ಈರುಳ್ಳಿ ಕತ್ತರಿಸುವುದು ಎಂದರೆ ಬಹಳಷ್ಟು ಮಂದಿಗೆ ಇಷ್ಟವಾಗುವುದಿಲ್ಲ. ಈರುಳ್ಳಿ ಕತ್ತರಿಸುವಾಗ ಆಗುವ ಹಿಂಸೆ ಕಡಿಮೆಯೇನು ಅಲ್ಲ. ಈರುಳ್ಳಿಯನ್ನು ಕಣ್ಣೀರು ಹಾಕದೇ ಕತ್ತರಿಸುವ ವಿಧಾನಕ್ಕೆ ಬಹಳಷ್ಟು ಜನರು ಹುಡುಕಾಟ ನಡೆಸುತ್ತಾರೆ. ಆದರೆ ಏನು ಮಾಡುವುದು ಈರುಳ್ಳಿಯನ್ನು ಕತ್ತರಿಸುವಾಗ ನೀವು ಅದರ ಕೋಶಗಳನ್ನು ಕತ್ತರಿಸುತ್ತೀರ. ಆಗ ಅದು ಮುಕ್ತವಾಗಿರುವ ಕಿಣ್ಣಗಳೊಂದಿಗೆ ಪ್ರತಿಕ್ರಿಯಿಸುವ ಸಲ್ಫ್ಯೂರಿಕ್ ಆಮ್ಲಗಳನ್ನು ಬಿಡುಗಡೆ ಮಾಡುತ್ತದೆ.ಅವೆರಡರ ನಡುವಿನ ರಾಸಾಯನಿಕ ಕ್ರಿಯೆಯು ಸಲ್ಫರ್ ಅನಿಲವನ್ನು ಬಿಡುಗಡೆ ಮಾಡುತ್ತದೆ, ಆಗ ನಿಮ್ಮ ಕಣ್ಣಿನಲ್ಲಿ ಉರಿ, ನೀರು ಬರಲಾರಂಭಿಸುತ್ತದೆ.
ಈರುಳ್ಳಿಯನ್ನು ಕತ್ತರಿಸಿದ ಬಳಿಕ ನಿಮ್ಮ ಕೈ ಮತ್ತು ಬೆರಳುಗಳಲ್ಲಿ ಅದರ ವಾಸನೆ ಉಳಿದುಕೊಳ್ಳಲು ಕೂಡ ಈ ಸಲ್ಫರ್ ಸಂಯುಕ್ತಗಳೇ ಕಾರಣ. ಈರುಳ್ಳಿಯನ್ನು ಬೇಯಿಸಿದಾಗ ಅವು ನಿಷ್ಕ್ರಿಯಗೊಳ್ಳುತ್ತವೆ . ನಿಮ್ಮ ಕಣ್ಣಲ್ಲಿ ನೀರು ಬರುವುದಿಲ್ಲ.
ಇನ್ನು ಕಣ್ಣೀರು ಆಗದೇ ಈ ಈರುಳ್ಳಿಯನ್ನು ಕತ್ತರಿಸುವ ಪರಿಣಾಮಕಾರಿ ವಿಧಾನಗಳು ಇಲ್ಲಿವೆ ನೋಡಿ
1. ನಿಮ್ಮ ಕಣ್ಣುರಿಸುವ ಈರುಳ್ಳಿಯನ್ನು ಗಾಳಿ ಬೀಸುವ ಜಾಗದಲ್ಲಿ ಅಥವಾ ಫ್ಯಾನ್ ಅಡಿಯಲ್ಲಿ ಕತ್ತರಿಸಿ. ಚೆನ್ನಾಗಿ ಗಾಳಿ ಬೀಸುತ್ತಿದ್ದರೆ, ಕಣ್ಣೀರು ಬರುವುದಿಲ್ಲ.
2. ಈರುಳ್ಳಿಗಳನ್ನು ಕತ್ತರಿಸುವ ಮೊದಲು ಸಮಾರು 15 ನಿಮಿಷ ಅದನ್ನು ಫ್ರಿಜ್‌ನಲ್ಲಿರಿಸಿ. ಇದು ಈರುಳ್ಳಿ ಒಳಗಿರುವ ರಾಸಾಯನಿಕಗಳಿಂದ ಉಂಟಾಗುವ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ.ವಿಪರೀತ ತಾಪಮಾನವು ನಿಮ್ಮ ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುವ ರಾಸಾಯನಿಕಗಳ ಬಿಡುಗಡೆಯನ್ನು ತಡೆಯುತ್ತದೆ. ಆದರೆ ಈರುಳ್ಳಿಯನ್ನು ಫ್ರೀಜ್ ಮಾಡಬೇಡಿ, ಅದು ಕರಗಿದ ನಂತರ ಮೆತ್ತಗಾಗಬಹುದು.
3. ಹರಿತವಾದ ಚಾಕೂ ಬಳಸಿ. ಹರಿತವಾದ ಚಾಕುವಿನಿಂದ ಈರುಳ್ಳಿಯನ್ನು ಕತ್ತರಿಸುವುದರಿಂದ ಅದು ಈರುಳ್ಳಿಯ ಕೋಶಗಳಿಗೆ ಕಡಿಮೆ ಹಾನಿ ಮಾಡುತ್ತದೆ ಮತ್ತು ಕಡಿಮೆ ರಾಸಾಯನಿಕಗಳು ಬಿಡುಗಡೆ ಆಗುತ್ತವೆ.
4. ಈರುಳ್ಳಿಯ ಬುಡವು, ಕಿಣ್ವಗಳು ಮತ್ತು ಸಲ್ಫರಿಕ್ ಸಂಯುಕ್ತಗಳ ಸಾಂದ್ರತೆಯನ್ನು ಹೊಂದಿವೆ ಎಂದು ನಂಬಲಾಗಿದೆ, ಹಾಗಾಗಿ ಮೊದಲು ಅದನ್ನು ಕತ್ತರಿಸಿ ತೆಗೆಯಿರಿ.
5. ಈರುಳ್ಳಿಯನ್ನು ತೆರೆದ ಜ್ವಾಲೆಯ ಬಳಿ ಕತ್ತರಿಸಿ ಎಂದು ಮಾರ್ಥ ಸ್ಟೀವರ್ಟ್ ಸಲಹೆ ನೀಡುತ್ತಾರೆ. ನೀವು ಅದಕ್ಕಾಗಿ ಮೊಂಬತ್ತಿಯ ಜ್ವಾಲೆಯನ್ನು ಕೂಡ ಬಳಸಬಹುದು ಅಥವಾ ಗ್ಯಾಸ್ ಒಲೆಯ ಪಕ್ಕದಲ್ಲಿ ಕೂಡ ಈರುಳ್ಳಿ ಕತ್ತರಿಸಬಹುದು. ಜ್ವಾಲೆಯಿಂದ ಬಿಡುಗಡೆಯಾಗುವ ಸಲ್ಫ್ಯೂರಿಕ್ ಈರುಳ್ಳಿಯಲ್ಲಿರುವ ಸಂಯುಕ್ತಗಳನ್ನು ನಿಷ್ಕ್ರಿಯಗೊಳಿಸುತ್ತದೆ.
6. ಈರುಳ್ಳಿಯ ಮೇಲ್ಪದರಗಳನ್ನು ತೆಗೆದು , ಅದನ್ನು 15 ರಿಂದ 20 ನಿಮಿಷ ನೀರಿನಲ್ಲಿ ನೆನೆ ಹಾಕಿ. ಹಾಗೆ ಮಾಡುವುದರಿಂದ ಈರುಳ್ಳಿಯಲ್ಲಿರುವ ಸಲ್ಫರಿಕ್ ಸಂಯುಕ್ತಗಳು ನೀರಿಗೆ ಸೇರಿಕೊಳ್ಳುತ್ತವೆ. ಆದರೆ ಹೀಗೆ ಮಾಡುವುದರಿಂದ ಈರುಳ್ಳಿಯ ಗಾಢ ಸುವಾಸನೆ ಕಡಿಮೆ ಆಗುತ್ತದೆ ಎಂದು ಕೆಲವರು ವಾದಿಸುತ್ತಾರೆ. ಈರುಳ್ಳಿಯನ್ನು ನೀರಿನಲ್ಲಿ ನೆನೆಸಿದಾಗ ಸ್ವಲ್ಪ ಜಾರಿದಂತೆ ಆಗುತ್ತದೆ, ಹಾಗಾಗಿ ಕತ್ತರಿಸುವಾಗ ಎಚ್ಚರವಾಗಿರಿ.
7. ಕೆಲವು ಶೆಫ್‍ಗಳು ಈರುಳ್ಳಿಯನ್ನು ಕತ್ತರಿಸುವ ಸುಲಭ ವಿಧಾನವನ್ನು ಸೂಚಿಸುತ್ತಾರೆ. ಈರುಳ್ಳಿಯ ತೆರೆದ ಭಾಗವು ಕತ್ತರಿಸುವ ಹಲಗೆಯ ಕಡೆಗೆ ಮುಖ ಮಾಡಿದ್ದರೆ, ನಿಮ್ಮ ಕಣ್ಣಿಗೆ ಅದರ ಅನಿಲ ತಲುಪುವುದನ್ನು ತಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ