• Home
  • »
  • News
  • »
  • lifestyle
  • »
  • Tourist Place: ಅತಿ ಕಡಿಮೆ ಜನಸಾಂದ್ರತೆ ಮತ್ತು ಆಕರ್ಷಕವಾಗಿರುವ ಕೆಲವು ಪ್ರವಾಸಿ ದೇಶಗಳು ಇಲ್ಲಿವೆ ನೋಡಿ

Tourist Place: ಅತಿ ಕಡಿಮೆ ಜನಸಾಂದ್ರತೆ ಮತ್ತು ಆಕರ್ಷಕವಾಗಿರುವ ಕೆಲವು ಪ್ರವಾಸಿ ದೇಶಗಳು ಇಲ್ಲಿವೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅತಿ ಕಡಿಮೆ ಜನಸಾಂದ್ರತೆ ಮತ್ತು ಸಾಕಷ್ಟು ಆಕರ್ಷಕವಾಗಿರುವ ಕೆಲವು ಪ್ರವಾಸಿ ದೇಶಗಳು ಇವೆ. ಮತ್ತು ಅವುಗಳು ಎಲ್ಲಿವೆ ಅನ್ನೋದನ್ನ ನೀವು ತಿಳಿದುಕೊಳ್ಳಲೇ ಬೇಕು.

  • Share this:

ಈಗಾಗಲೇ ನಮಗೆಲ್ಲ ತಿಳಿದಿರುವಂತೆ ಪ್ರಸ್ತುತ ಜಗತ್ತಿನ ( Present world) ಒಟ್ಟು ಜನಸಂಖ್ಯೆಯು 8 ಬಿಲಿಯನ್ (8 billion)  ಅಂದರೆ ಎಂಟು ಶತಕೋಟಿಯ ಮೈಲಿಗಲ್ಲನ್ನು ಮುಟ್ಟಿದೆ. ಅಂದರೆ, ಹಿಂದೆಂದಿಗಿಂತಲೂ ಈಗ ಭೂಮಿಯ ಮೇಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಸಿಸುತ್ತಿದ್ದಾರೆ (Are living) ಎಂದು ಹೇಳಬಹುದು. ಮುಂದೆ ಸಮಯ ಕಳೆದಂತೆ ಸಾಕಷ್ಟು ಜನರು ಪ್ರವಾಸ ಹೊರಡುವ ಶೈಲಿಯಲ್ಲೂ ಬದಲಾವಣೆಯನ್ನು (Changes) ಮಾಡಿಕೊಳ್ಳಬಹುದು. ಜನರು ಮುಂದೆ ಹೆಚ್ಚು ಜನರಿಲ್ಲದಂತಹ ಪ್ರವಾಸ ಸ್ಥಳಗಳನ್ನು (Tourist Place) ಆಯ್ಕೆ ಮಾಡಬಹುದು. ಇದು ನಿಜವೂ ಕೂಡ ಹೌದು. ಏಕೆಂದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಏಕಾಂತದ ಅಥವಾ ಕಡಿಮೆ ಜನಸಾಂದ್ರತೆಯಿರುವ ಸ್ಥಳಗಳು ಅತ್ಯುತ್ತಮ ಪ್ರವಾಸಿ ಆಯ್ಕೆಗಳಾಗಿರಬಹುದು.


ನೀವೂ ಸಹ ಅಲ್ಪ ಜನರಿರುವ ಅಥವಾ ಕಡಿಮೆ ಜನಸಾಂದ್ರತೆಯ ಸ್ಥಳಗಳಿಗೆ ಪ್ರವಾಸ ಹೊರಡುವ ಯೋಚನೆಯಲ್ಲಿದ್ದರೆ ಇಲ್ಲಿ ಹೇಳಲಾಗಿರುವ ಸ್ಥಳಗಳನ್ನು ನಿಮ್ಮ ಆಯ್ಕೆಯ ಪಟ್ಟಿಯಲ್ಲೊಮ್ಮೆ ಸೇರಿಸಿಕೊಳ್ಳಲು ಯೋಚಿಸಬಹುದು.


ಐಸ್ಲ್ಯಾಂಡ್


ಇದು ಸಾಕಷ್ಟು ಪ್ರಸಿದ್ಧವಾದ ಪ್ರವಾಸಿ ಸ್ಥಳ/ದೇಶ ಎಂದೇ ಹೇಳಬಹುದು. ಅದ್ಭುತ ಪ್ರಾಕೃತಿಕ ಸೌಂದರ್ಯ ಹಾಗೂ ಕಡಿಮೆ ಜನಸಾಂದ್ರತೆಯುಳ್ಳ ಈ ದೇಶವು ತನ್ನಲ್ಲಿರುವ ಸಕ್ರಿಯ ಜ್ವಾಲಾಮುಖಿಗಳಿಂದಾಗಿಯೂ ಹೆಸರುವಾಸಿಯಾಗಿದೆ. ಅದ್ಭುತವಾದ ಬಿಸಿ ನೀರಿನ ಬುಗ್ಗೆಗಳು, ಹಿಮದಿಂದ ಆವೃತವಾದ ದಿಬ್ಬಗಳು, ಹಿಮನದಿ ಹಾಗೂ ಆಕರ್ಷಕವಾಗಿ ಕಂಗೊಳಿಸುವ ಹಸಿರು ಸಂಪತ್ತು ಈ ದೇಶದ ಪ್ರಮುಖ ಆಕರ್ಷಣೆಗಳು. ಇಲ್ಲಿ ಭೇಟಿ ನೀಡಿದಾಗ ಇಲ್ಲಿನ ನಾರ್ದರ್ನ್ ಲೈಟ್ ಅನ್ನು ಖಂಡಿತವಾಗಿಯೂ ಮಿಸ್ ಮಾಡಬೇಡಿ.


ನಮೀಬಿಯಾ


ವನ್ಯಜೀವಿ ಸಂಪತ್ತು ಹಾಗೂ ಸಫಾರಿಯನ್ನು ಇಷ್ಟಪಡುವ ಪ್ರವಾಸಿಗರಿಗೆ ನಮೀಬಿಯಾ ಒಂದು ಆದರ್ಶಪ್ರಾಯವಾದ ತಾಣ. ಕಾಡಿನ ದಟ್ಟ ಹಸಿರು ಸಂಪತ್ತು ಹಾಗೂ ಅದರಲ್ಲಿ ನೆಲೆಸಿರುವ ವೈವಿಧ್ಯಮಯ ಜೀವಜಂತುಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ನೀವು ಕಾಡಿನ ಅತ್ಯದ್ಭುತ ಸಫಾರಿಯೊಂದ ಜೀವಮಾನದ ಅನುಭವ ಪಡೆಯ ಬಯಸಿದ್ದಲ್ಲಿ ನಮೀಬಿಯಾಗೆ ಭೇಟಿ ನೀಡಲು ಮರೆಯದಿರಿ.
ಮಂಗೋಲಿಯಾ


ಸಾಕಷ್ಟು ಕಡಿಮೆ ಜನಸಾಂದ್ರತೆ ಹಾಗೂ ಅದ್ಭುತವಾದ ಭೂದೃಶ್ಯಾವಳಿಯ ಆನಂದ ನಿಮಗೆ ಬೇಕೆಂದಿದ್ದಲ್ಲಿ ಮಂಗೋಲಿಯಾ ಸೂಕ್ತವಾದ ಪ್ರವಾಸಿ ತಾಣವಾಗಿದೆ. ಆಕರ್ಷಕ ನೀರಿನ ಕೊಳಗಳು, ಅದ್ಭುತವಾದ ಸಂಸ್ಕೃತಿ ಹಾಗೂ ಗಿರಿ-ಪರ್ವತಗಳ ವಿಹಂಗಮ ನೋಟವನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ನೀವು ಏಕಾಂಗಿಯಾಗಿ ಪ್ರವಾಸದ ಅತ್ಯದ್ಭುತ ಅನುಭವವನ್ನು ಪಡೆಯುವವರಲ್ಲಿ ಒಬ್ಬರಾಗಿದ್ದರೆ ಇಲ್ಲಿಗೆ ಭೇಟಿ ನೀಡಬಹುದು.


ಸುರಿನೇಮ್


ದಕ್ಷಿಣ ಅಮೆರಿಕದಲ್ಲಿ ನೆಲೆಸಿರುವ ಈ ಒಂದು ಸಣ್ಣ ದೇಶವು ನಿಜಾರ್ಥದಲ್ಲಿ ಪ್ರಕೃತಿ ಸೌಂದರ್ಯದ ಅದ್ಭುತ ತಾಣವಾಗಿದೆ. ದಟ್ಟವಾದ ಹಸಿರು, ಶುಭ್ರವಾದ ನದಿಗಳ ಹರಿವು ನಿಮ್ಮನ್ನೂ ಯಾವುದೋ ಕನಸಿನ ತಾಣದಲ್ಲಿ ಬಂದಿಳಿದಂತೆ ಅನುಭೂತಿ ನೀಡುತ್ತವೆ. ಪಾರ್ಟಿ ಮಾಡಲೂ ಸಹ ಸೌಲಭ್ಯಗಳು ನಿಮಗಿಲ್ಲಿ ಸಿಗುತ್ತವೆ ಹಾಗೂ ಕಾಡಿನ ಜೀವಕಳೆಯನ್ನು ಅನುಭವಿಸಬೇಕಿದ್ದರೆ ಆ ಒಂದು ಅನುಭವವೂ ನಿಮಗಿಲ್ಲಿ ದೊರಕುವುದರಲ್ಲಿ ಸಂಶಯವೇ ಇಲ್ಲ.


here-are-some-of-the-least-densely-populated-and-quite-attractive-tourist-countries
ಸಾಂಕೇತಿಕ ಚಿತ್ರ


ಫ್ರೆಂಚ್ ಗಯಾನಾ


ಮಳೆಗಾಡುಗಳು, ದಟ್ಟನೆಯ ಹಸಿರು ಸಂಪತ್ತು, ಪ್ರಶಾಂತ ವಾತಾವರಣ ಅದರ ಜೊತೆಗೆ ಹಲವು ಐತಿಹಾಸಿಕ ಸ್ಮಾರಕಗಳು ಇವುಗಳನ್ನೆಲ್ಲ ಆಸ್ವಾದಿಸಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ದಕ್ಷಿಣ ಅಮೆರಿಕದ ತಿರುವಿನಲ್ಲಿ ನೆಲೆಸಿರುವ ಫ್ರೆಂಚ್ ಗಯಾನಾಗೊಮ್ಮೆ ಭೇಟಿ ನೀಡಿ. ನೀವು ಪ್ರಕೃತಿಯ ನಿಜವಾದ ಆರಾಧಕರಾಗಿದ್ದರೆ ಈ ಸ್ಥಳ ನಿಮಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಪ್ರವಾಸ ಸ್ವಲ್ಪ ದುಬಾರಿಯಾಗಬಹುದಾದರೂ ನೀವು ವೆಚ್ಚ ಮಾಡುವ ಪ್ರತಿ ಹಣವೂ ವ್ಯರ್ಥವಾಗುವುದಿಲ್ಲ ಎಂದಷ್ಟೇ ಹೇಳಬಹುದು. ಹಾಗಾಗಿ ನಿಮ್ಮ ಲಿಸ್ಟಿನಲ್ಲಿ ಈ ತಾಣವನ್ನು ಸೇರಿಸಿ.


ಇದನ್ನೂ ಓದಿ: Explained: ರಾತ್ರಿ ಪ್ರಯಾಣ, ಹೆಲಿಕಾಪ್ಟರ್ ಸವಾರಿ, ಕ್ವಾರಂಟೈನ್: ಹೀಗಿತ್ತು ನಮೀಬಿಯಾದಿಂದ ಭಾರತಕ್ಕೆ ಚಿರತೆಗಳ ಪ್ರಯಾಣ!


ಗ್ರೀನ್ಲ್ಯಾಂಡ್


ಅತ್ಯದ್ಭುತ ಅನುಭವದ ದೋಣಿ ಸವಾರಿ ಮಾಡಬೇಕೆ? ಅಥವಾ ಹೆಲಿಕಾಪ್ಟರ್ ರೈಡ್ ಮಾಡಬೇಕೆ? ಇವೆರಡೂ ಮಾಡಬೇಕೆಂಬ ಆಸೆ ಇದ್ದಲ್ಲಿ ಗ್ರೀನ್ಲ್ಯಾಂಡಿಗೊಮ್ಮೆ ಭೇಟಿ ನೀಡಿ. ನಿಮಗೆ ಇಷ್ಟವಾಗುವ ಎಲ್ಲ ಹಿತಕರವಾದ, ಮೋಜು ಮಸ್ತಿಯಿಂದ ಕೂಡಿದ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದು, ಎಲ್ಲಕ್ಕಿಂತ ವಿಶೇಷವಾಗಿ ಇಲ್ಲಿ ಜನಸಾಂದ್ರತೆ ಬಲು ಕಡಿಮೆ ಇರುವುದರಿಂದ ನಿಮ್ಮ ಖಾಸಗಿತನಕ್ಕೂ ಸಾಕಷ್ಟು ಮೌಲ್ಯವಿರುತ್ತದೆ.


ನಿಯುವೆ


ಇದು ಇಂದಿಗೂ ಬಹು ಜನರಿಗೆ ಗೌಪ್ಯವಾಗಿಯೇ ಉಳಿದಿರುವಂತಹ ದಕ್ಷಿಣ ಪೆಸಿಫಿಕ್ ಸಾಗರದ ಬಳಿ ಇರುವ ಸುಂದರ ತಾಣ. ಇದೊಂದು ಅದ್ಭುತ ದ್ವೀಪವಾಗಿದ್ದು ಸಾಕಷ್ಟು ಪ್ರಶಾಂತತೆ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಸಾಗರದಲ್ಲಿ ಒಡಮೂಡಿರುವ ಕಲ್ಲಿನ ರಚನೆಗಳು, ಹವಳದ ದಿಬ್ಬಗಳು ಇಲ್ಲಿನ ವಿಶೇಷತೆಯಾಗಿದ್ದು ಇಲ್ಲಿ ಕಂಡುಬರುವ ಡಾಲ್ಫಿನ್ ಗಳು ಸ್ನೇಹಪರವಾಗಿರುವುದನ್ನೂ ಗಮನಿಸಬಹುದು. ನಿಮ್ಮ ಭೇಟಿ 30 ದಿನಗಳಿಗಿಂತಲೂ ಕಡಿಮೆ ಇದ್ದಲ್ಲಿ ಇಲ್ಲಿಗೆ ತೆರಳಲು ನಿಮಗೆ ವಿಸಾ ಅವಶಯಕತೆ ಸಹ ಇರುವುದಿಲ್ಲ.


ವ್ಯಾಟಿಕನ್ ಸಿಟಿ


ಜಗತ್ತಿನದ ಅತಿ ಚಿಕ್ಕ ದೇಶವಾಗಿರುವ ವ್ಯಾಟಿಕನ್ ಸಿಟಿ ಧಾರ್ಮಿಕವಾಗಿ ಪ್ರಖ್ಯಾತಿಗಳಿಸಿದ ಪ್ರವಾಸಿ ತಾಣ. ಈ ಚಿಕ್ಕ ಸ್ವತಂತ್ರ ರಾಷ್ಟ್ರದಲ್ಲಿ ಜನಸಂಖ್ಯೆ ಸಾವಿರಕ್ಕಿಂತಲೂ ಕಡಿಮೆಯಿದ್ದು ಇಲ್ಲಿ ನೀವು ಪಾರವಾದ ಪ್ರಶಾಂತತೆಯನ್ನು ಅನುಭವಿಸಬಹುದು. ಅಲ್ಲದೆ, ಇಲ್ಲಿನ ಐತಿಹಾಸಿಕ ಸ್ಮಾರಕಗಳು ಇದರ ಗತ ವೈಭವವನ್ನು ಸಾರು ಹೇಳುತ್ತವೆ. ಧಾರ್ಮಿಕ ಮನಸ್ಥಿತಿಯಡಿ ಸಂಪೂರ್ಣ ವಿಶ್ರಾಂತಿದಾಯಕ ಪ್ರವಾಸ ನಿಮ್ಮದಾಗಬೇಕಿದ್ದಲ್ಲಿ ಈ ದೇಶಕ್ಕೊಮ್ಮೆ ಭೇಟಿ ನೀಡಬಹುದು.

Published by:Gowtham K
First published: