• Home
  • »
  • News
  • »
  • lifestyle
  • »
  • Baby Care: ನಿಮ್ಮ ಮನೆಯಲ್ಲಿ ಮಗುವಿನ ಆಗಮನವಾಗಲಿದೆಯೇ? ಹಾಗಿದ್ರೆ ಈ ಎಂಟು ವಸ್ತುಗಳು ತಪ್ಪದೆ ಇಟ್ಕೊಂಡಿರಿ

Baby Care: ನಿಮ್ಮ ಮನೆಯಲ್ಲಿ ಮಗುವಿನ ಆಗಮನವಾಗಲಿದೆಯೇ? ಹಾಗಿದ್ರೆ ಈ ಎಂಟು ವಸ್ತುಗಳು ತಪ್ಪದೆ ಇಟ್ಕೊಂಡಿರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮನೆಯಲ್ಲಿ ಮೊದಲ ವಾರಗಳಲ್ಲಿ ಮಗುವಿಗೆ ನಿಜವಾಗಿಯೂ ಏನು ಬೇಕಾಗಬಹುದು ಎಂಬುದರ ಬಗ್ಗೆ ಅವರು ಗೊಂದಲಕ್ಕೊಳಗಾಗಬಹುದು. ನವಜಾತ ಶಿಶುವಿನ ಬಂದ ನಂತರ ಮೊದಲ ಒಂದೆರಡು ತಿಂಗಳುಗಳವರೆಗೆ ಅಗತ್ಯವಿರುವ ಅನೇಕ ತಂಪಾದ ಬೇಬಿ ಉತ್ಪನ್ನಗಳಿವೆ, ಅದು ನಿಮಗೆ ಮತ್ತು ನಿಮ್ಮ ಚಿಕ್ಕ ಮಗುವಿಗೆ ಜೀವನವನ್ನು ಸರಳ ಮತ್ತು ಅನುಕೂಲಕರವಾಗಿಸುತ್ತದೆ. ಹಾಗಾದರೆ ಆ ಉತ್ಪನ್ನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

ಯಾವುದೇ ಗಂಡ-ಹೆಂಡತಿ (Husband-wife) ಪ್ರಥಮ ಬಾರಿಗೆ ಅಪ್ಪ-ಅಮ್ಮ ಆಗಲಿದ್ದಾರೆ ಎಂದು ತಿಳಿದಾಗ ಅವರ ಮನೆ-ಮನಗಳಲ್ಲಿ ಸಂಭ್ರಮ ಮನೆ ಮಾಡುವುದು ಸಹಜ. ಕೂಡಲೇ ಅವರು ತಮ್ಮಆಗಮಿಸಲಿರುವ ಹೊಸ ಮಗುವಿನ (Baby) ಆರೈಕೆಗಾಗಿ ಅಥವಾ ಅದನ್ನು ಚೆನ್ನಾಗಿ ನೋಡಿಕೊಳ್ಳಲೆಂದು ಹಲವು ಉತ್ಪನ್ನಗಳನ್ನು ತಂಡಿಡುವುದನ್ನು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಮೊದಲ ವಾರಗಳಲ್ಲಿ ಮಗುವಿಗೆ ನಿಜವಾಗಿಯೂ ಏನು ಬೇಕಾಗಬಹುದು ಎಂಬುದರ ಬಗ್ಗೆ ಅವರು ಗೊಂದಲಕ್ಕೊಳಗಾಗಬಹುದು. ನವಜಾತ ಶಿಶುವಿನ (New Born Baby) ಬಂದ ನಂತರ ಮೊದಲ ಒಂದೆರಡು ತಿಂಗಳುಗಳವರೆಗೆ ಅಗತ್ಯವಿರುವ ಅನೇಕ ತಂಪಾದ ಬೇಬಿ ಉತ್ಪನ್ನಗಳಿವೆ, ಅದು ನಿಮಗೆ ಮತ್ತು ನಿಮ್ಮ ಚಿಕ್ಕ ಮಗುವಿಗೆ ಜೀವನವನ್ನು ಸರಳ ಮತ್ತು ಅನುಕೂಲಕರವಾಗಿಸುತ್ತದೆ. ಹಾಗಾದರೆ ಆ ಉತ್ಪನ್ನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.


ಬ್ಲ್ಯೂ ನೆಕ್ಟರ್ ಆಯುರ್ವೇದಿಕ್ ಬೇಬಿ ಮಸಾಜ್ ಆಯಿಲ್
ಜೈವಿಕ ತುಪ್ಪದಿಂದ ತಯಾರಿಸಲಾದ ಈ ಎಣ್ಣೆಯು ಮಕ್ಕಳಿಗೆ ತುಂಬ ಮೃದುವಾದ ಹಾಗೂ ಉಲ್ಲಾಸದಾಯಕವಾದ ಅನುಭವ ನೀಡುತ್ತದೆ. ಮಕ್ಕಳು ಬೆಳೆಯುವ ಪ್ರಾರಂಭಿಕ ವರ್ಷಗಳಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆ ಹೊಂದಲು ಎಕ್ಸ್ಟ್ರಾ ಫ್ಯಾಟ್ ಅಗತ್ಯವಿದ್ದು ಈ ಎಣ್ಣೆ ಅದನ್ನು ಪೂರೈಸುತ್ತದೆ. ಹಗುರವಾಗಿರುವ ಈ ಎಣ್ಣೆಯನ್ನು ಮಕ್ಕಳ ದೇಹದ ಮೇಲೆ ನಿಧಾನವಾಗಿ ಮಸಾಜ್ ಮಾಡಿದರೆ ಸಾಕು ಅವುಗಳಿಗೆ ಉತ್ತಮ ನಿದ್ರೆಯೂ ಬರುತ್ತದೆ.


ಲವ್ ಲ್ಯಾಪ್ ಬೇಬಿ ಗ್ರೂಮಿಂಗ್ ಸಿಸರ್ ಮತ್ತು ನೇಲ್ ಸೆಟ್
ಚಿಕ್ಕ ಮಕ್ಕಳ ಕೈಗಳು ಹಾಗೂ ಅದರಲ್ಲೂ ವಿಶೇಷವಾಗಿ ಉಗುರುಗಳು ಬಲು ಸೂಕ್ಷ್ಮ. ವಯಸ್ಕರು ಬಳಸುವಂತೆ ಸ್ಟೀಲಿನ ನೇಲ್ ಕಟ್ಟರ್ ಅನ್ನು ಮಕ್ಕಳಿಗಾಗಿ ಬಳಸಲಾಗದು, ಹಾಗಾಗಿ ಈ ಲವ್ ಲ್ಯಾಪ್ ಸೆಟ್ ಖರೀದಿಸಿ. ಇದು ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟಿದ್ದು ನಿಮ್ಮ ಮಗುವಿಗೆ ಯಾವ ರೀತಿಯ ತೊಂದರೆ ಆಗದಂತೆ ವಿನ್ಯಾಸ ಮಾಡಲ್ಪಟ್ಟಿವೆ.


ಮದರ್ ಸ್ಪರ್ಶ್ 99% ಶುದ್ಧ ನೀರು
ಹಿಂದೆ ಚಿಕ್ಕ ಮಕ್ಕಳ ಚರ್ಮವನ್ನು ತಂಪಾಗಿರಿಸಲು ಒದ್ದೆಯ ಬಟ್ಟೆಗಳನ್ನು ಬಳಸಲಾಗುತ್ತಿತ್ತು. ಆದರೆ ಕಾಲವೀಗ ಬದಲಾಗಿದೆ. ಈಗ ವೈಪ್ಸ್ ಗಳನ್ನು ಬಳಸಲಾಗುತ್ತದೆ. ಈ ಮದರ್ ಸ್ಪರ್ಶ್ ವೈಪ್ಸ್ ಪ್ಲ್ಯಾಂಟ್ ಬೇಸ್ಡ್ ವಸ್ತುವಿನಿಂದ ತಯಾರಿಸಲಾಗಿದ್ದು ನಿಮ್ಮ ಮಗುವಿಗೆ ಅಹ್ಲಾದಕರ ಅನುಭವ ನೀಡುತ್ತದೆ.


ಮಾಮಾಅರ್ಥ್ ಮಾಯಿಶ್ಚರಾಯ್ಸಿಂಗ್ ಬೇಬಿ ಬಾತ್ ಸೋಪ್
ಮಕ್ಕಳು ಸದಾ ಕೈಕಾಲುಗಳನ್ನು ಬಡಿಯುತ್ತ ಆಟವಾಡುತ್ತಲೇ ಇರುತ್ತವೆ. ಹಾಗಾಗಿ ಬಹು ಸಂದರ್ಭಗಳಲ್ಲಿ ಅವುಗಳಿಗೆ ಬೆವರು ಬರುತ್ತಿರುತ್ತದೆ ಹಾಗೂ ಧೂಳು ಚರ್ಮಕ್ಕೆ ಅಂಟಿಕೊಳ್ಳುತ್ತಿರುತ್ತದೆ. ಇದನ್ನು ನಿರ್ಲಕ್ಷಿಸುವಂತಿಲ್ಲ, ಏಕೆಂದರೆ ಇದು ಮುಂದೆ ಕಾಯಿಲೆಗೆ ಕಾರಣವಾಗಬಹುದು. ಹಾಗಾಗಿ ಮಗುವಿನ ಮೈಮೇಲಿನ ಎಲ್ಲ ಜಿಡ್ಡು, ಧೂಳು ಹಾಗೂ ಬೆವರನ್ನು ತೊಲಗಿಸಲು ಮಕ್ಕಳಿಗೆಂದೇ ವಿಶೇಷವಾಗಿ ತಯಾರಿಸಲಾದ ಸಾಬೂನುಗಳನ್ನು ಬಳಸಬೇಕಾಗಿದ್ದು ಅದರಲ್ಲಿ ಮಾಮಾಅರ್ಥ್ ಸಾಬೂನು ನಿಮ್ಮ ಮಗುವಿಗೆ ತಕ್ಕುದಾದ ಸೋಪ್ ಆಗಿದೆ. ತೆಂಗಿನಾಂಶಗಳನ್ನು ಹೊಂದಿರುವ ಈ ಸಾಬೂನು 5.5 pH ಹೊಂದಿದ್ದು ಮಕ್ಕಳ ಚರ್ಮಕ್ಕೆ ಆದರ್ಶಪ್ರಾಯವಾಗಿದೆ.


ಇದನ್ನೂ ಓದಿ:  Monsoon Disease: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಸರಳ ಸಲಹೆಗಳನ್ನು ಅನುಸರಿಸಿ


ಅಮರ್ದೀಪ್ ಸೊಳ್ಳೆ ಪರದೆ
ಸೊಳ್ಳೆ ಕಡಿತ ಅದರಲ್ಲೂ ವಿಶೇಷವಾಗಿ ಮಕ್ಕಳ ಮೃದು ಚರ್ಮಕ್ಕೆ ಸಾಕಷ್ಟು ಹಾನಿ ಉಂಟು ಮಾಡಬಹುದು ಹಾಗೂ ಮಕ್ಕಳಿಗೆ ಕಾಯಿಲೆ ಹರಡಿಸಬಹುದು. ಹಾಗಾಗಿ ಒಂದು ಸೊಳ್ಳೆಯೂ ಕಚ್ಚದ ಹಾಗೆ ಮಗುವನ್ನು ಕಾಪಾಡಿಕೊಳ್ಳಲು ಸೊಳ್ಳೆ ಪರದೆಗಳು ಪರಿಣಾಮಕಾರಿಯಾಗಿರುತ್ತವೆ. ಈ ನಿಟ್ಟಿನಲ್ಲಿ ಅಮರ್ದೀಪ್ ಸೊಳ್ಳೆ ಪರದೆ ನಿಮ್ಮ ಮಗುವನ್ನು ಸೊಳ್ಳೆಗಳಿಂದ ಸಂಪೂರ್ಣವಾಗಿ ರಕ್ಷಿಸುತ್ತದೆ. ಇದು ಮುಂಚೆ ಬರುತ್ತಿದ್ದ ಹಾಗೆ ಬರುವ ಸೊಳ್ಳೆ ಪರದೆಯಲ್ಲ. ಬದಲಾಗಿ ಇದರಲ್ಲಿ ವಿಶೇಷವಾದ ಮತ್ತನೆಯ ಹಾಸಿಗೆಯೂ ಇದ್ದು ಇದರಲ್ಲಿ ಮಲಗುವ ಮಗು ತನ್ನ ತಾಯಿಯ ತೊಡೆಯ ಮೇಲೆಯೇ ಮಲಗಿದಂತಹ ಅನುಭವ ಪಡೇಯುತ್ತದೆ ಎಂಬುದು ಅಮರ್ದೀಪ್ ಅವರ ಕ್ಲೈಮ್ ಆಗಿದೆ.


ಫಸ್ಟ್ ವೈಬ್ ನ್ಯೂಬಾರ್ನ್ ವಾಷೇಬಲ್ ಹೊಸೈರಿ ಕಾಟನ್ ಕ್ಲಾತ್ ಡೈಪರ್
ಹತ್ತು ಡೈಪರ್ ಗಳುಳ್ಳ ಈ ಸೆಟ್ ನಿಮ್ಮ ಮಗುವಿಗೆ ಅತ್ಯುತ್ತಮವಗಿವೆ. ಅತ್ಯುತ್ತಮ ಗುಣಮಟ್ಟದ ಹೊಸೈರಿ ಕಾಟನ್ ನಿಮ್ಮ ಮಗುವಿನ ಸೂಕ್ಷ್ಮ ಚರ್ಮವನ್ನು ಬಲು ಸೂಕ್ಷ್ಮತೆಯಿಂದಲೇ ಕಾಪಾಡುತ್ತದೆ. ಬಲು ಮೃದುವಾದ ವಸ್ತುಗಳಿಂದ ಮಾಡಲಾದ ಈ ಡೈಪರ್ ಎರಡು ಬದಿಗಳಲ್ಲಿ ಸ್ಟಿಚ್ ಮಾಡಲಾದ ಚಾಫ್ ಹೊಂದಿದ್ದು ನಿಮ್ಮ ಮಗುವಿನ ಚರ್ಮಕ್ಕೆ ಒಂದಿಷ್ಟೂ ಹಾನಿಯಾಗದಂತೆ ವಿನ್ಯಾಸಗೊಳಿಸಲ್ಪಟ್ಟಿವೆ.


ಮೈ ನ್ಯೂಬಾರ್ನ್ ಸಾಫ್ಟ್ ಕಾಟನ್ ಕೈಗವಸು
ಈ ಕಾಟನ್ ಕೈಗವಸುಗಳು ನಿಮ್ಮ ಮಗುವಿಗೆ ಬಲು ಆರಾಮದಾಯಕವಾಗಿವೆ. ಹಲವು ಸೆಟ್ ಹಾಗೂ ವೈವಿಧ್ಯಮಯ ಬಣ್ಣಗಳಲ್ಲಿ ಇದು ಲಭ್ಯವಿದ್ದು ಮಗು ಆಕರ್ಷಕ ಕಾಣುವಂತೆ ಈ ಕೈಗವಸುಗಳು ಸಹಕರಿಸುತ್ತವೆ.


ಇದನ್ನೂ ಓದಿ:  Besan Facepack: ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡುವ ವಿಧಾನಗಳ ಮಾಹಿತಿ ಇಲ್ಲಿದೆ ನೋಡಿ


ಇ ಬಾಸ್ಕೆಟ್ ಬೇಬಿ ನೀ ಮತ್ತು ಎಲ್ಬೋ ಗಾರ್ಡ್
ನಿಮ್ಮ ಮಗು ಅಂಬೆಗಾಲಿಡುತ್ತ, ತೆವಳುತ್ತ ಸಾಗುವುದನ್ನು ಪ್ರಾರಂಭಿಸಿದರೆ ಅದನ್ನು ನೋಡುವುದೇ ನಿಮ್ಮ ಕಣ್ಣಿಗೆ ಹಬ್ಬವಾದಂತಾಗುತ್ತದೆ. ಪ್ರತಿ ಬಾರಿ ಆ ಕ್ಷಣವನ್ನು ನೀವು ಅಮೋಘವಾಗಿ ಆನಂದಿಸುತ್ತೀರಿ. ಆದರೆ, ಮಗು ಆಗತಾನೆ ಗಟ್ಟಿಯಾದ ನೆಲದ ಮೇಲೆ ಅಂಬೆಗಾಲಿಡುತ್ತ ಅಥವಾ ತೆವಳಿಕೊಂಡು ಸಾಗಲು ಪ್ರಾರಂಭಿಸಿದಾಗ ಮೊಣಕಾಲಿಗಾಗಲಿ ಇಲ್ಲವೆ ಮೊಣಕೈಗಳಿಗಾಗಲಿ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯಿರುತ್ತದೆ. ಹಾಗಾಗಿ ಈ ಗಾರ್ಡ್ ಅನ್ನು ಬಳಸುವುದರ ಮೂಲಕ ಮಕ್ಕಳು ಯಾವುದೇ ಗಾಯಗಳಿಗೆ ಒಳಪಡದಂತೆ ಮಾಡಬಹುದು.

Published by:Ashwini Prabhu
First published: