರಸವನ್ನು ಕುಡಿಯುವುದರಿಂದ ವ್ಯಕ್ತಿಯ ಕಲಿಕೆಯ ಸಾಮರ್ಥ್ಯ ಬೆಳೆಯುತ್ತದೆ. ಅಲ್ಲದೆ, ಅವನ ಸ್ಮರಣೆಯೂ ಸುಧಾರಿಸಬಹುದು. ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಹೃದಯ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ದಾಳಿಂಬೆ ರಸ ಪ್ರಯೋಜನಕಾರಿ. ಕೆಲವು ಅಧ್ಯಯನಗಳು ದಾಳಿಂಬೆ ರಸವು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಅಪಧಮನಿಗಳು ಗಟ್ಟಿಯಾಗಿ ಮತ್ತು ದಪ್ಪವಾಗುವುದನ್ನು ತಡೆಯುತ್ತದೆ ಎಂದು ಸೂಚಿಸುತ್ತದೆ.

ಹೆಲ್ತ್ ವರದಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ಮಹಾಮಾರಿ ಕ್ಯಾನ್ಸರ್ ಕೋಶಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ದಾಳಿಂಬೆ ಸಾರಗಳು ಸಹಾಯಕ ಎಂದು ತಿಳಿಸಿದೆ. ಹೀಗಾಗಿ ನಿಯಮಿತವಾಗಿ ದಾಳಿಂಬೆ ಸೇವನೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿ ಎಂದೇ ಹೇಳಬಹುದು.
Published by: zahir
First published: March 9, 2021, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories