Dating: ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡ್ತಾ ಇದ್ದೀರಾ? ಹಾಗಿದ್ರೆ, ನೀವು ಮಾಡ್ತಿರೋದು ಸರಿನಾ?

Dating a Married Man: ಆ ಪುರುಷ ನಿಮ್ಮನ್ನು ತುಂಬಾನೇ ಇಷ್ಟ ಪಡುತ್ತಿದ್ದರೂ, ಅವನು ತನ್ನ ಹೆಂಡತಿಗೆ ವಿಚ್ಛೇದನ ನೀಡಿ ನಿಮ್ಮೊಂದಿಗೆ ಬರಬೇಕಾಗುತ್ತದೆ. ಆದರೂ ಆ ಹಿಂದಿನ ಜೀವನದ ಕಹಿ ಘಟನೆಗಳು ಮತ್ತು ಅಪನಂಬಿಕೆ ನಿಮ್ಮ ಸಂಬಂಧವನ್ನು ಚೆನ್ನಾಗಿ ಇರಿಸುವುದೇ? ನೀವೇ ಒಮ್ಮೆ ಇದರ ಬಗ್ಗೆ ಯೋಚಿಸಿ ನೋಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Dating a Married Man: ಕೆಲವೊಂದು ಸಂಬಂಧಗಳು ಯಾವಾಗ, ಹೇಗೆ, ಯಾರೊಂದಿಗೆ ಆಗುತ್ತವೆ ಎಂದು ಹೇಳುವುದೇ ಕಷ್ಟ. ಇಬ್ಬರು ವ್ಯಕ್ತಿಗಳ ಮನಸ್ಸುಗಳು ಮತ್ತು ಆಲೋಚನೆ, ಭಾವನೆಗಳು ಒಂದಾದರೆ ಅಲ್ಲಿ ಪ್ರೀತಿ ಚಿಗುರೊಡೆಯುತ್ತದೆ. ಆನಂತರ ಬರುವುದು ನಮ್ಮೊಂದಿಗೆ ಡೇಟಿಂಗ್ ಅಲ್ಲಿ ಇರುವಂತಹ ಪುರುಷನು ವಿವಾಹಿತನೇ (Married Man) ಅಥವಾ ಅವಿವಾಹಿತನೇ (Unmarried Man) ಎಂಬ ವಿಷಯ ಎಂದರೆ ತಪ್ಪಾಗುವುದಿಲ್ಲ.

  ಕೆಲವೊಮ್ಮೆ ನಾವು ಇದನ್ನೆಲ್ಲಾ ವಿಚಾರಿಸದೆಯೇ ಪುರುಷನೊಬ್ಬನನ್ನು ಡೇಟಿಂಗ್ ಮಾಡಲು ಶುರು ಮಾಡಿರುತ್ತೇವೆ. ನಂತರ ಅವನು ವಿವಾಹಿತನು ಎಂದು ಗೊತ್ತಾದರೆ ಎಂತಹ ಆಘಾತ ಆಗಬಹುದು ಎಂದು ಅನುಭವಿಸದವರಿಗೆ ಗೊತ್ತು ಆ ನೋವು.

  ಆ ಪುರುಷ ನಿಮ್ಮನ್ನು ತುಂಬಾನೇ ಇಷ್ಟ ಪಡುತ್ತಿದ್ದರೂ, ಅವನು ತನ್ನ ಹೆಂಡತಿಗೆ ವಿಚ್ಛೇದನ ನೀಡಿ ನಿಮ್ಮೊಂದಿಗೆ ಬರಬೇಕಾಗುತ್ತದೆ. ಆದರೂ ಆ ಹಿಂದಿನ ಜೀವನದ ಕಹಿ ಘಟನೆಗಳು ಮತ್ತು ಅಪನಂಬಿಕೆ ನಿಮ್ಮ ಸಂಬಂಧವನ್ನು ಚೆನ್ನಾಗಿ ಇರಿಸುವುದೇ? ನೀವೇ ಒಮ್ಮೆ ಇದರ ಬಗ್ಗೆ ಯೋಚಿಸಿ ನೋಡಿ.

  ನೀವು ಪ್ರೀತಿಯಲ್ಲಿರುವ ಆ ವಿವಾಹಿತ ವ್ಯಕ್ತಿ ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾನೆ ಎನ್ನುವ ವಿಷಯ ನಿಮಗೆ ತಿಳಿದಿರಲಿ.  ಇದು ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡುವ ಅತ್ಯಂತ ಗಂಭೀರ ಅಪಾಯಗಳಲ್ಲಿ ಒಂದಾಗಿದೆ, ಏಕೆಂದರೆ ಅವನು ತನ್ನ ಸಂಗಾತಿಗೆ ಅಪ್ರಾಮಾಣಿಕನಾಗಿದ್ದಾನೆ ಎಂದು ಸೂಚಿಸುತ್ತದೆ. ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡಿದರೆ ಅದರಿಂದಾಗಬಹುದಾದ ಕೆಲವು ಸಮಸ್ಯೆಗಳು ಇಲ್ಲಿವೆ ನೋಡಿ.

  ಇದನ್ನು ಓದಿ: Lowest Height: ಇದು ಪ್ರಚಂಡ ಕುಳ್ಳರ ದೇಶ.. ಇಲ್ಲಿನ ಜನರು ಎತ್ತರವಾಗಿ ಬೆಳೆಯೋದೆ ಇಲ್ಲ!

  1. ನೀವು ಎಂದಿಗೂ ಅವರ ಮೊದಲ ಆದ್ಯತೆಯಾಗುವುದಿಲ್ಲ

  ವಿವಾಹಿತ ವ್ಯಕ್ತಿಯೊಂದಿಗಿನ ಸಂಬಂಧದಲ್ಲಿ, ನೀವು ಯಾವಾಗಲೂ ದ್ವಿತೀಯ ವ್ಯಕ್ತಿಯೆಂದೆ ಪರಿಗಣಿಸಲಾಗುತ್ತದೆ. ಈ ಭಾವನೆ ನಿಮಗೆ ಹೇಗೆ ಅನ್ನಿಸುತ್ತದೆ ಮತ್ತು ಅವನು ನಿಮ್ಮ ಮೇಲೆ ಜೀವನ ಪರ್ಯಂತ ಪ್ರೀತಿಯನ್ನು ಹಾಗೆಯೇ ಕಾಪಾಡಿಕೊಂಡು ಹೋಗುತ್ತೇನೆ ಎಂದು ಪ್ರಮಾಣ ಮಾಡಬಹುದು ಮತ್ತು ನೀವು ಅವನ ನಿಜವಾದ ಪ್ರೀತಿ ಮತ್ತು ಜೀವನ ಎಂದು ಘೋಷಿಸಬಹುದು. ಆದಾಗ್ಯೂ, ಈ ಉತ್ಪ್ರೇಕ್ಷಿತ ಹೇಳಿಕೆಗಳನ್ನು ಪಕ್ಕಕ್ಕೆ ಇರಿಸಿ ಒಮ್ಮೆ ಆಲೋಚಿಸಿ.

  2. ನಿಮ್ಮ ಬಗ್ಗೆ ಜನರು ಮಾತಾಡಿಕೊಳ್ಳುತ್ತಾರೆ

  ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡುವ ಅತ್ಯಂತ ಕಠಿಣ ಅಂಶವೆಂದರೆ ಎಂದಿಗೂ ಮುಗಿಯದ, ಆಗಾಗ್ಗೆ ಕೆಟ್ಟ ಗಾಸಿಪ್ ಅನ್ನು ನಿಭಾಯಿಸುವುದು. ನೀವು ಈ ವ್ಯಕ್ತಿಯನ್ನು ಕಚೇರಿಯಲ್ಲಿ ಭೇಟಿಯಾಗಲಿ ಅಥವಾ ಸಹೋದ್ಯೋಗಿಯ ಮೂಲಕ ಭೇಟಿಯಾಗಲಿ, ನಿಮ್ಮ ಸಂಬಂಧವನ್ನು ಕಂಡು ಕೊಂಡ ನಂತರ ನಮ್ಮ ಬಗ್ಗೆ ಅನೇಕ ಜನರು ಮಾತನಾಡಲು ಶುರು ಮಾಡುತ್ತಾರೆ.

  ಇದನ್ನು ಓದಿ: Dolphin Lover: ಹೆಣ್ಣು ಡಾಲ್ಫಿನ್ ಜೊತೆಗೆ ಸಂಬಂಧದಲ್ಲಿದ್ದ 63 ವರ್ಷದ ವ್ಯಕ್ತಿ! ಮುಂದೇನಾಯ್ತು ಗೊತ್ತಾ?

  3. ಅವನು ಎಂದಿಗೂ ನಿಮಗಾಗಿ ಸಮಯ ನೀಡುವುದಿಲ್ಲ

  ಗಂಡ ಮತ್ತು ತಂದೆಯಾಗಿ, ಅವರು ತಮ್ಮ ಬಿಡುವಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಾರೆ. ನೀವು ಇಲ್ಲಿ ಒಂದು ಗಂಟೆ ಅವರೊಂದಿಗೆ ಸಂದೇಶವನ್ನು ಸಹ ಮಾಡಲು ಅವರು ನಿಮ್ಮ ಕೈಗೆ ಸಿಗುವುದಿಲ್ಲ. ನೀವು ಎಂದಿಗೂ ಅವರ ಮೊದಲ ಆದ್ಯತೆಯಾಗುವುದಿಲ್ಲ. ರಜಾದಿನಗಳಲ್ಲಿ ಅವನು ನಿಮ್ಮ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಹ ಅವನ ಬಳಿ ಸಮಯ ಇರಲಾರದು ಮತ್ತು ನಿಮ್ಮ ಜೀವನದಿಂದ ಕಣ್ಮರೆಯಾಗಬಹುದು.

  4. ನೀವು ಸುಳ್ಳು ಹೇಳಬೇಕಾಗುತ್ತದೆ

  ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡುವ ಅತ್ಯಂತ ಗಂಭೀರ ಅಪಾಯವೆಂದರೆ ನಿಮ್ಮ ಸಂಬಂಧವನ್ನು ರಹಸ್ಯವಾಗಿ ಕಾಪಾಡಿಕೊಳ್ಳುವುದು. ನೀವು ಆಗಾಗ್ಗೆ ಸುಳ್ಳು ಹೇಳುತ್ತಿರುವುದು ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡುವುದು ಒಂದು ತಪ್ಪು ಎಂದು ನಿಮಗೆ ಅನ್ನಿಸಲು ಶುರುವಾಗಬಹುದು. ಪರಸ್ಪರರ ಬಗ್ಗೆ ನಿಮ್ಮ ಭಾವನೆಗಳು ನಿಜವಾಗಿದ್ದರೂ, ನಿಮ್ಮ ಸಂಪರ್ಕದ ರಹಸ್ಯ ಸ್ವರೂಪವು ನಿಮ್ಮನ್ನು ತಪ್ಪಿತಸ್ಥ ಭಾವನೆಗೆ ಕಾರಣವಾಗುತ್ತದೆ.

  ಇದನ್ನು ಓದಿ: Viral Video: 3 ಹುಲಿಗಳಿಗೆ ಸೆಡ್ಡು ಹೊಡೆದ ಬೆಕ್ಕು.. ಬದುಕಿ ಬಂದಿದ್ದೇ ರಣ ರೋಚಕ!

  5. ನೀವು ಕೆಲವೊಮ್ಮೆ ಅಪಾಯಕ್ಕೆ ಒಳಗಾಗುತ್ತೀರಿ

  ನೀವು ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡುವುದರ ಬಗ್ಗೆ ಅವರ ಹೆಂಡತಿಗೆ ತಿಳಿದರೆ, ಅವರ ಮನೆಯವರು ನಿಮಗೆ ಕಿರುಕುಳವನ್ನು ನೀಡಬಹುದು. ಹೀಗಾಗಿ ನಿಮಗೆ ಅಪಾಯದ ಜೊತೆಗೆ ಬದುಕಿದ ಹಾಗೆ ಅನ್ನಿಸಬಹುದು.
  Published by:Harshith AS
  First published: