Snacks: ಮಳೆಗಾಲದ ಸಂಜೆಗೆ ಹೇಳಿ ಮಾಡಿಸಿದ ಬಿಸಿ ಬಿಸಿ ತಿನಿಸುಗಳಿವು! ಒಂದು ಸಲ ಟ್ರೈ ಮಾಡಿ ನೋಡಿ

ನೀವು ಸಹ ನಮ್ಮಂತೆಯೇ ತಿಂಡಿಗಳೊಂದಿಗೆ ಮಾನ್ಸೂನ್ ಅನ್ನು ಆನಂದಿಸಲು ಇಷ್ಟಪಡುವವರಾಗಿದ್ದರೆ, ನಾವೆಲ್ಲರೂ ತಿನ್ನಲು ಇಷ್ಟಪಡುವ 9 ಕ್ಲಾಸಿಕ್ ಭಾರತೀಯ ತಿಂಡಿ ಪಾಕವಿಧಾನಗಳನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ ನೋಡಿ. ನಿಮ್ಮ ಮನೆಯಲ್ಲಿಯೇ ಈ ತಿಂಡಿಗಳನ್ನು ತಯಾರಿಸುವುದು ತುಂಬಾ ಸುಲಭವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲದಲ್ಲಿ (Monsoon) ಸಾಮಾನ್ಯವಾಗಿ ಹೊರಗೆ ಮಳೆ ಬರುತ್ತಿರುವಾಗ, ಎಲ್ಲಿಯೂ ಹೋಗುವುದಕ್ಕೆ ಆಗುವುದಿಲ್ಲ ಮತ್ತು ಛತ್ರಿ ಹಿಡಿದುಕೊಂಡು ಹೊರಗಡೆ ಹೋದರೂ ಸಹ ಯಾವುದೇ ಕುರುಕಲು ತಿಂಡಿಗಳನ್ನು (Snacks) ಆರಾಮಾಗಿ ತಿನ್ನಲು ಆಗುವುದಿಲ್ಲ. ಸಂಜೆ ಹೊತ್ತಿನಲ್ಲಿ ಕೆಲಸ ಮುಗಿದ ನಂತರ ಮನೆಯಲ್ಲಿ ಬಿಸಿ ಬಿಸಿ ಟೀ ಮತ್ತು ಕಾಫಿಯೊಂದಿಗೆ (Coffee) ಏನಾದರೂ ತಿನ್ನುವುದಕ್ಕೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ನಮ್ಮ ಮನಸ್ಸಿಗೆ ಸದಾ ಅನ್ನಿಸುತ್ತಿರುತ್ತದೆ. ಏನು ತಿನ್ನುವುದು ಅಂತ ಯೋಚನೆ ಮಾಡಿದಾಗ ನಮಗೆ ಅನೇಕ ತಿಂಡಿಗಳ ನೆನಪಾಗುವುದು ಕೂಡ ಸಹಜ. ಮಾನ್ಸೂನ್ ಸಮಯದಲ್ಲಿ ನಾವೆಲ್ಲರೂ ಗರಿಗರಿಯಾದ ಮತ್ತು ಕುರುಕಲು ತಿಂಡಿಗಳನ್ನು ಹೆಚ್ಚಾಗಿ ಆನಂದಿಸುತ್ತೇವೆ. ಭಾರತೀಯ ಪಾಕಪದ್ಧತಿಯ ಬಗ್ಗೆ ಮಾತನಾಡುವಾಗ, ನಾವು ಅನೇಕ ರೀತಿಯ ಆಯ್ಕೆಗಳನ್ನು ಹೊಂದಿದ್ದೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸದಾ ಜನಪ್ರಿಯವಾಗಿರುವ ಸಮೋಸಗಳಿಂದ ಹಿಡಿದು ಭಜ್ಜಿಗಳು, ಬೋಂಡಾ, ಬ್ರೆಡ್ ಪಕೋಡಾ ಮತ್ತು ಹೀಗೆ ಅನೇಕ ಭಕ್ಷ್ಯಗಳಿವೆ ಎಂದು ಹೇಳಬಹುದು. ನೀವು ಸಹ ನಮ್ಮಂತೆಯೇ ತಿಂಡಿಗಳೊಂದಿಗೆ ಮಾನ್ಸೂನ್ ಅನ್ನು ಆನಂದಿಸಲು ಇಷ್ಟಪಡುವವರಾಗಿದ್ದರೆ, ನಾವೆಲ್ಲರೂ ತಿನ್ನಲು ಇಷ್ಟಪಡುವ 9 ಕ್ಲಾಸಿಕ್ ಭಾರತೀಯ ತಿಂಡಿ ಪಾಕವಿಧಾನಗಳನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ ನೋಡಿ. ನಿಮ್ಮ ಮನೆಯಲ್ಲಿಯೇ ಈ ತಿಂಡಿಗಳನ್ನು ತಯಾರಿಸುವುದು ತುಂಬಾ ಸುಲಭವಾಗಿದೆ.

9 ಕ್ಲಾಸಿಕ್ ಇಂಡಿಯನ್ ಸ್ನ್ಯಾಕ್ಸ್ ನೀವು ಪ್ರಯತ್ನಿಸಲೇಬೇಕು
1. ಆಲೂ ಸಮೋಸಾ
ಸಮೋಸಾ ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಅದರಲ್ಲೂ ಈ ಸಮೋಸಾ ಆಲೂಗಡ್ಡೆ ಪಲ್ಯದಿಂದ ಮಾಡಿದ್ದು ಆದರೆ ಇನ್ನೂ ಚೆನ್ನಾಗಿರುತ್ತದೆ. ಸಮೋಸಾವನ್ನು ನಾವು ಈರುಳ್ಳಿ, ಆಲೂ ಪಲ್ಯಗಳನ್ನು ಹಾಕುವುದರೊಂದಿಗೆ ತಯಾರಿಸಿಕೊಳ್ಳಬಹುದು. ಉತ್ತರ ಭಾರತದ ಈ ಭಕ್ಷ್ಯವನ್ನು ಬಹುತೇಕರು ಇಷ್ಟ ಪಡುತ್ತಾರೆ. ಈ ಸಮೋಸಾಗಳಲ್ಲಿ ನಿಮಗೆ ಬೇಕಾದ್ದನ್ನು ಹಾಕಿಕೊಂಡು ಗರಿಗರಿಯಾಗಿ ಮಾಡಿಕೊಳ್ಳಬಹುದು. ಸಂಜೆ ಟೀ ಜೊತೆಗೆ ಇದು ಸರಿಯಾದ ಜೋಡಿ ಅಂತ ಹೇಳಬಹುದು.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ರುಚಿಕರ ಬ್ರೆಡ್ ಉಪ್ಮಾ

2. ಬ್ರೆಡ್ ಪಕೋಡಾ
ಪಕೋಡಾಗಳನ್ನು ನೀವು ತುಂಬಾನೇ ಇಷ್ಟ ಪಡುವವರು ಆಗಿದ್ದರೆ, ಮಸಾಲೆಯುಕ್ತ ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಬ್ರೆಡ್ ಸ್ಲೈಸ್ ಗಳಲ್ಲಿ ಸುತ್ತಿ ಗರಿಗರಿಯಾದ ಮತ್ತು ಹೊಂಬಣ್ಣ ಬರುವ ತನಕ ಎಣ್ಣೆಯಲ್ಲಿ ಹುರಿದುಕೊಳ್ಳಿರಿ. ನಮ್ಮನ್ನು ನಂಬಿ, ಈ ಪಾಕವಿಧಾನವು ನಿಮಗೆ ತುಂಬಾನೇ ಆನಂದವನ್ನು ಕೊಡುತ್ತದೆ. ಇದನ್ನು ಹಾಗೆಯೇ ತಿನ್ನದೇ ಪಕ್ಕದಲ್ಲಿ ಹಸಿರು ಚಟ್ನಿ ಮತ್ತು ಕೆಂಪು ಚಟ್ನಿಯನ್ನು ತಯಾರಿಸಿಕೊಂಡು ಅದರಲ್ಲಿ ಅದ್ದಿಕೊಂಡು ತಿಂದರೆ ಅದರ ಮಜಾನೆ ಬೇರೆ.

3. ಬೋಂಡಾ: ಬೋಂಡಾ ಎಂದ ತಕ್ಷಣ ನಮಗೆಲ್ಲಾ ನೆನಪಾಗುವುದು ಮೈಸೂರು ಬೋಂಡಾ ಇದು ದುಂಡಗಿನ ಚೆಂಡಿನ ಆಕಾರದಲ್ಲಿ ತಯಾರಿಸಲ್ಪಡುತ್ತದೆ ಮತ್ತು ಈ ಪಾಕವಿಧಾನದಲ್ಲಿ, ಬೇಯಿಸಿದ ಆಲೂಗಡ್ಡೆಯನ್ನು ಉಪ್ಪು, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ನಿಂಬೆ ರಸದೊಂದಿಗೆ ಮ್ಯಾಶ್ ಮಾಡಲಾಗುತ್ತದೆ ಮತ್ತು ನಂತರ ಚಿನ್ನದ ಬಣ್ಣ ಬರುವವರೆಗೂ ಚೆನ್ನಾಗಿ ಎಣ್ಣೆಯಲ್ಲಿ ಹುರಿದುಕೊಳ್ಳಿರಿ. ಈ ಬೋಂಡಾಗಳನ್ನು ಖಾರವಾದ ಹಸಿರು ಚಟ್ನಿಯೊಂದಿಗೆ ತಿಂದರೆ ಸೂಪರ್ ಆಗಿರುತ್ತದೆ.

4. ಪ್ಯಾಜ್ ಕಚೋರಿ
ಮಸಾಲೆಯುಕ್ತ ಕಚೋರಿ ಎಂದರೆ ಬಹುತೇಕರಿಗೆ ಇಷ್ಟವಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬಿಸಿ ಬಿಸಿ ಕಚೋರಿಗಳನ್ನು ನೀವು ಅನೇಕ ರೀತಿಯಲ್ಲಿ ಮಾಡಿಕೊಳ್ಳಬಹುದು. ಪರಿಮಳಯುಕ್ತ ಮಸಾಲೆಗಳು ಮತ್ತು ಮೆಣಸಿನಕಾಯಿಗಳಿಂದ ತುಂಬಿದ ಪಲ್ಯವನ್ನು ಅದರಲ್ಲಿ ತುಂಬಿ ಮಾಡಿಕೊಳ್ಳಿ. ಈ ಪ್ಯಾಜ್ ಕಚೋರಿ ಸಹ ಮಾಡಿಕೊಳ್ಳಲು ತುಂಬಾನೇ ಸುಲಭ. ಇದನ್ನು ಸಬ್ಜಿ ಅಥವಾ ಕೇವಲ ಒಂದು ಕಪ್ ಚಾಯ್ ನೊಂದಿಗೆ ಸೇವಿಸಿರಿ ಮತ್ತು ಹೊರಗಡೆಯ ಮಳೆಯ ಹವಾಮಾನವನ್ನು ಆನಂದಿಸಿ.

5. ವಡಾ ಪಾವ್
ಈ ತಿಂಡಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ ಅಂತ ನಾವು ಅಂದು ಕೊಂಡಿದ್ದೇವೆ. ಉರಿಯುವ ಬೆಳ್ಳುಳ್ಳಿ ಚಟ್ನಿಯೊಂದಿಗೆ ಬಡಿಸಲಾದ ಪಾವ್ ನಡುವೆ ಇರಿಸಲಾದ ಕರಿದ ವಡಾದಿಂದ ತಯಾರಿಸಲಾದ ಈ ಬೀದಿ-ಶೈಲಿಯ ಭಕ್ಷ್ಯವು ದೇಶಾದ್ಯಂತ ಅಭಿಮಾನಿಗಳನ್ನು ಕಂಡು ಕೊಂಡಿದೆ. ಇದರಲ್ಲಿ ವಡಾವನ್ನು ಚೆನ್ನಾಗಿ ಎಣ್ಣೆಯಲ್ಲಿ ಹುರಿದುಕೊಂಡು ಮಾಡಿಕೊಂಡು ಅದರೊಂದಿಗೆ ಹಸಿರು ಚೆಟ್ನಿ ಅಥವಾ ಸಾಸ್ ಹಾಕಿಕೊಂಡು ತಿನ್ನಬಹುದು.

ಇದನ್ನೂ ಓದಿ:  Recipe: ಮಕ್ಕಳಿಗಾಗಿ ಟೇಸ್ಟಿ ಕ್ಯಾರಮೆಲ್ ಬ್ರೆಡ್ ಪಾಪ್​ಕಾರ್ನ್​ ರೆಸಿಪಿ

6. ಆಲೂ ಟಿಕ್ಕಿ
ನಮ್ಮ ಪ್ರೀತಿಯ ಆಲೂ ಟಿಕ್ಕಿಯನ್ನು ಉಲ್ಲೇಖಿಸದೆ ನಾವು ಮುಂದೆ ಹೋಗಲು ಹೇಗೆ ಸಾಧ್ಯ ಹೇಳಿ? ಗರಿಗರಿಯಾದ ಮತ್ತು ಸುವಾಸನೆಗಳಿಂದ ತುಂಬಿರುವ ಆಲೂ ಟಿಕ್ಕಿ ಒಂದು ಸ್ಟ್ರೀಟ್ ಶೈಲಿಯ ತಿಂಡಿಯಾಗಿದ್ದು, ನಾವೆಲ್ಲರೂ ಇದ್ನನ್ನು ನೋಡಿದರೆ ತಿಂದು ಬಿಡಬೇಕು ಅನ್ನುವಷ್ಟರ ಮಟ್ಟಿಗೆ ಚೆನ್ನಾಗಿರುತ್ತದೆ ಎಂದು ಹೇಳಬಹುದು. ಇದರ ಬಗ್ಗೆ ಉತ್ತಮವಾದ ವಿಷಯವೆಂದರೆ ನೀವು ಈ ಔತಣವನ್ನು ಅಸಂಖ್ಯಾತ ರೀತಿಯಲ್ಲಿ ಎಂದರೆ ಕುರ್ಕುರೆ ಆಲೂ ಟಿಕ್ಕಿ, ದಾಲ್ ಆಲೂ ಟಿಕ್ಕಿ, ಚೋಲೆ ಆಲೂ ಟಿಕ್ಕಿ ಮತ್ತು ಇನ್ನೂ ಅನೇಕ ರೀತಿಯಲ್ಲಿ ತಯಾರಿಸಿಕೊಳ್ಳಬಹುದು.

7. ಕಾಂದಾ ಭಜ್ಜಿ
ನಮಗೆಲ್ಲಾ ಬಾಯಲ್ಲಿ ನೀರೂರಿಸುವ ಈರುಳ್ಳಿ, ಕೊತ್ತಂಬರಿ, ಮಸಾಲೆಗಳ ಸುವಾಸನೆಯುಕ್ತ ಮಿಶ್ರಣವನ್ನು ಹೊಂದಿರುವ ಕಾಂದಾ ಭಜ್ಜಿ ಸಹ ನಮ್ಮ ಸಂಜೆ ಹೊತ್ತಿನ ಟೀ ಜೊತೆಗೆ ಉತ್ತಮವಾದ ಜೋಡಿ ಆಗಬಹುದು. ನೀವು ಮಳೆಗಾಲದಲ್ಲಿ ಸಂಜೆ ಹೊತ್ತಿನಲ್ಲಿ ಮಸಾಲೆಯುಕ್ತವಾದದ್ದನ್ನು ತಿನ್ನಬೇಕು ಎಂದು ಕೊಂಡರೆ ಇದನ್ನು ಮಾಡಿಕೊಂಡು ತಿನ್ನಬಹುದು. ಇದನ್ನು ತಯಾರಿಸಲು, ನಿಮಗೆ ಸುಲಭವಾಗಿ ಲಭ್ಯವಿರುವ ಕೇವಲ ಬೆರಳೆಣಿಕೆಯಷ್ಟು ಪದಾರ್ಥಗಳು ಬೇಕಾಗುತ್ತವೆ. ಇದನ್ನು ನಿಮ್ಮ ನೆಚ್ಚಿನ ಚಟ್ನಿಯೊಂದಿಗೆ ಜೋಡಿಸಿಕೊಂಡು ತಿನ್ನಬಹುದು.

8. ಪರಿಪ್ಪು ವಡಾ
ಇದು ಕೇರಳದ ಅತ್ಯಂತ ಜನಪ್ರಿಯ ಚಹಾ-ಸಮಯದ ತಿಂಡಿಗಳಲ್ಲಿ ಒಂದು ಎಂದು ಹೇಳಬಹುದು. ಮಸಾಲಾ ಅಥವಾ ಪರಿಪ್ಪು ವಡಾವನ್ನು ಕ್ಲಾಸಿಕ್ ಮೆದು ವಡಾದ ಕ್ರಂಚಿಯರ್ ಆವೃತ್ತಿ ಎಂದು ಕರೆಯಬಹುದು. ಈ ಪಾಕವಿಧಾನದಲ್ಲಿ, ವಡಾಗಳನ್ನು ತೊಗರಿ ಬೇಳೆಯೊಂದಿಗೆ ತಯಾರಿಸಲಾಗುತ್ತದೆ, ಇದು ಅದಕ್ಕೆ ಹೆಚ್ಚು ಅಗತ್ಯವಿರುವ ಕ್ರಂಚ್ ಅನ್ನು ನೀಡುತ್ತದೆ. ಚಹಾ ಮತ್ತು ಪರಿಪ್ಪು ವಡಾದ ಜನಪ್ರಿಯ ಸಂಯೋಜನೆಯನ್ನು ಎಲ್ಲರೂ ಇಷ್ಟಪಡುತ್ತಾರೆ.

ಇದನ್ನೂ ಓದಿ:  Breakfast Recipe: ಬೆಳಗಿನ ಉಪಹಾರಕ್ಕೆ ಈರುಳ್ಳಿ ಪನೀರ್ ಪರಾಠ ಮಾಡಿ ನೋಡಿ

9. ಹುರಿದ ಭುಟ್ಟಾ
ಮಾನ್ಸೂನ್ ವಿಶೇಷ ಪಾಕವಿಧಾನಗಳನ್ನು ಪಟ್ಟಿ ಮಾಡುವಾಗ ನಾವು ಐಕಾನಿಕ್ ಇದ್ದಿಲು-ಗ್ರಿಲ್ಡ್ ಭುಟ್ಟಾ (ಜೋಳ) ಅನ್ನು ಹೇಗೆ ಮಿಸ್ ಮಾಡುವುದು ಹೇಳಿ? ಹುರಿದ ಭುಟ್ಟಾದ ಹೊಗೆಯ ಸುವಾಸನೆಯು ಪ್ರತಿ ಮಳೆಗಾಲದಲ್ಲಿ ಬೀದಿ ಬದಿ ವ್ಯಾಪಾರಿಯಿಂದ ನಮ್ಮನ್ನು ನಿಲ್ಲಿಸಿ ಖರೀದಿಸುವಂತೆ ಮಾಡುತ್ತದೆ. ಈಗ ನೀವು ಬೀದಿಗಳಲ್ಲಿ ಇದ್ದಿಲು-ಗ್ರಿಲ್ಡ್ ಭುಟ್ಟಾವನ್ನು ಹುಡುಕಲು ಹೋಗಬೇಕಾಗಿಲ್ಲ, ಏಕೆಂದರೆ ಮನೆಯಲ್ಲಿಯೂ ಸಹ ಇದನ್ನು ಮಾಡಿಕೊಂಡು ತಿನ್ನಬಹುದು.
Published by:Ashwini Prabhu
First published: